ಚಿತ್ರ : ಅನುಪಮ (೧೯೮೧)
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್-ವೈದಿ
ಹಾಡು ಕೇಳಿ –
ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಒಲುಮೆ ಪೂಜೆಗೆಂದೇ
ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನಾ
ಮಮತೆ ಮೀಟಿ ಮಿಲನ ಕಂಡೆ
ನಿನ್ನ ಸ್ನೇಹ ಸೌಭಾಗ್ಯ ಮಿಂದೆ
ಹರಯ ತೂಗಿ ಸನಿಹ ಬಂದೆ
ಎಲ್ಲಾ ಪ್ರೀತಿ ಸಮ್ಮೋಹ ತಂದೆ
ಹರುಷ ತಂದ ಹಾದಿಯೇ ಚಂದ
ಒಲವಿನಾಸರೆ ರೋಮಾಂಚ ಬಂಧ
ಜೊತೆಯ ಸೇರಿ ಬರುವೆ ನಾನು
ನನ್ನ ಬಾಳ ಬಂಗಾರ ನೀನು
ಬೆಳಕು ನೀನು ಕಿರಣ ನಾನು
ನಿನ್ನ ಕೂಡಿ ಹೊಂಬಿಸಿಲ ಬಾನು
ನಿನಗೆ ನಾನು ನನಗೆ ನೀನು
ನಿನಗೆ ನಾನು ನನಗೆ ನೀನು
ಪ್ರೇಮ ಜೀವನ ಎಂದೆಂದೂ ಜೇನು
* * * * * *
ಅನುಪಮಾ, ಅಯ್ಯೋ ಇದೆಂತದಪ್ಪ ಈ ಸಿನೆಮಾ,
ನೊಡಲು ಹೋಗಿ ನಾನಾದೆ ಗೆಂಡೆತಿಮ್ಮ ,
ಅಪ್ಪಾ ಕೊಟ್ಟ ಬಸ್‍ಚಾರ್ಜ್ ೨ ರೂಪಾಯಿ ಉಳಿಸಿದೆ.
ಈ ಸಿನೆಮಾ ಕದ್ದು ನೊಡಲು ಬರಿಗಾಲಲ್ಲಿ ಕಾಲೇಜಿಗೆ ನಡೆದು,
ಆದರೆ ಕೊಟ್ಟಿದ್ದೇನೇ ನೀನು ಅನುಪಮಾ ?
ಬರೀ ಬೋರು, ನೋವು, ಅವಮಾನ.
ಕಾರಣ ನನ್ನ ಮುಂದಿನ ಸೀಟಿನಲ್ಲೇ ಕೂತಿದ್ಲು,
ನನ್ನ ಹಾಗೇ ಕಾಲೇಜು ಚಕ್ಕರ್ ಹಾಕಿ,
ನನ್ನ ಅಕ್ಕ ಶೋಭಮ್ಮ….
