ಶಿಲ್ಪಾ ಶೆಟ್ಟಿಗಾದ ಅವಮಾನ – ದೇಶಕ್ಕೇ ಅವಮಾನವಾಗಿದ್ದು ಹೇಗೆ?    ಪತ್ರಿಕೆ,ಟಿವಿಗಳು ಭಾರತಕ್ಕೇನೋ ಭಾರೀ ಅವಮಾನವಾಗಿದೆ ಅನ್ನೋ ಹಾಗೆ ಬೊಬ್ಬೆ ಹೊಡೆಯುತ್ತಿದ್ದುದು ನೋಡಿ ನನ್ನನ್ನೂ ಇದೇ ಪ್ರಶ್ನೆ ಕಾಡಿತ್ತು.  ಕನ್ನಡಪ್ರಭದ ಈ ಲೇಖನ ಓದಿದ ಮೇಲೆ ಸಮಾಧಾನವಾಯಿತು. ನೀವೂ ಓದಿ ನೋಡಿ.  ಏನನ್ನಿಸಿತು ಹೇಳಿ .

“ದೆಹಲಿಯಲ್ಲಿ ಅಡ್ದಾಡುವ ಬೆಂಗಳೂರಿನ ಯುವಕನನ್ನು ತಲೆತಿರುಕನೊಬ್ಬ “ಮದ್ರಾಸೀ”  ಎಂದು ಕರೆದರೆ ಅದು ರಾಜ್ಯಕ್ಕಾದ ಅವಮಾನ ಎಂದು ಪರಿಗಣಿಸುತ್ತೇವಾ?” – ಲೇಖಕರ  ಈ ಪ್ರಶ್ನೆಯಂತೂ ಬಹಳ ಅರ್ಥಪೂರ್ಣವಾಗಿದೆ. ಲೇಖನದ ಜೊತೆಗೆ ಲೇಖಕರ ಹೆಸರೇ ಇಲ್ಲ!

6 thoughts on “ಶಿಲ್ಪಾ ಶೆಟ್ಟಿ ಮಾನ – ದೇಶದ ಅವಮಾನ?”

 1. ನಾನೂ ವೇಣಿಯಿಂದ ಈ ವಾರ್ತೆಕೇಳಿ “Usual Indian over-sensitivity” ಅಂದುಕೊಂಡು ಸುಮ್ಮನಾದೆ. ಕನ್ನಡಪ್ರಭ ಓದಿದಮೇಲಂತೂ ಕುತೂಹಲದಿಂದ ನನ್ನ favorite torrent siteಗೆ ಹೋಗಿ ೪ ಕಂತುಗಳನ್ನು downloaಡಾಯಿಸಿದೆ. Jane Goody ಯಾಡಿದ ಪ್ರತೀ ಮಾತಿನಲ್ಲೂ ಆವಳ racial undertones ಎದ್ದು ಕಾಣುತ್ತಿತ್ತು. ಉದಾ ” I dont want to eat anything served by that bitch, who knows where are all those hands have been ? ” ” Can she cook anything otherthan besides nasty brown things ?” “this bitch wants to be white” “she bleached her facial hair” …

  ಬರೀ ಜೇನ್ ಗುಡ್ಡೀ ಮಾತ್ರವಲ್ಲದೆ ಅವಳ ಸ್ನೇಹಿತರೂ ಕೂಡ ಇದೇ ರೀತಿ ಮಾತಾಡಿದ್ದಾರೆ.

  Danielle Lloyd: “I think she should f**k off home.”

  ಹಲವಾರು ಬ್ರಿಟಿಷ್ ದಿನಪತ್ರಿಕೆಗಳು ಕೂಡ ಇದನ್ನು front-page ನ್ಯೂಸನ್ನಾಗಿಸಿತು.

  The Big Brother race row shows an “ugly underbelly in society only too ready to point the finger at the foreigner”, the Archbishop of York has said. ( http://news.bbc.co.uk/1/hi/england/north_yorkshire/6282665.stm).

