ನಿಮ್ಮೆಲ್ಲರ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಗುತ್ತಿದೆ. 🙂
ನನಗೂ ಅಷ್ಟೇ, ನಿಮ್ಮೆಲ್ಲರ ಜೊತೆ ಮಾತಿಲ್ಲದೆ ಬಹಳ ಬೇಸರವಾಗಿತ್ತು. ಸರಿ ಬಿಡಿ. ತುಳಸಿ”ವನವಾಸ” ಮುಗಿದಿದೆ. ಕಳ್ಳರ ಭಯ ಇಲ್ಲ, ಮತ್ತೆ ಕನ್ನವಿಕ್ಕುವವರೆಗೂ 🙂
ತುಳಸಿಯಮ್ಮನಿಗೆ ನಮಸ್ಕಾರ.
ತುಳಸಿ ಚಿತ್ರದ ಶೀರ್ಷಿಕೆಗೀತೆಯನ್ನು ಹಾಡಿದ ಕಸ್ತೂರಿಶಂಕರ್ ಕಂಠ ನಿಮಗೆ ಕೀರಲು-ಕಿರಿಕಿರಿ ಅನಿಸಬಹುದು, ಆ ಅನಿಸಿಕೆಯನ್ನು ನೀವು ವ್ಯಕ್ತಪಡಿಸಲೂಬಹುದು, ಅದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ ಕಸ್ತೂರಿಶಂಕರ್ ಧ್ವನಿಯನ್ನು ತುಂಬ ಮೆಚ್ಚಿಕೊಳ್ಳುವವರು ಇದ್ದಾರೆ ಮತ್ತು ಆ ಗುಂಪಿನಲ್ಲಿ ನಾನು ಇದ್ದೇನೆ. ಮ್ಯುಸಿಕ್ಇಂಡಿಯಾದಲ್ಲಿ ನಾನು ಕಸ್ತೂರಿಶಂಕರ್ ಹಾಡುಗಳನ್ನು ಮತ್ತೆ ಮತ್ತೆ ಕೇಳುತ್ತಿರುತ್ತೇನೆ. ಲೋಕೋ ವಿಭಿನ್ನ ರುಚಿಃ
ನಿಜ ಜೋಶಿಯವರೇ, ನನ್ನ ಅನಿಸಿಕೆ ಈ ಒಂದು ಹಾಡಿಗೆ ಮಾತ್ರ ಅನ್ವಯವೆಂದು ಹೇಳಬಯಸುತ್ತೇನೆ.
ಕಸ್ತೂರಿ ಶಂಕರ್ ಹಾಡಿರುವ ಇತರೆ ಹಾಡುಗಳು – ಯಾವ ತಾಯಿಯು ಹಡೆದ ಮಗಳಾದರೇನು? , ರಂಗೇನ ಹಳ್ಳಿಯಾಗೆ, ಶ್ರೀರಾಮ ಬಂದವ್ನೆ, ಗುಡಿ ಸೇರದ ಮುಡಿಯೇರದ, ಮರೆತೆ ನಾನು ನನ್ನ ನಿಲುವ …..ಇತ್ಯಾದಿ ಹಾಡುಗಳು ನನಗೂ ಇಷ್ಟವೇ . 🙂
ಮುಂಬಯಿಯ ಲೋಕಲ್ ಟ್ರೈನಿನ ರಶ್ನಲ್ಲಿ ಶ್ರೀ ತುಳಸಿ ದಯತೋರಮ್ಮಾ…. ಎನ್ನುವಷ್ಟರಲ್ಲಿ ಯಾರೋ ನಮ್ಮ ಕಾಲಿಗೆ ಒದ್ದ ಕಾರಣ ಮುಂದಿನ ಸಾಲಿನ “ಅಮ್ಮಾ” ಎಂಬ ಶಬ್ದ ಸ್ವಲ್ಪ ಜೋರಾಗಿಯೇ ಕೇಳಿಸಿದ ಕಾರಣ, ತುಳಸಿಯಮ್ಮನೋರು ದಯೆ ತೋರಿದ್ರು….
ಜೋಷಿಯವರು ಅಡುಗೆಮನೆಯಿಂದ ಲೋಕೋ ಭಿನ್ನಭಿನ್ನ ರುಚಿಃ ಅಂದಾಗ ನನಗೆ ಚಿತ್ರವಿಚಿತ್ರಾನ್ನವೇ ಕಣ್ಣ ಮುಂದೆ ತೇಲಿ ಬಂದು, ಬಾಯಿಯೂ ಒದ್ದೆಯಾಯಿತು.
ಅಬ್ಬಾ, ಅಂತೂ ತೆರೆದುಕೊಂಡಿತು ವನ ನಮ್ಮ ವಿಹಾರಕ್ಕೆ. ಸಂತೋಷ.