ಹೌದು. ಸಕತ್ ಬೋರ್ ಸಿನಿಮಾ. ಬರೀ ಇಮ್ಯಾಜಿನೇಷನ್, ಸ್ಲೋ ಮೋಷನ್, flashback 🙂
ಆದರೆ, ಬೆಂಗಳೂರಿನವರ ತರ ನಮಗೆ ಕಾಲೇಜಿಗೆ ಚಕ್ಕರ್ ಹಾಕಿ ಸಿನಿಮಾಗೆ ಹೋಗಕ್ಕೆ ಆಗ್ತಾ ಇರಲಿಲ್ಲ . ಮನೆಯಲ್ಲಿ ಹೇಳಿಯೇ ಹೋಗಬೇಕಾಗಿತ್ತು 🙂
ಈ ಹಾಡನ್ನ ನಾನು ಮೊದಲ ಬಾರಿ ರೇಡಿಯೋದಲ್ಲಿ ಕೇಳಿದಾಗ ಹುಚ್ಚೆದ್ದು ಹೋಗಿದ್ದೆ. ಎಂಥಾ ಇಂಪು, ತಂಪು, ರಸಿಕತೆ ಎಲ್ಲಾ ಮೇಳೈಸಿರುವ ಈ ಸಾಹಿತ್ಯ, ಅದಕ್ಕೆ ತಕ್ಕಂತಹ ರಾಗ ಸಂಯೋಜನೆ ಮತ್ತು ಪ್ರೇಮಗೀತೆಗಳನ್ನ ಹಾಡುವುದರಲ್ಲಿ ನಿಸ್ಸೀಮರಾಗಿರುವ ಬಾಲು ಮತ್ತು ಜಾನಕಿ ಜೋಡಿ-ಮೋಡಿ. ಇವೆಲ್ಲವನ್ನೂ ಕೇಳಿ ಈ ಹಾಡಿನ ಚಿತ್ರೀಕರಣವನ್ನು ನೋಡಲು ತುಂಬಾ ಆತುರಳಾಗಿದ್ದೆ(ನಮ್ಮ ಮನೆಯಲ್ಲಿ ಸಿನೆಮಾ ನೋಡುವುದನ್ನು ನಿಷೇಧಿಸಿದ್ದರಿಂದ ನನಗೆ ಸಿನಿಮಾ ನೋಡಲಾಗಲಿಲ್ಲ, ಈಗಲೂ ನೋಡಿಲ್ಲ)
ಈ ದೂರದರ್ಶನ ಬಂದು ಅದರಲ್ಲಿ ಪ್ರತಿ ಗುರುವಾರ ಚಿತ್ರಮಂಜರಿ ಬರುತ್ತಿದ್ದ ಕಾಲದಲ್ಲಿ ಒಮ್ಮೆ ಈ ಗೀತೆ ಪ್ರಸಾರವಾಯ್ತು, ಅಷ್ಟೆ ನನ್ನ ಜನುಮದಲ್ಲಿ ಇನ್ನು ಇಷ್ಟವಾದ ಹಾಡುಗಳ ಚಿತ್ರೀಕರಣ ನೋಡಬಾರದು ಅಂತ ಶಪಥ ಮಾಡಿದೆ. ನಾನು ಈ ಹಾಡನ್ನ ಏನು ನನ್ನ ಕಲ್ಪನಾ ಲೋಕದಲ್ಲಿ ಹೆಣೆದಿದ್ದೆನೋ ಈಗ ಅದೆಲ್ಲವೂ ಮಾಯವಾಗಿ ಬರೀ ನಿರುದ್ವೇಗ ಮುಖಭಾವದಿಂದ ಕೂಡಿದ ನಾಯಕ ನಾಯಕಿಯ ಮುಖವೇ ಕಣ್ಣ ಮುಂದೆ ಮೂಡಿಬರುತ್ತಿದೆ. ಅಸಹ್ಯವಾದ ಚಿತ್ರೀಕರಣ ಈ ಹಾಡಿನ ಸೌಂದರ್ಯವನ್ನೇ ಹಾಳು ಮಾಡಿದೆ. ಇದೇ ಚಿತ್ರದ ಶೀರ್ಷಿಕೆ ಗೀತೆಗೂ ಕೂಡ ಇದೇ ಗತಿ.
