ಮಧ್ಯಾಹ್ನದ ಹೊತ್ತು ಸಣ್ಣ ನಿದ್ದೆ ತೂಗುತ್ತಿದ್ದ ಶಾರದಮ್ಮನವರಿಗೆ ಪಕ್ಕದ ಮನೆಯ ಹುಡುಗ ಓಡೋಡಿ ಬಂದು ತೇಕುತ್ತಾ ಹೇಳಿದ ಸುದ್ದಿ ದಿಗಿಲು ಹುಟ್ಟಿಸಿತ್ತು. “ದೊಡ್ಡಮ್ಮಾ, ಪೇಟೆಯಲ್ಲಿ ಎಲ್ಲ ಮಾತಾಡ್ತಿದ್ದಾರೆ, ವಲ್ಲೀ ಅಕ್ಕನಿಗೆ ತೊಂದರೆ ಆಗ್ತಿದೆಯಂತೆ. ಅವ್ಳ ಹಾಸ್ಟೆಲ್ ಹೊರಗೆ ರೌಡಿಗಳಿದಾರಂತೆ. ಅವ್ಳು ಯಾರೋ ಮಂತ್ರಿ ಜೊತೆ ಮಾತಾಡಕ್ಕೆ ಅವ್ಳ ಫ್ರೆಂಡ್ ಜೊತೆ ಹೋಗಿದ್ದು ಸರಿಯಲ್ವಂತೆ. `ಇನ್ನು ಅವ್ಳ ಕತೆ ಗೋ…ವಿಂದ’, ಅಂತ ಏನೇನೋ ಮಾತಾಡ್ತಿದಾರೆ ದೊಡ್ಡಮ್ಮ.” ಅಂದ. ಶಾರದಮ್ಮ “ಏನೂಂದ್ರೆ, ಇಲ್ಲಿ ಬನ್ನಿ… ಕೇಳ್ರೀ… ಏನೂಂದ್ರೇ…” ಕೂಗಿಕೊಳ್ಳುತ್ತಾ ಎಚ್ಚರತಪ್ಪಿ ಬಿದ್ದುಬಿಟ್ಟರು.
ಪ್ರಪಂಚದ ವ್ಯವಹಾರಗಳನ್ನೆಲ್ಲ ಬದಿಗಿಟ್ಟು ದೇವಧ್ಯಾನ ಮಾಡಬೇಕೆಂದು ಇಚ್ಛಿಸುತ್ತಾ ಮಾಡು ದಿಟ್ಟಿಸುತ್ತಾ ಮಲಗಿದ್ದ ಶಾಸ್ತ್ರಿಗಳಿಗೆ ಮಡದಿಯ ಕೂಗು ಪಕ್ಕನೆ ದಾಖಲಾಗಲಿಲ್ಲ. ಸುದ್ದಿ ತಂದ ಹುಡುಗನೇ ಒಳಗೆ ಬಂದು ಕೋಣೆಯ ಬಾಗಿಲು ದೂಡಿ ವಿಷಯ ತಿಳಿಸಿದಾಗ ದಡಬಡಿಸಿ ಎದ್ದರು. ಚೊಂಬು ನೀರಿನೊಡನೆಯೇ ಚಾವಡಿಗೆ ನಡೆದು ಶಾರದೆಯ ಕೆನ್ನೆ ತಟ್ಟಿ, ಗಲ್ಲ ಅಲುಗಿಸಿ, ಹಣೆಗೆ, ಕಣ್ಣಿಗೆ ನೀರು ತಟ್ಟಿದರು. “ಲೇ, ಶಾರದಾ, ಏಳೇ, ಏನಾಯ್ತೇ, ಏಳೇ ಮೇಲೆ. ನನ್ನನ್ನು ಬಿಟ್ಟು ನೀನು ಅದ್ಹ್ಯಾಗ್ ಹೋಗ್ತೀಯೇ… ಏಳೇ, ಕಣ್ಬಿಡೇ…!!” ಗದ್ಗದ ಸ್ವರದೊಂದಿಗೂ ಪ್ರೀತಿ ಒಸರುತ್ತಿದ್ದ ಶಾಸ್ತ್ರಿಗಳ ಮುಖವನ್ನೇ ದಿಟ್ಟಿಸುತ್ತಾ ನಿಂತಿದ್ದ ಹುಡುಗ ಜ್ಞಾನೋದಯ ಆದವನಂತೆ ಒಮ್ಮೆಲೇ ಓಡಿ ಹೋಗಿ ತನ್ನ ತಾಯಿಯನ್ನು ಕರೆತಂದ. ಇನ್ನೊಂದು ಮಹಿಳೆಯನ್ನು ನೋಡುತ್ತಲೇ ಶಾಸ್ತ್ರಿಗಳು ಪಕ್ಕಕ್ಕೆ ಸರಿದು ತನ್ನವಳನ್ನು ಅವರ ಆರೈಕೆಗೆ ಬಿಟ್ಟುಕೊಟ್ಟರು. ಗಂಡ ಹಣೆಗೆ, ಕಣ್ಣಿಗೆ ತಟ್ಟಿದ್ದ ನೀರಿಗೋ, ಅರಿವಿನ ಪರಿಗೋ, ಶಾರದಮ್ಮ ಮೆಲ್ಲನೆ ಕಣ್ಣುಬಿಟ್ಟರು. “ಏನೂಂದ್ರೇ, ಬೆಂಗಳೂರಿಗೆ ಹೋಗೋಣ, ನಡೀರಿ” ಅಂದರು.
