ಇತ್ತ ಪ್ರವಲ್ಲಿಕಾ ಮತ್ತು ಕಾಂತಿ, ಧಾರಿಣಿ ಇನ್ನೂ ಹಾಸ್ಟೆಲ್ಲಿಗೆ ಬಂದಿಲ್ಲದ ಕಾರಣ ಹೊರಗೆ ಹೊರಟರು. ದಾರಿಯಲ್ಲಿ ಹಾಸ್ಟೆಲ್ಲಿನ ಅಡುಗೆಮನೆಯ ಹುಡುಗ ಯಾವುದೋ ಕೆಂಪು ಕಾರಿನಲ್ಲಿ ಧಾರಿಣಿಯನ್ನು ಆಸ್ಪತ್ರೆ ಕಡೆ ಕರೆದೊಯ್ದ ಸುದ್ದಿ ತಿಳಿಸಿದ. ವಿಷಯ ತಿಳಿದದ್ದೇ ಗೆಳತಿಯರಿಬ್ಬರೂ ಆಸ್ಪತ್ರೆಗೆ ಓಡಿದರು, ನಿರಾಶೆ ಅವರಿಗಾಗಿ ಅಲ್ಲಿಯೇ ಕಾದಿತ್ತು. ಅಕ್ಕನ ಕಣ್ಮರೆಯಿಂದ ಪ್ರವಲ್ಲಿಕಾ ದಿಕ್ಕುಗೆಟ್ಟಳು. ಕಾಂತಿಯ ಧೈರ್ಯವೂ ಕೈಕೊಡುತ್ತಿತ್ತು, ಆದರೂ ಗೆಳತಿಗೆ ಇಂಬು ಕೊಡುವುದಕ್ಕಾಗಿ “ಬೇರೆ ಆಸ್ಪತ್ರೆಗೆ ಹೋಗಿರಬಹುದು, ಇನ್ನೇನು ಬಂದುಬಿಡುತ್ತಾಳೆ; ಸುಮ್ನಿರೇ!” ಓಲೈಸುತ್ತಾ ಹಾಸ್ಟೆಲ್ಲಿಗೆ ಎಳೆತಂದಳು. ಮತ್ತೆ ಮತ್ತೆ ಚರ್ಚೆ ನಡೆಸಿ, ಇಬ್ಬರೂ ಆಟೋ ಹಿಡಿದು ಕೇಶವ ಚಿಕ್ಕಪ್ಪನ ಮನೆಗೆ ಬಂದರು.
ತಲೆನೋವು ಹರಿದ ಹಿಗ್ಗಿನಲ್ಲಿ ಶಾರದಮ್ಮ ಮತ್ತು ಶಾಸ್ತ್ರಿಗಳು ಊರಿನ ಬಸ್ಸು ಹತ್ತಿದ್ದರು. ಆದರೆ, ತಾಪತ್ರಯ ಮತ್ತೊಮ್ಮೆ ಮನೆ ಮುಂದೆ ಬಂದು ನಿಂತಿತ್ತು. ಕಾಂತಿಗೆ ಮಧ್ಯಾಹ್ನದ ಮಾತುಕತೆ ನೆನೆಸಿಕೊಂಡು ಸಂಕೋಚವಾದರೂ ಗೆಳತಿಗಾಗಿ ಮನೆಯೊಳಗೆ ಕಾಲಿರಿಸಿದಳು. ಎದುರಾದ ಸ್ಫುರದ್ರೂಪಿಯನ್ನು ಪ್ರವಲ್ಲಿಕಾ “ಅಣ್ಣಾ…” ಎಂದು ತಬ್ಬಿಕೊಂಡಾಗ ಗೊಂದಲದಲ್ಲೂ ಕಾಂತಿಯ ಕೆನ್ನೆ ಕೆಂಪಾಯಿತು.
ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ-ಆಕಾಶ್- ಎಲ್ಲರ ಮುಂದೆ ತಮಗೆ ತಿಳಿದದ್ದನ್ನು ವಿವರವಾಗಿ ಹೇಳುತ್ತಿದ್ದಂತೆ, ಪ್ರವಲ್ಲಿಕಾಳಿಗೆ ಅಕ್ಕ ಕೊಟ್ಟಿದ್ದ ದಪ್ಪನೆಯ ಲಕೋಟೆಯ ನೆನಪಾಯಿತು. ಆಕಾಶನೊಂದಿಗೆ ಮತ್ತೊಮ್ಮೆ ಹಾಸ್ಟೆಲ್ಲಿಗೆ ಹೋಗಿ ಬರುವ ಎದೆಗಾರಿಕೆ ಅವಳಲ್ಲಿ ಉಳಿದಿರಲಿಲ್ಲ. ಕಾಂತಿ ಒಬ್ಬಳನ್ನೇ ಕಳಿಸಲು ಇಷ್ಟವಿಲ್ಲದ ಕೇಶವ, ಮಗನೊಂದಿಗೆ ಅವಳ ಜೊತೆ ಹೋಗಿಬರಲು ತಿಳಿಸಿದರು. ತಮ್ಮ ರೂಮಿನಲ್ಲಿ ಪ್ರವಲ್ಲಿಕಾಳ ಮೇಜಿನ ಮೇಲಿದ್ದ ಪತ್ರ ತೆಗೆದುಕೊಳ್ಳುವಾಗ ಆಕಾಶನಿಗೆ ಧಾರಿಣಿಯ ಸೆಲ್ ಫೋನ್ ಕಣ್ಣಿಗೆ ಬಿತ್ತು. ಅದನ್ನೂ ಕಿಸೆಗೆ ಸೇರಿಸಿಕೊಂಡು ಇಬ್ಬರೂ ಮನೆ ಸೇರಿದರು. ಮುಂದೇನೆಂದು ಚರ್ಚಿಸುತ್ತಿರುವಾಗ ರಾಜೀವನ ಕರೆ ಧಾರಿಣಿಯ ಫೋನಿಗೆ ದನಿ ತಂದಿತು.
***
ಆಕಾಶ್-ನನ್ನು ನೋಡಿದ್ದೇ ಕಾಂತಿಗೆ ಅವನ ನೆನಪು ಮತ್ತೆ ಮತ್ತೆ ಬರತೊಡಗಿತು. ಇವನನ್ನು ಈ ಹಿಂದೆಯೇ ಎಲ್ಲೋ ನೋಡಿದ್ದೇನೆ ಎಂಬ ಹಿತವಾದ ಭಾವನೆ ಅವಳನ್ನು ಆವರಿಸಿತು. ಆದರೆ ಎಲ್ಲಿ?……..
“ಹಲೋ ಕಾಂತಿ”
“ಹಾಯ್”
“ಹೀಗೆ ಆರ್ಕುಟ್-ನಲ್ಲಿ ಒಂದು ರೌಂಡು ಬೀಟು ಹೊಡೀತಾ ಇದ್ದೆ. ನಿಮ್ಮ ಪ್ರೊಫೈಲ್-ನೋಡ್ದೆ. ತುಂಬ ಇಂಟರೆಸ್ಟಿಂಗಾಗಿದೆ. ನಿಮಗೆ ತುಂಬ ಒಳ್ಳೆಯ ಅಭಿರುಚಿಗಳಿವೆ”.
“ಥ್ಯಾಂಕ್ಸ್”
“ನಾನು ಸುದೀಪ್. ನಮ್ಮೂರು ನೀಲಿಕೇರಿ, ಉತ್ತರಕನ್ನಡದ ಚಂದದ ಪುಟ್ಟ ಊರು. ಇರೋದೀಗ ಅಮೇರಿಕಾದ ಸಂಯುಕ್ತ ಸಂಸ್ಥಾನದಲ್ಲಿ, ಕಾರ್ಯನಿಮಿತ್ತ, ಕಿರು-ಅವಧಿಗೆ.”