ವೇಣಿ, ಬರೀ ಬೆಂಗಳೂರಿನವರು ಮಾತ್ರ ಕಾಲೇಜಿಗೆ ಚಕ್ಕರ್ ಹಾಕಿ ಹೋಗ್ತಿರ್ತಾರೆ ಅಂತ ನಿಂಗೆ ಯಾರಮ್ಮಾ ಹೇಳಿದ್ದು, ನಾನು ಬೆಂಗಳೂರಿನಲ್ಲೇ ಇದ್ದೂ ಒಂದೂ ಸಿನೆಮಾಕ್ಕೂ ಹೋಗಿಲ್ಲ ಆ ಥರ. ಬಹುಷ: ಗೆಂಡೆತಿಮ್ಮಂಗೆ ಮಾತ್ರಾ ಸಾದ್ಯ ಅನ್ನಿಸತ್ತೆ ಹಾಗೆ ಸಿನೆಮಾಗೆ ಹೋಗಕ್ಕೆ, ವಿಚಾರಿಸು ಹೌದಾ ಅಂತ:)
ಹಹಹ….ಇಲ್ಲಿ ಯಾರಾದರೂ ಕುಂಬಳಕಾಯಿ ಕಳ್ಳರು ಇದಾರಾ ಅಂತ doubt ಬರ್ತಾ ಇದೆ ನನಗೆ 🙂
ಬೆಂಗಳೂರಿನವರೆಲ್ಲ ಕಾಲೇಜಿಗೆ ಚಕ್ಕರ್ ಹಾಕಲ್ಲ, ಆದರೆ ಅವರಿಗೆ ಹೆಚ್ಚಿನ ಅವಕಾಶ ಇದ್ದಿಂದ್ದಂತೂ ನಿಜ. ದೊಡ್ಡ ಊರು, ಟಾಕೀಸ್‍ಗಳೆಲ್ಲ ಕಾಲೇಜಿನ ಸುತ್ತಮುತ್ತ 🙂 ನಮ್ಮದು ಪುಟ್ಟ ಊರು, ಎಲ್ಲಿಂದ ಎಲ್ಲಿಗೆ ಹೋದರೂ ಒಬ್ಬರಾದ್ರೂ ಪರಿಚಿತರು ಇದ್ದೇ ಇರುತ್ತಿದ್ದರು. ನಮಗಿಂತ ಮೊದಲು ಮನೆಗೆ ಹೋಗಿ ವಿಷಯ ತಿಳಿಸಿರುತ್ತಿದ್ದರು .
“ನಿರುದ್ವೇಗ ಮುಖಭಾವದಿಂದ ಕೂಡಿದ ನಾಯಕ ನಾಯಕಿ” – =)) ಸರಿಯಾಗಿ ಹೇಳಿದೀಯಾ!
ಮೀರಾ ಅವರೆ, ಕದ್ದು ಸಿನೇಮಾ ನೊಡೋದಿರಲಿ, ರೇಡಿಯೋದಲ್ಲಿ ಹಾಡುಗಳನ್ನೂ ಮೆಲುದನಿಯಲ್ಲಿ (ಅಪ್ಪ ಇಲ್ಲದಿದ್ದಾಗ )ಕೇಳಬೇಕಿತ್ತ್ತುನಮ್ಮನೇಲಿ 🙂
೮೦ ರವರೆಗೆ ೨ ಅಥವಾ ೩ ಸಿನೆಮಾ ನೋಡಿದ್ರೆ ಹೆಚ್ಚು. ಆದರೆ ೮೧-೮೪: ನೋಡದ ಚಿತ್ರ ಇಲ್ಲ, ಹೋಗದ ಚಿತ್ರಮಂದಿರ ಇಲ್ಲ. ಎಲ್ಲಾ Seshadripuram College ಪ್ರಭಾವ. ಕ್ಲಾಸಿನಿಂದ lecturer get-out ಅಂದ್ರೂ ಒಂದು ನೆಪ. ಗೀತಾಂಜಲಿ, ಸಂಪಿಗೆ, ನಟರಾಜ್, ಕಿನೋ, ಇತ್ಯಾದಿ ಚಿತ್ರಮಂದಿರಗಳಲ್ಲಿ ಟಿಕೆಟ್ ಸಿಗೋದಂತೂ ಗ್ಯಾರಂಟೀ…
ಆದರೆ B.Sc ಪಾಸು ಆಗಿದ್ದು ಮಾತ್ರ Pass-Class ನಲ್ಲಿ 😀 ಈಗ ಅನ್ಸತ್ತೆ ಅಪ್ಪ ಹೇಳಿದ ಹಾಗೆ ಮಾಡಬೇಕಿತ್ತು….
