ಕವಿ – ಕೆ.ಎಸ್.ನರಸಿಂಹಸ್ವಾಮಿ
ಗಾಯಕ – ಡಾ.ರಾಜ್‍ಕುಮಾರ್
ಸಂಗೀತ – ಸಿ.ಅಶ್ವಥ್

ಹಾಡು ಕೇಳಿ

ಸಂಜೆಗೆನ್ನ ಪಯಣವೆಂದು ತಿಳಿದಳೆನ್ನ ಸುಂದರಿ
ನನ್ನ ಮುಂದೆ ಬಂದು ನಿಂದು ತಡೆದಳಿಂತು ವಿನಯದಿ |

ಕೆಂಪು ತುಟಿಗಳಿಂದ ಹರಸಿ ನುಡಿಯಲಿಲ್ಲ ನಿಜವನು
ತೆರೆದ ಕಂಗಳುದಕ ಸುರಿಸಿ ತೊಳೆದುವೆನ್ನ ಮನವನು
ಕಣ್ಣ ಹನಿಯು ಮಣಿಯ ತೆರದಿ ಕಣ್ಣಿನೊಡವೆ ಆಯಿತು
ತುಟಿಗೆ ಬಂದ ಮಾತು ತಿರುಗಿ ಬಂದ ಕಡೆಗೆ ಹೋಯಿತು ||

ಮುಗಿಲ ಹಿಂದೆ ಹಗಲು ಜಾರಿ ಹೊನ್ನ ಬೆಳಕನೆರೆಯಿತು
ಮೌನದೊಳಗೆ ಪ್ರೇಮ ತೋರಿ ಹಂಬಲ ಮಳೆಗರೆಯಿತು
ನಲ್ಲೆ ಮುಡಿದ ಮೊಲ್ಲೆಯರಳು ‘ಇಲ್ಲೇ ನಿಲ್ಲಿ’ರೆಂದಿತು
ಓರೆಗಣ್ಣಿನೊಂದು ಹೊರಳು ‘ಹೋಗಬೇಡಿ’ರೆಂದಿತು ||

ಇರುಳನಲ್ಲೇ ಕಳೆಯಲಿಲ್ಲ, ಅಪ್ಪಿ ಮುತ್ತನೊತ್ತಲಿಲ್ಲ
ಕಣ್ಣನೀರನೊರಸಲಿಲ್ಲ, ಒರಟನಾದೆನು ಏತಕೆ?
ಸರಸ ವಿರಸವಾಯಿತಲ್ಲ, ಹೊರಟು ಬಂದೆನು ಏತಕೆ?||

*   *    *     *    *    *    *    *   *    *

15 thoughts on “ಸಂಜೆಗೆನ್ನ ಪಯಣ – ಕೆ.ಎಸ್.ನರಸಿಂಹಸ್ವಾಮಿ”

  1. ರೀ,

    ನನಗೊಂದು ಸಂದೇಹ…ಕೆ.ಎಸ್.ನ ಏನಾದರೂ CIA operative ಆಗಿದ್ರಾ ಅಂತ ? ನನ್ನ ನೋಡೇ ಬರೆದಂತಿದೆಯಲ್ಲಾ…ನಾನು Defenceನಲ್ಲಿ ಇದ್ದಿದ್ದು ಗೊತ್ತಿತ್ತು ಅವರಿಗೆ…ಹಾಗಾಗಿ ನನ್ನ ಮೇಲೆ ನಿಗಾ ಇಟ್ಟಿದ್ದರು ಅನ್ನಿಸುತ್ತೆ 🙁

  2. ನಿಮ್ಮೊಬ್ಬರಿಗೆ ಮಾತ್ರ ಏನು? ಎಲ್ಲಾ ವಿವಾಹಿತ ಗಂಡಸರೂ ಒಂದಲ್ಲ ಒಂದು ಸಾರಿ ಹೀಗೇ ಒರಟಾಗಿ ನಡೆದುಕೊಂಡೇ ಇರುತ್ತಾರೆ. ಕೆ. ಎಸ್.ನ ಅವರ ಈ ಕವನ ಅಂತವರಿಗಾಗಿಯೇ ಬರೆದಂತಿದೆ. 🙂

    ಕೆ. ಎಸ್.ನರಸಿಂಹಸ್ವಾಮಿ ಕವನಗಳ ವಿಶೇಷವೇ ಅದು. ನಮ್ಮ ನಿತ್ಯ ಬದುಕಿನ ಅನುಭವಗಳನ್ನೇ ಅವರು ಕವಿತೆಯಾಗಿಸಿರುವುದರಿಂದ , ಪ್ರತಿಯೊಬ್ಬರಿಗೂ ಇದು ತಮಗಾಗಿಯೇ ಬರೆದ ಕವಿತೆ ಅನಿಸುತ್ತದೆ.