  ಇದರ timing ಕೂಡ ಬ್ರಿಟಿಷರಿಗೆ ಮುಜುಗರ ತರುವಂತಹ ಸಮಯವೂ ಅಗಿದೆ, ಕಾರಣ ಮುಂದಿನ ಪ್ರಧಾನಿಯಾಗುವ ಮಹದಾಸೆಹೊಂದಿರುವ ಗಾರ್ಡನ್ ಬ್ರೌನ್ ಭಾರತ ಪ್ರವಾಸದಲ್ಲಿದ್ದರು. ಈ ಗಲಾಟೆ ಶುರುವಾಗುವ ಮುಂಚೆಯೇ UKಯನ್ನು “as a country of fairness and tolerance” ಎಂದು ಘೋಷಿಸಿದ್ದರೂ ಕೂಡ  😀

  ಇದೆಲ್ಲದರಿಂದ ನಮ್ಮ ಭಾರತದ ಮರ್ಯಾದೆಗೇನೂ ಕುಂದಾಗಲಿಲ್ಲವಾದರೂ, ಭಾರತ ಒಂದೇ ಅಲ್ಲದೇ ಬೇರೆ ಯಾವುದೇ ದೇಶದ ಬಿಳಿಯರಲ್ಲದ ಜನರ ಬಗ್ಗೆ ಬಿಳಿಯರ ಧೋರಣೆ ಹೇಗಿದೆ ಎಂಬುದನ್ನು ಚಿತ್ರಿಸುತ್ತದೆ. ಇದು ಚ್ಯಾನೆಲ್ ೪ ನ ಧೋರಣೆಯೂ ಹೌದೊ ಅಲ್ಲವೋ ಗೊತ್ತಿಲ್ಲ.  ಆದರೆ UK Regulator Ofcom ಗಂತೂ ೭೩,೬೭೬ complaints ಬಂದು, ಇಬ್ಬರು ಪ್ರತಿಷ್ಟಿತ sponsorsಗಳನ್ನು ಚ್ಯಾನೆಲ್ ೪ ಕಳೆದು ಕೊಂಡಿತು.

  ಇಷ್ಟೆಲ್ಲಾ ರಾದ್ಧಾಂತವಾದರೂ ನಮ್ಮ ಕನ್ನಡಪ್ರಭದವರು “ದೆಹಲಿಯಲ್ಲಿ ಅಡ್ದಾಡುವ ಬೆಂಗಳೂರಿನ ಯುವಕನನ್ನು ತಲೆತಿರುಕನೊಬ್ಬ “ಮದ್ರಾಸೀ”… ” ಅಂಥ ನಾಲ್ಕು ಸಾಲು ಗೀಚಿರುವುದು ನಿಜಕ್ಕೂ ಶೋಚನೀಯ.

  ಶಿಲ್ಪಾ ಶೆಟ್ಟಿಗೆ ಈ show ಕೊಡುತ್ತಿರುವ ಮೊತ್ತ 630,000 USD ( 370,000 Pounds ). ಈ ಮೊತ್ತದ ಮುಂದೆ ‘ಮಾನ’ ನಿಲ್ಲುವುದು ಅನುಮಾನ..

 2. ಕನ್ನಡಪ್ರಭದ ಲೇಖನದ ಅಭಿಪ್ರಾಯ ಸ್ವಾಗತಾರ್ಹ.

  ಇದೊಂದು ನಿಜಕ್ಕೂ overreactive ಘಟನೆ.
  ಶಿಲ್ಪಾ ಆ ಶೋ ಗೆ ಹೋಗಿದ್ದು ತನ್ನ ಸ್ವಂತ ಆಸಕ್ತಿಯಿಂದ, ದುಡ್ಡು ಸಂಪಾದಿಸಲು..ಅದು ಅವಳ ಜೀವನ ಅವಳೇನಾದರೂ ಹಾಳು ಮಾಡಕೊಳ್ಳಿ..

  ನಂತರ ಅವಳನ್ನು ನಿಂದಿಸಿದ್ದು ..ಅದು ಸಹ ಖಂಡನೀಯ..
  ಆದರೆ ನಂತರದ ಎಲ್ಲಾ ಪ್ರತಿಕ್ರಿಯೆ ನಿಜಕ್ಕೂ ಆಶ್ಚರ್ಯಕರವಾಗಿದ್ದವು.
  ಬಾಲಿವುಡ್ ಅಂದರೆ ಭಾರತವಲ್ಲ..ಅಲ್ಲಿನ ನಟ-ನಟಿಯರು ಭಾರತದ ಪ್ರತಿನಿಧಿಗಳಂತು ಅಲ್ಲವೇ ಅಲ್ಲ..