“ಓಹ್. ಓಕೆ”
“ನಿಮ್ಮನ್ನ ನನ್ನ ಸ್ನೇಹಿತರ ಬಳಗಕ್ಕೆ ಸೇರಿಸಿಕೊಳ್ಳೋಣ ಅಂತಿದ್ದೇನೆ. ನಾನು ನಿರುಪದ್ರವಿ ಅಂತನ್ನಿಸಿದರೆ ಸ್ನೇಹಹಸ್ತ ಚಾಚಿ”.
“ಓಹ್ ಖಂಡಿತ”
“ನಿಮ್ಮ ಬ್ಲಾಗು ಓದಿದೆ. ತುಂಬ ಚೆನ್ನಾಗಿ ಬರೀತೀರಾ”
“ಥ್ಯಾಂಕ್ಸ್”
“ಈಗ ಏನು ಬರೀತಿದ್ದೀರಿ?”
“ಏನೂ ಇಲ್ಲ. ಮೂಡು ಸರಿ ಇಲ್ಲ”
“ಯಾಕೆ? ಏನಾಯ್ತು? ಈಗ ಯಾವ ಮೂಡು ನಿಮ್ಮದು? ಪ್ರೇಮಿಯ ಉನ್ಮಾದ? ವಿರಹಿಣಿಯ ಸ್ವಗತ?”
“ಅಯ್ಯೋ, ಹಾಗೇನಿಲ್ಲಪ್ಪ”
“ಮತ್ತೆ? ಇನ್ನು ಹೇಗಪ್ಪ?”
“ಸುಮ್ನೇ ಹೀಗೆ”
“ಹ್ಮ್….ಹೋಗ್ಲಿ ಬಿಡಿ. ಮತ್ತೆ, ನೀವು ನಿಶಾಚರಿಯಾ, ಇಷ್ಟು ಹೊತ್ತಿನಲ್ಲಿ ಎದ್ದಿದ್ದೀರಲ್ಲ?”
“ಹೂಂ. ಸ್ವಲ್ಪ ಹಾಗೇ”
“ನಿಮಗೆ ಅನುಮಾನ ಮೂಡ್ತಿಲ್ವಾ ನನ್ನ ಮೇಲೆ? ಯಾಕೆ ಈ ವಯ್ಯ ನನ್ನ ಹಿಂದೆ ಬಿದ್ದಿದ್ದಾನೆ ಅಂತ?”
“ಹ್ಹ..ಹ್ಹ…ಹ್ಹ್ಹ…..ಇಲ್ಲ. ಇಲ್ಲ…ತುಂಬ ಆಶ್ಚರ್ಯ ಆಯ್ತು ಮೊದ್ಲು….ಪರವಾಗಿಲ್ಲ”.
“ಥ್ಯಾಂಕ್ಸ್”
“ಮತ್ತೆ ನನ್ನ ಪ್ರೋಫೈಲಿನಲ್ಲಿ ಅಂಥದ್ದೇನು ಇಂಟರೆಸ್ಟಿಂಗ ಇತ್ತು?
“ನೀವು ಸಾಹಿತ್ಯ ಪ್ರೇಮಿ, ಕನ್ನಡ ಪ್ರೇಮಿ. ನಿಮ್ಮ ಲಿಸ್ಟಿನಲ್ಲಿರೋ ಕಮ್ಯುನಿಟಿಗಳು, ನಿಮ್ಮ ಸ್ನೇಹಿತರು….ಜೊತೆಗೆ ನಿಮ್ಮ ಭಾವಚಿತ್ರ”
“ಥ್ಯಾಂಕ್ಸ್”
“ನೀವು ತುಂಬ ಮುದ್ದಾಗಿ ಕಾಣಿಸುತ್ತೀರಿ ಈ ಫೋಟೋದಲ್ಲಿ. ಹಸಿರು ಬಣ್ಣ ನಿಮಗೆ ಒಪ್ಪತ್ತೆ”
“ಥ್ಯಾಂಕ್ಸ್”
…………..
ಅಂದು ನಡೆದ ಈ ಸಂಭಾಷಣೆ ನೆನಪಾಗಿ ಕಾಂತಿಯ ಅಂತರಂಗದಲ್ಲಿ ಸಾವಿರ ಕ್ಯಾಂಡಲಿನ ದೀಪ ಹೊತ್ತಿಸಿದಂತಾಯಿತು. ಅಂದರೆ….ಅಂದರೆ… ಇಷ್ಟು ದಿನ ಆರ್ಕುಟಿನಲ್ಲಿ ಸುದೀಪನೆಂದು ತನ್ನನ್ನು ತಾನು ಸುಳ್ಳು ಹೆಸರಿನಿಂದ ಪರಿಚಯಿಸಿಕೊಂಡು ನನ್ನ ಹೃದಯಕ್ಕೆ ಹತ್ತಿರವಾಗಿರುವವನು ಸುದೀಪನಲ್ಲ! ಅವನು ಆಕಾಶ! ಪ್ರವಲ್ಲಿಕಾ, ಧಾರಿಣಿಯರೂ ಕೂಡ ಈ ಸಂಚಿನಲ್ಲಿ ಪಾಲುದಾರರು ಎಂಬ ಸತ್ಯ ಅವಳಿಗೆ ಅರಿವಾಗಿದ್ದೂ ಈಗಲೇ. ಆಕಾಶ ಕಾಂತಿಯ ತಬ್ಬಿಬ್ಬು ಸ್ಥಿತಿ ನೋಡಿ ಮನಸ್ಸಿನಲ್ಲಿಯೇ ನಗುತ್ತಿದ್ದ.
ಧಾರಿಣಿಯ ಮೊಬೈಲಿಗೆ ಬಂದ ಕರೆಯನ್ನು ಆಕಾಶನೇ ತೆಗೆದುಕೊಂಡ. ತೆರೆಯ ಮೇಲೆ ರಾಜೀವನ ಹೆಸರು ಕಾಣಿಸಿತ್ತು. ರಾಜೀವನಿಗೆ ಇಲ್ಲಿ ನಡೆದಿರುವುದನ್ನೆಲ್ಲಾ ಸಂಕ್ಷಿಪ್ತವಾಗಿ ಹೇಳಿದ. ರಾಜೀವ ತಾನು ನಾಳೆ ಸಂಜೆಯ ಹೊತ್ತಿಗೆ ಬೆಂಗಳೂರಿಗೆ ಬಂದಿಳಿಯುತ್ತೇನೆಂದೂ, ಅಲ್ಲಿಯವರೆಗೆ ಧಾರಿಣಿಯ ಪತ್ತೆಯ ಪ್ರಯತ್ನ ಮುಂದುವರೆಸಬೇಕೆಂದು ಆಕಾಶನನ್ನು ವಿನಂತಿಸಿಕೊಂಡ.
