Happy Thanksgiving weekend 🙂 !! ಇನ್ನೊಂದು ೩-೪ ದಿನ ಅಮೆರಿಕದಿಂದ ಹೊರಡುವ ಬ್ಲಾಗ್‍ಗಳಿಗೆಲ್ಲಾ ರಜ ಅನ್ನಿಸತ್ತೆ. 🙂 ಯಾಕೆಂದರೆ, ಈ ಸಮಯದಲ್ಲಿ ಮನೆಯಲ್ಲಿ ಇರೋರು ಕಡಿಮೆ. ಅಲ್ಲಿ,ಇಲ್ಲಿ, ಗೆಳೆಯರ ಮನೆಗೆ, ಹೊಸ ಹೊಸ ಜಾಗಗಳನ್ನು ನೋಡಲು ಹೋಗುವವರೇ ಹೆಚ್ಚು. ನೀವೆಲ್ಲ ಏನೇನು ಪ್ಲಾನ್ ಮಾಡಿದೀರಿ? ಎಲ್ಲಿಗೆ ಹೋಗ್ತಾ ಇದೀರಿ?

ನಾವೇನು ಹಬ್ಬ ಮಾಡಿ, ಟರ್ಕಿ ತಿನ್ನೋದಿಲ್ಲವಾದರೂ,  ಅಮೆರಿಕಕ್ಕೆ ಬಂದಾಗಿನಿಂದ, ನಾವು ತಪ್ಪದೆ ನಡೆಸಿಕೊಂಡು ಬಂದಿರುವ ಸಂಪ್ರದಾಯ ಒಂದಿದೆ. ಅದು ಏನೆಂದರೆ Black friday shopping.   ಕೊರೆವ ಚಳಿಯಲ್ಲಿಯೂ best buy, fry’s,circuit city, compUSA.. ಮುಂತಾದ ಅಂಗಡಿಗಳ ಮುಂದೆ  ಜನ ಕಾಯುತ್ತಾ ನಿಂತಿರೋದು ನೋಡಕ್ಕೆ ನನಗೆ ತುಂಬಾ ಇಷ್ಟ.  ಹೋದ ವರ್ಷ ಅಂತೂ ಹಿಂದಿನ ದಿನ ತುಂಬಾ ಸ್ನೋ ಆಗಿತ್ತು. ಆ ಕೆಟ್ಟ ಥಂಡಿಗೂ ಹೆದರದೆ, ನಡುರಾತ್ರಿಯಿಂದಲೇ ದಪ್ಪ ಹೊದಿಕೆ ಹೊದ್ದುಕೊಂಡು, ಕೆಲವು ಜನರು ಅಂಗಡಿಗಳ ಮುಂದೆ ಮಲಗಿ ಬಿಟ್ಟಿದ್ದರು. ಅವರನ್ನು ನೋಡಿ ಈ ಜನರದ್ದೇನು ಎಮ್ಮೆ ಚರ್ಮನೋ? ಆನೆ ಚರ್ಮನೋ! ಎಂದು ಆಶ್ಚರ್ಯ ಆಗಿತ್ತು.

ಇಲ್ಲಿಗೆ ಬಂದ ಹೊಸದರಲ್ಲಿ ಮನೆ ಖಾಲಿ ಇತ್ತು. ಮನೆಗೆ ಅದು ಬೇಕು , ಇದು ಬೇಕು ಎಂದು ಶಾಪಿಂಗ್ ಮಾಡುವುದು ಅನಿವಾರ್ಯವಾಗಿತ್ತು. ಈಗ ಮನೆಯಲ್ಲಿ ಇಲ್ಲದ ವಸ್ತುವೇ ಇಲ್ಲ. ಹೊಸದಾಗಿ ಕೊಳ್ಳಲು ಏನೇನೂ ಉಳಿದಿಲ್ಲ.  ಆದರೂ ಬೆಳಗಿನ ಜಾವದ ಈ ಶಾಪಿಂಗ್ ಮಜ ತಪ್ಪಿಸಿಕೊಳ್ಳುವ ಮನಸ್ಸಿಲ್ಲ!! 