ಶ್ರೀನಿಯವರೇ ತುಂಬಾ ಚೆನ್ನಾಗಿದೆ ನಿಮ್ಮ ಅನುಭವಗಳು. ನೀವೇನೋ ಸರಿ ಆದ್ರೆ ನಿಮ್ಮಕ್ಕ ಶೋಭಮ್ಮನೂ ಅದೇ ಥರ ಅಂದ್ರೆ ಯಪ್ಪಾssss…ನೀವು ನಟರಾಜ್ ಮತ್ತೆ ಕಿನೋ ನಲ್ಲಿ ಬರ್ತಿದ್ದ ತಮಿಳು ಸಿನೆಮಾನೂ ಬಿಡ್ತಿರ್ಲಿಲ್ವಾ? ಅಪ್ಪನ ಬಗ್ಗೆ ಯೋಚನೆ ಮಾಡ್ಬೇಡಿ ಅವರಿಗೆ ಈಗ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇರೋದಂತೂ ಗ್ಯಾರಂಟಿ. ನಾನು ಹೇಳಿದ ಹಾಗೆ ಕೇಳಿದ್ದಕ್ಕೆ ಇವತ್ತು ನನ್ನ ಮಗ ಅಲ್ಲಿದ್ದಾನೆ ಅಂದು ಕೊಂಡಿರುತ್ತಾರೆ.
ನಮ್ಮನೆಯಲ್ಲೂ ಅಷ್ಟೆ ರೇಡಿಯೋ ಹಾಕಿದ್ರೆ ಸಾಕು ನಮ್ಮಪ್ಪ ‘ಮೊದಲು ಅದ್ರ ಕಿವಿ ಹಿಂಡು’ ಅನ್ನೋರು, ಅಂದ್ರೆ ಅದನ್ನ ನಿಲ್ಲಿಸು ಅಂತ. ಇನ್ನು ಸಿನೆಮಾ ಅನ್ನೋ ಮಾತೇ ಇಲ್ಲ. ಇನ್ನು ಈ ಅನುಪಮಾ ಯಾವಾಗ ಬಂದ್ಲ್ಲೋ ಯಾವಾಗ ಹೋದ್ಲ್ಲೋ ಯಾರಿಗೆ ಗೊತ್ತು.
ನಮ್ಮಪ್ಪನ standard dialogue ಅಂದ್ರೆ “ಹಿರಿಯಕ್ಕನ ಚಾಳಿ ಮನೇ ಮಂದಿಗೆಲ್ಲ” ಅಂತ. ಅದಕ್ಕೆ ಸರಿಯಾಗಿ ಅವಳು ಮಹಾರಾಣಿ ಕಾಲೇಜು ಬೇರೆ 😀
ತಮಿಳು ಸಿನಿಮಾ ಮೋಜು ಏನು ಹೇಳ್ತೀರಾ… ಜೋಕ್ಸ್ ಬಂದಾಗ ನನ್ನ ಗೆಳೆಯರು ನಕ್ಕಮೇಲೆ ನಾನು ನಗಬೇಕು, ಯಾಕಂದ್ರೆ ಅವರು translat ಮಾಡಬೇಕಲ್ಲಾ 🙂 ಅದಕ್ಕೆ ಈಗ ನಾನೇ ತಮಿಳು ಕಲಿತುಬಿಟ್ಟಿದ್ದೀನಿ..
ಅನುಪಮ 1981 ? Alankar ಚಿತ್ರಮಂದಿರದಲ್ಲಿ ಮೊದಲ ಬಿಡುಗಡೆ.