***
ದಬ್ಬೆಂದು ಬಾಗಿಲು ತೆಗೆದುಕೊಂಡು ಹೋದ ಟಿಮ್, ತನ್ನ ಏಕಾಂತ ಕೊಠಡಿಯಲ್ಲಿ ಕುಳಿತು ಸಿಗಾರ್ ಎಳೆಯುತ್ತ ಯೋಚಿಸತೊಡಗಿದ. ಈ ಹುಡುಗಿ (”What’s her funny name?) ನಿಜ ಹೇಳುತ್ತಿದ್ದಾಳೆಯೆ? ಇವಳು ಧಾರಿಣಿಯ ಸೋದರಿಯೇ ಆಗಿದ್ದರೆ, ಇವಳ ಮೂಲಕವೇ ಧಾರಿಣಿಯನ್ನು ಬ್ಲ್ಯಾಕ್ ಮೇಲ್ ಮಾಡಬಹುದಲ್ಲ! ಈ ವಿಚಾರದಿಂದ ಅವನಿಗೆ ಮತ್ತೆ ಬೆಳಕು ಕಾಣಿಸಿದಂತಾಯಿತು. ಜೊಯಿಗೆ ಬೇಕಾದ ಮಾಹಿತಿಯನ್ನು ಇನ್ನೆರಡು ದಿನಗಳಲ್ಲಿ ತಾನು ಧಾರಿಣಿಯಿಂದ ವಶ ಪಡಿಸಿಕೊಳ್ಳದಿದ್ದರೆ, ತನ್ನ ಕೆಲಸವೂ ಹೋದಂತೆಯೆ. ಹಾಗೆಂದುಕೊಂಡ ಟಿಮ್ ಮತ್ತೆ ಧಾರಿಣಿ ಬಂಧನದಲ್ಲಿದ್ದ ಕೋಣೆಗೆ ಹೋದ. ಧಾರಿಣಿ ಹೆದರಿಕೆಯಿಂದ ತಲೆ ಎತ್ತಿದಳು. “ಹೇ ಬೇಬಿ, ನಿನಗೆ ಫೋನ್ ಕೊಡುತ್ತೇನೆ. ನಿನ್ನ ಸೋದರಿ ತಾನು ಪೇಟೆಂಟ್ ಮಾಡಲಿರುವ ಮಾಹಿತಿಯನ್ನು ತೆಗೆದುಕೊಂಡು ಅಶೋಕಾ ಹೊಟೆಲ್ಲಿಗೆ ಇನ್ನು ಒಂದು ಗಂಟೆಯಲ್ಲಿ ತಲುಪಬೇಕು. ಮತ್ತೆ ಯಾರಿಗಾದರೂ ಇದರ ಸುಳವು ಕೊಟ್ಟರೆ, ನಿನ್ನ ಜೀವ ಉಳಿಯುವದಿಲ್ಲ. ಇಂಗ್ಲಿಶನಲ್ಲಿ ಮಾತ್ರ ಮಾತಾಡು” , ಎಂದು ಟಿಮ್ ಎಚ್ಚರಿಕೆಯ ಮಾತು ಹೇಳಿದ.ಧಾರಿಣಿ ತನ್ನ ಮೊಬೈಲಿಗೇ dial ಮಾಡಿ , ಟಿಮ್ ಹೇಳಿದಂತೆಯೇ ಹೇಳಿದಳು. ಅತ್ತಲಿಂದ ಕೇಳುತ್ತಿದ್ದ ಆಕಾಶ, ಕಾಂತಿ ಹಾಗು ಪ್ರವಲ್ಲಿಕಾರಿಗೆ ದಿಗ್ಭ್ರಮೆಯಾಯಿತು.
ಟಿಮ್ ಅಶೋಕ ದಿಂದ ಧುಮುಗುಟ್ಟುತ್ತಾ ವಾಪಸ್ಸು ಬಂದ ಅಶೋಕಾದಲ್ಲಿ Indian Industries Association (IIA)ದವರು ಅಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು ಪಾಲ್ಗೊಂಡಿದ್ದರಿಂದ
ಅವನಿಗೆ ಅಶೋಕಾದೊಳಗೆ ಹೋಗಲು ಸೆಕ್ಯೂರಿಟಿ ಸಿಬ್ಬಂದಿ ಬಿಡಲಿಲ್ಲ ಜೊತೆಗೆ ಬೆಂಗಳೂರಿನ ತಲೆ ಚಿಟ್ಟು ಹಿಡಿಸುವ ಟ್ರ್ಯಾಫಿಕ್ ಬೇರೆ …ತಲೆ ಓಡದೇ ಒಂದು ಚಿಲ್ಲ್ಡ್ ಬಿಯರ್ ಕುಡಿಯುವಾ ಅಂತ ಸೀದಾ ತನ್ನ ರೂಮಿಗೆ ಹೋರಟವನಿಗೆ ಶಶ್ ಯಾನೇ ಶಶಾಂಕ ಎದುರಾದ ಶಶ್ ನ ಕೈಲಿ ಪ್ಲ್ಯಾಸ್ಟಿಕ್ ಬ್ಯಾಗ್ ಒಂದಿತ್ತು.`ಹೌ ಈಸ್ ಶೀ…?’ ಧಾರಿಣಿ ಬಗ್ಗೆ ವಿಚಾರಿಸಿದ ಟಿಮ್ `ನಾಟ್ ಗುಡ್ ಟಿಮ್ ಅವಳು ಮಧ್ಯಾನ ಲಂಚ್ ಮುಟ್ಟಲಿಲ್ಲ…’ಅಂದ ಶಶ್ ` ಏಕೆ?’ಟಿಮ್ ಪ್ರಶ್ಣಿಸಿದ ಹಿಂದೂ ಗಳ ಆಚಾರ ವಿಚಾರಗಳು ನಿನಗೆ ಅಲ್ಪ ಸಲ್ಪ ಗೊತ್ತಿರಬೇಕು ಟಿಮ್ ನಾವೆಶ್ಟೇ ಮುಂದುವರೆದರೂ ಕೆಲವು ವಿಶಯಗಳಲ್ಲಿ ಸಂಪ್ರದಾಯ ಬಿಟ್ಟುಕೊಡುವವರಲ್ಲ ಇವತ್ತು ಶುಕ್ರವಾರವಲ್ಲವೇ…ಅವಳು ಲಲಿತಾ ಸಹಸ್ರ ನಾಮ ಹೇಳಿಕೊಳ್ಳದೇ ಏನೂ ತಿನ್ನುವುದಿಲ್ಲವಂತೆ ನಿಮ್ಮಗಳಿಗೆ ಭಾನುವಾರ ಚರ್ಚಿಗೆ ಹೋಗದಿದ್ದರೆ ಹೇಗೆ ಮನಸ್ಸು ತಡೆಯುವುದಿಲ್ಲವೋ ಹಾಗೆ… ಅದಕ್ಕೆ ಅವಳು ಸ್ವಲ್ಪ ಏನಾದರೂ ತಿನ್ನಲೀ ಅಂತ ಇವನ್ನು ಒಯ್ಯುತ್ತಿದ್ದೇನೆ ಅಂದು ತನ್ನ ಕೈಲಿದ್ದ ಸಾಮಾನು ತೋರಿಸಿದ ಟಿಮ್ ಯಾರನ್ನೂ ನಂಬುವವನಲ್ಲ ಶಶ್ ನ ಕೈನಿಂದ ಬ್ಯಾಗ್ ತೆರೆದು ಅದರಲ್ಲಿದ್ದ ಸಾಮಾನು ಪರೀಕ್ಷಿಸಿದ ಅದರಲ್ಲಿದ್ದದು ಒಂದು ಆರಿಂಚು ಉದ್ದದ ದೇವಿಯ ಶ್ರೀಗಂದದ ಪ್ರತಿಮೆ ಒಂದಿಷ್ಟು ಕುಂಕುಮದ ಪೊಟ್ಟಣ ಮತ್ತು ಶಶ್ ತನ್ನ ಪ್ರಿಂಟರ್ ನಲ್ಲಿ ತೆಗೆದಿದ್ದ ಇಂಗ್ಲಿಶ್ ಲಿಪಿಯಲ್ಲಿದ್ದ ಲಲಿತಾ ಸಹಸ್ರನಾಮದ ಪ್ರಿಂಟ್ ಔಟ್ ಟಿ ಮ್ ಅದರಲ್ಲಿದುದು ಓದಲು ಎತ್ನಿಸಿದ
Om shrimata shrimaharagyi shrimatsimha saneshvari
Chidagni kundasambhuta devakarya samudyata …..
