ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್ .
ನರಂ ಮುಂಚನ್ತಿ ಪಾಪಾನಿ ದರಿದ್ರಮಿವ ಯೋಷಿತಃ

ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್ .
ತಸ್ಯ ನಿಸ್ಸರತೇ ವಾಣೀ ಜಹ್ನುಕನ್ಯಾ ಪ್ರವಾಹವತ್

ಈ ಹಯಗ್ರೀವದ ಸ್ಮರಣೆ ನನಗೆ ಸುಮ್ಮಸುಮ್ಮನೆ ಆಗಿದ್ದಲ್ಲ. ದಟ್ಸ್ ಕನ್ನಡದಲ್ಲಿ ವಾಣಿ ಅದರ ಬಗ್ಗೆ ಬರೆದಾಗಿನಿಂದ. ಹಾಗೆ ಮರೆತು ಸುಮ್ಮನಾಗುತ್ತಿದ್ದೆನೇನೋ. ಅಷ್ಟರಲ್ಲಿ ಕನ್ನಡಪ್ರಭದವರಿಂದ ಮತ್ತೆ ಹಯಗ್ರೀವ ಸ್ಮರಣೆ. ಸಿಹಿ ತಿಂಡಿಗಳನ್ನು ಅತಿಯಾಗಿ ಇಷ್ಟಪಡುವ ನನ್ನ ಮನಸ್ಸನ್ನು ಚಂಚಲಗೊಳಿಸುವ ಈ ಜಾಲ ಪಿಶಾಚಿಗಳ ಸಂಚು ಕೊನೆಗೂ ಯಶಸ್ವಿಯಾಯಿತು. ನಮ್ಮ ಮನೆಯಲ್ಲಿಯೂ ಹಯಗ್ರೀವ ದೇವರ ಅವತಾರವಾಯಿತು.

ಇತರ ಸಿಹಿತಿಂಡಿಗಳಂತೆ ಬೆಣ್ಣೆ,ತುಪ್ಪಗಳಂತಹ ಕೊಬ್ಬು ಪದಾರ್ಥಗಳನ್ನು ಅತಿಯಾಗಿ ಬೇಡದ ಆರೋಗ್ಯಕರ ತಿನಿಸು. ತಯಾರಿಸಲು ಸುಲಭ ಕೂಡ. ಹದ ಹೆಚ್ಚು ಕಡಿಮೆಯಾಗಿ ಹಾಳಾಗುವ ಸಂಭವ ಇಲ್ಲ. ಸಿಹಿ ಕಡಿಮೆಯಾದರೆ ಸಕ್ಕರೆ ಬೆರೆಸಿ ತಿನ್ನಬಹುದು. ಹೆಚ್ಚಾದರೆ ಮಾತ್ರ ಏನೂ ಮಾಡುವ ಹಾಗಿಲ್ಲ.:)ತಯಾರಿಸುವ ವಿಧಾನ ಎರಡೂ ತಾಣಗಳಲ್ಲಿಯೂ ಲಭ್ಯವಿದೆ.

ಹಯಗ್ರೀವ ದೇವರ ಪರಮ ಭಕ್ತರಾದ ಶ್ರೀವಾದಿರಾಜರು ನೆಲೆಸಿರುವ ಸ್ಥಳ ಸಿರಸಿ ಸಮೀಪದ ಸೋಂದಾ. ಯಾವಾಗ ನೆನಪಾದರೂ ಮನಸ್ಸನ್ನು ಪ್ರಸನ್ನಗೊಳಿಸುವ ನೆಮ್ಮದಿಯ ನೆಲೆ, ಪ್ರಕೃತಿಯ ಮಡಿಲಲ್ಲಿರುವ ಸುಂದರ ಭಕ್ತಿ ತಾಣ. ಆ ಬಗ್ಗೆ ವಿಕಿಪೀಡಿಯಾಗಾಗಿ ನಾನೇ ತಯಾರಿಸಿ ಹಾಕಿರುವ ಲೇಖನ ಇಲ್ಲಿದೆ.

19 thoughts on “ಹಯಗ್ರೀವ ಹಯಗ್ರೀವೇತಿ..”

