ಕಥೆ ಬಗ್ಗೆ ಮಾತು – ಕಥೆ ನಡೆಸಲು ಈಗಿರುವ “ಕಥೆ ಕಟ್ಟೋಣ ಬನ್ನಿ” ದಾರ ತುಂಬಾ ಉದ್ದವಾಗಿ ಬೆಳೆದಿರುವುದರಿಂದ, ಕಥೆ ಕಟ್ಟುವವರ ಅನುಕೂಲಕ್ಕೆಂದು ಈ ಹೊಸ ಸೂತ್ರ . ಬನ್ನಿ ಇಲ್ಲೇ ಮಾತಾಡಿ.
ಸುನಯನ , ಕನ್ನಿಕಾ ಪಾತ್ರಗಳು ಮರೆಯಾಗಿ, ಆ ಜಾಗದಲ್ಲಿ ಈಗ ಯಾಮಿನಿ, ಸೃಷ್ಟಿ ಎಂಬ ಮತ್ತೆರಡು ಸುಂದರ ಹೆಸರುಗಳುಳ್ಳ ಪಾತ್ರಗಳು ಅರಳಿ ನಿಂತಿವೆ.
ಮುಂದ….?? 🙂
ಹಳೆಯ ಕತೆಯು ಹಳಿ ತಪ್ಪಿ ಎಲ್ಲೆಲ್ಲಿಯೊ ಹೋಗುತ್ತಲಿತ್ತು. ಈಗ ಮತ್ತೇ ಸರಿಯಾದ trackನಲ್ಲಿ ಬಂದಿದೆ. ಸ್ವಾರಸ್ಯಕರ ಸಂಭಾವ್ಯತೆಯನ್ನು ತೋರಿಸುತ್ತಿದೆ. ನಮ್ಮ ಕಥಾಚಾಲಕರು ವಾಹನವನ್ನು ಸರಿಯಾದ ನಿಲ್ದಾಣಕ್ಕೆ ಒಯ್ಯುವರೆಂದು ಈ ಪ್ರಯಾಣಿಕನು ಹಾರೈಸುತ್ತಾನೆ.( ಈ ವಾಹನದಲ್ಲಿ ಎಲ್ಲ ಪ್ರಯಾಣಿಕರೂ ಚಾಲಕರೇ!)
ಮತ್ತೆ ಗಾಡಿ ನಿಂತಿದೆ..ನೆಕ್ಸ್ಟ್ ಡ್ರೈವರ್ ಯಾರು?
ಕಥೆ ಈಗ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಸಾಕಷ್ಟು ಉದ್ದವಾಗಿರುವುದರಿಂದ ಹೊಸ ತಿರುವುಗಳು ಇನ್ನು ಬೇಡ. 🙂 ಬೇಕಿದ್ದರೆ, ಈ ಕಥೆಯನ್ನು ಮುಂದುವರೆಸಿ ಇನ್ನೊಂದನ್ನು ಶುರುಮಾಡೋಣ.
ನನ್ನ ಅನಿಸಿಕೆಯಂತೆ , ಕಥೆಯನ್ನು ಈಗ ಎರಡು ರೀತಿಯಲ್ಲಿ ಮುಗಿಸಬಹುದಾಗಿದೆ. ನಿಮ್ಮ ಕಲ್ಪನೆಯಲ್ಲಿ ಏನಿದೆ ತಿಳಿಯುವ ಕುತೂಹಲ.. ಮುಂದುವರೆಸಿ,……..
ಓಹ್ ಮಾಲಾ! ಆಗಲೇ ಬಂದು ಕಥೆ ಬರೆದು ಹೋಗಿದ್ದೀರಾ! ಕನ್ನಡದ ಸೆಳೆತ ಅಂದರೆ ಇದೇ! 🙂
ಸುನಯನಳನ್ನು ಮತ್ತೆ ತಂದು ಕಥೆಯ ಮುಕ್ತಾಯ ಇನ್ನೂ ಸುಲಭವಾಗಿಸಿದ್ದೀರಿ. ಧನ್ಯವಾದ. ಹೊರದೇಶದ (ಅನಿವಾಸಿ) ಗಂಡನ್ನು ಮದುವೆಯಾದರೆ ನೋವು, ನಿರಾಸೆ, ಅತೃಪ್ತ ಜೀವನ ಕಟ್ಟಿಟ್ಟ ಬುತ್ತಿ ಎಂಬ ಮತ್ತದೇ ಸಿದ್ಧ ಸೂತ್ರಕ್ಕೆ ಮೊರೆ ಹೋಗಿದ್ದೀರೇನೋ ಅನಿಸಿತು. 🙂 ನನ್ನ ಅನಿಸಿಕೆ ಮಾತ್ರ, ಹೀಗೇ ಮುಂದುವರೆಯಲಿ.