    1. ನನಗೇನೋ ರಾಜ್ ಚೆನ್ನಾಗಿ ಹಾಡಿದ್ದಾರೆ ಎಂದು ಎನಿಸಿತು!

  3. ತುಟಿಗೆ ಬಂದ ಮಾತು ತಿರುಗಿ ಬಂದ ಕಡೆಗೆ ಹೋಯಿತು ||
    ಮತ್ತು
    ಓರೆಗಣ್ಣಿನೊಂದು ಹೊರಳು ‘ಹೋಗಬೇಡಿ’ರೆಂದಿತು ||

    ಅತಿ ಸರಳವಾದ ಸಾಲ್ಗಳು. ಆದರೆ, ಅರ್ಥ ಅಗಾಧ.

    ನಿತ್ಯ ಬದುಕಿನ ಕೃತ್ಯಗಳನ್ನು ಸುಲಭವಾಗಿ, ಸೊಗಸಾಗಿ ಹೇಳುವ ಕವಿ ಮತ್ತೊಬ್ಬ ಇರಲಾರ.

    ಇದಕ್ಕೆ ರಾಗ ಸಮಂಜಸವಾಗಿಲ್ಲ, ಮತ್ತೆ ರಾಜ್ ಧನಿ ಕೂಡ ಹೊಂದಿಕೊಳ್ಳುವಂತಿಲ್ಲ.

    “ನಿಮ್ಮೊಬ್ಬರಿಗೆ ಮಾತ್ರ ಏನು? ಎಲ್ಲಾ ವಿವಾಹಿತ ಗಂಡಸರೂ ಒಂದಲ್ಲ ಒಂದು ಸಾರಿ ಹೀಗೇ ಒರಟಾಗಿ ನಡೆದುಕೊಂಡೇ ಇರುತ್ತಾರೆ. ಕೆ. ಎಸ್.ನ ಅವರ ಈ ಕವನ ಅಂತವರಿಗಾಗಿಯೇ ಬರೆದಂತಿದೆ. “

    ಮ್ಯಾಡಮ್, ಹೆಂಗಸರು ಒರಟಾಗಿ ವರ್ತಿಸಿರುವುದನ್ನು ಯಾರು ಬರ್ದೆ ಇಲ್ಲ 🙂

    ಇಂತಿ
    ಒರಟುಭೂತ

  4. ಸುಶೃತ ಮತ್ತು ಭೂತಕ್ಕೆ ರಾಜ್ ದನಿ ಹಿಡಿಸಲಿಲ್ಲವಾ? ನನಗಂತೂ ತುಂಬಾ ಇಷ್ಟವಾಯಿತು, ತಣ್ಣನೆಯ ದನಿಯಲ್ಲಿ, ಭಾವಪೂರ್ಣವಾಗಿ ಹಾಡಿದ್ದಾರೆ ಅನಿಸಿತು. ಇದೇ ಹಾಡು ನಾಗಾಭರಣ ನಿರ್ದೇಶನದಲ್ಲಿ ಗೀತಚಿತ್ರವಾಗಿದೆ, ಯಾರಿಗಾದರೂ ನೋಡಿದ ನೆನಪಿದೆಯೇ?

    “ಮ್ಯಾಡಮ್, ಹೆಂಗಸರು ಒರಟಾಗಿ ವರ್ತಿಸಿರುವುದನ್ನು ಯಾರು ಬರ್ದೆ ಇಲ್ಲ”

    – ಯಾಕಿಲ್ಲ?  ಬಿ.ಆರ್.ಎಲ್ ಕವನಗಳೇ ತುಂಬಾ ಇವೆ 🙂

  5. ನಂಗೇನೋ ಇದು ‘ರಾಜ್ ಕುಮಾರ್’ ಕುರಿತೇ ಬರೆದಂತಿದೆ ಕೆ.ಎಸ್.ಎನ್ ಅವರು. ಅಣ್ಣಾವ್ರು ಸದಾ Shooting ಗೆ ಅಂತ ಹೋಗ್ತಾ ಇದ್ರಲ್ಲ, ಆಗ ಪಾರ್ವತಮ್ಮ ಹೀಗೇ ಅಳ್ತಾ ನಿಂತಿರ್ತಿದ್ರೇನೋ ಪಾಪ. ಅದಕ್ಕೇ ಈ ಹಾಡನ್ನ ಅಣ್ಣಾವ್ರ ಕೈಲಿ ಹಾಡಿಸಿರೋದು.

