ಧಾರಿಣಿಯ ಸುರಕ್ಷತ ವಾಪಸಾತಿಗಾಗಿ ಶಾಸ್ತ್ರಿಗಳು ಇಟ್ಟುಕೊಂಡಿದ್ದ ಪೂಜೆಗೆ ಕೇಶವ ದಂಪತಿಗಳೂ ಪ್ರವಲ್ಲಿಕಾಳೂ ಹಳ್ಳಿಗೆ ಬಂದಿದ್ದರು.ಅಂದು ಬಂದ ಕಾಗದಗಳನ್ನು ಪೋಸ್ಟ್ ಮ್ಯಾನ್ ನಿಂದ ತೆಗೆದು ಕೊಂಡ ಪ್ರವಲ್ಲಿಕಾ ಎಲ್ಲವನ್ನೂ ಒಡೆದು ನೋಡುತ್ತಿದ್ದಳು. ತಾವು ಪೋಸ್ಟ್ ಮಾಡಿದ ಕಾಂತಿಯ ಜಾತಕವೂ ಅದರಲ್ಲಿತ್ತು ನೋಡು ನಮ್ ಪೋಸ್ಟಲ್ ಸಿಸ್ಟಮ್ಮು ನಾವು ಬಂದ ಮೇಲೆ ಇದು ಬಂದಿದೆ ಅಂತ ಹೇಳುತ್ತಾ ಅದನ್ನು ಒಡೆದವಳು ಬೆಚ್ಚಿದಳು ಅಲ್ಲಿ ಕಾಂತಿಯ ಜಾತಕದ ಬದಲಿಗೆ ಧಾರಿಣಿ ಅವಳಿಗೆ ಕೊಟ್ಟ. ಪತ್ರವಾಗಿತ್ತು! ಆಕಾಶನ ಮೊಗ ನೋಡುತ್ತಾ ಕೆಂಪು ಕೆಂಪಾಗುತ್ತಾ ಕಾಂತಿ ಪತ್ರಗಳನ್ನು ಅದಲು ಬದಲು ಮಾಡಿ ತಪ್ಪು ಮಾಡಿಬಿಟ್ಟಿದ್ದಳು! ಕೇಶವ ಅವತ್ತೇ ಸಂಜೆ ವಾಪಸ್ಸು ಹೊರಟವರು `ನಮ್ಮದೇ ಬೀದಿಯಲ್ಲಿರುವ ನನ್ನಸ್ನೇಹಿತರ ಮಗ ಇವತ್ತು ರಾತ್ರಿಯೇ ಅಮೇರಿಕಾಗೆ ಹೊರಡುತ್ತಿದ್ದಾನೆ ಅವನಿಗೆ ಈ ಕಾಗದವನ್ನು ತೊಗೊಂಡು ಹೋಗಿ ಅಲ್ಲೇ ಪೋಸ್ಟ್ ಮಾಡು ಎಂದು ಹೇಳುತ್ತೇನೆ ಅಂತ ಪ್ರವಲ್ಲಿಕಾಳಿಂದ ಅ ಪತ್ರವನ್ನು ಹುಶಾರಾಗಿ ತೆಗೆದುಕೊಂಡು ಅದರಂತೆ ಆರಾತ್ರಿಯೇ ಅದು ಅಮೇರಿಕ ಸೇರುವಂತೆ ಏರ್ಪಾಡು ಮಾಡಿಬಿಟ್ಟರು.
********************
ಗಿರಿಯ ಕೈಯಿಂದ ತೆಗೆದುಕೊಂಡಲಕ್ಕೋಟೆ ಒಡೆದ ಟಿಮ್ ನಿಗೆ ಅದರಲ್ಲಿದ್ದ ಮೋಡಿ ಬರಹ ಓದಲಾಗಲಿಲ್ಲ ಗಿರಿಗೇ ವಾಪಸ್ಸು ಕೊಟ್ಟು ಅದೇನೆಂದು ಓದುವಂತೆ ಹೇಳಿದ `ಆದಿತ್ಯಾದಿ ಗೃಹಾಸ್ಸರ್ವೇ….ಪದವೀ ಪೂರ್ವ ಪುಣ್ಯಾನಾಂ ಲಿಖ್ಯತೇ ಜನ್ಮ ಪತ್ರಿಕಾ….ರಾಜಾರಾವ್ ಅವರ ಧರ್ಮಪತ್ನಿ ವಿಜಯಮ್ಮನವರ ಗರ್ಭಸುಧಾಂಭುದಿಯಲ್ಲಿ…..ಕನ್ಯಾರತ್ನ ಜನನ…’ಗಿರಿ ತೊದಲುತ್ತಾ ನಡುಗುತ್ತಾ ಓದಿದಾಗ ಟಿಮ್ ಕಕ್ಕಾಬಿಕ್ಕಿಯಾದ ಶಶ್ ಕಷ್ಟ ಪಟ್ಟು ಉಸಿರು ಹಿಡಿದುಕೊಂಡ. ಧಾರಿಣಿ ನಿಂತ ಜಾಗದಲ್ಲೇ ಕಲ್ಲಾಗಿದ್ದಳು.
***