ಮಾಲಾ, ನಾನಂತೂ ಕಥೆಯನ್ನು ಮರೆತು ಕಿಶೋರ್ ಧ್ಯಾನದಲ್ಲಿ ಮುಳುಗಿಹೋದೆ!!
ಭಾಗವತರೇ, ಕಥೆ ಮುಗಿಸುವುದಾ ಇಲ್ಲಿಗೆ ?
ಬೇಡ. ಮುಗಿಸೋದು ಬೇಡ. ಮಾಲಾ ಬರ್ದಿದ್ದನ್ನ ಓದದೆ ‘ಶುಭಂ’ ಅಂತ ಬರ್ದ್ಬಿಟ್ಟೆಃ-(
ಸುಂದರವಾದ ಕಥೆಯನ್ನು ಹೆಣೆದ ಎಲ್ಲರಿಗೂ ಅಭಿನಂದನೆಗಳು. ಕಥೆಗೆ ಅನುವು ಮಾಡಿಕೊಟ್ಟ ತ್ರಿವೇಣಿಯವರಿಗೆ ಧನ್ಯವಾದಗಳು.
ಮತ್ತೊಂದು adventure ಪ್ರಾರಂಭವಾಗಲಿ.
ಶ್ರೀತ್ರೀ, ಮತ್ತು ಸುನಾಥ ಅವರೇ,
“ನಾನು ಕಥೆ ಮುಗಿಸಿಲ್ಲಾ”
ಕನ್ನಿಕಾಳನ್ನೂ, ಸುನಯನಳನ್ನೂ ಬೆಂಗಳೂರಿಗೆ ಕರೆಸಿ `ಸುದೀಪನನ್ನು ‘
ಸ್ವಲ್ಪ ಗೋಳು ಹೊಯ್ದು ಕೊಳ್ಳೋಣಾ ಅಂತ ನೋಡಿದೆ ಅಷ್ಟೇ…
ಸೀತಾಬಾಯಿ ಎಂಬ ಮದರ್ ಸೆಂಟಿಮೆಂಟ್ ಜೊತೆಗೆ ಯಾಮಿನೀ, ಸೃಷ್ಟಿ ಯಾಮಿನಿಯ ತಂದೆ ಎಲ್ಲಾ ಸೇರಿ ಸುದೀಪನ ತಲೆ ಹೇಗೆ ಕೆಟ್ಟು ಮೊಸರಾಗುತ್ತೆ ಎಂದು ನೋಡೋಣವೆನಿಸಿತು!!!
ಕಥೆಗೆ ಇನ್ನೂ ಅನಂತ ಸಾಧ್ಯತೆಗಳಿವೆ ದಯವಿಟ್ಟು ಮುಂದುವರೆಸಿ….
ಹಹಹ! ನನಗೆ ಗೊತ್ತಾಗಲಿಲ್ಲ. ಕಥೆ ಸರಿಯಾದ ಜಾಗದಲ್ಲಿ ನಿಂತ ಹಾಗೆ ಅನ್ನಿಸಿತು, ಧಾರಾವಾಹಿಯಲ್ಲಿ ಮಾಡುವ ಹಾಗೆ ಇನ್ನೂ ಇದೆ…ಮುಂದುವರೆಯಲಿದೆ ಎಂದು ಬರೆಯಬೇಕಿತ್ತು ನೀವು. 🙂
ಈಗ ಮುಂದುವರೆಯಲಿ. ಜಗಲಿ ಭಾಗವತರ ಮತಿ ಇನ್ನೂ ಸರಿಯಾದ ಹಾಗಿಲ್ಲ.
ಕ್ವಶ್ಚನ್ ಮಾರ್ಕಿನ ತಲೆ ಬರಹದ ಅರ್ಥ ಗೊತ್ತಾಗಲಿಲ್ಲ!
