ಚಿತ್ರ : ಬೆಳ್ಳಿ ಕಾಲುಂಗುರ (೧೯೯೨)
ಸಾಹಿತ್ಯ : ದೊಡ್ಡರಂಗೇಗೌಡ
ಸಂಗೀತ : ಹಂಸಲೇಖ
ಹಾಡು ಕೇಳಿ
* ಚಿತ್ರ
ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು….
ಭೂರಮೆಯೇ ಆಧಾರ
ಈ ಕಲೆಯೇ ಸಿಂಗಾರ
ಬಂಗಾರ ತೇರೇರಿ
ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ
ಇಂದಿಗೂ ಜೀವಂತ
ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ
ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕರೆ ನೀಡಿದೆ
ನೀನೊಮ್ಮೆ ಬಂದಿಲ್ಲಿ ಹಿತವಾಗಿ ಹಾಡು |
ಗಾಳಿಯೇ ಆವೇಶ
ಮೇಘವೇ ಸಂದೇಶ
ಪ್ರೇಮಕೆ ಸಂಕೇತ
ಹೊಂಬಣ್ಣದಾಕಾಶ
ಋತು ಋತುಗಳು ನಿನ್ನ ಕಾದಿವೆ
ನೀನಿರೆ ರಂಗೋಲಿ
ಸಂಗಾತಿ ಸುವ್ವಾಲಿ
ನವರಸವು ಮೈತಾಳಿ
ಜೀವನದ ಜೋಕಾಲಿ
ಯುಗ ಯುಗಗಳು ನಿನ್ನ ಕಾಯುವೆ
ನೀನೊಮ್ಮೆ ಬಂದಿಲ್ಲಿ ಬೆಳಕನ್ನು ನೀಡು |
ಕೇಳಿಸದೆ ಕಲ್ಲು ಕಲ್ಲಿನಲಿ
ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು….
* * * * * *
Thanks for song. ee chitradalli SPB, chitra solo aagi haadiruva innondu haadu yaavudu?
ತುಳಸಿಯಮ್ಮ,
ನಿಮ್ಮ ಹತ್ರ ಗೋಪಾಲಕೃಷ್ಣ ಅಡಿಗಳ – ‘ಕಟ್ಟುವೆವು ನಾವು ಹೊಸ ನಾಡೊಂದನು’ ಪದ್ಯ ಇತ್ತಾ?
ಜಗಲಿ ಭಾಗವತ
ಶಶಿ, ನೀವು ಕೇಳಿರುವ ಹಾಡು – “ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ”, ಆದರೆ ಇದನ್ನು ಹಾಡಿರುವುದು SPB ಮತ್ತು SJ. ಚಿತ್ರ ಅಲ್ಲ.
ಜಗಲಿ ಭಾಗವತರೇ, ಜಗಲಿ ಮೇಲೇ ನಿಂತಿದ್ದೀರಲ್ಲಾ, ಒಳಗೆ ಬನ್ನಿ
“‘ಕಟ್ಟುವೆವು ನಾವು ಹೊಸ ನಾಡೊಂದನು” ಕವನ ಇದೆಯೋ ಇಲ್ಲವೋ ಗೊತ್ತಿಲ್ಲ. ಹುಡುಕಿ, ಇದ್ದರೆ… ಕೊಡ್ತೀನಿ.
ನಿಮ್ಮದು ಎಲ್ಲಾಯ್ತು ಮಾರಾಯ್ರೆ? ಭಾಷೆ ನೋಡಿದ್ರೆ ಸಿದ್ಧಾಪುರ ಬದಿಗಿನ ಭಾಷೆ ಇದ್ದಂಗೆ ಇದ್ದು
ನಮ್ದು ಕುಂದಾಪ್ರ ಬದಿ ಮರ್ರೆ. ಕುಂದಾಪ್ರದ ಹತ್ರನೊ ಒಂದು ಸಿದ್ಧಾಪುರ ಇತ್ತ್. ಉತ್ತರಕನ್ನಡದಲ್ಲೊ ಒಂದು ಸಿದ್ಧಾಪುರ ಇತ್ತ್.