ಅಂಗಡಿಯ ಬಾಗಿಲು ತೆಗೆಯುವ ಕ್ಷಣವನ್ನೇ ಕಾಯುತ್ತಾ ,ಕಾತುರದಿಂದ ನಿಂತಿರುವ ಜನರನ್ನು ನೋಡಿದರೆ ನನಗೆ ಏನು ನೆನಪಾಗತ್ತೆ ಗೊತ್ತಾ?

ಗೆಸ್ ಮಾಡಿ ನೋಡೋಣ….

“ಸುಮುಹುರ್ತಾ ಸಾವಧಾನ…” ಎಂಬ ಪುರೋಹಿತರ ಮಂತ್ರಗಳ ನಡುವೆ, ಅಂತರಪಟ ಸರಿಯುವುದನ್ನೇ ನಿರೀಕ್ಷಿಸುತ್ತಾ ನಿಂತಿರುವ ವಧೂವರರು! 🙂 🙂

***************         *************

11 thoughts on “Happy Thanksgiving day!”

 1. :ಓ

  ಅಷ್ಟು ಅಗ್ಗವಾಗಿ ಸಿಗುತ್ತದೆಯೇ?

  ಚಳಿಯಲ್ಲಿ ನಿಂತು ಕೊಳ್ಳೊದು, ನಮ್ಮಲ್ಲಿ, ಒಂದಿಲ್ಲ, ಕ್ರಿಕೆಟ್ ಚೀಟಿಗಾಗಿ, ಅಥವ ಅಣ್ಣೊರ್ ಚಿತ್ರಕ್ಕಾಗಿ; ನಿಮಗೆ, ಏಕೆ ಮದುವೆ ನೆನಪಾಯಿತು :ಯೋ

  ಇಂತಿ
  ಕೊಳ್ಳಿ ಭೂತ

 2. ನುಡಿ:

  “ಈಗ ಮನೆಯಲ್ಲಿ ಇಲ್ಲದ ವಸ್ತುವೇ ಇಲ್ಲ. ಹೊಸದಾಗಿ ಕೊಳ್ಳಲು ಏನೇನೂ ಉಳಿದಿಲ್ಲ. ಆದರೂ ಬೆಳಗಿನ ಜಾವದ ಈ ಶಾಪಿಂಗ್ ಮಜ ತಪ್ಪಿಸಿಕೊಳ್ಳುವ ಮನಸ್ಸಿಲ್ಲ!! ”

  * * *

  ಕಿಡಿ:

  “ನಾನೂ ಅಮೆರಿಕನ್ ಆಗಿಬಿಟ್ಟೆ!”

  (ಇದು ಡಾ.ಮೈ.ಶ್ರೀ.ನಟರಾಜ್ ಅವರ ಪ್ರಥಮ ಕವನಸಂಕಲನದ ಹೆಸರು ಕೂಡ).

 3. ಎಲಾ ಕೊಳ್ಳಿ ಭೂತವೇ, ನಿಮ್ಮಂತಹ ಅಶರೀರಿಗಳು Q ನಿಲ್ಲದೆ, ಅಂಗಡಿಯೊಳಗೆ ನುಗ್ಗುವುದನ್ನು ತಪ್ಪಿಸಲು ನಿಮ್ಮ ದೇಶದಲ್ಲಿ ಇವೆಲ್ಲಾ ಇಲ್ಲ ಅನ್ನಿಸತ್ತೆ 🙂