***
ಢವಗುಟ್ಟುವ ಹೃದಯದೊಂದಿಗೆ ಶಾಸ್ತ್ರಿಗಳು ಶಾರದಮ್ಮನವರೊಡನೆ ಬೆಂಗಳೂರು ತಲುಪಿದರು. ಅಲ್ಲಿ ಮಕ್ಕಳ ಗತಿ ಏನೋ ಎಂತೋ ಎಂಬ ಚಿಂತೆ ಅವರನ್ನು ಹಣ್ಣು ಮಾಡಿತ್ತು. ಆದರೆ ಪರಿಸ್ಥಿತಿ ಅವರು ತಿಳಿದಂತೆ ಭಯಾನಕವಾಗಿಯೇನೂ ಇರಲಿಲ್ಲ. ಶಾಸ್ತ್ರಿಗಳು ನಿತ್ಯ ಪೂಜಿಸುತ್ತಿದ್ದ ಅವರ ಆರಾದ್ಯ ದೈವ ’ಲಕ್ಷ್ಮೀನರಸಿಂಹ’ ಅವರ ಕೈಬಿಟ್ಟಿರಲಿಲ್ಲ.
ಹಾಸ್ಟೆಲನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನ ನಡೆಯುತ್ತಿರುವ ಸುದ್ದಿ ಎಲ್ಲೆಡೆಗೂ ಮಿಂಚಿನಂತೆ ಹರಡಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತಿದ್ದರು. ಪೋಲಿಸರು ಚುರುಕಿನ ಕಾರ್ಯಾಚರಣೆ ನಡೆಸಿ, ಅದರ ಹಿಂದಿದ್ದ ದುರಾಸೆಯ ಸಂಚನ್ನು ಹೊರಗೆಳೆದಿದ್ದರು. ಕೆ.ಡಿ.ಶಿವಣ್ಣನ ಹಿಂಬಾಲಕರು ಪೋಲಿಸರ ಮುಂದೆ ಎಲ್ಲವನ್ನೂ ಬಾಯಿಬಿಟ್ಟಿದ್ದರು. ಕೆ. ಡಿ. ಶಿವಣ್ಣ ಈ ವಿಷಯದ ಬಗ್ಗೆ ಇನ್ನೂ ಮುಂದುವರೆದರೆ ತನ್ನ ಹೆಸರು ಹೊರಗೆ ಬಂದೀತೆಂದು ಹೆದರಿ ಸುಮ್ಮನಾಗಿದ್ದ. ಚುನಾವಣೆ ಬಹಳ ಹತ್ತಿರದಲ್ಲಿಯೇ ಇರುವುದರಿಂದ ಈ ಸಂದರ್ಭದಲ್ಲಿ ಅವನ ಹೆಸರು ಹೊರಗೆ ಬರುವುದರಿಂದ ಅನೇಕ ರಾಜಕೀಯ ಪುಢಾರಿಗಳು ಪೇಚಿನಲ್ಲಿ ಸಿಕ್ಕುಬೀಳುವರೆಂಬ ಸತ್ಯ ಅವನಿಗೆ ಗೊತ್ತಿದ್ದದ್ದೇ ಆಗಿತ್ತು.
