ಕವಿ – ಡಿವಿಜಿ -ಅಂತಃಪುರ ಗೀತೆಗಳು
ಗಾಯಕಿ: ರತ್ನಮಾಲಾ ಪ್ರಕಾಶ್

ಹಾಡು ಕೇಳಿ

ಏನೀ ಮಹಾನಂದವೇ – ಓ ಭಾಮಿನೀ |
ಏನೀ ಸಂಭ್ರಮದಂದವೇ – ಬಲ್ಚಂದವೇ ||ಪ||

ಏನೀ ನೃತ್ತಾಮೋದ – ಏನೀ ಮೌರಜನಾದ |
ಏನೀ ಜೀವೋನ್ಮಾದ-ವೇನೀ ವಿನೋದ || ಅ.ಪ||

ಢಕ್ಕೆಯ ಶಿರಕೆತ್ತಿ – ತಾಳಗೋಲಿಂ ತಟ್ಟಿ |
ತಕ್ಕಿಟ ಧಿಮಿಕಿಟ – ತಕಝಣುರೆನಿಸಿ ||
ಕುಕ್ಕುತೆ ಚರಣವ – ಕುಲುಕುತೆ ಕಾಯವ |
ಸೊಕ್ಕಿದ ಕುಣಿತವ – ಕುಣಿವೆ ನೀನೆಲೆ ಬಾಲೆ ||೧||

ಆರೋ ನಿನ್ನಯ ಹೃದಾ-ಗಾರದಿ ನರ್ತಿಸಿ|
ಮಾರ ಶೂರತೆಯ ಪ್ರ-ಚಾರಿಸುತಿರ್ಪನ್ ||
ಸ್ಮೇರವದನ ನಮ್ಮ – ಚೆನ್ನಕೇಶವರಾಯ- |
ನೋರೆಗಣ್ಣಿಂ ಸನ್ನೆ – ತೋರುತಲಿಹನೇನೆ ||೨||

***

6 thoughts on “ಮೌರಜಮೋದೆ – ಡಿವಿಜಿ”

 1. ಮೌರಜಮೋದೆಯ ನರ್ತನವು ಪಲ್ಲ, ಅನುಪಲ್ಲ ಹಾಗು ಮೊದಲನೆಯ
  ಸ್ಟಾಂಜ್ಹಾಗಳಲ್ಲಿ ನನ್ನನ್ನು ನಲಿಸಿತು. ಆದರೆ ಎರಡನೆಯ ಸ್ಟಾಂಜ್ಹಾದ ಎರಡನೆಯ ಸಾಲಿನಲ್ಲಿ “ಮಾರ-ಶೂರತೆಯ ಪ್ರ-ಚಾರಿಸುತಿರ್ಪನ್” ಎನ್ನುವ ಸಾಲಿನಿಂದ ಬೇಸರವಾಯಿತು. ಎಲ್ಲ ನರ್ತನಗಳೂ “ಮಾರಲೀಲೆ”ಗೇ ಮೀಸಲಾಗಬೇಕೆ?

 2. ಏನೇ ಇರ್ಲಿ, ಹಾಡು ಕೇಳಿ ’ಹೃದಾ-ಗಾರ’ ಅನ್ನೋ ಪದ ಕಲ್ಪನೆಗೇ ಬಂದಿರಲಿಲ್ಲ…ನಮ್ಮ ಕನ್ನಡ ಪದಸಂಪತ್ತೂ ಅನ್ನೋದು ಬಿಸಿಲಲ್ಲಿ ಬೇಯ್ತಾ ಇರೋ ಮಂಜುಗಡ್ಡೇ ಆಗಿದೆಯೋ ಹೇಗೆ? 🙂

  ಯಾಕ್ ಮೆಡಮ್ ಏನೂ ಬರೆದಿಲ್ಲಾ ಕೆಲವು ದಿನಗಳಿಂದಾ?

 3. “ಎಲ್ಲ ನರ್ತನಗಳೂ “ಮಾರಲೀಲೆ”ಗೇ ಮೀಸಲಾಗಬೇಕೆ?”

  – ಸುನಾಥರೇ, ಎಲ್ಲ ನರ್ತನಗಳೂ ಮಾರಲೀಲೆಗೆ ಮೀಸಲಾಗಬೇಕಿಲ್ಲ. ನೃತ್ಯ ಭಕ್ತಿಯ ಸಾಧನವೂ ಹೌದು. ಆದರೆ ಈ ಕವನ ಸಂಕಲನದ ಹೆಸರೇ “ಅಂತಃಪುರ ಗೀತೆಗಳು”. ಶಿಲಾಬಾಲಿಕೆಯರಿಂದ ತುಂಬಿರುವ ದೇವಾಲಯವನ್ನು ಗುಂಡಪ್ಪನವರು ಬಣ್ಣಿಸುವುದು ಹೀಗೆ – “ವಾಸವನೋಲಗಕಿಂತಿದು ಮಿಗಿಲಂತೆ, ಕೇಶವರಾಜೇಂದ್ರನಂತ:ಪುರವಿದಂತೆ!”

 4. ಯಾಕ್ ಮೆಡಮ್ ಏನೂ ಬರೆದಿಲ್ಲಾ ಕೆಲವು ದಿನಗಳಿಂದಾ?

  ಬರೆಯೋದಿಕ್ಕೆ ಬೇಜಾರು. ಸುಮ್ಮನೆ ಓದಿಕೊಂಡಿರೋದೆ ಸುಖ ಅನ್ನಿಸುತ್ತಿದೆ 🙂

  ’ಡಕ್ಕೆ’ಯನ್ನು ’ಢಕ್ಕೆ’ಯಾಗಿಸಿ –

  – ಆಗಿದೆ. ಧನ್ಯವಾದ.

 5. ಇದು ನನ್ನ ಮೆಚ್ಚಿನ ಹಾಡು ಸಾಹಿತ್ಯಕ್ಕೆ ರಾಗವೂ ಹೇಳಿ ಮಾಡಿಸಿದಂತಿದೆ
  ರತ್ನಮಾಲ ತುಂಬಾ ಚೆನ್ನಾಗಿ ಹಾಡಿದ್ದಾರೆ
  ಭಾವಸಂಗಮ ಸಂಪುಟದ ಇನ್ನೊಂದು ಸುಮಧುರ ಗೀತೆ ನಂದಗೋಕುಲದ
  ಲೇಟೆಸ್ಟ್ ಪೋಸ್ಟ್ ನಲ್ಲಿ ಕೊಂಡಿ ಕೊಟ್ಟಿರುವೆ ಬಿಡುವಾದಾಗಲೊಮ್ಮೆ ಬನ್ನಿ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.