  ಕೊನೆ ಮಾತು..ಶಿಲ್ಪಾ ನಿಂದನೆ ಪ್ರಕರಣದ ನಂತರ ಚಾನಲ್ ೪ ಕ್ಕೆ ಸಿಕ್ಕಾಪಟ್ಟೆ viewership ಸಿಕ್ಕಿದೆ ಅಂತೆ..ಬಹುಷಃ ಶಿಲ್ಪಾ ಆ ಕಾರ್ಯಕ್ರಮದಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಅಂತೆ .

 3. ಶ್ರೀನಿ ಮತ್ತು ಶಿವು,

  ನಿಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಶ್ರೀನಿ, ಘಟನೆಯ ವಿವರವನ್ನು ಎಳೆ ಎಳೆಯಾಗಿ ಇಲ್ಲಿ ಬಿಡಿಸಿಟ್ಟಿದ್ದಕ್ಕೆ ವಿಶೇಷ ಧನ್ಯವಾದ 🙂

  ನಿಜವಾಗಿಯೂ ಈ ಪ್ರಕರಣದಿಂದ ದೇಶಕ್ಕೆ ಅವಮಾನವಾಗಿದ್ದರೆ ಅದೊಂದು ದುಃಖದ,ದುರದೃಷ್ಟದ ಸಂಗತಿ. ಯಾರಿಂದಲೂ ನಮ್ಮ ದೇಶಕ್ಕೆ ಮಾನ ಬರದಿದ್ದರೆ ಬೇಡ,ಅವಮಾನವಾಗುವುದಂತೂ ಬೇಡವೇ ಬೇಡ!!

  ದುಡ್ಡಿನಾಸೆಗೆ ಎಂತಹ ಚಿತ್ರಗಳಿಗಾದರೂ ಸಹಿ ಹಾಕುವ, ಯಾವುದೇ ಉತ್ಪನ್ನಕ್ಕಾದರೂ ರೂಪದರ್ಶಿಗಳಾಗಲು ಒಪ್ಪುವ ನಮ್ಮ ತಾರೆಯರು ಈ ಘಟನೆಯಿಂದ ಏನಾದರೂ ಕಲಿಯುತ್ತಾರೋ ನೋಡಬೇಕು.

 4. ‘ಮೂರೂ ಬಿಟ್ಟವರು ಊರಿಗೆ ದೊಡ್ಡವರು’ ಅನ್ನೋ ಗಾದೆ ಮಾತು ಸುಳ್ಳಾಗಿಲ್ಲ ಬಿಡಿ. ಹತ್ತಿರ ಹತ್ತಿರ ಮೂರು ಕೋಟಿ ರೂ ಸಂಪಾದಿಸುತ್ತಿರುವ ಈ ನಟಿಗೆ ಇದ್ಯಾವ ಮೂಲೆ. ಇದೊಂಥರ ಪ್ರಚಾರ ಅನ್ನಿಸತ್ತೆ. ಮಾಡಿರೋದೇ ಮಾನಗೆಟ್ಟ ಕೆಲಸ(ಬಿಗ್ ಬ್ರದರ್ ಕಾನ್ಸೆಪ್ಟ್ ಬಗ್ಗೆ ನೋಡಿ) ಇದ್ರಲ್ಲಿ ಮಾನ ಹೋಯ್ತೂ ಅಂತ ಆ ಯಮ್ಮನ ಜೊತೆಗೆ ಇಡೀ ದೇಶಾನೇ ಬೊಂಬ್ಡಿ ಹೊಡೀತಿರೋದು ನೋಡಿ ಅಳಬೇಕೋ ನಗಬೇಕೋ ಗೊತ್ತಾಗ್ತಿಲ್ಲ.