 1. ಹಯಗ್ರೀವದ ಬಗ್ಗೆ ನಾನೂ ಇತ್ತೀಚೆಗೆ ಕೆಲವು ಕಡೆ ಓದಿದೆ. ನಾವು ಉಡುಪಿ ಕಡೆಯವರ ಹಯಗ್ರೀವ ಪ್ರೇಮದ ಬಗ್ಗೆ ಹೇಳ್ಬೇಕಾಗಿಲ್ಲ.. ನೀವು ಚಿತ್ರ ಬೇರೆ ಹಾಕಿ ಹೊಟ್ಟೆ ಉರಿಸ್ತಿದ್ದೀರಿ 🙁

 2. “ನಾವು ಉಡುಪಿ ಕಡೆಯವರ ಹಯಗ್ರೀವ ಪ್ರೇಮದ ಬಗ್ಗೆ ಹೇಳ್ಬೇಕಾಗಿಲ್ಲ.”

  – ಹಾಗೇ ಉಡುಪಿ ಮಠಗಳಲ್ಲಿ ಹಯಗ್ರೀವ ಕಡ್ದಾಯ ಹಾಗೂ ಅನಿವಾರ್ಯ ಭಕ್ಷ್ಯ ಎಂಬುದನ್ನೂ ಸಹ 🙂

 3. ತುಳಸಿಯಮ್ಮ,

  ಬ್ಲಾಗುಗಳಲ್ಲಿ ಭಕ್ಷ್ಯಗಳ ಬಗ್ಗೆ ಬರೆಯುವುದನ್ನು, ಅದರಲ್ಲೂ ಚಿತ್ರಗಳನ್ನು ಹಾಕುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಙೆಯನ್ನು ನೀವಿನ್ನೂ ನೋಡಿಲ್ವಾ?

  ಮತ್ತೆ, ಮಾಡ್ಬಿಟ್ಟು ನೀವೊಬ್ರೆ ತಿಂದ್ರಾ? ಸ್ವಲ್ಪ ನಮಗೂ ಕಳ್ಸಿಕೊಡಿಃ-)

 4. ” ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಙೆಯನ್ನು ನೀವಿನ್ನೂ ನೋಡಿಲ್ವಾ?”

  – ಹನುಮಂತನ ಪ್ರಾಬಲ್ಯ ಹೆಚ್ಚಾದ ನಂತರ ಸುಗ್ರೀವಾಜ್ಞೆಗೆ ಈಚೆಗೆ ಯಾರೂ ಬೆಲೆ ಕೊಡುತ್ತಿಲ್ಲವೆಂದು ಮಾತ್ರ ಗೊತ್ತಿತ್ತು.

  “ಸ್ವಲ್ಪ ನಮಗೂ ಕಳ್ಸಿಕೊಡಿ”

  – ಭಾಗವತರೇ, ಕಳಿಸಿಕೊಡುವಂತಹ ಪದಾರ್ಥವಾಗಿದ್ದರೆ ಖಂಡಿತ ಕಳಿಸುತ್ತಿದ್ದೆ. ನೀವೇ ಭಟ್ಟರ ಮಗಳೊಡನೆ ನಮ್ಮೊರಿಗೊಮ್ಮೆ ಬನ್ನಿ.

 5. “ನೀವೇ ಭಟ್ಟರ ಮಗಳೊಡನೆ ನಮ್ಮೊರಿಗೊಮ್ಮೆ ಬನ್ನಿ”……ನಾನು ಬರಬಹುದು. ಆದರೆ ಈ ಭಟ್ಟರ ಮಗಳನ್ನು ಎಲ್ಲಿಂದ ತರುವುದು??ಃ-(
  ಮತ್ತೆ, ನಮ್ಮ ಕಾರಿ ಹೆಗ್ಗಡೆಯವರ ಮಗಳ ಕಥೆ ಎಂತ ಮಾಡಿದ್ರಿ??

 6. ತ್ರಿವೇಣಿಯವ್ರೇ,

  ನಿಮ್ಮ ಮನೆಗೆ ಯಾವಾಗ ಬರಲಿ ನಾನು? 😉

  ಭಾಗವತ,

  ಸುಬ್ಬಾ ಭಟ್ಟರ ಮಗಳ ಕಥೆ ಏನಾಯ್ತು? ನಿನ್ನ ಮೇಲೆ ನಂಗೆ ಭಾರಿ ಸಂಶಯ ..