ಪೋಲಿಸರಿಗೆ ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕರ ಬಗ್ಗೆಯೂ ಸುಳಿವೂ ಸಿಕ್ಕಿತ್ತು. ಭರತಖಾನನಿಗಾಗಿ ಎಲ್ಲೆಡೆ ತೀವ್ರ ಶೋಧ ನಡೆದಿತ್ತು. ಪ್ರವಲ್ಲಿಕಾ ಅಕ್ಕ ಧಾರಿಣಿ ಮತ್ತು ಗೆಳತಿ ಕಾಂತಿಯ ನೆರವಿನೊಂದಿಗೆ ಪೋಲಿಸ್ ಅಧಿಕಾರಿಗಳ ಮುಂದೆ ಅವನ ಚಹರೆಯನ್ನು ಬಣ್ಣಿಸಿದ್ದಳು. ಗುಪ್ತಚರ ಇಲಾಖೆ ಭರತಖಾನ ಎಲ್ಲೂ ತಪ್ಪಿಸಿಕೊಳ್ಳದಂತೆ ಚಾಣಾಕ್ಷತನದಿಂದ ಬಲೆ ಹೆಣೆದಿತ್ತು. ಸದ್ಯದಲ್ಲೇ ಭರತಖಾನ್ ತಮ್ಮ ಅತಿಥಿಯಾಗುವುದರಲ್ಲಿ ಪೋಲಿಸರಿಗೆ ಯಾವುದೇ ಸಂದೇಹವಿರಲಿಲ್ಲ. ಕೇಡಿ ಭರತಖಾನನೊಬ್ಬ ಸಿಕ್ಕುಬಿದ್ದರೆ ಸಾಕು, ಅವನ ಇಡೀ ಜಾಲವನ್ನು ಸುಲಭವಾಗಿ ಭೇದಿಸಬಹುದೆಂಬ ಲೆಕ್ಕಾಚಾರ ಅವರದಾಗಿತ್ತು.
ಢವಗುಟ್ಟುವ ಹೃದಯದೊಂದಿಗೆ ಶಾಸ್ತ್ರಿಗಳು ಶಾರದಮ್ಮನವರೊಡನೆ ಬೆಂಗಳೂರು ತಲುಪಿದರು. ಅಲ್ಲಿ ಮಕ್ಕಳ ಗತಿ ಏನೋ ಎಂತೋ ಎಂಬ ಚಿಂತೆ ಅವರನ್ನು ಹಣ್ಣು ಮಾಡಿತ್ತು. ಆದರೆ ಪರಿಸ್ಥಿತಿ ಅವರು ತಿಳಿದಂತೆ ಭಯಾನಕವಾಗಿಯೇನೂ ಇರಲಿಲ್ಲ. ಶಾಸ್ತ್ರಿಗಳು ನಿತ್ಯ ಪೂಜಿಸುತ್ತಿದ್ದ ಅವರ ಆರಾದ್ಯ ದೈವ ’ಲಕ್ಷ್ಮೀನರಸಿಂಹ’ ಅವರ ಕೈಬಿಟ್ಟಿರಲಿಲ್ಲ.
ಹಾಸ್ಟೆಲನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನ ನಡೆಯುತ್ತಿರುವ ಸುದ್ದಿ ಎಲ್ಲೆಡೆಗೂ ಮಿಂಚಿನಂತೆ ಹರಡಿ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತಿದ್ದರು. ಪೋಲಿಸರು ಚುರುಕಿನ ಕಾರ್ಯಾಚರಣೆ ನಡೆಸಿ, ಅದರ ಹಿಂದಿದ್ದ ದುರಾಸೆಯ ಸಂಚನ್ನು ಹೊರಗೆಳೆದಿದ್ದರು. ಕೆ.ಡಿ.ಶಿವಣ್ಣನ ಹಿಂಬಾಲಕರು ಪೋಲಿಸರ ಮುಂದೆ ಎಲ್ಲವನ್ನೂ ಬಾಯಿಬಿಟ್ಟಿದ್ದರು. ಕೆ. ಡಿ. ಶಿವಣ್ಣ ಈ ವಿಷಯದ ಬಗ್ಗೆ ಇನ್ನೂ ಮುಂದುವರೆದರೆ ತನ್ನ ಹೆಸರು ಹೊರಗೆ ಬಂದೀತೆಂದು ಹೆದರಿ ಸುಮ್ಮನಾಗಿದ್ದ. ಚುನಾವಣೆ ಬಹಳ ಹತ್ತಿರದಲ್ಲಿಯೇ ಇರುವುದರಿಂದ ಈ ಸಂದರ್ಭದಲ್ಲಿ ಅವನ ಹೆಸರು ಹೊರಗೆ ಬರುವುದರಿಂದ ಅನೇಕ ರಾಜಕೀಯ ಪುಢಾರಿಗಳು ಪೇಚಿನಲ್ಲಿ ಸಿಕ್ಕುಬೀಳುವರೆಂಬ ವಿಷಯ ಅವನಿಗೆ ಗೊತ್ತಿದ್ದ ವಿಷಯವೇ ಆಗಿತ್ತು.
