ಕವನ – ನೆರಳು
ಕವಿ – ಪು.ತಿ.ನರಸಿಂಹಾಚಾರ್ (ಪುತಿನ)
ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೆ ಅದರಿಚ್ಚೆ ಹಾದಿ
ಇದಕು ಹರಿದತ್ತ ಬೀದಿ
ನೆಲನೆಲದಿ ಮನೆಮನೆಯ ಮೇಲೆ
ಕೊಳ ಬಾವಿ ಕಂಡು ಕಾಣದೋಲೆ
ಗಿಡ ಗುಲ್ಮ ತೆವರು ತಿಟ್ಟು
ಎನ್ನದಿನಕೊಂದೆ ನಿಟ್ಟು
ಗಾಳಿ ಬೆರಗಿದರ ನೆಲದೊಳೋಟ !
ವೇಗಕಡ್ಡಬಹುದಾವ ಹೂಟ ?
ಸಿಕ್ಕು ದಣುವಿಲ್ಲದಂತೆ
ನಡೆಯಿದಕೆ ನಿಲ್ಲದಂತೆ.
ಇದ ನೋಡಿ ನಾನು ನೆನೆವೆನಿಂದು :
ಇಂಥ ನೆಳಲೇನು ಗಾಂಧಿಯೆಂದು !
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ.
* * * * * * * *
ತುಂಬಾ ಸೊಗಸಾದ ಪದ್ಯ. ಮೇರು ವ್ಯಕ್ತಿತ್ವದ ಮಹಾತ್ಮಗಾಂಧಿಯವರನ್ನು ಪೂಜ್ಯ ಗರುಡನಿಗೆ ಹೋಲಿಸಿರುವ ಪ್ರತಿಮೆ ಅನುಪಮವಾಗಿದೆ.
ಈ ಪದ್ಯವನ್ನು ಹಿಂದೆಯೂ ಓದಿದ್ದೆ . ಆದರೆ ಇವತ್ಯಾಕೋ ಓದಿದಾಗ, W.B. Yeats ನ The Second Coming ಪದ್ಯದ ಸಾಲುಗಳು ನೆನಪಾದವು ಇಲ್ಲೂ ಯೇಟ್ಸ್ ಗರುಡಪ್ರತಿಮೆಯನ್ನು ಉಪಯೋಗಿಸುತ್ತಾನೆ ಆದರೆ ಪುತಿ.ನ ಅವರಷ್ಟು ಅದ್ಬುತವಾಗಿ ಅಲ್ಲ!
ತನ್ನ ಪದ್ಯದಲ್ಲಿ ಯೇಟ್ಸ್,
Things fall apart; the centre cannot hold;
Mere anarchy is loosed upon the world,
ಎಂದು ಹಲುಬುತ್ತಾ ಕ್ರಿಸ್ತ ಮತ್ತೆ ಹುಟ್ಟಿ ಬರುತ್ತಾನೆಂದು ಆಶಿಸುತ್ತಾನೆ.
ಜಗತ್ತಿಗೆ ಇಂದು ಗಾಂಧಿಯಂಥ ಮಹಾತ್ಮರ ಅವಶ್ಯಕತೆ ಹೆಚ್ಚಾಗಿದೆ, ಮಹಾತ್ಮ ಮತ್ತೊಮ್ಮೆ ಹುಟ್ಟಿಬಾ…
ಅಯ್ಯಯ್ಯೊ, ಹಾಗೇನಾದ್ರೂ ಆದರೇ ಜಮ್ಮು, ಕಾಶ್ಮೀರ, ಹೈದರಾಬಾದು ಎಲ್ಲದಕ್ಕೂ ತಿಲತರ್ಪಣ 🙁
ಅನಿಸಿಕೆಗಳಿಗೆ ಧನ್ಯವಾದಗಳು ಮಾಲಾ. ಲಕ್ಷ್ಮೀನಾರಾಯಣ ಭಟ್ಟರು ನಡೆಸಿದ ಸಾಹಿತ್ಯ ಶಿಬಿರದಲ್ಲಿ, ಈ ಕವನದ ಒಂದೆರಡು ಸಾಲುಗಳನ್ನು ಹೇಳಿದ್ದರು. ನೀವು “ನೆರಳು” ಕವನದ ಮೇಲೆ ಮತ್ತಷ್ಟು ಹೊಸ ಬೆಳಕು ಹರಿಸಿದ್ದೀರಿ. 🙂
ಸೊಗಸಾದ ಪ್ರತಿಮೆ.
ಜನವರಿ ೩೦ ರಂದು ಗಾಂಧಿಯನ್ನು ನೆನೆಪಿಸಿಕೊಂಡ ನಿಮಗೆ ನಮನ.
ಕೊನೆಯ ಪ್ಯಾರ ಓದೋವರ್ಗೆ ಇದು ಗಾಂಧೀಜಿಯ ಬಗ್ಗೆ ಅಂತಾ ಗೊತ್ತಾಗಿರಲಿಲ್ಲ..
>ವೇಗಕಡ್ಡಬಹುದಾವ ಹೂಟ ?
ಹೂಟ ಅಂದರೆ ಎನು?
ಹೂಟ = ಒಳಸಂಚು, ಕುತಂತ್ರ, ಪಿತೂರಿ..