ನಿಜವಾಗಿ ಏನೋ ಕಳೆದುಕೊಂಡಿದ್ದು ಸಿಕ್ಕಿದ ಹಾಗಾಯ್ತು. ಇದು ತುಲಸೀವನಕ್ಕೆ ನನ್ನ ಮೊದಲ ಭೇಟಿ.. ಇನ್ನು ಮುಂದೆ ತಪ್ಪದೆ ಬರ್ತಿರ್ತೀನಿ… – ಶ್ರೀ
ನಮಸ್ಕಾರ ತ್ರಿವೇಣಿಯವರಿಗೆ !
ಎನ್ರೀ ಹೇಳದೆ ಕೇಳದೆ ನಾಪತ್ತೆ ಆಗಿಬಿಟ್ಟಿದ್ರೀ ?
ಹಿಂಗೆ ಮಾಡಿದರೆ ಇಲ್ಲಿ ಯಾರು ಸುಬ್ಬಭಟ್ಟರ ಮಗಳನ್ನ, ಶ್ಯಾನಭೋಗರ ಮಗಳನ್ನ ಕರೆತರೋದು?
ಹಂಗೆ ಇಷ್ಟ ದಿವಸ ಆತು..ಯಾವುದಾದರೂ ಒಳ್ಳೆದು ಹಾಕ್ರಿ..
ಸ್ವಾಗತ !
ತುಳಸಿವನ ಬರ್ತಾ ಇಲ್ವಲ್ಲ ಅಂತ ಕಸಿವಿಸಿಯಾಗಿತ್ತು. ಥ್ಯಾಂಕ್ ಗಾಡ್! ಈಗ ನೆಮ್ಮದಿಯಾಯ್ತು.
ನಮಸ್ಕಾರ ತ್ರಿವೇಣಿ ಅಕ್ಕನವರಿಗೆ,
‘ತುಳಸೀವನ’ ವಿಹಾರಕ್ಕೆ ತುಂಬಾ ದಿನಗಳಿಂದ ಕಾಯುತ್ತಿದ್ದೆ. ಈಗ ಅನುವು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.
ಮುಂದಿನ ನಿಮ್ಮ ಎಲ್ಲಾ ಬರಹಗಳಿಗೂ ಶುಭ ಹಾರೈಕೆಗಳು.
ಒಳಿತಾಗಲಿ.
ನಿಮ್ಮೆಲ್ಲರ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಗುತ್ತಿದೆ. 🙂
ನನಗೂ ಅಷ್ಟೇ, ನಿಮ್ಮೆಲ್ಲರ ಜೊತೆ ಮಾತಿಲ್ಲದೆ ಬಹಳ ಬೇಸರವಾಗಿತ್ತು. ಸರಿ ಬಿಡಿ. ತುಳಸಿ”ವನವಾಸ” ಮುಗಿದಿದೆ. ಕಳ್ಳರ ಭಯ ಇಲ್ಲ, ಮತ್ತೆ ಕನ್ನವಿಕ್ಕುವವರೆಗೂ 🙂
ಶ್ರೀ, ನಿಮಗೆ ತುಳಸಿವನಕ್ಕೆ ಸ್ವಾಗತ. ನೀವು ಯಾವ ಶ್ರೀ?(ಯಾವ ಮಠದ?:)) ಅಂತರ್ಜಾಲದಲ್ಲಿ ಬಹಳ ಹೆಚ್ಚಾಗಿ ಕೇಳಿ/ಕಾಣ ಬರುವ ಹೆಸರು ಶ್ರೀ. ಯಾರು ಯಾರೆಂದು ತಿಳಿಯುವುದೇ ಕಷ್ಟವಾಗಿದೆ. 🙂
ಮೋಹನ್, ನಿಮಗೂ ಸ್ವಾಗತ. ನಿಮ್ಮ ಹೆಸರಿನ ಮುಂದಿರುವ ಬಿಸಲೇಹಳ್ಳಿ ಕಡೂರು ತಾಲೂಕಿನಲ್ಲಿರುವುದೇ? ಒಮ್ಮೆ, ಅಲ್ಲಿ ಯಾರದೋ ಮದುವೆಗೆ ಎತ್ತಿನಗಾಡಿಯಲ್ಲಿ ಹೋಗಿದ್ದ ಮಸುಕು ನೆನಪಿದೆ 🙂
ಶಿವು, ಚಿಂತೆ ಬೇಡ, ತುಳಸಿವನದಲ್ಲಿ ಹಾಡು ಹಬ್ಬ, ನಗೆ ಹಕ್ಕಿಗಳ ಕಿಲಕಿಲ ಮತ್ತೆ ಶುರು 🙂
ಸುನಾಥ್ ಮತ್ತು ಜ್ಯೋತಿ ನಿಮ್ಮ ಸ್ನೇಹಪೂರ್ವಕ ನುಡಿಗಳಿಗೆ ಧನ್ಯವಾದಗಳು.