  ಭೂತಕ್ಕೆ ಮಾಹಿತಿ: ಎಲ್ಲವೂ ಅಗ್ಗ ಅಂತೇನಲ್ಲ. sale ನಲ್ಲಿ ಇರುವ ಪದಾರ್ಥಗಳು ಕಡಿಮೆ ಬೆಲೆಗೆ, ಕೆಲವು ಸಲ after mail in-rebate ಉಚಿತವಾಗಿ ಸಿಗುವುದೂ ಇದೆ. ಈ ರಿಯಾಯಿತಿ ಬೆಲೆಗಳು ಬೆಳಿಗ್ಗೆ 6-11 ಮಾತ್ರ ಇರುತ್ತದೆ. ಆಮೇಲೆ ನಿತ್ಯದ ದರವೇ ಅನ್ವಯವಾಗುತ್ತದೆ. ಹೋಗುವರೆಲ್ಲ ಏನಾದರೂ ಕೊಳ್ಳುತ್ತಾರೆ/ಕೊಳ್ಳಲೇಬೇಕು ಎಂದೇನಿಲ್ಲ. ಒಟ್ಟಿನಲ್ಲಿ, ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ನೂಕುನುಗ್ಗಲಂತೂ ಇರುತ್ತದೆ.

 4. ಜೋಶಿಯವರಿಗೂ ನನ್ನ ಕಾಲೆಳೆಯುವ ಮಜಾ ತಪ್ಪಿಸಿಕೊಳ್ಳುವ ಮನಸ್ಸಿಲ್ಲ 🙂

  ನಾನು ಅಮೆರಿಕನ್ ಆಗಿರುವುದಂತೂ (ಇವತ್ತಿನವರೆಗೂ) ಸಾಧ್ಯವೇ ಇಲ್ಲ. ಹಾಗೆಯೇ, ಅಮೆರಿಕದಲ್ಲೇ ಇದ್ದುಕೊಂಡು, ಸುತ್ತಮುತ್ತಲಿನ ವಿದ್ಯಮಾನಗಳಿಗೆ ಬೆನ್ನು ತಿರುಗಿಸಿ, ತಟಸ್ಥಳಾಗಿರುವುದು ಕೂಡ ನನ್ನಿಂದ ಸಾಧ್ಯವಿಲ್ಲ.

  ಅದೇನೇ ಇರಲಿ, ನನ್ನಲ್ಲಾಗುತ್ತಿರುವ ಬದಲಾವಣೆಗಳನ್ನು ನನ್ನ ಅಂದಂದಿನ ಬರವಣಿಗೆ ಪ್ರತಿಬಿಂಬಿಸುತ್ತಿರುವುದೇ ಆದಲ್ಲಿ, ಅಷ್ಟರ ಮಟ್ಟಿಗೆ ನನ್ನ ಬರವಣಿಗೆ ಸಾರ್ಥಕವಾಯಿತೆಂದೇ ಬಗೆಯುತ್ತೇನೆ.

 5. ಶ್ರೀ ತ್ರೀ ಅವರೆ,

  ನಾನೂ ಶಾಪಿಂಗಿಗೆ ಬರಬೇಕೂಂತ ಇದ್ದೆ.

  ಆದ್ರೆ ಅಮೆರಿಕಕ್ಕೆ ಬರಲು ರಿಕ್ಷಾದವನು ಒಪ್ಪುತ್ತಲೇ ಇಲ್ಲ.

  ಅಲ್ಲಿ ಅಷ್ಟು ಕಡಿಮೆಗೆ ಸಿಗುತ್ತದೆಂದಾದರೆ, ಮತ್ತೆ ನೀವು ಕೂಡ ಬೆಳಗ್ಗೆದ್ದು ಹೋಗುತ್ತೀರಿ ಎಂದಾದರೆ, ನಮಗೂ ಒಂದೇ ಒಂದು ಪುಟ ಕಾಗದದ ತುಂಡು ಖರೀದಿಸಿಡಿ. !!!!

 6. ಅನ್ವೇಷಿಗಳೇ, ನೀವು ಬಂದಿದ್ದರೆ ಚೆನ್ನಾಗಿತ್ತು, ಏಕೆಂದರೆ ಇಲ್ಲಿಯೂ ನಿಮಗೆ ಅನ್ವೇಷಿಸಲು ಸಾಕಷ್ಟು ಅಸತ್ಯಗಳಿದ್ದವು.