ದುಬೈಗೆ ಹಾರಿದ ಭರತಖಾನ ಕುದಿಯುತ್ತಲಿದ್ದ. ಒಬ್ಬ ಯಃಕಶ್ಚಿತ ಹುಡುಗಿ ತನ್ನ ಬಲೆಯಿಂದ ತಪ್ಪಿಸಿಕೊಂಡಿದ್ದು ಅವನಿಗೆ ನುಂಗಲಾರದ ತುತ್ತಾಗಿತ್ತು. ಅಲ್ಲದೆ ಕಾಫರರ ವಿರುದ್ಧದ ಕಾಳಗ ಇನ್ನೂ ಕೊನೆಗೊಂಡಿರಲಿಲ್ಲ. ಇದೀಗ ಬೆಂಗಳೂರಿನಲ್ಲಿ, ಅಶೋಕಾ ಹೊಟೆಲ್ಲಿನಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮವಿರುವದನ್ನು ತಿಳಿದ ಭರತಖಾನ ಮತ್ತೆ ಬೆಂಗಳೂರಿಗೆ ಭೆಟ್ಟಿ ಕೊಡಲು ನಿರ್ಧರಿಸಿದ. ಇದರಲ್ಲಿ ಅವನಿಗೆ ಎರಡು ಉದ್ದೇಶಗಳಿದ್ದವುಃ ಮೊದಲನೆಯದು ಪ್ರಧಾನ ಮಂತ್ರಿಗಳ ಕಾರ್ಯಕ್ರಮದಲ್ಲಿಯ ರಕ್ಷಣಾ ವ್ಯವಸ್ಥೆಯಲ್ಲಿಯ ಬಿರುಕುಗಳ ಅಭ್ಯಾಸ ಮಾಡುವದು.ಎರಡನೆಯದಾಗಿ, ಸಾಧ್ಯವಾದರೆ ತನಗೆ ಕೈಕೊಟ್ಟ ಪಾರಿವಾಳಕ್ಕೆ ಮತ್ತೆ ಬಲೆ ಬೀಸುವದು.

