ಕವಿ : ಎಚ್. ಎಸ್. ವೆಂಕಟೇಶಮೂರ್ತಿ
ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು
ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ
ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ
ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ
ಮಹಾ ಪ್ರವಾಹ ಪೊರೆಯುವರಿಲ್ಲ ಪಾತ್ರವಿರದ ತೊರೆ ಪ್ರೀತಿ
ತೊರೆಯದೇ ತನ್ನ ತೊರೆಯದು ಪ್ರಿಯನ ರಾಧೆಯ ಪ್ರೀತಿಯ ರೀತಿ
***
ಪ್ರತಾಪ್, ನಿಮ್ಮ “ರಾಧೇ” ಬಂದಿದ್ದಾಳೆ ನೋಡಿ. ಟಿವಿಯಲ್ಲಿ ಗಾಯಕಿಯೊಬ್ಬಳು ಹಾಡಿದ್ದನ್ನು ಕೇಳಿ ಬರೆದಿದ್ದೇನೆ. ಈ ಕವಿತೆ ಇಷ್ಟೆಯೋ, ಇನ್ನೂ ಸಾಲುಗಳಿವೆಯೋ ಗೊತ್ತಿಲ್ಲ. ಸುಂದರ ಗೀತೆಯೊಂದರ ನೆನಪು ತಂದಿದ್ದಕ್ಕೆ ಧನ್ಯವಾದಗಳು.
ಕಾರಿ ಹೆಗ್ಗಡೆ ಮಗಳು ಇನ್ನೂ ಯಾಕೆ ಬಂದಿಲ್ಲ?ಃ-)
ಭಾಗವತರೇ,ಕಾರಿ ಹೆಗ್ಗಡೆಯ ಮಗಳು ನನಗೂ ಸಿಕ್ಕಿಲ್ಲ. ಕಾಯುವುದೊಂದೇ ಗತಿ ನಿಮಗೆ.
ಈ ಗೀತೆಯ ಹೆಸರು “ಲೋಕದ ಕಣ್ಣು.” ತ್ರಿವೇಣಿಯವರೆ, ನೀವು ಎಲ್ಲ ನಾಲ್ಕು stanza ಗಳನ್ನು ಬರೆದಿದ್ದೀರಿ. ಆದರೆ ಮೂರನೆಯ stanzaದ ನಾಲ್ಕನೆಯ ಸಾಲಿನಲ್ಲಿ ಸಣ್ಣ spelling mistake ಇದೆ. ಸರಿಯಾದ ಪದ ಹೀಗಿದೆಃ
“ರಾಧೆ ತೋರುವಳು ದಾರಿ”.
ಸುನಾಥರೇ, ಸರಿ ದಾರಿ ತೋರಿದ್ದಕ್ಕೆ ಧನ್ಯವಾದಗಳು.