ಚಿತ್ರ: ಮುಂಜಾನೆಯ ಮಂಜು -(೧೯೯೩)
ಸಾಹಿತ್ಯ,ಸಂಗೀತ- ಹಂಸಲೇಖ
ಗಾಯಕರು – ಚಿತ್ರ, ಎಸ್.ಪಿ.ಬಾಲಸುಬ್ರಹ್ಮಣ್ಯಂ
ದುಂಬಿ ದುಂಬಿ ದುಂಬಿ ದುಂಬಿ
ದೂರ ಹೋಗು ದುಂಬಿ
ಆಯಿತು ಸಾಯಂಕಾಲ
ಮಲ್ಲೆ ಮಲ್ಲೆ ಮಲ್ಲೆ ಮಲ್ಲೆ
ಇಂದು ರಾತ್ರಿ ಇಲ್ಲೆ
ನಿಂತರೆ ಅನುಕೂಲ
ಆಗದು ಹೋಯ್ ಆಗದು ಹೋಯ್
ಹಾಗಾಗದು ಹೋಯ್
ಜಾಣನಾಗಿ ಊರು ಸೇರಿಕೊ
ಮಲ್ಲೆ ಮಲ್ಲೆ ಮಲ್ಲೆ ಮಲ್ಲೆ
ಇಂದು ರಾತ್ರಿ ಇಲ್ಲೇ
ನಿಂತರೆ ಅನುಕೂಲ
ಆಗದು ಹೋಯ್ ಆಗದು ಹೋಯ್
ಹಾಗಾಗದು ಹೋಯ್
ನನ್ನ ಮುತ್ತ ಒತ್ತೆ ಇಟ್ಟುಕೊ ||ಪ||
ಊರೇಕೆ ದುಂಬಿಗೆ
ಸೂರೇಕೆ ದುಂಬಿಗೆ
ಮಲ್ಲಿಗೆ ಮರೆ ದುಂಬಿ ಹಾಡೋ ಜಾಗ
ಹಾಡಿನ ಮಧ್ಯೆ ಜೇನು ಹೀರೋ ಯೋಗ
ಜಾಣ ಜಾಣ ನೀನು
ಹಾಡಿನ ಬಾಣ ಹೂಡುವೆ
ಜೀವ ಜಾರುವಾಗ
ಅರ್ಧ ಪ್ರಾಣ ನೀಡುವೆ
ಅಂಜುವೆ ಏಕೆ ಮಲ್ಲಿ
ಕಂಪಿನ ತೋಟದಲ್ಲಿ
ಉತ್ತಮನಾಗಿ ಓಡಾಡುವೆ
ಮಾನದ ಮಲ್ಲಿ ನಾನು
ನಾಚಿಕೆ ಕಾಡದೇನು?
ಕತ್ತಲೆಗಾಗಿ ನಾ ಬೇಡುವೆ
ಆಗದು ಹೋಯ್ ಆಗದು ಹೋಯ್
ಹಾಗಾಗದು ಹೋಯ್
ಕಣ್ಣು ಮುಚ್ಚಿ ಕತ್ತಲೆಂದುಕೋ||೧||
ಬಾ ನನ್ನ ಹತ್ತಿರ
ಬಾ ಇನ್ನು ಹತ್ತಿರ
ಹತ್ತಿರ ಬಂದ ಮೇಲೆ ಹೆಚ್ಚಬೇಡ
ಮೆಚ್ಚಿನ ರಾಸಲೀಲೆ ನೆಚ್ಚಬೇಡ
ಮಾತು ಮತ್ತು ಮುತ್ತು ಈಗ ಸಾಲ ನೀಡು
ಅಂತರಂಗ ಒಪ್ಪಿದಾಗ ಪ್ರೀತಿ ಮಾಡು
ತಣ್ಣನೆಯ ಗಾಳಿಯಂತ
ಸಂಜೆಯ ರಂಗಿನಂತ
ದುಂಬಿಯ ಹಾಡಿಗೆ ಸೋಲೆನು
ಮಾಗಿಯ ಕಾಲದಂತ
ಮಾವಿನ ಹೂವಿನಂತ
