ಚಿತ್ರ : ನಮ್ಮ ಮಕ್ಕಳು (೧೯೬೯)
ಸಾಹಿತ್ಯ : ಆರ್.ಎನ್ ಜಯಗೋಪಾಲ್
ಸಂಗೀತ : ವಿಜಯ ಭಾಸ್ಕರ್
ಗಾಯಕಿ : ಎಸ್.ಜಾನಕಿ,ಸಂಗಡಿಗರು
ತಾರೆಗಳ ತೋಟದಿಂದ ಚಂದಿರ ಬಂದ
ನೈದಿಲೆಯ ಅಂದ ನೋಡಿ ಆಡಲು ಬಂದ
ಹಾಲಿನ ಕೊಳದಿ ಮಿಂದು ಬಂದು
ಹೂಬಳ್ಳಿ ಉಯ್ಯಾಲೆ ಆಡಿ ನಿಂದು
ಹೇಳಬೇಡವೆಂದು ಸನ್ನೆ ಮಾಡಿ ಮುಂದು
ಮೆಲ್ಲಗೆ ತಾ ಹೂವಿಗಿತ್ತ ಮುತ್ತನೊಂದು
ಹೂವಿನ ರಾಣಿಯ ಜೊತೆಗೂಡಿ
ನಗುವ ಸಖನ ಪರಿ ನೋಡಿ
ಕೋಪದಿಂದ ಕೂಡಿ ಕಣ್ಣು ಮುಖ ಬಾಡಿ
ತಾರೆಗಳು ನೋಡುತ್ತಿತ್ತು ದೂರ ಓಡಿ
ಮೂಡಿರೆ ಬಾನಲ್ಲಿ ಕೆಂಪು ಬಣ್ಣ
ಚಂದಿರ ತೆರೆದ ತನ್ನ ಕಣ್ಣ
ಕಾಲ ಮೀರಿತೆಂದು ಬಾನನೇರಿ ನಿಂದು
ನೈದಿಲೆಗೆ ಕೈಯ ಬೀಸಿ ಹೋದ ಮುಂದು
ನೈದಿಲೆಯ ಆಟ ನೋಡಿ ನಕ್ಕನು ಭಾನು
ನೈದಿಲೆಯು ತನ್ನ ಮುಖ ಮುಚ್ಚಿತು ತಾನು
* * * * *
‘ಹೇಳಬೇಡವೆಂದು ಸನ್ನೆ ಮಾಡಿ ಮುಂದು, ಮೆಲ್ಲಗೆ ತಾ ಹೂವಿಗಿತ್ತ ಮುತ್ತನೊಂದು. ಪ್ರಾಸ ಹೀಗಿದೆ ಅನ್ಸತ್ತೆ ‘ಬಂದು, ನಿಂದು, ಮುಂದು, ಒಂದು’ .
‘ಸನ್ನೆ ಮಾಡಿ ಮುಂದು’ ಅಂದ್ರೆ ನನಗನ್ನಿಸಿದ್ದು ‘Flying Kiss’ ಇರ್ಬೇಕು ಅಂತ. ನಂಗೆ ಹಾಡಲ್ಲಿ ಮುಂದು ಅಂತಾನೇ ಕೇಳತ್ತೆ.
ok ಮೀರಾ, ನಿನಗೆ ಬೇಜಾರು ಮಾಡೋದು ಯಾಕೆ ಅಂತ ಹೂವಿಗೆ ಚಂದ್ರಮನಿಂದ ‘Flying Kiss’ ಕೊಡಿಸಲಾಗಿದೆ 🙂
ಮಕ್ಕಳು ಈ ಹಾಡಿಗೆ ನೃತ್ಯ ಮಾಡಿದರೆ ಚೆನ್ನಾಗಿರುತ್ತದೆ.
ತ್ರಿವೇಣಿಯವರೇ,
ಸಿನಿಮಾದಲ್ಲಿ ಈ ಹಾಡಿನ ಸನ್ನಿವೇಶವೇನು?
ಕಾಲೇಜ್ ಡೇ ದಿವಸ ನಾಯಕಿ ಸ್ಟೇಜ್ ಮೇಲೆ ಕುಣಿದು ಹಾಡುವ ಹಾಡು ತರ ಇದೆ.