 5. ಶಿಲ್ಪಾ ಒಬ್ಬ ನಟಿ, ನಟಿಸೋದು ಅವಳ ವೃತ್ತಿ ಧರ್ಮ. ಅದಕ್ಕಾಗಿ ಅವಳು ೩ ಕೋಟಿಯಲ್ಲ ಎಷ್ಟೇ ತೆಗೆದುಕೊಂಡರೂ ನಮಗೇನು? ಕೊಡುವವರಿದ್ದಾರೆ. `ಬಿಗ್-ಬ್ರದರ್ಸ್’ ಕಾರ್ಯಕ್ರಮದಲ್ಲಿ ನಡೆಯುತ್ತಿರುವುದು ನಟನೆ ಅನ್ನುವುದನ್ನು ನಾವು ಗಮನದಲ್ಲಿ ಇರಿಸಬೇಕು. ಶಿಲ್ಪಾ ಮಾನಗೆಟ್ಟವಳು, ಈ ಸಣ್ಣ ಮಾತುಗಳಿಗೆ ಅಳೋದು ಸರಿಯಲ್ಲ ಅನ್ನುವ ಭಾವನೆಗಳು ಇಲ್ಲಿ ಬಂದುದರಿಂದ ಹೀಗೆ ಹೇಳಿದೆ. ಯಾರನ್ನೇ ಆಗಲಿ, ನಿನ್ನ ಹೆಸರು ಸರಿಯಿಲ್ಲ, ನಿನಗೆ ಇಂಗ್ಲೀಷ್ (ನಮ್ಮಂತೆ) ಮಾತಾಡಲು ಬರೋದಿಲ್ಲ, ನೀನು (ಬೇರೆ ದೇಶದ ಪ್ರಜೆಯಾದ್ದರಿಂದ) ಕೊಳಕ/ಕೊಳಕಿ ಎಂದು ಅಲ್ಲ-ಸಲ್ಲದ್ದನ್ನು ಅಂದರೆ ಅದು ವ್ಯಕ್ತಿಗೆ ಅವಮಾನವೇ ಹೌದು. ಆದರೆ ದೇಶಕ್ಕಲ್ಲ. ಅದರಲ್ಲೂ, ಆಕೆ ಭಾರತೀಯಳು ಅನ್ನುವ ಕಾರಣಕ್ಕಾಗಿ, ಇಲ್ಲಿ ಭಾರತೀಯತೆಗೂ ಅವಮಾನವಾಗಿದೆ, ಒಪ್ಪಿಕೊಳ್ಳೋಣ. ಇದಕ್ಕೆ ಆಂಗ್ಲರೆಲ್ಲರೂ ಜವಾಬ್ದಾರರಲ್ಲ, ಆ ಟೀವಿ ಚಾನೆಲ್ ಮತ್ತು ಇತರ ನಟಿಯರು ಜವಾಬ್ದಾರರು. ಸುಪ್ರಸಿದ್ಧ ನಟಿಯೆಂಬ ಮಾತ್ರಕ್ಕೆ ಇನ್ನೊಬ್ಬ ನಟಿಯನ್ನು ಹೀಗಳೆಯಲು ಅವರಿಗೆ ಹಕ್ಕಿಲ್ಲ.

  ಇಷ್ಟಕ್ಕೂ ಶಿಲ್ಪಾ ತನ್ನ ದೂರನ್ನು ಹಿಂತೆಗೆದುಕೊಂಡಿದ್ದಾರೆ, ಯಾಕಂತೆ?

 6. ಮೀರಾ,ಜ್ಯೋತಿ ಅನಿಸಿಕೆಗಳಿಗೆ ಧನ್ಯವಾದಗಳು.

  ” ಇಷ್ಟಕ್ಕೂ ಶಿಲ್ಪಾ ತನ್ನ ದೂರನ್ನು ಹಿಂತೆಗೆದುಕೊಂಡಿದ್ದಾರೆ, ಯಾಕಂತೆ? ” –
  ಜ್ಯೋತಿ, ನಿನ್ನ ಈ ಪ್ರಶ್ನೆಗೆ ಶ್ರೀನಿ ಪೋಸ್ಟಿನಲ್ಲಿ ಉತ್ತರವಿದೆ. –

  “ಶಿಲ್ಪಾ ಶೆಟ್ಟಿಗೆ ಈ show ಕೊಡುತ್ತಿರುವ ಮೊತ್ತ 630,000 USD ( 370,000 Pounds ). ಈ ಮೊತ್ತದ ಮುಂದೆ ‘ಮಾನ’ ನಿಲ್ಲುವುದು ಅನುಮಾನ.. “

  ಅಥವಾ, ಬೇರೇನಾದರೂ ಕಾರಣಗಳಿದ್ದರೆ ಅದು ಶಿಲ್ಪಾ ಅವರಿಂದಲೇ ಬಹಿರಂಗಗೊಳ್ಳಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.