Shrimata: Salutations to the Divine Mother, who is the Mother of all.
Shri-mahararagni: Great Empress of the whole Universe.
Shrimat-simhasaneshvari: Great Sovereign, enthroned on the lion’s back.
Chidagni kundasambhuta: Who came out of the fire of Pure Consciousness.
Devakarya samudyata: Who promotes the cause of Divine forces….
ಟಿಮ್ ನಿಗೆ ಮೊದಲಿಗೆ ನಾಲಿಗೆ ತಿರುಗಲಿಲ್ಲ ನಂತರ ಇಂಗ್ಲಿಶ್ ನಲ್ಲಿದ್ದ ಅರ್ಥ ಓದಿದಾಗ ಅದರಲ್ಲೇನೂ ವಿಶೇಶ ಕಾಣಲಿಲ್ಲವಾದ್ದರಿಂದ ಏನೋ ಹೇಳಿಕೊಳ್ಳಲಿ ಬಿಡು ಅಂದು ಕೊಂಡು ಶಶ್ ನಿಗೆ ಸಹಸ್ರನಾಮವಿದ್ದ ಕಾಗದಗಳನ್ನು ವಾಪಸು ಮಾಡಿದ ದೇವಿಯ ವಿಗ್ರಹ ವನ್ನು ಮೂಗಿನ ಬಳಿ ಇಟ್ಟುಕೊಂಡು ವಾಸನೆ ನೋಡಿ ತುಂಬಾ ಚೆನ್ನಾ ಗಿದೆ ವಾಸನೆ…ನಾನು ಅಮೇರಿಕಾ ಗೆ ವಾಪಸು ಹೋಗುವಾಗ ನನಗೂ ಏನಾದರೂ ಸ್ಯಾಂಡಲ್ ವುಡ್ ನ ಸಾಮಾನು ಕೊಡಿಸು ಅಂದ
ಶಶ್ ಧಾರಿಣಿ ರೂಮಿಗೆ ಬಂದು ತನ್ನ ಕೈಲಿದ್ದ ಸಾಮಾನು ಕೊಡುತ್ತಾ ` ಟೇಕ್ ದೀಸ್…ಫಿನಿಶ್ ಯುವರ್ ಚಾಂಟಿಂಗ್ ಅಂಡ್ ಹ್ಯಾವ್ ಸಂ ಪುಡ್…’ ಅಂದ ಧಾರಿಣಿ ಸ್ವಲ್ಪ ಅಚ್ಚರಿ ಪಡುತ್ತಾ ಅವನ ಕೈಲಿದ್ದ ಸಾಮಾನು ತೆಗೆದು ಕೊಂಡಳು
ಏಕೆಂದರೆ ಮೊದಲಿಗೆ ಅವಳು ದೇವರನ್ನು ನಂಬುವುದು ಬಿಟ್ತು ಹಲವು ವರ್ಷಗಳಾಗಿತ್ತು ನಿಖರವಾಗಿ ಹೇಳ ಬೇಕೆಂದರೆ ಆರು ವರ್ಶ ಒಂದು ಇರುವೆಯನ್ನೂ ನೋಯಿಸದ ತನ್ನಣ್ಣ ಪ್ರತಾಪ ಎಂದು ಬೂದಿಯಾದನೋ ಅಂದಿಗೆ ಅವಳಿಗೆ ದೇವರ ಮೇಲಿದ್ದ ಭಕ್ತಿ ಕೊನೆಯಾಗಿತ್ತು ಎರಡನೆಯದಾಗಿ ಅವಳು ಆ ಸಾಮಾನುಗಳಿಗಾಗಿ ಅವನನ್ನು ಕೇಳಿರಲೇ ಇಲ್ಲ!
ಟಿಮ್ ತನ್ನ ಸಹಾಯಕ ಗಿರಿಯ ಮೂಲಕ ಪ್ರವಲ್ಲಿಕಾ ಳ ಹಾಸ್ಟೆಲ್ ನಲ್ಲಿ ವಿಚಾರಿಸಿ ಧಾರಿಣಿ ಹೇಳಿದ್ದು ನಿಜವೆಂದು ಖಾತ್ರಿ ಮಾಡಿಕೊಂಡ ಧಾರಿಣಿಗೆ ಪ್ರವಲ್ಲಿಕಾ ಎಂಬ ತಂಗಿ ಇದ್ದಾಳೆಂಬುದು ನಿಜ …ಹಾಗಾದರೇನು ಮಾಡುವುದು ಈಗ ಎಂದು ಕೊಳ್ಳುತ್ತಾ ಪ್ರವಲ್ಲಿಕಾ ಹಾಸ್ಟೆಲ್ ನಲ್ಲಿ
ಲೋಕಲ್ ಗಾರ್ಡಿಯನ್ ಎಂದು ಕೊಟ್ಟಿದ್ದ ಕೇಶವನ ಮನೆ ಅಡ್ರೆಸ್ ತೆಗೆಸಿಕೊಂಡ ಕೇಶವನ ಮನೆಗೆ ನುಗ್ಗಿ ಧಾರಿಣಿಯನ್ನು ಎಳೆತರುವುದೇನು ದೊಡ್ಡ ಕೆಲಸವಲ್ಲ ಈಗಾಗಲೇ ಬಿಳಿಯನಾದ ನನ್ನ ಮೇಲೆ ಒಬ್ಬಳನ್ನು ಕರೆತಂದಾಗಲೇ ಯಾರಿಗಾದರೂ ಸಂದೇಹ ಬಂದಿರಬಹುದು ತನ್ನನ್ನು ಯಾರಾದರೂ ಗುರುತು ಹಿಡಿದರೆ ಕಷ್ಟ ಎಂದು ಕೊಳ್ಳುತ್ತಾ ಗಿರಿಯನ್ನು ಕಳಿಸೋಣವೇ ಅಂದುಕೊಂಡ ನಂತರ ಬೇಡವೆಂದು ಗಿರಿಗೆ ಈವಿಳಾಸದ ಮನೆಯ ಮೇಲೆ ಒಂದು ಕಣ್ಣಿಡು ಅಂತ ಸೂಚನೆ ಕೊಟ್ಟ