ಪೋಲಿಸರಿಗೆ ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕರ ಬಗ್ಗೆ ಸುಳಿವೂ ಸಿಕ್ಕಿಹೋಗಿತ್ತು. ಭರತಖಾನನಿಗಾಗಿ ಎಲ್ಲೆಡೆ ತೀವ್ರ ಶೋಧ ನಡೆದಿತ್ತು. ಪ್ರವಲ್ಲಿಕಾ ಅಕ್ಕ ಧಾರಿಣಿ ಮತ್ತು ಗೆಳತಿ ಕಾಂತಿಯ ನೆರವಿನೊಂದಿಗೆ ಪೋಲಿಸ್ ಅಧಿಕಾರಿಗಳ ಮುಂದೆ ಅವನ ಚಹರೆಯನ್ನು ಬಣ್ಣಿಸಿದ್ದಳು. ಗುಪ್ತಚರ ಇಲಾಖೆ ಭರತಖಾನ ಎಲ್ಲೂ ತಪ್ಪಿಸಿಕೊಳ್ಳದಂತೆ ಚಾಣಾಕ್ಷತನದಿಂದ ಬಲೆ ಹೆಣೆದಿತ್ತು. ಸದ್ಯದಲ್ಲೇ ಭರತಖಾನ್ ತಮ್ಮ ಅತಿಥಿಯಾಗುವುದರಲ್ಲಿ ಪೋಲಿಸರಿಗೆ ಯಾವುದೇ ಸಂದೇಹವಿರಲಿಲ್ಲ. ಕೇಡಿ ಭರತಖಾನನೊಬ್ಬ ಸಿಕ್ಕುಬಿದ್ದರೆ ಸಾಕು, ಅವನ ಇಡೀ ಜಾಲವನ್ನು ಸುಲಭವಾಗಿ ಭೇದಿಸಬಹುದೆಂಬ ಲೆಕ್ಕಾಚಾರ ಅವರದಾಗಿತ್ತು.
ಜಗತ್ತನ ಎಲ್ಲಾ ಪ್ರಮುಖ ನಗರಗಳ ಲೋಕಲ್ ನ್ಯೂಸ್ ಪೇಪರ್ ಗಳನ್ನು ವಾರಾಂತ್ಯದಲ್ಲಿ ಗಮನಿಸುವುದು
ಜೋಯಿಯ ಅಭ್ಯಾಸ.ಪ್ರಪಂಚವೇ ಹಳ್ಳಿಯಂತಾಗಿರುವ ಈ ಕಾಲದಲ್ಲೂ ಲೋಕಲ್ ಗೌರ್ನಮೆಂಟ್ ಗಳ
ಸಣ್ಣಸಣ್ಣ ನಿರ್ಧಾರಗಳೂ ಕೆಲವೊಮ್ಮೆ ಗ್ಲೋಬಲ್ ಮಟ್ಟದಲ್ಲಿ ಬಿಸಿನಿಸ್ಸನ್ನು ಬದಲಾಯಿಸಲು ಶಕ್ತವೆಂದು
ಜೋಯಿ ನಂಬುತ್ತಾನೆ.ಅವನ ಈ ಅಭ್ವಾಸ ಹಲವು ಬಾರಿ ಅವನಿಗೆ ಲಾಭ ಮಾಡಿಕೊಟ್ಟಿದೆ ಮತ್ತು ಅವತ್ತೂ
ಹಾಗೇ ಆಯಿತು….
ಬ್ಯಾಂಕಾಕ್ ನ ಆವಾರದ ವಿದ್ಯಮಾನಗಳ ಬಗ್ಗೆ ಕಣ್ಣಾಡಿಸಿ ಬೆಂಗಳೂರಿನ ಪ್ರಮುಖ ವಾರ್ತಾವತ್ರಿಕೆಗಳ
ಇಂಟರ್ನೆಟ್ ಆವೃತ್ತಿ ಗಳ ಮೇಲೆ ಕಣ್ಣಾಡಿಸುತ್ತಿದ್ದ.ಕಾಂತಿ ಮಹಿಳಾ ಕಲ್ಯಾಣಮಂತ್ರಿ ಸರಳಾದೇವಿಯವರಿಗೆ
ಮನವಿ ಪತ್ರ ಅರ್ಪಿಸುತ್ತಿರುವ ಫೋಟೋ ದಲ್ಲಿ ಅವಳ ಪಕ್ಕವೇ ಇದ್ದ ಪ್ರವಲ್ಲಿಕಾ ಳ ಮುಖ ಅವನ ಗಮನ
ಸೆಳೆಯಿತು.ಅದಕ್ಕೆ ಕಾರಣ ಪ್ರವಲ್ಲಿಕಾಳ ಸೌಂದರ್ಯವಲ್ಲ.ಧಾರಿಣಿಗೂ ಅವಳಿಗೂ ಇದ್ದ ಹೋಲಿಕೆ!