**********
‘ಪ್ರೆಸ್ ‘ ಎನ್ನುವ ಸ್ಟಿಕರ್ ಅಂಟಿಸಿಕೊಂಡಿದ್ದ ಮಹೇಂದ್ರಾ ವ್ಯಾನ್ ದಿಂದ ನೆಹರೂ ಜುಬ್ಬಾ, ಪಾಯಜಾಮ ಧರಿಸಿದ ಭರತಖಾನ ತನ್ನ ಕರಿಯ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತ ಕೆಳಗಿಳಿದ. ಅಶೋಕಾ ಹೊಟೆಲ್ಲಿನ ರಕ್ಷಣಾ ಕೋಟೆ ಅಭೇದ್ಯವಾಗಿತ್ತು. ತನ್ನ ಬಗಲ ಚೀಲದಲ್ಲಿ ಇಟ್ಟುಕೊಂಡಿದ್ದ ಪ್ರೆಸ ಕ್ರೆಡೆನ್ಶಿಯಲ್ ಗಳನ್ನು ಹೊರ ಬಾಗಿಲ ಕಾವಲುಗಾರನಿಗೆ ತೋರಿಸುತ್ತಿರುವಾಗ, ಅವನಿಗೆ ಪೆಚ್ಚು ಮುಖ ಹಾಕಿಕೊಂಡು ಅಲ್ಲಿಯೇ ನಿಂತಿದ್ದ ಪ್ರವಲ್ಲಿಕಾ ಕಾಣಿಸಿದಳು. ಭರತಖಾನನನ್ನು ಈ ವೇಷದಲ್ಲಿ ಗುರುತಿಸಲು ಮಫ್ತಿಯಲ್ಲಿದ್ದ ಏ.ಸಿ.ಪಿ.ಗೇ ಸಾಧ್ಯವಾಗದಾಗ, ಮುಗ್ಧ ಪ್ರವಲ್ಲಿಕಾಳಿಗೆ ಸಾಧ್ಯವೇ? ಭರತಖಾನ ಪ್ರವಲ್ಲಿಕಾಳ ಬಳಿ ಸಾರಿ “ಹಲೊ!” ಎಂದ. ಪ್ರವಲ್ಲಿಕಾ ಈತನೇ ತನ್ನ contact ಇರಬೇಕೆಂದು ಬಗೆದು, ”ನಿಮಗೆ ಬೇಕಾದ ಮಾಹಿತಿಯನ್ನೆಲ್ಲ ತಂದಿದ್ದೇನೆ. ನನ್ನ ಅಕ್ಕನನ್ನು ಬಿಟ್ಟು ಬಿಡಿ”, ಎಂದು ತೊದಲಿದಳು. ಭರತಖಾನನ ಪಾದರಸದಂತಹ ಬುದ್ಧಿಗೆ ತಕ್ಷಣವೇ ಇದೊಂದು ‘ಕಿಡ್ ನ್ಯಾಪ್-ಬ್ಲ್ಯಾಕ್ ಮೇಲ್’ ಪ್ರಸಂಗವೆಂದು ಹೊಳೆಯಿತು.
“ಆಯಿತು, ನನ್ನ ಜೊತೆಗೆ ಬಾ”, ಎಂದು ಅವಳನ್ನು ಕರೆದುಕೊಂಡೊಯ್ದು ತನ್ನ ವ್ಯಾನಿನಲ್ಲಿ ಹತ್ತಿಸಿದ. ಮಹೇಂದ್ರಾ ಶರವೇಗದಿಂದ ಭರತಖಾನನ ಗುಪ್ತಸ್ಥಾನಕ್ಕೆ ಓಡಿತು.