“ಹಿರಿಯಕ್ಕನ ಚಾಳಿ ಮನೆ ಮಂದೀಗೆಲ್ಲಾ” ಒಳ್ಳೇ ಗಾದೇನೇ ಹೇಳಿದ್ದೀರಾ, ಮಹಾರಾಣಿ ಕಾಲೇಜ್ ಅಂದ ಮೇಲೆ ಮುಗೀತ್ ಬಿಡಿ. ಒಟ್ಟಿನಲ್ಲಿ ಅಕ್ಕ ತಮ್ಮ ಇಬ್ಬರೂ ಕಳ್ಳರೇ ಯಾರ ಮೇಲೆ ಯಾರೂ ಚಾಡಿ ಹೇಳೋ ಹಾಗೇ ಇಲ್ಲ, ಇಬ್ರೂ ಬಚಾವ್.
ಅನುಪಮಾ ಬಿಡುಗಡೆ ನಾನು Mid 70’s ಅಂದುಕೊಂಡಿದ್ದೆ, Thanks for the information.
ವೇಣಿ, ಕುಂಬಳಕಾಯಿ ಕಳ್ಳ ಯಾರು ಅಂತ ಗೊತ್ತಾಯ್ತಾ?:-P
ಅನುಪಮಾ ಬಿಡುಗಡೆ ನಾನು Mid 70’s ಅಂದುಕೊಂಡಿದ್ದೆ, Thanks for the information.
– ಹಾಡಿನ ಜೊತೆಗೇ ಸಿನಿಮಾ ಬಿಡುಗಡೆಯಾದ ವರ್ಷವನ್ನೂ ಹಾಕಿದ್ದೇನಲ್ಲಾ, ನೋಡಿಲ್ವಾ?
ನೀವಿಬ್ಬರೂ flash back ನಿಂದ ಹೊರಬರುವುದನ್ನೇ ಕಾಯುತ್ತಿದ್ದೆ 🙂 ಎಲ್ಲಾ “ಅನುಪಮ” ಸಿನಿಮಾ ಪ್ರಭಾವ!
“೮೦ ರವರೆಗೆ ೨ ಅಥವಾ ೩ ಸಿನೆಮಾ ನೋಡಿದ್ರೆ ಹೆಚ್ಚು. ಆದರೆ ೮೧-೮೪: ನೋಡದ ಚಿತ್ರ ಇಲ್ಲ, ಹೋಗದ ಚಿತ್ರಮಂದಿರ ಇಲ್ಲ. ಎಲ್ಲಾ Seshadripuram College ಪ್ರಭಾವ. ಕ್ಲಾಸಿನಿಂದ lecturer get-out ಅಂದ್ರೂ ಒಂದು ನೆಪ. ಗೀತಾಂಜಲಿ, ಸಂಪಿಗೆ, ನಟರಾಜ್, ಕಿನೋ, ಇತ್ಯಾದಿ ಚಿತ್ರಮಂದಿರಗಳಲ್ಲಿ ಟಿಕೆಟ್ ಸಿಗೋದಂತೂ ಗ್ಯಾರಂಟೀ…”
ಏನು ಶ್ರೀನಿ ಅವರೇ,
ಶೇಷಾದ್ರಿ ಪುರಂ ಕಾಲೇಜಿನಲ್ಲಿ ಓದಿದ ಎಲ್ಲರ ಮರ್ಯಾದೀನೂ ಹೋಲ್ ಸೇಲ್ ಆಗಿ ಕಳೀತಿದೀರಾ?
ನಾನೇನೂ ಕ್ಲ್ಯಾಸ್ ಗೆ ಚಕ್ಕರ್ ಹಾಕಿ ಸಿನಿಮಾ ನೋಡ್ತಿರ್ಲಿಲ್ಲಪ್ಪಾ…
ಅನುಪಮಾ ನಾನು ಟಿ.ವಿನಲ್ಲೇ ನೋಡಿದ್ದು ನೋಡಿದಾಗ ಸೋ-ಸೋ ಅನ್ನಿಸಿತ್ತು ಹಾಡುಗಳು ಕೇಳಲು ಚೆನ್ನಾಗಿವೆ.