ಆದ್ರೆ – ಇದ್ದಂಗೆ ಇದ್ದು – ಇದ್ರಲ್ಲಿ ಹವ್ಯಗನ್ನಡದ ಛಾಪಿದೆಃ-)) ಇದು ಕುಂದಾಪ್ರ ಕನ್ನಡ ಅಲ್ಲ ಕಾಣಿಃ-)
ಕುಂದಗನ್ನಡದಲ್ಲಾದರೆ – ಇದ್ದಾಂಗ್ ಇತ್ತ್-)
ಜಗಲಿ ಭಾಗವತರೇ, ನಾನು ಬರೆದಿದ್ದು ಯಾವುದೋ ಒಂದು ಊರ ಬದಿಗೆ ಸೇರಿತಲ್ಲಾ ಅದೇ ಸಂತೋಷ ನನಗೆ
ನಿಮ್ಮ ಕುಂದಾಪ್ರ ಭಾಷೆ ತುಂಬಾ ಚೆನ್ನಾಗಿದೆ. ಇಲ್ಲಿ ಬಂದಾಗ ನಿಮ್ಮೂರ ಭಾಷೆಯಲ್ಲೇ ಮಾತಾಡಿ.
ಇಂಥಾ ಒಂದು ಸಾಹಿತ್ಯ ಬರೆದ ನಮ್ಮ ಕನ್ನಡದ ಕವಿ ಶ್ರೀ ದೊಡ್ಡರಂಗೇಗೌಡರಿಗೆ ನನ್ನ ಸಾಷ್ಟಾಂಗ ನಮನ ‘ ಇಂದಿಗೂ ಜೀವಂತ, ಶಿಲೆಯೊಳಗೆ ಸಂಗೀತ, ಸ್ವರಸ್ವರದ ಏರಿಳಿತ, ತುಂಗೆಯಲಿ ಶ್ರೀಮಂತ , ಕಣ ಕಣ ಕಣ ಕರೆ ನೀಡಿದೇ’ ಎಷ್ಟು ಸುಂದರ ಈ ಪದಸಾಲುಗಳು. ಈ ಹಾಡು ಕೇಳುತ್ತಿದ್ದರೆ ಇಡೀ ಹಂಪೆಯೇ ಕಣ್ಣ ಮುಂದೆ ಒಡ್ಡಿದಂತಾಗುತ್ತದೆ. ಸುಂದರ ಸಾಹಿತ್ಯಕ್ಕೆ ದೈವೀಕ ಸಂಗೀತ ನೀಡಿದ ಹಂಸಲೇಖಾ ಅವರನ್ನು ಎಷ್ಟು ಹೊಗಳಿದರೂ ಕಡಿಮೆ ಎನಿಸುತ್ತದೆ. ಆದರೂ ಆ ಸರಸ್ವತಿ ಪುತ್ರನಿಗೆ ನನ್ನ ಅನಂತ ನಮಸ್ಕಾರಗಳು.
ಮೀರಾ, ಈ ಹಾಡು ಇಷ್ಟು ದಿನ ನಾನು ಹಂಸಲೇಖ ಬರೆದಿರುವುದು ಎಂದು ತಿಳಿದಿದ್ದೆ. ಕಳೆದ ಭಾನುವಾರ ಉದಯ ಟಿವಿಯ “ನಕ್ಷತ್ರ” ಕಾರ್ಯಕ್ರಮಕ್ಕೆ ದೊಡ್ಡರಂಗೇಗೌಡರು ಬಂದಿದ್ದರು. ಆಗಲೇ ಗೊತ್ತಾಗಿದ್ದು ಈ ಹಾಡು ಅವರದು ಎಂದು.