ಹೆಣ್ಣಿನ ಕಂಪು ನಾ ತಾಳೆನು
ಆಗದು ಹೋಯ್ ಆಗದು ಹೋಯ್
ಹಾಗಾಗದು ಹೋಯ್
ಹಣ್ಣು ತಿಂದು ಹೆಣ್ಣು ಎಂದುಕೊ ||೨||
*** *** *** *** *** *** ***
ಹಂಸಣ್ಣ ಹಿಂಗೆ ಪದಗಳ ಮೇಲೆ, ಹಿಂದೆ, ಮುಂದೆ ಪದಗಳನ್ನ ಹೆಣೀತಾ ಕೂತ್ರೆ ಉದ್ದಕೆ ರಾಮಾಯಣ ಬೇಕಾದ್ರೂ ಬರೆದು ಬಿಡಬಲ್ಲ! ಅಯ್ಯೋ ಅಯ್ಯೋ ಅಯ್ಯೋ…ದುಂಬಿ-ಹೂವನ್ನ ಹಿಡಕೊಂಡು ಎಲ್ಲಿಂದ ಎಲ್ಲಿಗೆ ಎಳೀತಾನ್ರೀ ಪುಣ್ಯಾತ್ಮ!! ಈ ಮನುಷ್ಯನ ಕಲ್ಪನಾ ಲೋಕ ಇನ್‌ಹೆಂಗ್ ಇರಬಹುದು… ಅಂತಾs.
ಯಾಕ್ ಕಾಳಣ್ಣಾ, ಹಾಡು ಕೇಳಿ ಸುಸ್ತಾಗಿ ಬಿಟ್ಟಂಗಿದೆ 🙂
ಹಂಸ್‍ಗೆ ಜೈ!!
ಕಚಗುಳಿ ನೀಡುವ ಮಲ್ಲೆ-ದುಂಬಿ ಹಾಡು
>ನನ್ನ ಮುತ್ತ ಒತ್ತೆ ಇಟ್ಟುಕೊ
ಅದ್ಬುತ..ಸೋ ವಾಪಾಸ್ ತೆಗೋ ಬೇಕಾದರೆ ಬಡ್ಡಿ ಸಮೇತ ಸಿಗುತ್ತಾ 🙂
ಶಿವು, ಈ ಪ್ರಶ್ನೆಗೆ ಉತ್ತರವನ್ನು ನಿಮ್ಮ ಮುಂದಿನ ಪತ್ರದಲ್ಲಿ ಕೇಳಿ, ತಿಳಿದುಕೊಳ್ಳಿ 🙂
ನನ್ನ ಅನುಭವಕ್ಕೆ ಸಿಕ್ದೆ ಇದ್ರು, ಕಲ್ಪನೆಯಿಂದ ತಪ್ಪಿಸ್ಕೊಳ್ಲೊಕ್ಕೆ ಆಗೊಲ್ಲ. ಉತ್ತಮೋತ್ತಮ ಸಾಹಿತ್ಯ 🙂
ಆ ಮನುಷ್ಯ, ಫಿಲಮ್ ಫೇರ್ ನಲ್ಲಿ ಕನ್ನಡದಲ್ಲಿ ಮಾತಾಡ್ಲಿಲ್ಲ ಅನ್ನೊ ಒಂದ್ ದುಃಖ ಬಿಟ್ರೆ,ಎಲ್ಲ ಓಕೆ!
ಭೂತಕ್ಕೆ ಪ್ರೇರಣೆ ಸಿಕ್ತು.
ಇಂತಿ
ಭೂತ
ಹೌದು ಭೂತ. ಉದಯ ಟಿವಿಯಲ್ಲಿ ನಾನೂ ನೋಡಿದೆ. ಫಿಲ್ಮ್ ಫೇರಿನಲ್ಲಿ ಯಾರನ್ನೋ ಓಲೈಸಲು ಹಂಸ್ ತಮಿಳಿನಲ್ಲಿ ಮಾತನಾಡಿದ್ದು ಬಹಳ ಅಸಹ್ಯವಾಗಿ ಕಾಣಿಸಿತು. 🙁