ಕವಿ – ಬಿ.ಎಂ.ಶ್ರೀ
(ಇಂಗ್ಲೀಷ್ ಗೀತಗಳು)
ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ ಹಕ್ಕಿಗಳುಲಿಗಳೆ ಚಂದ
ಕೂಹೂ ಜಗ್ ಜಗ್ ಪುವ್ವೀ! ಟೂವಿಟ್ಟಾವೂ !
ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ
ಇನಿಯರ ಬೇಟ ; ಬನದಲಿ ಬೆಳದಿಂಗಳೂಟ ;
ಹೊಸ ಹೊಸ ನೋಟ ಹಕ್ಕಿಗೆ ನಲಿವಿನ ಪಾ��
ಕೂಹೂ ಜಗ್ ಜಗ್ ಪುವ್ವೀ! ಟೂವಿಟ್ಟಾವೂ !
ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು,
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕೂಹೂ ಜಗ್ ಜಗ್ ಪುವ್ವಿ ಟೂವಿಟ್ಟಾವೂ !
***********************
ಬಹುಶಃ ಇದು ಶಾಲಾ ಪುಸ್ತಕದಲ್ಲಿದ್ದ ನೆನಪು. ಆದರೆ ತರಗತಿಯ ನೆನಪಿಲ್ಲ.
ಶಾಲಾದಿನಗಳನ್ನು ನೆನಪು ಮಾಡಿದ್ದಕ್ಕೆ ಧನ್ಯವಾದಗಳು
3ನೇ ಕ್ಲಾಸಲ್ಲಿ ಇದ್ದಿರ್ಬೇಕು.. ನಾವೆಲ್ಲಾ ಒಟ್ಟಾಗಿ ದೊಡ್ಡ ಸ್ವರದಲ್ಲಿ ಕಿರಿಚಿಕೊಂಡು ಈ ಹಾಡು ಹೇಳ್ತಿದ್ದದ್ದು ನೆನಪಾಗ್ತಿದೆ.. ಕನ್ನಡ ಪಾಠ ಮಾಡ್ತಿದ್ದ ಹೆಬ್ಬಾರ್ ಮಾಷ್ಟ್ರೂ ನೆನಪಾಗ್ತಿದಾರೆ (ಅವ್ರ first name ಮಾತ್ರ ಮರ್ತು ಹೋಗಿದೆ).
ತ್ರಿವೇಣಿಯವರೇ,
ನನ್ನ ಬಹುದಿನಗಳ ಕೋರಿಕೆಯನ್ನು (ಶ್ರೀ ಅವರ `ಕಾಣಿಕೆ’ ನೀವು ವನದಲ್ಲಿ ಹಾಕಿದಾಗ ಕೇಳಿದ್ದೆ) ವಸಂತ ಕವನ ಹಾಕುವ ಮೂಲಕ ನೆರವೇರಿಸಿದ್ದಕ್ಕೆ ತುಂಬಾ ಧನ್ಯವಾದಗಳು
ಇನ್ನೊಂದೆರಡು ಕೋರಿಕೆಗಳು ಹೀಗೆ;-
೧) ಬಂಗಾರದ ಬೊಂಬೆಯೇ ಮಾತನಾಡೇ… ಎಂಬ ಹಾಡು ಹಾಕುತ್ತೀರಾ?
(ಅದು ಯಾವ ಸಿನಿಮಾದ್ದೋ ನೆನಪಿಲ್ಲ ಯುಗಳ ಗೀತೆ)
೨) ಮುತ್ತು ಒಂದು ಮುತ್ತು ಸಿನಿಮಾದ `ಹೂವೇ ಮರೆಸಿಕೊ ಮೊಗವಾ’ ಹಾಡಿನ ಸಾಹಿತ್ಯ ಬೇಕಿತ್ತು
ಇದು ಮೇಲ್ ಮತ್ತು ಫೀಮೇಲ್ ಎರಡು ವರ್ಶನ್ ಇದೆ ನೀವು ಯಾವುದು ಹಾಕಿದರೂ ಪರವಾಗಿಲ್ಲ.
>>ಕೂಹೂ ಜಗ್ ಜಗ್ ಪುವ್ವಿ ಟೂವಿಟ್ಟಾವೂ !
ಶಾಲೆಯಲ್ಲಿದ್ದಾಗ ಇದು ನಮ್ಮ ಕ್ಲಾಸಿನ ನೆಚ್ಚಿನ ಸಾಲು..ಇದಕ್ಕೆ ಎಕ್ಸಟ್ರಾ ಇಪೆಕ್ಟ್ಸ್ ಕೊಟ್ಟು ನಾವೆಲ್ಲಾ ಹೇಳ್ತಾ ಇದ್ದಿವಿ 🙂
ವಸಂತನಿಗೆ ಸ್ವಾಗತ !
ಅಂದಾಗೆ..ತುಳಸಿವನದಲ್ಲಿ request show ಶುರುವಾಗಿದೆ 🙂
ಯಜ್ಞೇಶ್, ನಿಮ್ಮ ಹುಡುಕಾಟದ ನಡುವೆ ಬಿಡುವು ಮಾಡಿಕೊಂಡು ತುಳಸಿವನಕ್ಕೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಸ್ವಾಗತ. 🙂
“ಕನ್ನಡ ಪಾಠ ಮಾಡ್ತಿದ್ದ ಹೆಬ್ಬಾರ್ ಮಾಷ್ಟ್ರೂ ನೆನಪಾಗ್ತಿದಾರೆ (ಅವ್ರ first name ಮಾತ್ರ ಮರ್ತು ಹೋಗಿದೆ).”