  ರಿಕ್ಷಾ ಬರದಿದ್ದರೇನಂತೆ? ನಿಮ್ಮ ಮೃಚ್ಚಕಟಿಕದ ಶೂದ್ರಕನನ್ನು ಒಮ್ಮೆ ಕೇಳಿ ನೋಡಿ. ಕೈ ಮುಗಿಯುವ ಬದಲು, ಕಾಲು ಮುರಿಯಲು ಹೋಗಬೇಡಿ ಅಷ್ಟೆ.

 7. ನಾನು ಒಂದೇ ಒಂದು ಸಲ ಈ Black Friday ಶಾಪಿಂಗ್ ಗೆ ಹೋಗಿದ್ದು ,ಆವತ್ತು Denver ನಲ್ಲಿ ಸಿಕ್ಕಾಪಟ್ಟೆ snow ಬೇರೆ ಆಗಿತ್ತು, ವಿಪರೀತ ಛಳಿ ಬೇರೆ, ಸಂದೀಪ್ ನನ್ನನ್ನು 4 ಗಂ ಎಬ್ಬಿಸಿ ಕರೆದುಕೊಂಡು ಹೋಗಿ Best Buy ನಲ್ಲಿ ನಿಲ್ಲಿಸಿ ಅವರು ಬೇರೆ ಕಡೆ ಹೊರಟು ಹೋದ್ರು, ನಂಗೆ ಅರೆ ನಿದ್ದೆ, ಛಳಿ, ಅಲ್ಲಿ ಬೇರೆ ಜನ ಜಾತ್ರೆ ನೋಡಿ, ನನ್ನವರ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದು ,ಇವತ್ತೇ ಕೊನೆ ಇನ್ನು ಬರಬಾರದು ಅಂಥ ತೀರ್ಮಾನ ಮಾಡ್ದೆ. (ಇದು ಬಹುಶ 99 ನೇ ಇಸವಿಯಲ್ಲಿ ನಡೆದದ್ದು:)), ನಾಳೆ ಕೂಡ ಅವರೊಬ್ಬರೇ ಹೋಗ್ತಾರಂತೆ ನಾನು ಆರಾಮಾಗಿ ನಿದ್ದೆ ಮಾಡ್ತೀನಿ.

  ಅನ್ವೇಷಿಗಳೇ ನೀವು ಆಟೋದವನಿಗೆ double ಕೊಡೋಕ್ಕೆ ಮತ್ತು waiting charge ಕೊಡೋಕ್ಕೆ ತಕರಾರು ಮಾಡ್ತಿದ್ದೀರ ಅನ್ಸತ್ತೆ ಅದಕ್ಕೇ ಅವನು ಬರಲ್ಲ ಅಂತಿದ್ದಾನೆ, ಇನ್ನೊಮ್ಮೆ ಕೇಳಿ ನೋಡಿ.

 8. ನಂಗೆ ಅರೆ ನಿದ್ದೆ, ಛಳಿ, ಅಲ್ಲಿ ಬೇರೆ ಜನ ಜಾತ್ರೆ ನೋಡಿ, ನನ್ನವರ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂದು ……

  – ಆಮೇಲೆ? ಆಮೇಲೆ?…. ರಣಚಂಡಿಯ ಕೈಯಲ್ಲಿ ಸಿಕ್ಕು ಬಡಪಾಯಿ ಸಂದೀಪ್ ಗತಿ ಏನಾಯ್ತು?  🙂

  ನಿದ್ದೆ, ಛಳಿ ಜೊತೆಗೆ ಹಸಿವು ಕೂಡ ಸೇರಿಸಬೇಕು. ಬಿಲ್ ಹಾಕಿಸಿ ಹೊರಗೆ ಬರುವಾಗ ತುಂಬಾ ಹಸಿವಾಗಿರತ್ತೆ… ಅವತ್ತು ನಮ್ಮ ಊಟ ಹೊರಗೇನೆ. ಮನೆಯಲ್ಲಿ ಅಡಿಗೆ ಇಲ್ಲ!! 🙂

 9. ಶ್ರೀತ್ರೀ ಅವರೆ
  ಮತ್ತೊಮ್ಮೆ ಮೃಚ್ಛಕಟಿಕದಲ್ಲಿ ಕೂರಿಸಿ ಅದು ಗಡಗಡ ನಡುಗಿಸುತ್ತಾ ಎಳೆದೊಯ್ಯುವ ಮೂಲಕ ನಮ್ಮ ಕೈಕಾಲು ಮುರಿಸುವ ತಂತ್ರಕ್ಕೆ ಧನ್ಯವಾದ.