ಅಂದ ಹಾಗೆ ಜೋಯಿ ಧಾರಿಣಿಯ ಹಿಂದೆ ಬಿದ್ದಿರುವ ಆದೈತ್ಯ ಕಂಪನಿಯ ಪ್ರಮುಖರಲ್ಲೊಬ್ಬ!!
ಧಾರಿಣಿಯನ್ನು ಮಟ್ಟ ಹಾಕಲು ತಾವುಗಳು ಕಳಿಸಿದ ತಂಡ ವೆಸ್ಟ್ ಎಂಡ್ ನಂಥಾ ಫೈವ್ ಸ್ಟಾರ್ ಹೋಟೆಲ್
ನಲ್ಲಿ ಕೂತು ಏನು ಕಡಿದು ಕಟ್ಟೆ ಹಾಕುತ್ತಿದೆ ಅಂತ ಯೋಚಿಸುತ್ತಿದ್ದರೆ ಜೋಯಿಗೆ ಕೋಪ ಉಕ್ಕುಕ್ಕಿ
ಬರುತ್ತಿದೆ ಆಕ್ಷಣ ಬೆಂಗಳೂರಿನಲ್ಲಿರುವ ಟಿಮ್ ಗೆ ಪೋನ್ ಮಾಡಿ ದಬಾಯಿಸೋಣವೆಂದುಕೊಂಡ.ಆದರೆ
ನ್ಯೂಯಾರ್ಕ್ ಗೂ ಬೆಂಗಳೂರಿಗೂ ಇರುವ ಸಮಯದ ವ್ಯತ್ಯಾಸ ಗಮನಿಸಿ ಅವರಿಗೆ ಬೆಳಗಾಗಲಿ ಅಂತ
ಹಲ್ಲು ಕಚ್ಚಿ ಕೋಪ ಅದುಮಿಕೊಂಡ ಒಂದು ಹತ್ತು ಹದಿನೈದು ನಿಮಿಷ ತಡೆದಿರಬೇಕು ಅವನು…
ಕಂಪನಿಯ ದುಡ್ಡಿನಲ್ಲಿ ಬೆಂಗಳೂರಿನಲ್ಲಿ ಮಜ ಮಾಡುತ್ತಿರುವ ಇವರಿಗೆ ತಾನೇಕೆ ಕರುಣೆ ತೋರಬೇಕು ಎಂಬ
ಆಲೋಚನೆ ಬಂದಿದ್ದೇ ತಡ ಪೋನ್ ಎತ್ತಿ ನೇರ ಬೆಂಗಳೂರಿನ ಪಂಚ ತಾರಾ ಸ್ವೀಟ್ನಲ್ಲಿ ಆರಾಮವಾಗಿ
ಮಲಗಿದ್ದ ಟಿಮ್ ನನ್ನು ಎಬ್ಬಿಸಿ ನೀರಿಳಿಸಿದ….
ಕೇಶವನ ಮನೆಯ ಹಾಲಿನಲ್ಲಿ ಸೇರಿದ್ದ ಶಾಸ್ತ್ರಿಗಳ ಕುಟುಂಬ ಸಮಾಧಾನದ ಉಸಿರು ಬಿಡುತ್ತಿತ್ತು.ಕೆಡಿ.