ಕಿರಿಕಿರಿ ಜಾಸ್ತಿಯಾದರೆ, ಹೇಳೋದು ಬಿಟ್ಟು ಧಡೀರ್ ಅಂತ ಬ್ಲಾಗಿನ ಬಾಗ್ಲೇ ಹಾಕ್ಬಿಡೋದಾ??? 🙁 ಎಷ್ಟು ಬಾಗ್ಲು ಬಡ್ದ್ರೂ ಎಚ್ಚರವಾಗದಷ್ಟು ನಿದ್ದೆಯೇ? 🙂
ವನದಲ್ಲಿ ಹೊಸ ಕ್ಯಾಸೆಟ್ ಹಾಕ್ರಿ ಅಂತ ಶಿವ್ ಹೇಳಿದ್ದಾರಲ್ಲ… :))
“ವನದಲ್ಲಿ ಹೊಸ ಕ್ಯಾಸೆಟ್ ಹಾಕ್ರಿ ಅಂತ ಶಿವ್ ಹೇಳಿದ್ದಾರಲ್ಲ… ) ” – ಅಸತ್ಯಾನ್ವೇಷಿ ಉವಾಚ.
ಬಹುಶಃ
ಕೇಳುಗರ ಮೆಚ್ಚಿನ ಮುಂದಿನಗೀತೆ ‘ತುಳಸಿ’ ಚಿತ್ರದಿಂದ. ಹಾಡಿದವರು : ಕಸ್ತೂರಿಶಂಕರ್. ಗೀತರಚನೆ: ಕೆ.ಎಸ್.ಎಲ್ ಸ್ವಾಮಿ(ರವಿ); ಸಂಗೀತ: ವಿಜಯಭಾಸ್ಕರ್. ಪ್ರಸಾರಮಾಡುವಂತೆ ಪತ್ರ ಬರೆದವರು ಕೈಲಾಸದಿಂದ ಶಿವ ಮತ್ತು ಸೈಕಾಲ (ಅಸತ್ಯವೇ ಸೈ ಎನ್ನೋ ಊರು)ದಿಂದ ಅಸತ್ಯಾನ್ವೇಷಿ
ಅನ್ವೇಷಿಗಳೇ, ನಿಮ್ಮ ಬೊಗಳೆಗೂ ಒಂದು ಮಿತಿ ಬೇಡವೇ? ಬಡಿಯಲು ತುಳಸಿವನಕ್ಕೆ ಬಾಗಿಲು ತಾನೇ ಎಲ್ಲಿತ್ತು? ಇದ್ದಿದ್ದು ಒಂದು ಪುಟ್ಟ ಬೇಲಿ. ಹಾರಿದ್ರೆ ಆಗ್ತಾ ಇತ್ತಲ್ಲ.
“ವನದಲ್ಲಿ ಹೊಸ ಕ್ಯಾಸೆಟ್ ಹಾಕ್ರಿ ಅಂತ ಶಿವ್ ಹೇಳಿದ್ದಾರಲ್ಲ…”
– ಎಚ್ಚರವಾಗದಷ್ಟು ನಿದ್ದೆಯಲ್ಲಿರುವವರನ್ನು ಎಬ್ಬಿಸಲು ಈಗ “ಎದ್ದೇಳು ಮಂಜುನಾಥ ” ಕ್ಯಾಸೆಟ್ ಹಚ್ಚೋಣವೇ?
ಜೋಶಿಯವರು ಹೇಳಿರುವ “ತುಳಸಿ” ಚಿತ್ರದ ಗೀತೆ – “ಶ್ರೀ ತುಳಸಿ ದಯೆ ತೋರಮ್ಮಾ..ಅಮ್ಮಾ” 🙂
ಕೈಲಾಸದಿಂದ ಶಿವ ಕೋರುವಷ್ಟು ಚೆನ್ನಾಗಿದೆಯೇ ಈ ಹಾಡು! ಗಾಯಕಿಯ ಕೀರಲು ಕಂಠ ನನಗಂತೂ ಬಹಳ ಕಿರಿಕಿರಿ ಉಂಟು ಮಾಡುತ್ತದೆ.
ತುಳಸಿಯಮ್ಮನಿಗೆ ನಮಸ್ಕಾರ.