” ಕ್ವಶ್ಚನ್ ಮಾರ್ಕಿನ ತಲೆ ಬರಹದ ಅರ್ಥ ಗೊತ್ತಾಗಲಿಲ್ಲ! ”
– ಆ ಭಾಗಕ್ಕೆ ಹೊಂದುವ ತಲೆಬರಹ ಸೂಚಿಸಿ.
ಕಥೆಗೊಂದು ಮುಕ್ತಾಯ ಸೂಚಿಸಲೇಬೇಕು! ಕಥೆ ತುಂಬಾ ಬೆಳೆದಿದೆ. ಕತೆಗಾರರ, ಓದುಗರ ಕುತೂಹಲ ತಣಿದಿದೆಯೇನೋ ಅನ್ನುವ ಸಂಶಯ ಬಂದಿದೆ. ಇನ್ನು ಹೀಗೇ ಬಿಟ್ಟರೆ ಆಗಲಿಲ್ಲ!!
“ಕಥೆಗೊಂದು ಮುಕ್ತಾಯ ಸೂಚಿಸಲೇಬೇಕು! ಇನ್ನು ಹೀಗೇ ಬಿಟ್ಟರೆ ಆಗಲಿಲ್ಲ!! ” –
ಯಾವುದಾದರೂ ಟಿವಿಗೆ ಧಾರಾವಾಹಿ ಮಾಡಲು ಕೊಡಬಹುದು. 🙂
ಸಹಕಥಿಕರಿಗೆಲ್ಲ ವಂದನೆಗಳು. ನಿಮ್ಮೆಲ್ಲರ ಸಹವಾಸದಲ್ಲಿ ಈ ಕಥೆ ಎಲ್ಲೆಲ್ಲೋ ಸುತ್ತಾಡಿ, ಹರಿದಾಡಿ, ಓಡಾಡಿ, ನಡೆದಾಡಿ…. ಈಗ ಕೊನೆ ಮುಟ್ಟಿದೆ. ಎಲ್ಲ ಬರಹಗಾರರಿಗೂ ಓದುಗರಿಗೂ ಈ ಕಥನದ ಸಹಪಯಣಿಗಳಾಗಿ ನನ್ನ ಧನ್ಯವಾದಗಳು. ನಿಮ್ಮೆಲ್ಲರ ಉತ್ಸಾಹ ನನಗೊಂದು ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ.
ಈ ಪಯಣ ಶುರುಮಾಡಿದ ತ್ರಿವೇಣಿಗೂ, ಬರೆದ, ಓದಿದ, ಉತ್ತೇಜಿಸಿದ ನಿಮ್ಮೆಲ್ಲರಿಗೂ ಮತ್ತೆ ವಂದನೆಗಳು. ಧನ್ಯವಾದಗಳು.
ಕಥನ ಸಮಾಪ್ತಿಯಾಗಿದೆ.
ಈಗ ಎಂಟು ಭಾಗಗಳಲ್ಲಿರುವ ಕಥೆಗೆ, ಇಡಿಯಾಗಿ ಒಂದು ಹೆಸರು ಬೇಕಲ್ಲ:
“ಬಾಳೆಂಬ ಬಣ್ಣದ ಬುಗರಿ”
ಹೆಸರಿಗೆ ಬೇರೇನಾದ್ರೂ ಸೂಚನೆಗಳು? ಸ್ವಾಗತ….
“ಸುನಿಯನ್ನ ಕಳ್ಕೊಂಡು, ಒಬ್ನೆ ಆಕಾಶ ನೋಡ್ಕೊಂಡು, ವಿರಹದಗ್ನಿಯಲ್ಲಿ ಬೆಂದು ಬಳಲುತ್ತಿರುವ ಈ ದುರ್ಭರ ಪ್ರಸಂಗದಲ್ಲಿ ..ಎಲ್ಲ ಜ್ಙಾನೋದಯ ಆಗ್ತಿದೆ…ಛೇ, ಛೇ, ಛೇ…. ”
– ಭಾಗವತ,
ಸುಮ್ನೆ ಕೂತ್ಕೋ…ನೀನು ಬರಿತಿಯಾ ಅಂತ ಸುಮ್ನೆ ಇದ್ದಿದ್ರೆ ಕಥೆ ಅಲ್ಲೆ ನಿಂತಿರ್ತಿತ್ತು…ನಿಂಗೆ ಹಾಗೇ ಆಗಬೇಕು. 🙂
ಮನಸ್ವಿನಿ: “ಹೊನ್ನಾವರದ ನೀಲಿಕೇರಿ ಕುಂದಾಪುರಕ್ಕೆ ಹೋದದ್ದು ಹೇಗೆ?”
