ಅಗಣಿತ ತಾರಾಗಣಗಳ ನಡುವೆ
ನಿನ್ನನೆ ನೆಚ್ಚಿಹೆ ನಾನು.
ನನ್ನೀ ಜೀವನ ಸಮುದ್ರ ಯಾನಕೆ
ಚಿರ ಧ್ರುವ ತಾರೆಯು ನೀನು.
ಇಲ್ಲದ ಸಲ್ಲದ ತೀರಗಳೆಡೆಗೆ
ಹೊರಡುತ ಬಳಲಿದರೇನು.
ದಿಟ್ಟಿಯು ನಿನ್ನೊಳು ನೆಟ್ಟರೆ ಕಡೆಗೆ
ಗುರಿಯನು ಸೇರೆನೆ ನಾನು?
ಚಂಚಲವಾಗಿಹ ತಾರಕೆಗಳಲಿ
ನಿಶ್ಚಲನೆಂದರೆ ನೀನೆ.
ಮಿಂಚಿ ಮಿನುಗುತಿಹ ನಶ್ವರದೆದೆಯಲಿ
ಶಾಶ್ವತನೆಂದರೆ ನೀನೆ.
– ಕುವೆಂಪು
wonderful line