ತುಳಸಿ ಚಿತ್ರದ ಶೀರ್ಷಿಕೆಗೀತೆಯನ್ನು ಹಾಡಿದ ಕಸ್ತೂರಿಶಂಕರ್ ಕಂಠ ನಿಮಗೆ ಕೀರಲು-ಕಿರಿಕಿರಿ ಅನಿಸಬಹುದು, ಆ ಅನಿಸಿಕೆಯನ್ನು ನೀವು ವ್ಯಕ್ತಪಡಿಸಲೂಬಹುದು, ಅದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ ಕಸ್ತೂರಿಶಂಕರ್ ಧ್ವನಿಯನ್ನು ತುಂಬ ಮೆಚ್ಚಿಕೊಳ್ಳುವವರು ಇದ್ದಾರೆ ಮತ್ತು ಆ ಗುಂಪಿನಲ್ಲಿ ನಾನು ಇದ್ದೇನೆ. ಮ್ಯುಸಿಕ್ಇಂಡಿಯಾದಲ್ಲಿ ನಾನು ಕಸ್ತೂರಿಶಂಕರ್ ಹಾಡುಗಳನ್ನು ಮತ್ತೆ ಮತ್ತೆ ಕೇಳುತ್ತಿರುತ್ತೇನೆ. ಲೋಕೋ ವಿಭಿನ್ನ ರುಚಿಃ
“ಲೋಕೋ ವಿಭಿನ್ನ ರುಚಿಃ ”
ನಿಜ ಜೋಶಿಯವರೇ, ನನ್ನ ಅನಿಸಿಕೆ ಈ ಒಂದು ಹಾಡಿಗೆ ಮಾತ್ರ ಅನ್ವಯವೆಂದು ಹೇಳಬಯಸುತ್ತೇನೆ.
ಕಸ್ತೂರಿ ಶಂಕರ್ ಹಾಡಿರುವ ಇತರೆ ಹಾಡುಗಳು – ಯಾವ ತಾಯಿಯು ಹಡೆದ ಮಗಳಾದರೇನು? , ರಂಗೇನ ಹಳ್ಳಿಯಾಗೆ, ಶ್ರೀರಾಮ ಬಂದವ್ನೆ, ಗುಡಿ ಸೇರದ ಮುಡಿಯೇರದ, ಮರೆತೆ ನಾನು ನನ್ನ ನಿಲುವ …..ಇತ್ಯಾದಿ ಹಾಡುಗಳು ನನಗೂ ಇಷ್ಟವೇ . 🙂
ಮುಂಬಯಿಯ ಲೋಕಲ್ ಟ್ರೈನಿನ ರಶ್ನಲ್ಲಿ ಶ್ರೀ ತುಳಸಿ ದಯತೋರಮ್ಮಾ…. ಎನ್ನುವಷ್ಟರಲ್ಲಿ ಯಾರೋ ನಮ್ಮ ಕಾಲಿಗೆ ಒದ್ದ ಕಾರಣ ಮುಂದಿನ ಸಾಲಿನ “ಅಮ್ಮಾ” ಎಂಬ ಶಬ್ದ ಸ್ವಲ್ಪ ಜೋರಾಗಿಯೇ ಕೇಳಿಸಿದ ಕಾರಣ, ತುಳಸಿಯಮ್ಮನೋರು ದಯೆ ತೋರಿದ್ರು….
ಜೋಷಿಯವರು ಅಡುಗೆಮನೆಯಿಂದ ಲೋಕೋ ಭಿನ್ನಭಿನ್ನ ರುಚಿಃ ಅಂದಾಗ ನನಗೆ ಚಿತ್ರವಿಚಿತ್ರಾನ್ನವೇ ಕಣ್ಣ ಮುಂದೆ ತೇಲಿ ಬಂದು, ಬಾಯಿಯೂ ಒದ್ದೆಯಾಯಿತು.
ಏನ್ ಮೇಡಮ್ ನೀವು, ನಿಮಗೆ ಅವತ್ತೇ ಹೇಳ್ದೇ ನಾನು ನಿಮ್ ಐಟಿ ಡಿಪಾರ್ಟ್ಮೆಂಟು ಸರಿ ಇಲ್ಲ, ಅವರನ್ನೆಲ್ಲ ಫೈರ್ ಮಾಡ್ರಿ ಅಂತಾ!
ಕಾಳಣ್ಣ, ಹಾಗಂತ ಯಾವಾಗ ಹೇಳಿದ್ದೆ ನೀನು? ಈಗ ರಾಜಕಾರಣಿಗಳ ತರ ಬಂದು ನಾನು ಆವತ್ತೆ ಹೇಳ್ದೆ ಅಂತ ಬುರುಡೆ ಬಿಡ್ತಾ ಇದೀಯಲ್ಲಾ.