ಅಮೆರಿಕಾಕ್ಕೆ ಬಂದಮೇಲೆ ಅದರ ಒಂದು ಹಾಡಿನ ಒಂದು ಸಾಲು ಅದರಲ್ಲೂ ಒಂದೇ ಒಂದು ಪದಕ್ಕೋಸ್ಕರ ಪದೇ ಪದೇ ರಿವೈಂಡ್ ಮಾಡಿ ಕೇಳುತ್ತಿದ್ದೆ.
ಆ ಪದ `ತುಮಕೂರ್’ ಯಾನೇ ನನ್ನ ಅಮ್ಮನ ಮನೆ!
ಮಾಲಾ, ನಿಮ್ಮೂರು ತುಮಕೂರು ನನಗೂ ಗೊತ್ತು. ಆಗೆಲ್ಲಾ ಕಡೂರಿನಿಂದ ಬೆಂಗಳೂರಿಗೆ ಸುಮಾರು 5 ಘಂಟೆ ಹಿಡಿಯುತ್ತಿತ್ತು. “ತುಮಕೂರು” ಬೋರ್ಡ್ ನೋಡಿದರೆ, ಸದ್ಯ ಇನ್ನೇನು ಬೆಂಗಳೂರೂ ಹತ್ತಿರದಲ್ಲೇ ಇದೆ ಎನ್ನುವ ಸಮಾಧಾನ. ಅದು ಬಿಟ್ಟರೆ ಆ ಊರಿಗೆ ಎಂದೂ ಹೋಗುವ ಅವಕಾಶವೇ ಬಂದಿಲ್ಲ!
“ಅನುಪಮ” – ಚಿತ್ರ ಹೇಗಾದರೂ ಇರಲಿ, ಒಬ್ಬೊಬ್ಬರಿಗೆ ಒಂದೊಂದು ಕಾರಣದಿಂದ ಹಳೆಯ ದಿನಗಳನ್ನು ನೆನಪಿಸುತ್ತಿರುವುದು ಮಾತ್ರ ನಿಜವಲ್ಲವೇ? 🙂
ಮಾಲಾ ಮೇಡಂ, ನಮ್ಮ ಕಾಲೇಜಿನಲ್ಲಿ ಒಗ್ಗಟ್ಟು ಅಂದ್ರೆ ಏನು ಹೇಳುತ್ತೀರಾ ? ಶುಕ್ರವಾರ ಹುಡುಗರು, ಹುಡುಗಿಯರು ಒಟ್ಟಾಗಿ ನೋಡುತ್ತಿದ್ದುದ್ದು Indian Express, KannadaPrabha 😀 ಅಮೇಲೆ ಅವರವರ ಗುಂಪು ಅವರವರ ಚಾಯ್ಸ್ ಸಿನೆಮಾ ಮಂದಿರಕ್ಕೆ ನೇರ ರವಾನೆ. ಗಿಡ, ಮರಗಳ ಕೆಳಗೆನಿಂತು ದಿನಗಟ್ಟಲೆ ಪಿಸುಮಾತುಗಳನ್ನಾಡುತ್ತಾ ಟೈಮ್ ವೇಸ್ಟ ಮಾಡೋದು reserved for ಮಹಾರಾಣಿ ಕಾಲೇಜ್ ಸ್ಟೂಡೆಂಟ್ಸ್ 😀
ನನ್ನ ಟೈಮ್ ಲೈನ್ ನಲ್ಲಿ ನೀವು ಶೇಷಾದ್ರಿ ಪುರಂ ಕಾಲೇಜಿನಲ್ಲಿ ಓದಿ, ಚಕ್ಕರ್ ಹಾಕಿ ಸಿನೇಮಾ ನೋಡಿಲ್ಲಾ ಅಂದರೆ …… 😛