– ತನಿಖೆಯಾಗಬೇಕಾಗಿದೆ. 🙂
“ಇಡೀ ಕಥೆಯನ್ನು ಬರಹದಲ್ಲಿ ಎತ್ತಿಕೊಂಡಿದ್ದೇನೆ. ಒಂದಿಷ್ಟು ಸ್ವಚ್ಛಗೊಳಿಸಿ ಮತ್ತೆ ಪೋಸ್ಟ್ ಮಾಡೋಣ, ಮೊದಲಿಂದ ಓದಲು ಅನುಕೂಲ ಆಗುವ ಹಾಗೆ…. ಆಗ ಇಂಥ ಎಡಬಿಡಂಗಿ ತಪ್ಪುಗಳನ್ನೆಲ್ಲ ತಿದ್ದಿಕೊಂಡು, ಕಥೆ ಸರಿಯಾಗಿರುತ್ತದೆ, ಓಘ ಸುಲಲಿತವಾಗಿರುತ್ತದೆ. ಸರಿಯಾ? ”
– ಜ್ಯೋತಿ, ಧನ್ಯವಾದಗಳು.
“ಈಗ ಎಂಟು ಭಾಗಗಳಲ್ಲಿರುವ ಕಥೆಗೆ, ಇಡಿಯಾಗಿ ಒಂದು ಹೆಸರು ಬೇಕಲ್ಲ:
“ಬಾಳೆಂಬ ಬಣ್ಣದ ಬುಗುರಿ” ಹೆಸರಿಗೆ ಬೇರೇನಾದ್ರೂ ಸೂಚನೆಗಳು? ಸ್ವಾಗತ…. ”
– ಬೇರೆ ಹೆಸರನ್ನೂ ಯಾರೂ ಸೂಚಿಸಲಿಲ್ಲವಾಗಿ “ಬಾಳೆಂಬ ಬಣ್ಣದ ಬುಗುರಿ” ಹೆಸರನ್ನೇ ಇಟ್ಟಿದ್ದೇನೆ. “ಈ ಭೂಮಿ ಬಣ್ಣದ ಬುಗುರಿ” ಹಾಡು ನೆನಪಿಸುವಂತಿದೆ.
ಕ್ಷಮಿಸಿ, ಈ ಕಥೆಯಲ್ಲಿ ಭಾಗವಹಿಸಲಿಕ್ಕಾಗಲಿಲ್ಲ.
“ಕ್ಷಮಿಸಿ, ಈ ಕಥೆಯಲ್ಲಿ ಭಾಗವಹಿಸಲಿಕ್ಕಾಗಲಿಲ್ಲ.”
– ಸಿನಿಮಾ ಪೋಲಿಸರ ತರ ಈಗ ಬರ್ತಾ ಇದೀರಲ್ಲ, ನೀವು ಪುರಸೊತ್ತು ಮಾಡಿಕೊಂಡು ಬಂದಿದ್ದರೆ ಕಥೆಗೆ ಸ್ವಲ್ಪ ಶಿವಮೊಗ್ಗ, ಹೊಸನಗರ ಎಲ್ಲಾ ತೋರಿಸಿಕೊಂಡು ಬರಬಹುದಿತ್ತಾ? 🙂
ಹೊಸದೇನನ್ನೂ ಬರೆದಿಲ್ಲ ಏಕೆ? ನನ್ನ ನೊಂದ ಜೀವ ಮತ್ತೆ ಮತ್ತೆ ಸುನಿಯ ನೆನಪಲ್ಲಿ ಮುಳುಗುತ್ತಿದೆ. ದಯವಿಟ್ಟು ತುಳಸಿವನಕ್ಕೆ ಹೊಸದೇನನ್ನಾದ್ರೂ ತನ್ನಿ. ಸರಿ ಹೋಗತ್ತಾ ನೋಡೋಣಃ-))
ಕಾರಿ ಹೆಗ್ಗಡೆಯ ಮಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ, ರಾಮನಿಗಾಗಿ ಶಬರಿ ಕಾದಂತೆ…ನಿಮಗೆ ಏನೂ ಅನ್ನಿಸುತ್ತಿಲ್ಲವೆ?ಃ-))
ಜಗಲಿ ಭಾಗವತರೆ,
ಕಾರಿ ಹೆಗ್ಗಡೆಯವರ ಮಗಳು, ಸುನಯನಾ, ಯಾಮಿನಿ………………….