ಅಂದೇ ರಾತ್ರಿ ಭರತಖಾನ ದುಬೈಗೆ ಪ್ಲೇನಿನಲ್ಲಿ ಹಾರಿದ. ಜೊತೆಗೆ ಬುರ್ಖಾಧಾರಿಣಿಯಾದ ಅವನ ಹೆಂಡತಿ. ದುಬೈ ತಲುಪಿದ ಬಳಿಕ, ಭರತಖಾನ ಧಾರಿಣಿಯ ಮೊಬೈಲಿಗೆ ಪ್ರವಲ್ಲಿಕಾಳ ಕಡೆಯಿಂದ ಫೋನು ಮಾಡಿಸಿ, ಅದರಲ್ಲಿ ನಮೂದಾದ ಟಿಮ್ ನ ಮೊಬೈಲ ನಂಬರ ಇಸಿದುಕೊಂಡ.
*************
ಟಿಮ್ ನ ಮೊಬೈಲ್ ಗುಣಗುಣಿಸಿತು.
“ಹಲೊ ಟಿಮ್, ನಿನಗೆ ಬೇಕಾದ ಮಾಹಿತಿ ನನ್ನ ಹತ್ತಿರ ಇದೆ”, ಎನ್ನುವ ಧ್ವನಿ.
“ಯಾರು ನೀನು?”
“ಅದೆಲ್ಲ ಬೇಡ, ಒಂದು ಬಿಲಿಯನ್ ಡಾಲರ್ ಕೊಡಲು ಸಿದ್ಧವಿದ್ದರೆ ಇದೇ ನಂಬರಿಗೆ ಉತ್ತರ ನೀಡು. ನೆನಪಿರಲಿ, ನಾನು ನಿನ್ನ ಹೊಲಸು ಅಮೇರಿಕಾ ದೇಶದಲ್ಲಿಲ್ಲ. ನನ್ನನ್ನು ಹಿಡಿಯಲು ನಿನ್ನ ಹೊಲಸು ಪ್ರೆಸಿಡೆಂಟನಿಗೂ ಸಾಧ್ಯವಿಲ್ಲ”, ಫೋನ್ ಬಂದಾಯಿತು.

3 thoughts on “ಭಾಗ – 12”

 1. ಭರತಖಾನ ಈಗ ಪ್ರವಲ್ಲಿಕಾಳ ಕಡೆಗೆ ತಿರುಗಿದ. ನೋಡಿದಷ್ಟೂ ನೋಡಬೇಕೆನಿಸುವ ಚೆಲುವಿನ ಮುಖ. ಆದರೆ ಈಗ ಅವನಿಗೆ ಸಮಯವಿಲ್ಲ.
  “ವಲ್ಲೀ, ನಾನು ಬರುವದು ರಾತ್ರಿಯಾಗುತ್ತದೆ. ಬಾತ್ ರೂಮ್ ಉಪಯೋಗಿಸ್ಕೊ. ಕಿಚನ್ ನಲ್ಲಿ ಬೇಕಾದ್ದನ್ನು ಮಾಡಿಕೊಂಡು ತಿನ್ನು. ಆರಾಮಾಗಿ ಟೈಮ್ ಕಳೆ. ಇಂದೇ ನಿನ್ನ ಸುಹಾಗ್ ರಾತ್. …..ತಿಳಿಯಿತೆ? ನಿನಗೆ ಎರಡು options. ಒಂದು ನನ್ನೊಡನೆ ನಿಕಾಹ್ ಮಾಡಿಕೊಂಡು ಸುಖವಾಗಿರು. ಇಲ್ಲಾ……..ಗೊತ್ತಾಯಿತಲ್ಲ?”, ಎಂದು ಅಟ್ಟಹಾಸದಿಂದ ನಕ್ಕ.

  “ಇಲ್ನೋಡು, ನಾನು ಹೊರಗಿನಿಂದ lock ಮಾಡಿಕೊಂಡು ಹೋಗುತ್ತಿದ್ದೇನೆ.
  ಬೆಂಗಳೂರಿನಲ್ಲಿ ನನ್ನಿಂದ ತಪ್ಪಿಸಿಕೊಂಡು ಹೋದೆಯೆಲ್ಲ, ಅದು ಇಲ್ಲಿ ಸಾಧ್ಯವಿಲ್ಲ.”, ಎಂದು ಮತ್ತೊಮ್ಮೆ ನಕ್ಕ.