  ಮೀರಾ ಅವರೆ
  ಆಟೋದವನಲ್ಲಿ ಮೊದಲು ಮಾತನಾಡುವಾಗ ಚಕಾರ ಎತ್ತಿರಲಿಲ್ಲ, ಎರಡನೇ ಬಾರಿ ಮಾತ್ರ ಆತನ ಕರಾರಿಗೆ ನಾವು ತ-ಕರಾರು ಮಾಡಿದ್ದು. ಯಾಕಂದ್ರೆ ದಾರಿ ಕೇಳಿದಾಗ ಅವನು ನೇರವಾಗಿ ಮೇಲಕ್ಕೆ ಕೈಬೀಸ್ತಿದ್ದ…! 🙂

 10. ತ್ರಿವೇಣಿ,

  ಸೋ ಈ ಸಲ ವಂದನೆ ಕೊಡುವ ದಿನದ ವಿಶೇಷ ಎನೇನೂ ಶ್ಯಾಪಿಂಗ್ ಮಾಡಿದೀರಿ !
  ನಾನು ಸ್ಯಾನ್ ಪ್ರಾನ್ಸಿಕೋ ಪ್ರವಾಸಕ್ಕೆ ಹೋಗಿದ್ದೆ..ಸೋ ನೋ ಶ್ಯಾಪಿಂಗ್..

  ಥ್ಯಾಂಕ್ಸ್ ಗೀವಿಂಗ್ ಬಗ್ಗೆ ಕಳೆದ ವರ್ಷ ನನ್ನ ಅಂಗ್ಲ ಬ್ಲಾಗ್‍ನಲ್ಲಿ ಬರೆದಿದ್ದು ನೋಡಿ
  http://shivhn.blogspot.com/2005/11/queuesthanksgiving-and-turkeys.html

 11. ಬ್ಲಾಗ್ ಲಿಂಕಿಗೆ ಧನ್ಯವಾದಗಳು ಶಿವು. ಪಾತರಗಿತ್ತಿಯಲ್ಲದೆ ನಿಮ್ಮ english blog ಕೂಡ ಇರುವುದು ಗೊತ್ತಿರಲಿಲ್ಲ.

  ಈ ಬಾರಿಯ ಶಾಪಿಂಗ್‍ನಲ್ಲೂ ಮತ್ತಷ್ಟು ಬೇಕಾದ,ಬೇಡದ ವಸ್ತುಗಳು ಮನೆ ತುಂಬಿಕೊಂಡವು.

  ಈ ಸೇಲ್, ಶಾಪಿಂಗ್‍ಗಳ ಅಬ್ಬರಗಳನ್ನು ನೋಡಿದಾಗ, ಒಬ್ಬ ಮನುಷ್ಯ ನೆಮ್ಮದಿಯಿಂದಿರಲು ನಿಜವಾಗಿಯೂ ಇವೆಲ್ಲಾ ಅಗತ್ಯವೇ? ಇವೆಲ್ಲಾ ಇಲ್ಲದೆಯೂ ನಾವು ಚೆನ್ನಾಗಿಯೇ ಇದ್ದೆವಲ್ಲವೇ? ಅನ್ನಿಸುತ್ತದೆ. ನಮ್ಮ ಪ್ರಯತ್ನವೇ ಇಲ್ಲದೆ, ನಾವೆಲ್ಲ ಯಾವುದೋ ಒಂದು ವೃತ್ತದಲ್ಲಿ ಬಂಧಿಯಾಗಿ ಸುತ್ತುತ್ತಿದ್ದೇವೇನೊ ಎಂಬ ಅನಿಸಿಕೆ ಪ್ರಬಲವಾಗುತ್ತಿದೆ….

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.