ಧಾರಿಣಿ ಮುಂದೇನು ಮಾಡುವುದೆಂದು ಯೋಚಿಸುತ್ತಿದ್ದಾಳೆ ಮಧ್ಯಾನ್ಹ ಟಿಮ್ ಇಲ್ಲದ ಸಮಯ ಸಾಧಿಸಿ ತನ್ನ ರೂಮಿಗೆ ಚೈನೀಸ್ ನೂದಲ್ಸ್ ತುಂಬಿದ ತಟ್ಟೇ ತಂದಿತ್ತ ಶಶ್ ಅವಳಿಗೆ ಒಂದಿಷ್ಟು ಭರವಸೆ ತೋರಿದಂತೆ ಅನ್ನಿಸಿತ್ತು ಇವ್ನೇನೋ ಭಾರೀ ಬುದ್ದಿವಂತ ಅಂದುಕೊಂಡರೆ ನಿನ್ನ ಬಿಡುಗಡೆಗಾಗಿ ದೇವರನ್ನು ಪ್ರಾರ್ಥಿಸು ಅಂತ ಕುಂಕುಮದ ಪೊಟ್ಟಣ ತಂದು ಕೊಟ್ಟಿದ್ದಾನೆ ಅಂತ ಬೈದುಕೊಂಡಳು ಮಧ್ಯಾನ ನಡೆದ ಸಂಗತಿಯನ್ನು ಮತ್ತೆ ಮೆಲಕು ಹಾಕಿಕೊಂಡಳು ನೂಡಲ್ಸ್ ಮೇಲೆ ಟೊಮೇಟೋ ಸಾಸ್ ನಿಂದ I help U’ಅಂತ ಬರೆದು ಸಿ.ಸಿ ಕ್ಯಾಮೆರಾ ಅತ್ತಿಂದಿತ್ತ ಹರಿಯುವುದರೊಳಗಾಗಿ ಅದನ್ನು ನೂಡಲ್ಸ್ ನೊಂದಿಗೆ ಕಲೆಸಿ ಬಿಟ್ಟಿದ್ದ ಶಶ್.ಇವಳು ವಾವ್ ಅಂದುಕೊಂಡು ಆ ಸಾಸ್ ಮಯ ನೂಡಲ್ಸ್ ಅನ್ನು ಕಷ್ಟ ಪಟ್ಟು ತಿಂದು ಏನೋ ಸಹಾಯ ನಿರೀಕ್ಷಿಸುತ್ತಿದ್ದರೆ ದೇವಿ ವಿಗ್ರಹವನ್ನೂ ಕುಂಕುಮ ಪೊಟ್ಟಣವನ್ನೂ ತಂದು ಕೊಟ್ಟಿದ್ದನ್ನು ನೋಡಿ ಅವಳಿಗೆ ನಿರಾಸೆಯಾಗಿಬಿಟ್ಟಿತ್ತು ಮತ್ತೆ ಯೋಚಿಸಿದಳು ಶಶ್ ಇವುಗಳ ಮೂಲಕ ಏನೋ ಹೇಳಲು ಪ್ರಯತ್ನಿಸುತ್ತಿದ್ದಾನೆ ಅನ್ನಿಸಿತು ವಿಗ್ರಹವನ್ನೂ ಪೊಟ್ಟಣಗಳನ್ನೂ ಪರೀಕ್ಶಿಸಿದಳು
ಏನೂ ಹೊಳೆಯಲಿಲ್ಲ ಲಲಿತಾ ಸಹಸ್ರ ನಾಮದ ಕಾಗದಗಳನ್ನು ತೆಗೆದುಕೊಂಡು ಓದಲಾರಂಭಿಸಿದಳು ಅದು ಅವಳು ಚಿಕ್ಕಂದಿನಲ್ಲಿ ಕಲಿತದ್ದೇ ಸ್ಕೂಲು ಹುಡುಗಿಯರಾಗಿದ್ದಾಗ ಶಾರದಮ್ಮನವರೊಂದಿಗೆ ಮನೆ ಕೆಲಸ ಮಾಡುತ್ತಾ ಅವಳೂ ಪ್ರವಲ್ಲಿಕಾಳೂ ಲಲಿತಾ ಸಹಸ್ರನಾಮ ಹೇಳಿಕೊಳ್ಳುತ್ತಿದ್ದರು ಮೊದಲ ಹತ್ತು ಶ್ಕ್ಲೋಕಗಳಾದ ಮೇಲೆ ಏನೋ ಬದಲಾವಣೆ ಅನ್ನಿಸಿತು ಹನ್ನೊಡನೇ ಶ್ಲ್ಕೋಕದಿಂದ ಪ್ರತಿಶ್ಲ್ಕೋಕದ ಪ್ರತಿ ಎರಡನೇ ಸಾಲಿನಲ್ಲಿ ಅವಳಿಗೆ ಬೇಕಾದ್ದು ಸಿಕ್ಕಿತು!ಅದು ಶಶ್ ಅವಳಿಗೆ ಕೊಟ್ಟಿದ್ದ ಸೂಚನೆ!!
*****************************
ಧಾರಿಣಿ ನಿಧಾನವಾಗಿ ಯೋಚಿಸುತ್ತಾ ಸಿಸಿ ಕ್ಯಾಮೆರಾ ಅವಳತ್ತ ತಿರುಗಿದಾಗ ಕುಂಕುಮಾರ್ಚನೆ ಮಾಡುತ್ತಾ ಅತ್ತ ತಿರುಗಿದಾಗ ಸಹಸ್ರ ನಾಮದ ಜೊತೆಗಿದ್ದ ಖಾಲಿ ಹಾಳೆಯಲ್ಲಿ ಪೇಟೇಂಟ್ ಬಗೆಗಿನ data sheet ನಲ್ಲಿ ಬರೆಯ ಬೇಕಾದ ವಿವರಗಳನ್ನು ಬರೆದಳು ಕೊನೆಯಲ್ಲಿ ಒಲೀವಿಯಾಳಿಗೆ ತಾನು ಖುದ್ದಾಗಿ ಸಹಿ ಮಾಡಬೇಕಾದ ದಾಖಲೆ ಗಳಿಗೆ ಈಗಾಗಲೇ ಸಹಿ ಮಾಡಿ ಕಳಿಸಿರುವೆಂದೂ ಅದು ಒಲೀವಿಯಾಳಿಗೆ ಬೇಗನೇ ತಲುಪುವುದೆಂಬ ಸೂಚನೆಯನ್ನೂ ಬರೆದಳು
ಇನ್ನೊಂದು ತುಂಡು ಕಾಗದದಲ್ಲಿ ಒಲೀವಿಯಾಳ ಮೈಲ್ ಐಡಿಯನ್ನು ಬರೆದು ಈಯೆಲ್ಲ ವಿವರಗಳನ್ನೂ ಆದಷ್ಟೂ ಬೇಗ ಮೇಲ್ ಮಾಡಬೇಕೆಂದು ಶಶ್ ನಿ ಗೆ ಸೂಚಿಸಿದಳು.ಎಲ್ಲವನ್ನೂ ಕುಂಕುಮವಿದ್ದ ಸಣ್ಣ ಪ್ಲ್ಯಾಸ್ಟಿಕ್ ಪೊಟ್ಟಣದಲ್ಲಿ ಸಣ್ಣಗೆ ಮಡಿಸಿ ದೇವಿ ವಿಗ್ರಹದ