  “ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ,
  ಈಗ ಟಾಟಾ, ರಾತ್ರಿ ಆಟಾ, ಆಡು ಬಾ ನಲ್ಲೆ!”,
  ಎಂದು ಹಾಡುತ್ತ, ಕೀಲಿಕೈ ತಿರುಗಿಸುತ್ತ, ಭರತಖಾನ ಬಾಗಿಲೆಳೆದುಕೊಂಡು ಹೊರ ನಡೆದ.
  ………………………………………………….
  ಪ್ರವಲ್ಲಿಕಾ ಹೆದರುಪುಕ್ಕಿ ನಿಜ, ಆದರೆ ತೀಕ್ಷ್ಣ ಬುದ್ಧಿಯವಳು.ಮನದಲ್ಲಿಯೆ ಯೋಜನೆಯೊಂದನ್ನು ರೂಪಿಸಿಕೊಂಡಳು. ಮೊದಲು ಸ್ನಾನ ಮಾಡಿ ಕಿಚನ್ ಹೊಕ್ಕಳು. ಶಾಕಾಹಾರಿಯಾದ ತನಗೆ ತಿನ್ನಲು ಅಲ್ಲಿ ಬ್ರೆಡ್ ಹಾಗು ಬೆಣ್ಣೆ ಬಿಟ್ಟರೆ ಮತ್ತೇನೂ ಇರಲಿಲ್ಲ. ಅದನ್ನೆ ಅಷ್ಟು ತಿಂದು, ಆ ಮನೆಯ ಶೋಧನೆಯನ್ನು ನಡೆಸಿದಳು. ಅವಳ ಆಶ್ಚರ್ಯಕ್ಕೆ ಭರತಖಾನನ ಕಂಪ್ಯೂಟರ್ ರೂಮಿನಲ್ಲಿ ಕನ್ನಡದಲ್ಲಿ ಬರೆದ ಒಂದು ಫೈಲ್ ಸಿಕಿತು. ಅದರಲ್ಲಿ ಉಗ್ರವಾದಿಗಳು ಇಂಡಿಯಾದಲ್ಲಿ ನಡೆಯಿಸಬೇಕಾದ ಕೆಲವು ಯೋಜನೆಗಳ ರೂಪುರೇಷೆಗಳು. ಇವನ್ನು ಭರತಖಾನ ಕನ್ನಡದಲ್ಲೇಕೇ ಬರೆದಿದ್ದಾನೆ? ಸ್ವಲ್ಪ ಯೋಚನೆಯ ನಂತರ ಅವಳಿಗೆ ಉತ್ತರ ಹೊಳೆಯಿತು.
  ಉಗ್ರವಾದಿಗಳನ್ನು ಬೇಟೆಯಾಡುತ್ತಿರುವ ಅಮೇರಿಕನ್ ಗುಪ್ತಚರ ಇಲಾಖೆಗೆ ಅರೇಬಿಯನ್ ಬರುತ್ತಿರಬಹುದು, ಆದರೆ ಕನ್ನಡ ಬರುವದಿಲ್ಲ!
  ಪ್ರವಲ್ಲಿಕಾ ಕಂಪ್ಯೂಟರ್ ಓಪನ್ ಮಾಡಿದಳು; ಇಂಟರನೆಟ್ ಚಾಲೂ ಮಾಡಿದಳು. ಆ ಫೈಲ್ ನ್ನು ಸ್ಕ್ಯಾನ್ ಮಾಡಿ ಧಾರಿಣಿಯ ಏ-ಮೇಲಿಗೆ ಕಳುಹಿಸಿದಳು. ಅದರ ಜೊತೆಗೆ ಒಂದು ಸಂದೇಶಃ “ನಾನು ಸುರಕ್ಷಿತವಾಗಿದ್ದೇನೆ. ಹೆದರಬೇಡಿ.”
  …………………………………………………….
  ಭರತಖಾನ ರಾತ್ರಿ ಮರಳಿದಾಗ ಅವನಿಗೆ ಆಶ್ಚರ್ಯ ಕಾದಿತ್ತು. ಅವನ ಮಂಚದ ಮೇಲೆ ಬುರ್ಖಾ ಧರಿಸಿದ ಪ್ರವಲ್ಲಿಕಾ!
  “ವಲ್ಲೀ!”, ಭರತಖಾನ ಸಂತೋಷದಿಂದ ಉಸುರಿದ.
  “ನಾನು ನಿಮ್ಮವಳು; ಆದರೆ ದಯವಿಟ್ಟು ನನ್ನನ್ನು ಧರ್ಮಾಂತರಿಸಬೇಡಿ”, ಪ್ರವಲ್ಲಿಕಾ ಖಾನನಿಗೆ ವಿನಂತಿಸಿದಳು.
  “ಅದು ಮುಂದಿನ ಮಾತು. ಈಗಂತೂ,
  ‘ಅನಿಸುತಿದೆ ಯಾಕೋ ಇಂದು, ನೀನೇ ನನ್ನವಳೆಂದು!”,
  ಎನ್ನುತ್ತ ಭರತಖಾನ ಪ್ರವಲ್ಲಿಕಾಳನ್ನು ಎಳೆದುಕೊಂಡ.
  ಪರಮಾನ್ನ ನಾಯಿಯ ಪಾಲಾಯಿತು.