ಶಿವಣ್ಣ ಬಾಲ ಮುದುರಿಕೊಂಡಿದ್ದ.ಭರತಖಾನ ತನ್ನನ್ನು ಹಿಡಿವ ಪೋಲೀಸರ ಜಾಲದ ವಾಸನೆ
ಹಿಡಿದುಓಡಿಹೋಗಿ ದುಬೈ ಸೇರಿಕೊಂಡಿದ್ದ.ಸದ್ಯಕ್ಕೇನೂ ಅವನು ಭಾರತಕ್ಕೆ ಹಿಂದಿರುಗುವ ಅಪಾಯವಿಲ್ಲ
ತಮ್ಮೆದುರಿನಲ್ಲಿ ಕೂತಿದ್ದ ಧಾರಿಣಿ ಪ್ರವಲ್ಲಿಕಾ ಇಬ್ಬರನ್ನೂ ಕಣ್ತುಂಬಿಕೊಳ್ಳುತ್ತಾ ಶಾರದಮ್ಮ ಕನ್ನೋರಿಸಿ
ಕೊಂಡರುಆಗತಾನೇ ಎಲ್ಲರಿಗೂ ಸಿಹಿ ಊಟವಾಗಿತ್ತು ಎಲ್ಲರಿಗೂ ಹೃದಯತುಂಬಿ ಬಂದಂತ್ತಿದ್ದ ಸನ್ನಿವೇಶ
ಮೌನವಾಗಿದ್ದರು ಅಲ್ಲಿ ಪಟಪಟನೆ ಮಾತಾಡುತ್ತಿದ್ದದು ಅಂದರೆ ಕಾಂತಿ ಒಬ್ಬಳೇ.ಅವಳು ಅಂದು ಪ್ರವಲ್ಲಿಕಾ
ಜೊತೆ ಕೇಶವನ ಮನೆಗೆ ಬಂದಿದ್ದಳು
ಶಾಸ್ರಿ ಗಳಿಗಂತೂ ಕಾಂತಿ ತುಂಬಾಇಷ್ಟವಾಗಿಬಿಟ್ಟಿದ್ದಳು `ಈಹುಡುಗಿ ಮುಖದ ಕಳೆ ನೋಡು
ಶಾರದಾ…
ನನಗಿನ್ನೊಬ್ಬ ಮಗ ಇದ್ದಿದ್ದರೆ ಖಂಡೀತಾಇವಳನ್ನೇ ಸೊಸೆ ಮಾಡಿಕೊಳ್ಳುತ್ತಿದ್ದೆ…’ಅಂತ ಎಲ್ಲರ
ಮುಂದೆ ಹೇಳಿಯೂ ಬಿಟ್ಟರುಅದಕ್ಕೆ ಶಾರದಮ್ಮ`ಅದಕ್ಕೇನು ಈಗ ನಿಮ್ಮ ತಮ್ಮನ ಮಗನಿಗೆ
ಕೇಳಿ…’ಅಂತ ಬದಲು ಹೇಳಿದಾಗ ಕಾಂತಿ ಗಪ್ ಚಿಪ್ ಕಪ್ಪೆಚಿಪ್ ಆಗಿದ್ದಳು!
ಅಷಕ್ಕೇ ಬಿಡದೆ ಶಾಸ್ತ್ರಿಗಳು ಮೂವರು ಹುಡುಗಿಯರೂ ವಾಪಸು ಹೊರಟಾಗ` ನೀನು ಹಾಸ್ಟೆಲ್ಲಿಗೆ
ಹೋದಮೇಲೆ ಕಾಂತಿ ಜಾತಕ ಪಡೇದು ಕಳಿಸಮ್ಮಾಅಂತ ಧಾರಿಣಿಗೆ ಹೇಳಿದರು`ನಿಮ್ಮಕ್ಕನ ಟೈಮ್
ಇನ್ನೂ ಸ್ವಲ್ಪ ದಿನ ಚೆನ್ನಾಗಿಲ್ಲಾ ವಲ್ಲೀ…ಗಂಡಾಂತರವಿದೆ ಸಲ್ಪ ಅಕ್ಕನ್ನ ನೋಡಿಕೋ…’ಅಂತ
ಪ್ರವಲ್ಲಿಕಾ ಗೆ ನೆನಪಿಸಿದರು
ಧಾರಿಣಿ ಶಾಸ್ತ್ರಿಗಳ ಜ್ಯೋತಿಶ್ಯವನ್ನು ನಂಬುವವಳಲ್ಲವೆಂದು ಅವರಿಗೆ ಗೊತ್ತು ಧಾರಿಣಿ ಶಾಸ್ತ್ರಿಗಳ ಮಾತಿಗೆ
ಹೌದಪ್ಪಾ…ಈ ಗಂಡಾಂತರವೆಂಬ ಗಂಡನಿಗೆ ರಾಜೀವ ಅಂತ ನಾನು ಮುದ್ದಿನಿಂದ
ಕರೀತೀನೀ…ಮುಂದಿನವಾರ ಈನಿಮ್ಮ ಅಳಿಯ ಮನೆ ತೊಳೆಯ ಇಂಡಿಯಾದಲ್ಲಿ
ಇಳೀತಿದೆ…’ಅಂತ ನಕ್ಕಳು ಅವಳು ಅಪ್ಪನ ಮಾತನ್ನು ಸೀರಿಯಸ್ಸಾಗಿ ತೊಗೊಳ್ಳೋ ಕಾಲ
ಬೇಗನೇ ಬರಲಿದೆ…
**************
ನೀವಿಬ್ರೂ ಹೋಗಿ ನಾನೊಂದು ರೀಡರ್ಸ್ ಡೈಜೆಸ್ಟ್ ತಗೊಂಡು ಬರ್ತೀನಿ ಅಂತ ಧಾರಿಣಿ ಹಾಸ್ಟೇಲ್ಲಿಗೆ ಐದು