 7. ತ್ರಿವೇಣಿಯವ್ರೇ,

  ನಿಮ್ಮ ಮನೆಗೆ ಯಾವಾಗ ಬರಲಿ ನಾನು? 😉

  – ಇದು ಕೇಳೋ ಪ್ರಶ್ನೆನಾ?

  ನೀವು, ಭಾಗವತರು ಎಲ್ಲರೂ ಒಟ್ಟಿಗೆ (ಇನ್ನು ಯಾರು ಯಾರಿದಾರೆ ಇಲ್ಲಿ?) ಬಂದರೆ ತುಂಬಾ ಮಜ ಮಾಡಬಹುದು. ಭಾಗವತರನ್ನು ಚೆನ್ನಾಗಿ ಗೋಳಾಡಿಸಬಹುದು ಅನ್ನುವುದು ಬೋನಸ್ ಮಜ .:)

 8. ಭಾಗವತರನ್ನು ಚೆನ್ನಾಗಿ ಗೋಳಾಡಿಸಬಹುದು ಅನ್ನುವುದು ಬೋನಸ್ ಮಜ……

  ಛೇ, ಎಂಥ ಕುಟಿಲೋಪಾಯ. ನಿಮ್ಮ ಮಾತು ನಂಬಿ ನಾನು ನಿಮ್ಮ ಮನೆಗೆ ಬಂದಿದ್ದರೆ ಎಂಥ ಗೋಳಾಟ ಆಗ್ತಿತ್ತು…..ಇನ್ನು ಹುಷಾರಾಗಿರ್ತೇನೆ.ಃ-))

 9. ಸದ್ಯ. ಸುಪ್ತದೀಪ್ತಿ ಆತ್ಮ ಚಿಂತನದಲ್ಲಿ ಮುಳುಗಿದ್ದಾರೆ. ಚಿತ್ರದುರ್ಗದವರು ಮಲ್ಲಿಗೆಯ ಬುಡದಲ್ಲಿದ್ದಾರೆಃ-) ಅಷ್ಟರಮಟ್ಟಿಗೆ ‘ಬದುಕಿದೆಯಾ ಬಡಜೀವವೇ?’ಃ-))

  ಚಿತ್ರದುರ್ಗದವ್ರನ್ನ ಮಾತನಾಡಿಸ್ಬೇಡ ಅಂತ ಕಿವಿ ಹಿಂಡಿಹೋಗಿದ್ರು ಸುಪ್ತದೀಪ್ತಿ… ಅದ್ರೂ………..

 10. ಭಾಗವತರೆ, ನಾನು ಹಯಗ್ರೀವದ ಬಣಕ್ಕೆ ಸೇರಿದವನು. ಹಯಗ್ರೀವ ಸಮಾರಂಭಕ್ಕೆ ತುಳಸಿಯಮ್ಮನ ಆಮಂತ್ರಣ ನೋಡಿದಿರಲ್ಲ? (ಅದೇ ಹಯಗ್ರೀವದ ಮುಖಚಿತ್ರವಿರೋದು!) ಅತಿಥಿ,ಅಭ್ಯಾಗತರಾಗಿ ಅಲ್ಲಿಗೆ ಹೋಗೋಣ ಬನ್ನಿ. ನೀವೇನೊ ಜೊತೆಗೆ ಸುಬ್ಬಾಭಟ್ಟರ ಮಗಳನ್ನು ಕರೆದುಕೊಂಡು ಬರ್ತೀರಪ್ಪಾ; ನಾನೇನು ಮಾಡ್ಬೇಕಂತ?

 11. Enu bhaagavatarE, ellO dUradalliddEne aMta heegU tarale mADOdA? summaniri aMdre gottAgOdE illa nimage!! innu yAva thara buddhi hELabEku?

