ಕುಂದಣದ ಹಸೆಗೆ ಚಂದದಲಿ ಬಾರೆ
ಚಂದದಲಿ ಬಾರೆ ಸಿಂಧು ಕುಮಾರಿ ||ಪಲ್ಲವಿ||

ಶೃಂಗಾರಮಯವಾದ ರಂಗ ಮಂಟಪದೊಳು
ಕಂಗೊಳಿಸು ಇಲ್ಲಿ ತಿಂಗಳ ಸೋದರಿ ||1||

ಕುಂದ ಕುಡ್ಮಲ ರದನೆ ಸಿಂಧೂರ ವದನೆ
ಇಂದೂಧರಾದಿ ಸುರ ವೃಂದ ವಂದಿತ ಚರಣೆ || 2||

ಕಾಮನ ಜನನಿ ಕಾಮಿತ ದಾಯಿನಿ
ಗೋಮಿನಿ ರುಕ್ಮಿಣಿ ಶಾಮಸುಂದರ ರಾಣಿ || 3||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.