ಈ ಪಟ್ಟಿ ನೊಡುತ್ತಿದ್ದರೆ, ನಿಮ್ಮ site ಹೆಸರನ್ನು “ಚಿರವಿರಹಿ” ಎಂದು ಬದಲಾಯಿಸಬೇಕು ಎಂದು ಅನ್ನಿಸುತ್ತಿದೆ. God bless you.
ಸುನಾಥರೇ, ಭಾಗವತರದ್ದು ‘ಜಗಲಿ’ವಿರಹ.
ಮನೆಯಲ್ಲಿ ಹುಲಿ ಬೀದೀಲಿ ಇಲಿ ಅನ್ನುವ ಜಾತಿಗೆ ಸೇರಿದವರೇನೋ ಇವರು.
ಸುಮ್ಮನೇ ವಿರಹ… ಅದೂ… ಇದೂ… ಅಂತ ಹೇಳಿಕೊಂಡು ನಮ್ಮ ಅನುಕಂಪ ಗಿಟ್ಟಿಸುವ ಗಿರಾಕಿ.
ಕಥೆ ಮುಂದುವರೆಸಿ ಅಂದಾಗ, ‘ರಜೆ ಬೇಕು’, ‘ಮತಿ ನೆಟ್ಟಗಿಲ್ಲ’ ಅಂತೆಲ್ಲ ನೆಪ ಹೇಳಿ, ಕೊನೆಗೆ ಕಥೆ ಮುಗಿದಾಗ ‘ಅಯ್ಯೋ’ ಅಂದವರಲ್ಲವೆ? ಇವರಿಗೇನು ಮಾಡೋಣ? ಅನುಕಂಪವೆ? ಅನುಮಾನವೆ?
ಖಂಡಿತಾ God Bless him, God Bless us all.
ಭಾಗವತರನ್ನು ಯಾಕೆ ಈ ರೀತಿ ಬೈಯುತ್ತಿದ್ದೀರಿ ಪಾಪ. ಭಾಗವತರೇ, ಕಾರಿ ಹೆಗ್ಗಡೆಯ ಮಗಳನ್ನು ಹುಡುಕಿ ಕರೆತರುತ್ತೇನೆ. ಸ್ವಲ್ಪ ಸಮಾಧಾನ ತಂದುಕೊಳ್ಳಿ.
ತ್ರಿವೇಣಿ,
ಭಾಗವತರಿಗೆ ಹಾಗೆಲ್ಲ ತೃಪ್ತಿ ಆಗುವುದಿಲ್ಲ. ಹೆಗ್ಗಡೆಯಯವರ ಮಗಳನ್ನು ಕರೆತಂದ ಮರುದಿನವೆ ಇನ್ನ್ಯಾರದ್ದೊ ಮಗಳ ಚಿಂತೆ ಹಿಡಿಯುತ್ತೆ. ನೋಡಿ ಬೇಕಿದ್ರೆ 🙂
ಚೆನ್ನವೀರ ಕಣವಿಯವರ ಸ್ಪೆಶಲ್ ಮುಗಿದು ಹೋಯಿತಾ? ’ಒಂದು ಮುಂಜಾವಿನಲಿ’ ಹಾಡನ್ನು ದಯವಿಟ್ಟು ಹಾಕ್ತೀರಾ?
“ಹೆಗ್ಗಡೆಯಯವರ ಮಗಳನ್ನು ಕರೆತಂದ ಮರುದಿನವೆ ಇನ್ನ್ಯಾರದ್ದೊ ಮಗಳ ಚಿಂತೆ ಹಿಡಿಯುತ್ತೆ. ನೋಡಿ ಬೇಕಿದ್ರೆ ”
ಹೌದಾ! ಸರಿ ಹಾಗಾದರೆ ಭಾಗವತರನ್ನು ಸುನಾಥರೆಂದಂತೆ ದೇವರೇ ಕಾಪಾಡಲಿ!