 2. ಹೊರಕೋಣೆಯ ಸೋಫಾದ ಮೇಲೆ ಪಿಳಿ ಪಿಳಿ ಕಣ್ಣು ಬಿಡುತ್ತಾ ಛಾವಣಿ ನೋಡುತ್ತಿದ್ದ ಪ್ರವಲ್ಲಿಕಾ ತಾನು ಮಾಡಿದ್ದೆಷ್ಟು ಸರಿ ಎಂದು ಚಿಂತಿಸತೊಡಗಿದಳು. ಧಾರಿಣಿಗೆ ಸಂದೇಶ ಕಳಿಸುವಾಗ ಆನ್’ಲೈನ್ ಸಿಕ್ಕಿದ್ದ ತನ್ನ ಗೆಳತಿ ಕಾಂತಿಯೊಂದಿಗೆ ಸೇರಿ ಷಡ್ಯಂತ್ರ ರಚಿಸಿದ್ದಳು. ಖಾನ್ ರಾತ್ರಿ ಮನೆ ಸೇರಿದಾಗ ನಶೆ ಏರಿಸಿಕೊಂಡೇ ಬಂದಿದ್ದ. ಏನೋ ಸಾಧಿಸಿದ ಖುಷಿಯಲ್ಲಿದ್ದ. ಅವನ ತಾಳಕ್ಕೆ ಹೆಜ್ಜೆ ಹಾಕುತ್ತಾ ಅವನನ್ನು ಮತ್ತಷ್ಟು ಮತ್ತನನ್ನಾಗಿಸಿದ್ದಳು. ಅವನ ಹಾಲಿಗೆ ಮನೆಯಲ್ಲಿದ್ದ ಸ್ಕಾಚ್ ಸೇರಿಸಿ ಕುಡಿಸಿದ್ದಳು. ಆತ, ಓಲಾಡುತ್ತಾ ದೀಪವಾರಿಸಿ ಇವಳನ್ನು ಸೆಳೆದುಕೊಂಡು ಮಲಗಿದಾಗ ಅತೀವ ಭಯ ಪಟ್ಟಿದ್ದಳು. ತನ್ನ ಪ್ರಾಣ ಇಲ್ಲೇ ಹೊರಟು ಹೋಗಲಿ, ಪುಂಡನ ಕೈಗೆ ಸಿಕ್ಕಿದೆನಲ್ಲಾ ಎಂದು ಪರಿತಪಿಸಿದ್ದಳು. ಮತ್ತೆ ಮತ್ತೆ ದೇವರನ್ನು ಬೇಡಿಕೊಂಡಿದ್ದಳು.