ನಿಮಿಶದ ನಡಿಗೆ ದೂರದಲ್ಲಿದ್ದ ಪುಸ್ತಕದ ಅಂಗಡಿಮುಂದೆ ಮೂವರೂ ಕೂತಿದ್ದ ಆಟೋದಿಂದ ಇಳಿದು
ಪ್ರವಲ್ಲಿಕಾ ಕೈಗೆ ಐನೂರರ ನೋಟು ತುರುಕುತ್ತಾ ಹೇಳಿದಳು.ಏ ಇವ್ನು ಚಿಲ್ಲ್ಲರೆ ಸರಿಯಾಗಿ
ಕೊಡೋದಿಲ್ವೇ…’ಅಂತ ಪ್ರವಲ್ಲಿಕಾ ಹೇಳುವಷ್ಟರಲ್ಲಿ ಆಟೋ ಪುನಃ ಹೊರಟಾಗಿತ್ತು…
**********
ಡೈಜೆಸ್ಟ್ ಮತ್ತೆರಡು ಪುಸ್ತಕ ತೊಗೊಂಡು ವಾಪಸಾಗುತ್ತಿದ್ದ ಧಾರಿಣಿ ಯ ಮನಸ್ಸು ಹಕ್ಕಿಯಂತೆ ಹಾರುತ್ತಿದೆ
`ರಾಜೀವ ಬರುತ್ತಿದ್ದಾನೆ…’ಏನೇನೋ ಕನಸು ಕಣುತ್ತಾ ನಡೆಯುತ್ತಿದ್ದವಳಿಗೆ ಹಿಂಭಾಗಕ್ಕೆ ಏನೋ
ಚುಚ್ಚಿದಂತಾಗಿ`ಹಾ…’ಅಂತ ಬೆನ್ನು ಸವರಿ ಕೊಳ್ಳುತ್ತಾ ನೆಲಕ್ಕೆ ವಾಲಿದ್ದೇ ಕಣ್ಣು
ಕತ್ತಲಿಟ್ಟಿತು….
ಅಲ್ಲಿಂದ ಕೆಲವೇ ಮಾರು ದೂರದಲ್ಲಿ ಅವರ ಹಾಸ್ಟೆಲ್ ಮೇನ್ ಎಂಟ್ರೆನ್ಸ್..ಆದರೆ ರೂಮಿನಲ್ಲಿ
ಹರಟೇಯಲ್ಲಿ ಮಗ್ನರಾದ ಕಾಂತಿಗಾಗಲೀ ಪ್ರವಲ್ಲಿಕಾಗಾಗಲೀ ಧಾರಿಣಿಗೆ ಏನಾಯಿತೆಂದು ತಿಳಿಯುವ
ಸಾದ್ಯತೆಯೇ ಇಲ್ಲಾ…
ಅದನ್ನೇ ಮೋಸ್ಟ್ ಲೀ ಶಾಸ್ತ್ರಿ ಗಳು ಗಂಡಾಂತರ ಅಂದಿದ್ದು…!
ಸುತ್ತಾ ಜನ ಸೇರಿಬಿಟ್ಟರು…ಎಲ್ಲರೂ ತಲಾ ಒಂದೊಂದು ಮಾತಾಡುವವರೇ…ಯಾರೂ
ಸಹಾಯಕ್ಕೆ ಬರುತ್ತಿಲ್ಲ…ಸುಮ್ಮನೇ ನೋಡುತ್ತಿದ್ದಾರೆ!
ಆಗ….
ಇಮ್ಪೋರ್ಟೆಡ್ ಕಾರ್ ನಿಂದ ಇಳಿದ ಬಿಳಿಯನೊಬ್ಬ ಸಹಾಯ ಮಾಡಲು ಮುಂದಾದ ಧಾರಿಣಿಯನ್ನು ಎತ್ತಿ
ಅವನ ಕಾರ್ ನಲ್ಲಿ ಮಲಗಿಸಿದ್ದಯಿತು ಯಾರಾದ್ರೂ ಆಸ್ಪತ್ರೆ ತೋರಿಸಲು ಸಹಾಯ ಮಾಡಿ ಅಂತ
ಅವನುವಿನಂತಿಸಿ ಕೊಂಡಾಗ ಒಬ್ಬಳು ಮಧ್ಯವಯಸ್ಸಿನ ಹೆಂಗಸೂ ಅವಳ ಪಡ್ಡೆ ಮಗನೂ ಕಾರಲ್ಲಿ ಕೂತರು
`ನೋದ್ದ್ಯಾ ಫಾರಿನರ್ಸಿ ಗೆ ಇರುವ ಒಳ್ಳೆ ಬುದ್ದಿ ನಮ್ಮವರಿಗಿಲ್ಲಾ…’ಅಂತ ಜನರೆಲ್ಲಾ
ಮಾತಾಡಿಕೊಳ್ಲುತ್ತಿದ್ದಾಗ ಕಾರು ಹೊರಟಿತು
ಅಲ್ಲಿ ಸೇರಿದ್ದ ಜನರಿಗಾಗಲೀ ಆಸ್ಪತ್ರೆ ಬಾಗಲಲ್ಲಿ ಇಳಿದು ಹೋದ ಅಮ್ಮ ಮಗನಿಗಾಗಲೀ ಗೊತ್ತಾದದೇ
ಹೋದ ವಿಪರ್ಯಾಸದ ವಿಶಯವೆಂದರೆ ಅದು ಟಿಮ್ ಧಾರಿಣಿಯನ್ನು ಅಪಹರಿಸಲು ಆಡಿದ ವ್ಯವಸ್ತಿತ ನಾಟಕ
ಎಂದು…!
