ತಾವೇನು ಬಲ್ಲಿರಯ್ಯಾ?

ರಾಮ ಎನ್ನುವ ಎರಡು ಅಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲಿರಯ್ಯಾ ||

ರಾಯೆಂದ ಮಾತ್ರದೊಳು ರಕ್ತ ಮಾಂಸದೊಳಿದ್ದ
ಆಯಸ್ಥಿಗತವಾದ ಅತಿಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||೧||

ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳಪೋಗದಂತೆ ಕವಾಟವಾಗಿ
ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತ ತಾನೊಬ್ಬ ಬಲ್ಲ ||೨||

ಧರೆಯೊಳೀನಾಮಕ್ಕೆ ಸರಿಮಿಗಿಲು ಇಲ್ಲೆಂದು
ಪರಮ ವೇದಗಳೆಲ್ಲಾ ಪೊಗಳುತಿಹವು
ಸಿರಿಯರಸ ಶ್ರೀ ಪುರಂದರ ವಿಠಲನ ನಾಮವನು
ವರಕಾಶಿಯೊಳಗಿಪ್ಪ ಶಿವನೊಬ್ಬ ಬಲ್ಲ||೩||

***

Related Posts

ನರಸಿಂಹ ಸುಳಾದಿ – Narasimha Sulaadiನರಸಿಂಹ ಸುಳಾದಿ – Narasimha Sulaadi

ರಚನೆ – ವಿಜಯದಾಸರು ರಾಗ : ನಾಟಿ, ತಾಳ : ಧ್ರುವ ವೀರ ಸಿಂಹನೆ ನಾರಸಿಂಹನೆ ದಯ ಪಾರಾ ವಾರನೆ ಭಯ ನಿವಾರಣ ನಿರ್ಗುಣ ಸಾರಿದವರ ಸಂಸಾರ ವೃಕ್ಷದ ಮೂಲ ಭೇರರಿಸಿ ಕೀಳುವ ಬಿರಿದು ಭಯಂಕರ ಘೋರವತಾರ ಕರಾಳವದನ ಆ- ಘೋರ

ಈಸಬೇಕು ಇದ್ದು ಜೈಸಬೇಕು!ಈಸಬೇಕು ಇದ್ದು ಜೈಸಬೇಕು!

ರಚನೆ – ಪುರಂದರದಾಸರು ವಿದ್ಯಾಭೂಷಣರ ದನಿಯಲ್ಲಿ ಹಾಡು ಕೇಳಿ:- ಈಸಬೇಕು-ಇದ್ದು ಜೈಸಬೇಕು| ಹೇಸಿಗೆ ಸಂಸಾರದಲ್ಲಿ ಆಶಾ ಲೇಶ ಮಾಡದ್ಹಾಂಗೆ ||ಪ|| ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊಂಬರೆಲ್ಲ ||೧|| ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ| ಮೀರಿ

ಶ್ರೀ ತುಳಸಿ ಮಹಿಮೆಯ ಹಾಡುಶ್ರೀ ತುಳಸಿ ಮಹಿಮೆಯ ಹಾಡು

ಶ್ರೀ ತುಳಸಿ ಮಹಿಮೆಯ ಹಾಡು ರಾಗಸಹಿತ: ಸ್ತೋತ್ರ: ಉದಯರಾಗ ರಾಗ: ಭೂಪಾಳಿ —————- ಶ್ರೀ ತುಳಸಿಯಾ ಸೇವಿಸಿ ||ಪ|| ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆಯೆಂಬನಿತರೊಳು ಪಾತಕ ಪರಿಹರಿಸಿ ಪುನೀತರನು ಮಾಡುವಳು ಯಾತಕನುಮಾನವಯ್ಯಾ ||ಅ||ಪ|| ಸುಧೆಗಡಲ ಮಧಿಸುವ