  ದಿಂಬಿಗೆ ತಲೆಯಿರಿಸಿದ ಖಾನ್ ನಿಮಿಷದೊಳಗೆ ನಿದ್ದೆಗೆ ಜಾರಿದ್ದ. ಅವನ ಪರ್ಸಿನ ಜೊತೆಗೆ ಮನೆಯ ಕೀ ಮತ್ತು ಒಂದಿಷ್ಟು ಹಣ ಕೈಗೆ ಸಿಕ್ಕಿತ್ತು. ಕೋಣೆಯನ್ನು ಜಾಲಾಡಿದರೂ ತನ್ನ ಪಾಸ್’ಪೋರ್ಟ್ ಸಿಗಲಿಲ್ಲ. ಈಗೇನು ಮಾಡುವುದೋ ತೋಚದೆ ಮನೆಯಿಂದ ಹೊರಗೆ ಹೋಗುವ ನಿರ್ಧಾರ ಮಾಡಿದಳು. ಮನೆಯ ಕೀ ಜೊತೆಗೆ ಕಾರಿನ ಕೀ ಕೂಡಾ ಇತ್ತು. ತನಗೆ ಡ್ರೈವಿಂಗ್ ಬರುತ್ತೆ, ಆದರೆ, ಪರದೇಶದಲ್ಲಿ, ಪರವಾನಗಿ ಇಲ್ಲದೆ…? ಚಿಂತಿಸುತ್ತಾ ಮನೆಯ ಮುಂದೆ ನಿಂತಿದ್ದ ಕಾರಿನ ಬಾಗಿಲು ತೆರೆದಳು. ಒಳಗೆ ಕೂತು ಒಮ್ಮೆ ಸುತ್ತ ನಿರುಕಿಸಿದಳು, ಸೊಗಸಾದ ಬೆಂಝ್ ಕಾರು. ಗ್ಲೋವ್ ಕಂಪಾರ್ಟ್’ಮೆಂಟಿನಲ್ಲಿ ಇಣುಕಿದಳು. ಒಂದು ಹೊರೆ ಕಾಗದ ಪತ್ರಗಳು… ಅಯಾಚಿತವಾಗಿ ಹೊರಗೆಳೆದಳು, ತನಗೇನಾದರೂ ಪುರಾವೆ ದೊರಕಬಹುದು ಎಂಬ ಆಸೆ, ಯಾವುದೇ ಸುಳಿವು ಸಿಗಬಹುದೆಂಬ ನಿರೀಕ್ಷೆ, ಅವಳಲ್ಲಿತ್ತು. ಎರಡು ನಿಮಿಷಗಳಲ್ಲಿ ಕಿರುನಗೆ ತೇಲಿಸಿಕೊಳ್ಳುತ್ತಾ ಕಾರನ್ನು ಚಲಾಯಿಸಿದಳು. ಅರ್ಧ ಘಂಟೆಯ ಬಳಿಕ ಭಾರತೀಯ ದೂತಾವಾಸದ ಅತಿಥಿಗೃಹದಿಂದ ಮುಂಬಯಿಗೆ, ಕಾಂತಿಯ ಅಪ್ಪನಿಗೆ ಫೋನ್ ಮಾಡಿ, ಕೇಶವನ ಮನೆಯವರಿಗೆ ತನ್ನ ಕ್ಷೇಮದ ಸುದ್ದಿ ತಿಳಿಸಲು ಹೇಳಿದಳು.

  ಪ್ರವಲ್ಲಿಕಾ ಕಾಂತಿಯ ಅಪ್ಪನಿಗೆ ತಿಳಿಸಿದ ಇನ್ನೂ ಒಂದು ವಿಷಯದಿಂದ ಮರುದಿನ ಬೆಂಗಳೂರಿನ ಆರಕ್ಷಕ ಠಾಣೆಯಲ್ಲಿ ಗಡಿಬಿಡಿ, ಗೊಂದಲ ಉಂಟಾಗುವ ಬಗ್ಗೆ ಯಾರಿಗೂ ಯಾವ ಸುಳಿವೂ ಇರಲಿಲ್ಲ.