ಆದರೇ ಸ್ವತಃ ಟಿಮ್ ನಿಗೂ ಗೊತ್ತಿರದೇ ಇದ್ದ ವಿಶಯ ಅವನ ಪ್ಲ್ಯಾನ್ ಹಾಳು ಮಾಡಲಿರುವ ವ್ಯಕ್ತಿ ಅವನ
ಕಾರ್ ನಲ್ಲೇ ಕೂತಿದ್ದಾನೆ ಎಂದು…!!
ಧಾರಿಣಿ ಕಣ್ ಬಿಡಲು ಯತ್ನಿಸಿದಾಗ ಮೊದಲು ಕೇಳಿಸಿದ್ದು ಹರಿವ ನೀರಿನ ಮಂಜುಳ ನಾದ….
ಕಣ್ ಬಿಟ್ಟಾಗ ಕಾಣಿಸಿದ್ದು ಸಿ.ಸಿ ಕ್ಯಾಮೆರಾ…
ಅವಳನ್ನು ಕುರ್ಚಿಗೆ ಬಿಗಿದು ಕಟ್ಟಿದ್ದರು…ಮತ್ತು ಕೆಲವೇ ಗಳಿಗೆಯಲ್ಲಿ ಅವಳಿದ್ದ ಆರೂಮಿಗೆ ಗೆ ಟಿಮ್ ನ
ಆಗಮನ ವಾಯಿತು
ಮಿಸ್ ಶ್ಯಾಸ್ತ್ರೀ…’ಅಂತ ಪ್ರಾರಂಭಿಸಿ ಟಿಮ್ ನೀನು ನಿನ್ನ ಪೇಟೆಂಟ್ ಬಗೆಗಿನ ವಿವರಗಳನ್ನು ನಮಗೆ
ಕೊಡದಿದ್ದರೆ ಪರಿಣಾಮಎದುರಿಸ ಬೇಕಾಗುತ್ತೆ ಅಂತ ಎಚ್ಚರಿಸಿದ ಅವನು ಈ ಭಾಷಣ ಹೊಡೆಯುತ್ತಿರುವಾಗ
ಧಾರಿಣಿ ಅವನ ಮಾತು ಗಮನಿಸದೆ ಗಾಡವಾಗಿ ಯೋಚಿಸುತ್ತಿದ್ದಳು ಮತ್ತು ಅವನು ಮಾತು ಮುಗಿಸಿದ
ನಂತರ ಕತ್ತಲಲ್ಲೊಂದು ಬಾಣ ಬಿಟ್ಟಳು
`ನೋಡೀ…ನೀವು ತಪ್ಪು ತಿಳಿದಿದ್ದೀರಾನಾನು ಧಾರಿಣಿ ಅಲ್ಲಾ…ಅವಳದೇ ಹೋಲಿಕೆ ಇರುವ
ಅವಳ ತಂಗಿ ಪ್ರವಲ್ಲಿಕಾ…’
ಟಿಮ್ ಅವಾಕ್ಕಾದ…ದಬ್ಬೆಂದು ಬಾಗಿಲು ಬಡಿದು ಹೊರಗೆ ಹೋದ…
ಧಾರಿಣಿ ಆ ಗಳಿಗೆ ಅಪರೂಪವಾಗಿ ದೇವರನ್ನು ಪ್ರಾರ್ತಿಸಿದಳು…`ದೇವರೇ ಇವತ್ತು ಪ್ರವಲ್ಲಿಕಾ
ಹಾಸ್ಟೆಲ್ ನಿಂದ ಹೊರಗೆ ಹೋಗದೇ ಇರಲೀಮತ್ತು ಇಸ್ಟೊತ್ತಿಗೆ ಅವಳು ನಾನುಕೊಟ್ಟ ಪತ್ರ ಪೋಸ್ಟ್
ಮಾಡಿರಲೀ…’