ತಳದ ಮರದ ಪಟ್ಟಿ ಸರಿಸಿ ಅದರ ಟೊಳ್ಳಿನಲ್ಲಿ ಅದನ್ನು ಸೇರಿಸಿ ಬಿಟ್ಟಳು
******************
ಜವಾನನೊಬ್ಬ ಬಂದು ಟಿಮ್ ನಿಗೆ ಆ ಹುಡುಗಿ ಪೂಜೆ ಮಾಡಿದ ನಂತರ ನೀರಿನಲ್ಲಿ ವಿಸರ್ಜನೆ ಮಾಡಬೇಕಂತೆ ಅಂದಾಗ `ದಿಸ್ ಈಸ್ ಟೂ ಮಚ್’ಅಂತ ಟಿಮ್ ಕೂಗಾಡಿದ ಆಗ ಅಲ್ಲೇ ಇದ್ದ ಶಶ್ ಅವಳ ಅಕ್ಕ ಅಶೋಕಾಕ್ಕೆ ಬಂದಿದ್ದಳೋ ಏನೋ ಅಥವಾ ನಿನ್ನನ್ನು ಹೇಗೆ ಸೆಕ್ಯೂರಿಟಿಯವರು ಬಿಡಲಿಲ್ಲವೋ ಹಾಗೇ ಅವಳನ್ನೂ ಬಿಡಲಿಲ್ಲವೋ ಏನೋ ಅದಕ್ಕೆ ಅವಳ ಮೇಲಿನ ಕೋಪ ಇವಳ ಮೇಲ್ಯಾಕೆ ತೀರಿಸುತ್ತೀ…ವಿಸರ್ಜನೆ ಹಿಂದೂ ಗಳ ಪೂಜಾ ವಿಧಾನ ನೀನು ನಮ್ಮಗಣಪತಿ ಅದೇ ಎಲಿಫೆಂಟ್ ಗಾಡ್ ಅನ್ನು ಅಮೇರಿಕಾ ದಲ್ಲೂ ನಾವುಗಳು ಸಮುದ್ರದಲ್ಲಿ ಕೊಂಡು ಹೋಗಿ ವಿಸರ್ಜಿಸುವುದು ನೋಡಿಲ್ಲವೇ…? ಈ ರೆಸಾರ್ಟ್ ನ ಮೂಲಕ ವಾಗಿ ಹರಿವ ಸ್ಟ್ರೀಮ್ ಇದೆಯಲ್ಲಾ…ಅಲ್ಲಿ ಹೋಗಿ ಹಾಕುತ್ತಾಳೆ ಬಿಡು… ಬೇಕಾದ್ರೆ ಗಿರಿ ಅವಳೊಂದಿಗೆ ಹೋಗಿಬರಲಿ…ಅಂತ ಟಿಮ್ ನನ್ನು ಸಮಾಧಾನ ಮಾಡಿದ
ಗಿರಿ ಎಲ್ಲೋ ಹೊರಗೆ ಹೋಗಿದ್ದರಿಂದ ಆ ಜವಾನನೊಂದಿಗೆ ಧಾರಿಣಿ ಅಲ್ಲಿಂದ ಕಣ್ಣಳತೆ ದೂರದಲ್ಲಿದ್ದ ತೊರೆಯಲ್ಲಿ ವಿಗ್ರಹವನ್ನು ಬೊಗಸೆ ಕುಂಕುಮದೊಂದಿಗೆ ಶಶ್ ನ ಸೂಚನೆಯಂತೆ ಒಂದು ಕೆಂಪು ಪ್ಲ್ಯಾಸ್ಟಿಕ್ ಕವರಿನಲ್ಲಿ ಹಾಕಿ ನೀರಿನಲ್ಲಿ ಬಿಟ್ಟಳು ರೆಸಾರ್ಟ್ ನಿಂದ ಹತ್ತು ಮಾರುಗಳಷ್ಟು ದೂರದಲ್ಲಿ ಅವಳು ನಿಂತಿರುವುದೂ ಅವಳ ಮೇಲೆ ಟೀಮ್ ಕಣ್ಣಿಟ್ಟಿರುವುದೂ ಅವಳಿಗೆ ಗೊತ್ತಾದ್ದರಿಂದ ಮನಸ್ಸಿನಲ್ಲೇ ನಗುತ್ತಾ ಎರಡು ನಿಮಿಶ ಕೈಮುಗಿದುಕೊಂಡು ನಿಂತಿದ್ದು ವಾಪಸು ಬಂದು ಬಿಟ್ಟಳು
ಅಲ್ಲಿಂದ ತೊರೆ ಹರಿಯುತ್ತಾ ಆಚೆ ಹೋದ ಮೇಲೆ ದಾರಿಯಲ್ಲಿ ಶಶ್ ನೇಮಿಸಿದ ವ್ಯಕ್ತಿ ತನ್ನ ತರಬೇತಿ ಹೊಂದಿದ ನಾಯಿಯೊಂದಿಗೆ ಈ ಕೆಂಪು ಪ್ಯಾಕೆಟ್ ಹಿಡಿಯಲು ಕಾಯುತ್ತಿರುತ್ತಾನೆ ಮತ್ತು ಅವನು ಧಾರಿಣಿ ಸೂಚನೆಗಳನ್ನು ಅನುಸರಿಸಿ ಅವಶ್ಯವಾದ್ದನ್ನು ಮಾಡುತ್ತಾನೆ ಎಂದು ಅವಳಿಗೆ ಗೊತ್ತು ಶಶ್ ನನ್ನು ತಾನು ಹೇಗೆ ನಂಬಿದೆ ಅಂತ ಅವಳಿಗೇ ಆಶ್ಚರ್ಯವಾಗುತ್ತಿದೆ. ದೇವಿ ವಿಗ್ರಹವನ್ನು ನಾಯಿ ಹಿಡಿಯುವುದು ದೇವರಲ್ಲಿ ನಂಬಿಕೆ ಕಳೆದುಕೊಂಡ ಧಾರಿಣಿಗೆ ಕೂಡಾ ಕಸಿವಿಸಿಯ ವಿಶಯವೇ…ನಮ್ಮಪ್ಪನಿಗೆ ಈವಿಶ್ಯ ತಿಳಿದರೆ ಎಷ್ಟು ನೊಂದು ಕೊಳ್ಳುತ್ತಾರೋ…ಎಂದು ಕೊಂಡಳು ಮತ್ತೆ ರೆಸಾರ್ಟ್ ಪ್ರವೇಶಿಸಿದಾಗ ಎಂಥದೋ ಒಂದು ಸಮಾಧಾನದ ಸಣ್ಣ ನಗೆ ಅವಳ ಮುಖದ ಮೇಲೆ ಕಾಣುತ್ತಿತ್ತು ಆದರೆ ಆನಗೆ ತುಂಬಾಹೊತ್ತು ಇರಲು ಸಾದ್ಯವಿಲ್ಲ ಅದಕ್ಕೆ ಕಾರಣ ಗಿರಿ!