 12. ತುಳಸಿಯಮ್ಮ,

  ಜ್ಯೋತಿ ಕರ್ನಾಟಕದಲ್ಲಿ ಕಾಲಿಟ್ಟದ್ದೇ ಕಾಲಿಟ್ಟದ್ದು, ಕನ್ನಡ ಮರೆತು ಬಿಟ್ಟಿದ್ದಾರೆ ಅನ್ಸತ್ತೆಃ-( ಅವ್ರು ಇಂಗ್ಲೀಷಿನಲ್ಲಿ ಮೇಲೆ ಬರೆದ commentನಲ್ಲಿ ಒಂದೂ ಅರ್ಥ ಆಗ್ಲಿಲ್ಲ ನಂಗೆಃ-( ನೀವಾದ್ರೂ translate ಮಾಡಿ, ಪ್ಲೀಸ್ಃ-))

 13. “ಜ್ಯೋತಿ ಕರ್ನಾಟಕದಲ್ಲಿ ಕಾಲಿಟ್ಟದ್ದೇ ಕಾಲಿಟ್ಟದ್ದು, ಕನ್ನಡ ಮರೆತು ಬಿಟ್ಟಿದ್ದಾರೆ ಅನ್ಸತ್ತೆ”

  😀

  – ಭಾಗವತರೇ, ನಿಮ್ಮ ಜೊತೆ ನನ್ನನ್ನು ಯಾಕೆ ಸೇರಿಸ್ಕೋತೀರಿ. ನಿಮ್ಮ ಜೊತೆ ನನಗೂ ಒದೆ ಬೀಳಲಿ ಅಂತಾನಾ?

 14. “ನೀವೇನೊ ಜೊತೆಗೆ ಸುಬ್ಬಾಭಟ್ಟರ ಮಗಳನ್ನು ಕರೆದುಕೊಂಡು ಬರ್ತೀರಪ್ಪಾ; ನಾನೇನು ಮಾಡ್ಬೇಕಂತ?”

  ಸುನಾಥರೇ, ಬೇರೆ ದಾರಿಯೇ ಇಲ್ಲ. ನಿಮ್ಮ ಮನೆಯಾಕೆಯೊಂದಿಗೇನೇ ಬರಬೇಕು. 🙂

 15. ಭಾಗವತರೇ,
  ನಿಮ್ಮ ಹೊಟ್ಟೆಕಿಚ್ಚು ನನಗರ್ಥವಾಗತ್ತೆ
  ಬೇಗ ನಿಮಗೆ ಭಟ್ಟರ ಮಗಳೋ, ಶೆಟ್ಟರ ಮಗಳೋ ಸಿಗಲಿ
  ನೀವೂ ನಿಮ್ಮನೆ ಮಲ್ಲಿಗೆ ಬುಡದಲ್ಲಿ ನಲಿಯುವಂತಾಗಲೀ
  ಶ್ರೀತ್ರೀ ಎಲ್ಲರಿಗೂ ಹಯಗ್ರೀವ ಹಂಚಲಿ (ನಿಮಗೆ ಲಟ್ಟಣಿಗೆ ಸೇವೆ ಮಾಡುವವರು ಬಂದ ಖುಶಿಯಲ್ಲಿ)

 16. ಕೊಡಲು ಮರೆತಿದ್ದ ವಿವರಣೆ-
  ಶೆಟ್ಟರ ಮಗಳೆಂದರೆ ಹಿಂದಿ ತಾರೆ ಶಿಲ್ಪಶೆಟ್ಟಿ ಅಲ್ಲಾ…
  ಭಾಗವತರೇ… ಕನ್ಸು ಕಾಣೋದು ನಿಲ್ಸಿ….

 17. ಅಮ್ಮುವಿನಮ್ಮಾ , ಭಾಗವತರು ನಿಮಗೆ ಹೆದರಿಕೊಂಡು ಎಲ್ಲೋ ತಲೆಮರೆಸಿಕೊಂಡಿದ್ದಾರೆ. ಭಟ್ಟರ ಮಗಳ ಜೊತೆಗೆ ಈಗ ಭಾಗವತರನ್ನೂ ಹುಡುಕುವ ಹಾಗಾಯಿತು ನನಗೆ.

  ನಾವು ಬೆಂಗಳೂರಿನಲ್ಲಿದ್ದಾಗ ನಮ್ಮ ಅಕ್ಕಪಕ್ಕದ ಮನೆಯವರು ನನ್ನನ್ನು “ಸುರಭಿ ಆಮ್ಮಾ” ಅಂತ ಕರೆಯುತ್ತಿದ್ದದ್ದು ನೆನಪು ಮಾಡಿದ್ರಿ. 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.