 3. ಇರುವೆ ಕಷ್ಟ ಪಟ್ಟು ಕಟ್ಟಿದ ಹುತ್ತದಲ್ಲಿ ಹಾವು ವಾಸ ಮಾಡುತ್ತೆ.ಆಕಾಶ ತನ್ನೆಲ್ಲಾ ಬುದ್ದಿಶಕ್ತಿ ಉಪಯೋಗಿಸಿ
  ಅಸಲಿಯಂತೆಯೇ ಇರುವ ನಕಲಿ ವಿವರಗಳನ್ನೊಳಗೊಂಡ ಪೇಟೆಂಟ್ ಡಾಕ್ಯುಮೆಂಟ್ ತಯಾರು ಮಾಡಿದ್ದ
  ಟಿಮ್ ನನ್ನು ಸದ್ಯಕ್ಕೆ ಏಮಾರಿಸಿ ಬಾ ಎಂದು ಪ್ರವಲ್ಲಿಕಾ ಅಶೋಕಾ ಗೆ ಹೊರಡುವಾಗ ನೀಡಿದ್ದ. ಇದರಿಂದ ಲಾಭವಾಗಿದ್ದು ಮಾತ್ರ ಭರತ ಖಾನನಿಗೆ!
  ಪ್ರವಲ್ಲಿಕಾ ಎಂಬ ಬಿಳಿಯ ಪಾರಿವಾಳ ತಪ್ಪಿಸಿಕೊಂಡು ಹೋಯಿತೆಂಬುದೇನೋ ನಿಜ ಆದರೆ ಓಂದು ಬಿಲಿಯನ್ ಡಾಲರ್ ಲಾಭ ಮಾಡಿ ಕೊಟ್ಟು ಹೋಯಿತಲ್ಲ ಎಂದು ಸಂತೋಶದಿಂದ ಬೀಗಿದ ಭರತ ಖಾನ
  ಅದು ನಡೇದದ್ದು ಹೀಗೆ…
  ಟಿಮ್ ತನ್ನ ಬಾಸ್ ಜೋಯಿಯನ್ನು ಸಂಪರ್ಕಿಸಿ ಖಾನನ ಬೇಡಿಕೆ ಯನ್ನು ತಿಳೀಸಿದ ಆದರೆ ಇಂಥಾ ಬಿಲಿಯನ್ ಡಾಲರ್ ವಿಶಯದಲ್ಲಿ ಜೋಯಿ ಏಕಾಏಕಿ ನಿರ್ಧಾರ ಕೈಗೊಳ್ಳುವಂತಿರಲಿಲ್ಲ…ಸಹಜವಾಗಿಯೇ ಒಂದಿಷ್ಟು ವಿಳಂಬ ವಾಯಿತು …ಸಹನೆ

  ಕಳೆದು ಕೊಂಡ ಖಾನ ಆ ದೈತ್ಯ ಕಂಪನಿಯ ಎದುರಾಳಿ ಮೂರನೆಯ ಕಂಪನಿ ವೀಎಕ್ಸ್ ಗೆ ಒಂದು ಬಿಲಿಯನ್ ಡಾಲರ್ ಗೆ ಆಕಾಶ ಬರೆದ ಪೇಟೆಂಟ್ ಅನ್ನು ಮಾರಿಬಿಟ್ಟ.ಆಕಾಶನದು ಅಗಾಧ ಬುದ್ದಿ ಆದರೆ ಏನು ಪ್ರಯೋಜನ…?ದುಡ್ದು ಮಾಡಿದವ

  ಖಾನ…

  ವೀಎಕ್ಸ್ ನ ಪ್ರಮುಖರಿಗೆ ಖಾನ ಮಾಡಿದ ಮೋಸ ಇವತ್ತಲ್ಲ ನಾಳೆ ತಿಳಿದೇ ತಿಳಿಯುತ್ತದೆ ಮತ್ತು ಮಿಡ್ಲ್ ಈಸ್ಟ್ ನ ಲ್ಲಿ ವೀಎಕ್ಸ್ ನ ಬೇರುಗಳು ಆಳವಾಗಿವೆ
  ನಂತರ ಖಾನ ನ ಗತಿ ಏನಾಗಬಹುದು..??

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.