******************
ಗಿರಿ ವಿಜಯದ ನಗು ಬೀರುತ್ತಾ ಟಿಮ್ ನಪಕ್ಕ ನಿಂತಿದ್ದ ಶಶ್ ಗಂಭಿರವಾಗಿದ್ದ ಓ…ಮಿಸ್ ಶ್ಯಾಸ್ತ್ರೀ…ಪ್ಲೀಸ್ ಕಮ್…ಎಂದು ವ್ಯಂಗ್ಯ ನಗು ಬೀರುತ್ತಾ ಹೇಳಿದ ಟಿಮ್ ಅವನ ಕೈಲಿದ್ದ ಲಕ್ಕೋಟೆ ನೋಡಿ ಧಾರಿಣಿಯ ಮನ ಧಸಕ್ಕೆಂದಿತು!ಅದು
ಅವಳು ಪ್ರವಲ್ಲಿಕಾ ಗೆ ಒಲೀವಿಯಾಳ ವಿಳಾಸಕ್ಕೆ ಪೋಸ್ಟ್ ಮಾಡಲು ಕೊಟ್ಟಿದ್ದು.ಧಾರಿಣಿ ಯಾವತ್ತೂ ಹುಷಾರಿ ಹುಡುಗಿ ಎಲ್ಲಾ ವಿವರಗಳನ್ನೂ ಪೋಸ್ಟ್ ನಲ್ಲಿ ಅಥವಾ ಮೈಲ್ ಒಂದರಲ್ಲೇ ಕಳಿಸಿದರೆ ಅದು ಹೇಗಾದರೂ ಲೀಕ್ ಆಗುವ ಸಂಭವ ಇದೆಯೆಂದು
ಕೆಲವು ವಿವರಗಳನ್ನು ಸಹಿ ಮಾಡಬೇಕಾದ್ದನ್ನೂ ಮೊದಲು ಪೋಸ್ಟ್ ನಲ್ಲಿ ಕಳಿಸಿ ಇನ್ನುಳಿದದ್ದನ್ನು ಮೇಲ್ ಮಾಡೋಣವೆಂದು ಕೊಂಡಿದ್ದಳು ಈಗ ಶಶ್ ನೇಮಿಸಿದ ವ್ಯಕ್ತಿ ಒಲೀವಿಯಾಗೆ ಮೇಲ್ ಮಾಡುತ್ತಾನೆಂದು ನಿರಾಳವಾಗಿದ್ದರೆ ಹೊಸ ಆಪತ್ತು ಬಂದಿತಲ್ಲಾ
ಎಂದು ಕಂಗೆಟ್ಟಳು ಗಿರಿ ತಾನು ಹೇಗೆ ಕೇಶವನ ಏರಿಯಾದ ಪೋಸ್ಟ್ ಆಫೀಸಿನಲ್ಲಿ ಜನ ಹಿಡಿದು ಈಮನೆಯವರ ಎಲ್ಲಾ ಪತ್ರಗಳನ್ನೂ ನನಗೇ ತಂದು ಕೊಡಿ ಅಂತ ಈ ಕಾಗದ ಸಂಪಾದಿಸಿದೆ ಅಂತ ಟಿಮ್ ನ ಬಳಿ ಜಂಭ ಕೊಚ್ಚುತ್ತಿದ್ದ ಟಿಮ್ ನೋದು ನಿಮ್ಮಕ್ಕ
ತಾನೊಬ್ಬಳೇ ಜಾಣೆ ಅಂದು ಕೊಂಡಿದ್ದಾಳೆ…ಅವಳಿಗೆ ಹೇಗೆ ಮಾಡಿದೆವು..’ಅನ್ನು ನೋಟದಿಂದ ಧಾರಿಣಿಯೆಡೆ ನೋಡಿದ
******************
ಧಾರಿಣಿಯ ಸುರಕ್ಷತ ವಾಪಸಾತಿಗಾಗಿ ಶಾಸ್ತ್ರಿಗಳು ಇಟ್ತುಕೊಂಡಿದ್ದ ಪೂಜೆಗೆ ಕೇಶವ ದಂಪತಿಗಳೂ ಪ್ರವಲ್ಲಿಕಾಳೂ ಹಳ್ಲಿಗೆ ಬಂದಿದ್ದರು.ಅಂದು ಬಂದ ಕಾಗದಗಳನ್ನು ಪೋಸ್ಟ್ ಮ್ಯಾನ್ ನಿಂದ ತೆಗೆದು ಕೊಂಡ ಪ್ರವಲ್ಲಿಕಾ ಎಲ್ಲವನ್ನೂ ಒಡೆದು ನೋದುತ್ತಿದ್ದಳು
ತಾವು ಪೋಸ್ಟ್ ಮಾಡಿದ ಕಾಂತಿಯ ಜಾತಕವೂ ಅದರಲ್ಲಿತ್ತು ನೋಡು ನಮ್ ಪೋಸ್ಟಲ್ ಸಿಸ್ಟಮ್ಮು ನಾವು ಬಂದ ಮೇಲೆ ಇದು ಬಂದಿದೆ ಅಂತ ಹೇಳುತ್ತಾ ಅದನ್ನು ಒಡೆದವಳು ಬೆಚ್ಚಿದಳು ಅಲ್ಲಿ ಕಾಂತಿಯ ಜಾತಕದ ಬದಲಿಗೆ ಧಾರಿಣಿ ಅವಳಿಗೆ ಕೊಟ್ಟ
ಪತ್ರವಾಗಿತ್ತು!ಆಕಾಶನ ಮೊಗ ನೋಡುತ್ತಾ ಕೆಂಪು ಕೆಂಪಾಗುತ್ತಾ ಕಾಂತಿ ಪತ್ರಗಳನ್ನು ಅದಲು ಬದಲು ಮಾಡಿ ತಪ್ಪು ಮಾಡಿಬಿಟ್ಟಿದ್ದಳು!
ಕೇಶವ ಅವತ್ತೇ ಸಂಜೆ ವಾಪಸ್ಸು ಹೊರಟವರು `ನಮ್ಮದೇ ಬೀದಿಯಲ್ಲಿರುವ ನನ್ನಸ್ನೇಹಿತರ ಮಗ ಇವತ್ತು ರಾತ್ರಿಯೇ ಅಮೇರಿಕಾಗೆ ಹೊರಡುತ್ತಿದ್ದಾನೆ ಅವನಿಗೆ ಈ ಕಾಗದವನ್ನು ತೊಗೊಂಡು ಹೋಗಿ ಅಲ್ಲೇ ಪೋಸ್ಟ್ ಮಾಡು ಎಂದು ಹೇಳುತ್ತೇನೆ ಅಂತ
ಪ್ರವಲ್ಲಿಕಾ ಳಿಂದ ಅ ಪತ್ರವನ್ನು ಹುಶಾರಾಗಿ ತೆಗೆದುಕೊಂಡು ಅದರಂತೆ ಆರಾತ್ರಿಯೇ ಅದು ಅಮೇರಿಕ ಸೇರುವಂತೆ ಏರ್ಪಾಡು ಮಾಡಿ ಬಿಟ್ಟರು
********************
ಗಿರಿಯ ಕೈಯಿಂದ ತೆಗೆದುಕೊಂಡಲಕ್ಕೋಟೆ ಒಡೆದ ಟಿಮ್ ನಿಗೆ ಅದರಲ್ಲಿದ್ದ ಮೋಡಿ ಬರಹ ಓದಲಾಗಲಿಲ್ಲ ಗಿರಿಗೇ ವಾಪಸ್ಸು ಕೊಟ್ಟು ಅದೇನೆಂದು ಓದುವಂತೆ ಹೇಳಿದ `ಆದಿತ್ಯಾದಿ ಗೃಹಾಸ್ಸರ್ವೇ….ಪದವೀ ಪೂರ್ವ ಪುಣ್ಯಾನಾಂ ಲಿಖ್ಯತೇ ಜನ್ಮ
ಪತ್ರಿಕಾ….ರಾಜಾರಾವ್ ಅವರ ಧರ್ಮಪತ್ನಿ ವಿಜಯಮ್ಮನವರ ಗರ್ಭಸುಧಾಂಭುದಿಯಲ್ಲಿ…..ಕನ್ಯಾರತ್ನ ಜನನ…’ಗಿರಿ ತೊದಲುತ್ತಾ ನಡುಗುತ್ತಾ ಓದಿದಾಗ ಟಿಮ್ ಕಕ್ಕಾಬಿಕ್ಕಿಯಾದ ಶಶ್ ಕಷ್ಟ ಪಟ್ಟು ಉಸಿರು ಹಿಡಿದುಕೊಂಡ
ಧಾರಿಣಿ ನಿಂತ ಜಾಗದಲ್ಲೇ ಕಲ್ಲಾಗಿದ್ದಳು
ದುಬೈಗೆ ಹಾರಿದ ಭರತಖಾನ ಕುದಿಯುತ್ತಲಿದ್ದ. ಒಬ್ಬ ಯಃಕಶ್ಚಿತ ಹುಡುಗಿ ತನ್ನ ಬಲೆಯಿಂದ ತಪ್ಪಿಸಿಕೊಂಡಿದ್ದು ಅವನಿಗೆ ನುಂಗಲಾರದ ತುತ್ತಾಗಿತ್ತು. ಅಲ್ಲದೆ ಕಾಫರರ ವಿರುದ್ಧದ ಕಾಳಗ ಇನ್ನೂ ಕೊನೆಗೊಂಡಿರಲಿಲ್ಲ. ಇದೀಗ ಬೆಂಗಳೂರಿನಲ್ಲಿ, ಅಶೋಕಾ ಹೊಟೆಲ್ಲಿನಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮವಿರುವದನ್ನು ತಿಳಿದ ಭರತಖಾನ ಮತ್ತೆ ಬೆಂಗಳೂರಿಗೆ ಭೆಟ್ಟಿ ಕೊಡಲು ನಿರ್ಧರಿಸಿದ. ಇದರಲ್ಲಿ ಅವನಿಗೆ ಎರಡು ಉದ್ದೇಶಗಳಿದ್ದವುಃ ಮೊದಲನೆಯದು ಪ್ರಧಾನ ಮಂತ್ರಿಗಳ ಕಾರ್ಯಕ್ರಮದಲ್ಲಿಯ ರಕ್ಷಣಾ ವ್ಯವಸ್ಥೆಯಲ್ಲಿಯ ಬಿರುಕುಗಳ ಅಭ್ಯಾಸ ಮಾಡುವದು.ಎರಡನೆಯದಾಗಿ, ಸಾಧ್ಯವಾದರೆ ತನಗೆ ಕೈಕೊಟ್ಟ ಪಾರಿವಾಳಕ್ಕೆ ಮತ್ತೆ ಬಲೆ ಬೀಸುವದು.