ಒಂದು ಮುಂಜಾವಿನಲಿ – ವಾವ್! ಎಂಥಾ ಹಾಡು!! ಬರಲಿದೆ..
ನೋಡಿ ತುಳಸಿಯಮ್ಮ, ನೊಂದ ಜೀವಕ್ಕೆ ಸಹಾನುಭೂತಿ ವ್ಯಕ್ತಪಡಿಸೋದು ಬಿಟ್ಟು, ಹೇಗೆ ಧಮಕಿ ಹಾಕ್ತಾ ಇದಾರೆ ಜನ. ನೀವಾದ್ರೂ ಸ್ವಲ್ಪ ಬುದ್ಧಿ ಹೇಳಿ ಅಂದ್ರೆಃ-))
ಒಂದು ಮುಂಜಾವಿನಲಿ ತುಂಬ ಒಳ್ಳೆ ಪದ್ಯ. ಹಾಕಿ.
ಮತ್ತೆ, ಚಿತ್ರದುರ್ಗದವರು ಪತ್ತೆ ಇಲ್ವಲ್ಲ. ಎಲ್ಲಿ ಹೋದ್ರು? ಮಲ್ಲಿಗೆ ತುಂಬ ಅಳ್ತಾ ಇದ್ಯಾ?
ಭಾಗವತರೇ,
ನಮ್ಮ ಮಲ್ಲಿಗೆ ಅಳುತ್ತಾ ಇರುತ್ತೆ ಅಂತ ಸರಿಯಾಗೆ ಊಹಿಸಿದಿರಿ
ಮಲ್ಲಿಗೆ ಬುಡ ತುಂಬಾ ಗಲೀಜಾಗುತ್ತಾ ಇದೆ
ನಾನೂ ನಮ್ಮನೆಯವರೂ ಎರಡೆರಡು ಶಿಫ್ಟ್ ಮಾಡಿ ಸೋತು ಹೋಗಿದೀವಿ ಒಂದು ಶಿಫ್ಟ್ ಮಾಡಲಿಕ್ಕೆ ಬರ್ತೀರಾ?
ಅಂದ ಹಾಗೆ ನಿಮ್ಮ` ಮತಿ’ ನೆಟ್ಟಗಾಯ್ತೇ…?
ನೀವು ಮುಂಚೆನೆ ಹೇಳೋದಲ್ವಾ? ಈಗ ಸಮಯ ಇಲ್ಲಃ-( ಸುಪ್ತದೀಪ್ತಿಯ ಜೊತೆ ಸತ್ಯದ ಅನುಸಂಧಾನ ನಡೆಸ್ತಾ ಇದ್ದೇನೆ..
‘ಮತಿ’ ನೆಟ್ಟಗಿಲ್ಲ ಅಂತ ಯಾವಾಗ ಹೇಳ್ದೆ ಮಾರಾಯ್ರೇ? ಅದು ಸುಪ್ತದೀಪ್ತಿ ಹುಟ್ಟುಹಾಕಿದ ಸುಳ್ಳು….ಅವ್ರನ್ನ ನಂಬಬೇಡಿ….
@ಭಾಗವತ: “ಸುಪ್ತದೀಪ್ತಿಯ ಜೊತೆ ಸತ್ಯದ ಅನುಸಂಧಾನ ನಡೆಸ್ತಾ ಇದ್ದೇನೆ….. ಸುಪ್ತದೀಪ್ತಿ ಹುಟ್ಟುಹಾಕಿದ ಸುಳ್ಳು….ಅವ್ರನ್ನ ನಂಬಬೇಡಿ….”
ಸತ್ಯದ ಅನುಸಂಧಾನ ಮಾಡ್ತಿರೋವ್ರಿಗೆ ನಾನು ಸುಳ್ಳು ಹೇಳಿದ್ದು, ನನ್ನನ್ನು ನಂಬಬಾರದಿರುವುದು ಹೇಗೆ ಗೊತ್ತು? ಇಷ್ಟೆಲ್ಲ ಬಡಾಯಿ ಬಿಡುತ್ತಿರುವ ನಿಮ್ಮನ್ನು ಹೇಗೆ ನಂಬೋದು? ಯಾಕೆ ನಂಬಬೇಕು?