ಶ್ರೀಲತಾ, ನೀವೇ ವಾಸಿ, ನಿಮ್ಮ ಮೇಷ್ಟ first name ಆದರೂ ನಿಮಗೆ ನೆನಪಿದೆ. ನನಗೆ ನಮ್ಮ ಸ್ಕೂಲಿನಲ್ಲಿದ್ದ ಕೆಲವು ಮೇಷ್ಟ್ರ ಇನಿಶಿಯಲ್ ಮಾತ್ರ ನೆನಪಿದೆ. ಅವರ ಹೆಸರು ನನಗೆ ನೆನಪಿಲ್ಲ ಅಲ್ಲ ಗೊತ್ತಿಲ್ಲ.
ಯಾಕೆಂದರೆ CM,KM ಅಂತಿದ್ದ ಅವರ ಇನಿಶಿಯಲ್‍ಗಳನ್ನು, ಸೆಂಟಿಮೀಟರ್,ಕಿಲೋಮೀಟರ್ ಎಂಬ ಅಡ್ಡ ಹೆಸರುಗಳಿಂದ ಕರೆಯಲಾಗುತ್ತಿತ್ತು. 🙂
ಮಾಲಾ, ಬಂಗಾರದ ಬೊಂಬೆಯೇ ಮಾತನಾಡೇ… ಹಾಡನ್ನು ಮರೆಯೋದಾದರೂ ಹೇಗೆ? ಶಂಕರ್‍ನಾಗ್ ಮತ್ತು ಮಂಜುಳಾ ಅಭಿನಯದ “ಮೂಗನ ಸೇಡು” ಚಿತ್ರದ ಹಾಡು ಇದು. ನಿಮ್ಮ ಕೋರಿಕೆ ಈಡೇರಿಸಲಾಗುತ್ತದೆ 🙂
“ಮುತ್ತು ಒಂದು ಮುತ್ತು ಸಿನಿಮಾದ `ಹೂವೇ ಮರೆಸಿಕೊ ಮೊಗವಾ’ ಹಾಡಿನ ಸಾಹಿತ್ಯ ಬೇಕಿತ್ತು”
– ಈ ಹಾಡು ಯಾವುದೋ ಕೇಳಿಲ್ಲ. ಈ ಸಿನಿಮಾ ಆ ಕಾಲಕ್ಕೇ ಎರಡು ದಿನವೂ ಓಡದೆ ಥಿಯೇಟರಿನಿಂದ ಮೊಗವ ಮರೆಸಿಕೊಂಡಿತ್ತು, ಹಾಗಾಗಿ ಇರಬೇಕು, ನಾನು ನೋಡಿಲ್ಲ ಇದನ್ನು!!
“ಅಂದಾಗೆ..ತುಳಸಿವನದಲ್ಲಿ request show ಶುರುವಾಗಿದೆ ”
ಹೌದು ಶಿವು 🙂 ಹಾಡು ಕೇಳಿ,ಕೇಳಿಸಿ. ಮಸ್ತ್ ಮಜಾ ಮಾಡಿ! 🙂
ವನವಿಹಾರಿಗಳಿಗೆ ಮತ್ತು ಸಂಸಾರ ಸಮೇತ ವನದೊಡತಿಗೆ ಯುಗಾದಿ ಹಬ್ಬವು ಶುಭವನ್ನು ತರಲಿ.
“ಕೇಳಿ, ಕೇಳಿಸಿ, ಲೈಫ್ ನಿಮ್ಮದಾಗಿಸಿ” ಅಂತ ಸುನಿಧಿ ಚೌಹಾನ್ theme song ಹಾಡ್ತಾರೆ ಬೆಂಗ್ಳೂರಿನ FM ಚಾನೆಲ್ ಒಂದರಲ್ಲಿ..
ತ್ರಿವೇಣಿಯವರೇ,
ನನ್ನ ಹುಡುಕಾಟಕ್ಕೆ ಬಿಡುವೇ ಇಲ್ಲ. ನಿರಂತರವಾಗಿ ಮನಸ್ಸಿನಾಳದಲ್ಲಿ ನಡೆಯುವ ಹುಡುಕಾಟವನ್ನು ಇತ್ತೀಚೆಗೆ ಹಿಡಿದಿಡುವ ಪುಟ್ಟ ಪ್ರಯತ್ನ ಮಾಡುತ್ತಾ ಇದ್ದೇನೆ. ಅಂತರ್ಜಾಲದಲ್ಲಿ ಹುಡುಕುತ್ತಾ ಇರೋವಾಗ ಸಿಕ್ಕಿದ್ದು ತುಳಸೀವನ. ಇದು ಹೀಗೇ ಮುಂದುವರೆಯಲಿ ಎಂದು ಹಾರೈಸುತ್ತೇನೆ.
‘ಬಾರೊ ವಸಂತ’ ಅನ್ನುವ ಲಕ್ಶ್ಮಿನಾರಾಯಣ ಭಟ್ಟರ ಕವನ ಒಂದಿದೆ, ಅಲ್ವಾ? ‘ವಸಂತ ಕಾಲ ಬಂದಾಗ, ಮಾವು ಚಿಗುರಲೇ ಬೇಕು’ ಅಂತ ಒಂದು ಚಲನಚಿತ್ರ ಗೀತೆಯನ್ನೂ ಕೇಳಿದ ನೆನಪು.
ಅಂದಹಾಗೆ, ಈ ಕವನದಲ್ಲಿರುವ – ಹೆಣ್ಗಳ ಕುಣಿಸುತ ನಿಂದ – ಎಂತದಿದು? ಈ ಕುಣಿತ ಈಗ್ಲೂ ನಡೀತಾ ಉಂಟಾ?