ಕವಿ – ಕುವೆಂಪು
ಹಾಡು ಕೇಳಿ –
ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ
ಘಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ
ಕರ್ಪೂರದಾರತಿಯ ಜ್ಯೋತಿಯಿಲ್ಲ
ಭಗವಂತನಾನಂದ ರೂಪುಗೊಂಡಿಹುದಿಲ್ಲಿ
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ
ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈ ಮರೆತು ತೇಲುತಿದೆ ಭೂಭಾರವಿಲ್ಲಿ!
* * *
ಅದ್ಭುತವಾದ ಗೀತೆ, ಆದ್ರೆ ಸ್ವಲ್ಪ ತಿದ್ದುವಿಕೆಯ ಅಗತ್ಯ.
ಅ. ಸುಬ್ಬಣ್ಣ ಹಾಗು ರತ್ನಮಾಲ – ಎರಡು ದನಿಯಲ್ಲು ಕೇಳಿದ್ದು:::
೧ ಚರಣ:
ಘಂಟೆಗಳ ದನಿಯಿಲ್ಲ, ಜಾಗಟೆಗಳಿಲ್ಲಿಲ್ಲ !!!
ಬಗವಂತನಾನಂದ ರೂಪುಗೊಂಡಿಹುದಿಲ್ಲಿ !!!
ಆ. ರತ್ನಮಾಲ ರವ ದನಿಯಲ್ಲಿ ಕೇಳಿದ್ದು:::
ಅನು ಪಲ್ಲವಿಯಲ್ಲಿ:
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ !!!
ಯಾವುದು ತಪ್ಪೊ, ಯಾವುದು ಸರಿಯೋ ಗೊತ್ತಗಲಿಲ್ಲ 🙁
ಇಂತಿ
ಭೂತಾಗ್ರಜ
ಭೂತಪ್ಪಾ, ನಿನ್ನ ಗೊಂದಲ ಏನಪ್ಪಾ? 🙂
ಗೊಂದಲಮಯವಾಗಿತ್ತು, ಈಗ ಗೊಂದಲ ಮಾಯವಾಯ್ತು 🙂
ಭೂತ