**********************************
‘ಪ್ರೆಸ್ ‘ ಎನ್ನುವ ಸ್ಟಿಕರ್ ಅಂಟಿಸಿಕೊಂಡಿದ್ದ ಮಹೇಂದ್ರಾ ವ್ಯಾನ್ ದಿಂದ
ನೆಹರೂ ಜುಬ್ಬಾ, ಪಾಯಜಾಮ ಧರಿಸಿದ ಭರತಖಾನ ತನ್ನ ಕರಿಯ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತ ಕೆಳಗಿಳಿದ. ಅಶೋಕಾ ಹೊಟೆಲ್ಲಿನ ರಕ್ಷಣಾ ಕೋಟೆ ಅಭೇದ್ಯವಾಗಿತ್ತು. ತನ್ನ ಬಗಲ ಚೀಲದಲ್ಲಿ ಇಟ್ಟುಕೊಂಡಿದ್ದ ಪ್ರೆಸ ಕ್ರೆಡೆನ್ಶಿಯಲ್ ಗಳನ್ನು ಹೊರ ಬಾಗಿಲ ಕಾವಲುಗಾರನಿಗೆ ತೋರಿಸುತ್ತಿರುವಾಗ, ಅವನಿಗೆ ಪೆಚ್ಚು ಮುಖ ಹಾಕಿಕೊಂಡು ಅಲ್ಲಿಯೇ ನಿಂತಿದ್ದ ಪ್ರವಲ್ಲಿಕಾ ಕಾಣಿಸಿದಳು. ಭರತಖಾನನನ್ನು ಈ ವೇಷದಲ್ಲಿ ಗುರುತಿಸಲು ಮಫ್ತಿಯಲ್ಲಿದ್ದ ಏ.ಸಿ.ಪಿ.ಗೇ ಸಾಧ್ಯವಾಗದಾಗ, ಮುಗ್ಧ ಪ್ರವಲ್ಲಿಕಾಳಿಗೆ ಸಾಧ್ಯವೇ? ಭರತಖಾನ ಪ್ರವಲ್ಲಿಕಾಳ ಬಳಿ ಸಾರಿ “ಹಲೊ!” ಎಂದ. ಪ್ರವಲ್ಲಿಕಾ ಈತನೇ ತನ್ನ contact ಇರಬೇಕೆಂದು ಬಗೆದು, ”ನಿಮಗೆ ಬೇಕಾದ ಮಾಹಿತಿಯನ್ನೆಲ್ಲ ತಂದಿದ್ದೇನೆ. ನನ್ನ ಅಕ್ಕನನ್ನು ಬಿಟ್ಟು ಬಿಡಿ”, ಎಂದು ತೊದಲಿದಳು. ಭರತಖಾನನ ಪಾದರಸದಂತಹ ಬುದ್ಧಿಗೆ ತಕ್ಷಣವೇ ಇದೊಂದು ‘ಕಿಡ್ ನ್ಯಾಪ್-ಬ್ಲ್ಯಾಕ್ ಮೇಲ್’ ಪ್ರಸಂಗವೆಂದು ಹೊಳೆಯಿತು.
“ಆಯಿತು, ನನ್ನ ಜೊತೆಗೆ ಬಾ”, ಎಂದು ಅವಳನ್ನು ಕರೆದುಕೊಂಡೊಯ್ದು ತನ್ನ ವ್ಯಾನಿನಲ್ಲಿ ಹತ್ತಿಸಿದ. ಮಹೇಂದ್ರಾ ಶರವೇಗದಿಂದ ಭರತಖಾನನ ಗುಪ್ತಸ್ಥಾನಕ್ಕೆ ಓಡಿತು.
ಅಂದೇ ರಾತ್ರಿ ಭರತಖಾನ ದುಬೈಗೆ ಪ್ಲೇನಿನಲ್ಲಿ ಹಾರಿದ. ಜೊತೆಗೆ ಬುರ್ಖಾ ಧಾರಿಣಿಯಾದ ಅವನ ಹೆಂಡತಿ. ದುಬೈ ತಲುಪಿದ ಬಳಿಕ, ಭರತಖಾನ ಧಾರಿಣಿಯ ಮೊಬೈಲಿಗೆ ಪ್ರವಲ್ಲಿಕಾಳ ಕಡೆಯಿಂದ ಫೋನು ಮಾಡಿಸಿ, ಅದರಲ್ಲಿ ನಮೂದಾದ ಟಿಮ್ ನ ಮೊಬೈಲ ನಂಬರ ಇಸಿದುಕೊಂಡ.
*****************************
ಟಿಮ್ ನ ಮೊಬೈಲ್ ಗುಣಗುಣಿಸಿತು.
“ಹಲೊ ಟಿಮ್, ನಿನಗೆ ಬೇಕಾದ ಮಾಹಿತಿ ನನ್ನ ಹತ್ತಿರ ಇದೆ”, ಎನ್ನುವ ಧ್ವನಿ.
“ಯಾರು ನೀನು?”
“ಅದೆಲ್ಲ ಬೇಡ, ಒಂದು ಬಿಲಿಯನ್ ಡಾಲರ್ ಕೊಡಲು ಸಿದ್ಧವಿದ್ದರೆ ಇದೇ ನಂಬರಿಗೆ ಉತ್ತರ ನೀಡು. ನೆನಪಿರಲಿ, ನಾನು ನಿನ್ನ ಹೊಲಸು ಅಮೇರಿಕಾ ದೇಶದಲ್ಲಿಲ್ಲ. ನನ್ನನ್ನು ಹಿಡಿಯಲು ನಿನ್ನ ಹೊಲಸು ಪ್ರೆಸಿಡೆಂಟನಿಗೂ ಸಾಧ್ಯವಿಲ್ಲ”, ಫೋನ್ ಬಂದಾಯಿತು.