  6. ಥ್ಯಾಂಕ್ಸ್ ರೀ ಮೀರಾ ಅವರೇ,

    ಒಂದೇ ಏಟಿಗೆ ನನ್ನ 10 year guilt-ridden concienceನ ಕ್ಲಿಯರ್ ಮಾಡಿಬಿಟ್ಟಿರಿ 😀

  7. ನರಸಿಂಹ ಸ್ವಾಮಿಗಳು ಹೆಂಡಕುಡುಕರ (ನಮ್ಮೂರಲ್ಲಿ ‘ಸಂಜೆಗೆ ಪಯಣ’ ಹೊರಡುವವರುಃ-)) ಬಗ್ಗೆನೂ ಕವನ ಬರ್ದಿದಾರೆ ಅಂತ ಗೊತ್ತೆ ಇರ್ಲಿಲ್ಲ…ಬಹಳ ಮಾರ್ಮಿಕವಾಗಿ ಹೆಂಡಕುಡುಕರ ಪಶ್ಚಾತ್ತಾಪವನ್ನು ಈ ಕವನದಲ್ಲಿ ಬಣ್ಣಿಸಿದ್ದಾರೆ. ಮನದನ್ನೆ ತಡೆದರೂ ಕೇಳಲಿಲ್ಲ. ಈಗ ಎಂಥ ದುರ್ಭರ ಪರಿಸ್ಥಿತಿಯನ್ನು ತಲುಪಿದೆ ಎನ್ನುವ ಹಳಹಳಿಕೆ ಸುಂದರವಾಗಿ ಚಿತ್ರಿತವಾಗಿದೆ.

    >>ಕೆಂಪು ತುಟಿಗಳಿಂದ ಹರಸಿ ನುಡಿಯಲಿಲ್ಲ ನಿಜವನು
    ಈಗ ಕೆಂಪುತುಟಿಗಳ ಬದಲು, ಇದ್ಯಾವುದು ಟಾರು ರೋಡು? ಅಂತ ರಸ್ತೆಪಾಲಾದ ಕುಡುಕ ಹಲುಬುವ ಚಿತ್ರಣ ಇಲ್ಲಿದೆ.

    >>ತೆರೆದ ಕಂಗಳುದಕ ಸುರಿಸಿ ತೊಳೆದುವೆನ್ನ ಮನವನು
    ಕಂಗಳುದಕದ ಬದಲು ಇದೇನು ನೀರು ಅಂತ ‘ಕೇರಾಫ್ ಚರಂಡಿ’ ಕುಡುಕ ಕೊಚ್ಚೆಯಲ್ಲಿ ಬಿದ್ದು ರೋದಿಸುವುದನ್ನು ಈ ಸಾಲು ವರ್ಣಿಸುತ್ತದೆ.

    ಇನ್ನು ಮುಂದಿನದನ್ನು ತುಳಸಿಯಮ್ಮನವರು ವಿವರಿಸುತ್ತಾರೆಃ-)

  8. ರಸ್ತೆ ಅಂದಾಗ ನೆನಪಾಯ್ತು. Communism ಹುಟ್ಟಿದ್ದು ಭಗವದ್ಗೀತೆ ಮೂಲಕ.
    ‘ಕರ್ಮಣ್ಯೇವ ಅಧಿಕಾ ರಸ್ತೆ’ – ಕೆಲಸ ಮಾಡಿಯೇ ರಸ್ತೆಯನ್ನು ದೊಡ್ಡದಾಗಿಸಬೇಕು/ಅಗಲಗೊಳಿಸಬೇಕು’ ಎನ್ನುವ ಸಂದೇಶ communismನ ಹುಟ್ಟಿಗೆ ಕಾರಣವಾಯ್ತಂತೆಃ-)

  9. ‘ಶಾನುಭೋಗರ ಮಗಳು’ (ನರಸಿಂಹ ಸ್ವಾಮಿಗಳು ಬರ್ದಿದ್ದು) ಬೇಕಿತ್ತಲ್ಲಾ. ತುಳಸಿವನಕ್ಕೆ ಕರ್ಕೊಂಡು ಬರ್ತೀರಾ?ಃ-))

  10. “ಶಾನುಭೋಗರ ಮಗಳು’ ಬೇಕಿತ್ತಲ್ಲಾ.”

    ಭಾಗ್ವತ್ರೇ, ಶಾನುಭೋಗರ ಮಗಳು ಸಾಕೇ? ಸುಬ್ಬಾಭಟ್ಟರ ಮಗಳು ಬೇಡವೋ? 🙂

  11. >ನಲ್ಲೆ ಮುಡಿದ ಮೊಲ್ಲೆಯರಳು ‘ಇಲ್ಲೇ ನಿಲ್ಲಿ’ರೆಂದಿತು
    ಓರೆಗಣ್ಣಿನೊಂದು ಹೊರಳು ‘ಹೋಗಬೇಡಿ’ರೆಂದಿತು ||

    ಪ್ಲ್ಯಾಶ್ ಬ್ಯಾಕ್‍ಗೆ ಹೋಗಬೇಕು ಅಂತಾ ಮನಸ್ಸು ಯಾಕೇ ಹಟ ಮಾಡ್ತಾ ಇದೆ 🙁

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.