‘Flying Kiss’ ಅಂತ ಬರೆದಿದ್ದೇ ತಡ ಜನ ಏನೇನೋ ಕಲ್ಪನೆ ಮಾಡಿಕೊಳ್ತಾ ಇರೋ ಥರ ಇದೆ. 🙂
ಇದು ಮಕ್ಕಳ ಚಿತ್ರ ಸಿವಾ, ಚಿಕ್ಕ ಚಿಕ್ಕ ಮಕ್ಕಳೆಲ್ಲಾ ಸೇರಿ ಹಾಡಿ ಕುಣಿಯೋದು ಅಸ್ಟೇಯ. ನಾಯಕಿ ಗೀಯಕಿ ಅಂತ ಏನಿಲ್ಲ. ಅವಕಾಶ ಸಿಕ್ಕರೆ ಇಂಥಾ ಒಂದು ಒಳ್ಳೆಯ ಚಿತ್ರ ನೋಡೋದು ಮರೀಬೇಡಿ.
ಜಯಗೋಪಾಲಣ್ಣ ೩೮ ವರ್ಷದ್ ಹಿಂದೇನೇ ಅನಿವಾಸಿ ಮಕ್ಳು ಹಾಡಿಕೊಂಡು ಕುಣೀಲಿ ಅಂತ ಹಾಡು ಬರೆದಿಟ್ಟಂಗೈತಿ ನೋಡ್ರಿ! ಇದರ ಹಂಗs ಬ್ಯಾರೇ ಹಾಡಿದ್ರೂ ಮಂದಿ ಇದನ್ನೇ ಯಾಕ್ ತಮ್ ಮಕ್ಳಿಗ್ ಕುಣಿಯಾಕ್ ಕಲುಸಾಕ್ ಬಳಸ್ತಾರ ಅಂತ ತಿಳಿಯವಲ್ದು, ನಿಮಗೇನಾರ ಐಡಿಯಾ ಐತನು?
ಶಿವು, ಹೇಳಿದಂತೆ ಈ ಹಾಡು ಸ್ಟೇಜ್ ಮೇಲೆ ಹಾಡೋದು ಅಂತ ನೆನಪು. (ಮಕ್ಕಳ ಕನಸಿನಲ್ಲಿ) ತುಂಬಾ ಹಿಂದೆ, ದೂರದರ್ಶನದಲ್ಲಿ, ಭಾನುವಾರ ಮಧ್ಯಾಹ್ನ ಬರುತ್ತಿದ್ದ ಪ್ರಶಸ್ತಿ ವಿಜೇತ ಚಿತ್ರಗಳ ಜೊತೆ ಇದೂ ಬಂದಿತ್ತು, ಆಗ ನೋಡಿದ್ದು, ನೆನಪಿಲ್ಲ ಸರಿಯಾಗಿ.
ಕಾಳಣ್ಣ, ನೀನು ಸತ್ತೋಗಿದ್ದೀಯಾ ಅಂತ ಯಾರೋ ಪುಕಾರು ಹಬ್ಬಿಸುತಾ ಇದ್ರೆ, ನೀನಿಲ್ಲಿ ತಣ್ಣಗೆ ಕಾಮೆಂಟ್ ಹಾಕ್ಕೊಂಡು ಕೂತಿದೀಯಲ್ಲಾ? ಇದೇನೋ ವಿಚಿತ್ರವಾಗಿದೆಯಲ್ಲಾ. ಹೋಗಲಿ ಬಿಡಣ್ಣ, ಇಂತಹ ಸುಳ್ಳು ಸುದ್ದಿಗಳಿಂದ ಆಯಸ್ಸು ಹೆಚ್ಚಾಗುವುದಂತೆ!
ಅಯ್ಯೋ, ನನ್ ಸ್ಪಿರಿಟ್ ಮಾತ್ರ ಜೀವಂತವಾಗಿದೆ, ಆದ್ರೆ ನನ್ನ ಹೆಸರಲ್ಲಿ ಇನ್ಯಾವುದೇ ಪೋಸ್ಟ್ಸ್ ಹಾಕಲಾಗುತ್ತಿಲ್ಲ!
ಕಾಳಣ್ಣ ಯಾವತ್ತೂ ಅವರೆ ಕಾಳು, ಇವರೆ ಕಾಳುಗಳಲ್ಲೇ ಜೀವಂತವಾಗಿರ್ತಾರೆ. ಬಹುಷಃ ಅವರಿಗೆ ಸ್ಪಿರಿಟ್ ಬೇಕೂಂತ ನಮ್ಮ ಅರಿವಿಗೆ ಬಂದಿದೆ… ಎಲ್ಲಿ ಸಿಗುತ್ತೆ??? ವಿಜಯ ಮಲ್ಯರಲ್ಲಿ ಕೇಳಿದರಾಗದೆ? 😉
test