ತುಳಸಿವನದಲ್ಲಿ ,ಕಾಮೆಂಟ್ಸ್ moderate ಮಾಡಲು ಶುರುಮಾಡಿದ ಮೇಲೆ spam ಬರುವುದು ನಿಂತಿತ್ತು. ಈಗ ಮತ್ತೆ ಬರತೊಡಗಿವೆ.   ಇದನ್ನು ತಡೆಯೋದು ಹೇಗೆ? (delete ಮಾಡುವುದು ಬಿಟ್ಟು ಬೇರೇನಾದರೂ ಉಪಾಯ) wordpress ಬಳಸಿ ಅನುಭವವಿದ್ದವರು ತಿಳಿಸಿ.

8 thoughts on “wordpress – help”

  1. spam ಒಳ್ಳೆಯದೇ. ಅದನ್ನು ಇನ್ನೊಂದು ದೃಷ್ಟಿಕೋನದಿಂದ ನೋಡಬೇಕು, ಅಷ್ಟೇ. ಅರ್ಥವಾಗಲಿಲ್ಲವೇ? spamಅನ್ನು ಹಿಂದುಮುಂದಾಗಿ ಓದಿ, maps ಆಗುತ್ತದಲ್ಲವೇ? ಭೂಪಟಗಳು! ನಕ್ಷೆಗಳು!! ಬದುಕಿನ ನಕ್ಷೆಗಳು spamನಲ್ಲೂ ಇರುತ್ತವೆ, ನೋಡಿ ಅರ್ಥಮಾಡಿಕೊಳ್ಳುವ ಸೂಕ್ಷ್ಮದೃಷ್ಟಿ ಇರಬೇಕು!

    🙂

  2. ಓಹ್…

    ಇದು spam ಅಲ್ಲ….ದಯವಿಟ್ಟು ಸ್ವೀಕರಿಸಿಬಿಡಿ….

    ನಿಮ್ಮಲ್ಲಿ Blogspotನಲ್ಲಾದರೆ word Authentication ಸೌಲಭ್ಯವಿದೆ…. ಇಲ್ಲೂ ಇದೆಯಾಂತ ಗೊತ್ತಿಲ್ಲ….. ನಿಮ್ಮ Dashboard ನೊಳಗೆ ಜಾಲಾಡಿ ನೋಡುವಿರಂತೆ…
    (ನನಗೆ ಗೊತ್ತಿರುವುದು ಇಷ್ಟು !)
    🙂

  3. ಜೋಶಿಯವರೇ,ನನಗಂತೂ spamನಲ್ಲಿ-maps(ಬದುಕಿನ ನಕ್ಷೆ)ಗೋಚರಿಸಲಿಲ್ಲ. ನನಗೆ ಅರ್ಥಮಾಡಿಕೊಳ್ಳುವ ಸೂಕ್ಷ್ಮ ದೃಷ್ಟಿ ಇಲ್ಲ ಎಂದು ಒಪ್ಪಿಕೊಂಡುಬಿಡುತ್ತೇನೆ. 🙂

  4. ಅನ್ವೇಷಿಗಳೇ. ನಿಮ್ಮ ಪ್ರತಿಕ್ರಿಯೆ spam ಅಲ್ಲ ಎಂದು ಗೊತ್ತಾಗಿ ಸಂತೋಷವಾಯಿತು. 🙂

    ಸದ್ಯಕ್ಕೆ spam ಹಾಕುತ್ತಿರುವ ಅಗೋಚರ,ಅತಿಮಾನುಷ ಶಕ್ತಿಗಳು ಇನ್ನೂ ಕನ್ನಡ ಕಲಿತಿಲ್ಲ! (ಕನ್ನಡದ ಪ್ರತಿಕ್ರಿಯೆಗಳನ್ನು ಬೇರ್ಪಡಿಸುವುದು ಬಹಳ ಸುಲಭ)

    word Authentication ಸೌಲಭ್ಯ ಇಲ್ಲಿಲ್ಲ. ನಾವೇ ಹೊರಗಿನಿಂದ ತಂದು ಸೇರಿಸಿಕೊಳ್ಳಬೇಕೇನೋ.

  5. ಕಾಳಣ್ಣ, ನೀವು ಕೊಟ್ಟಿದ್ದ ಮದ್ದು ಅರೆಯೋದಿಕ್ಕೆ ಮುಂಚೆ, ಹೆದರಿಕೊಂಡು ಸ್ಪ್ಯಾಮ್‌ ಬರೋದು ನಿಂತೋಗಿದೆ. 🙂 ಮತ್ತೆ ಬಂದಾಗ ನೋಡ್ಕೊಂಡ್ರಾಯ್ತು ಅಲ್ವಾ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.