ಶಾರದಮ್ಮ, ಶಾಸ್ತ್ರಿಗಳಿಗೆ ದಿಕ್ಕೇ ತೋಚದಂತಾಗಿತ್ತು. ಮಕ್ಕಳಾದ ಪ್ರವಲ್ಲಿಕಾ, ಧಾರಿಣಿಯರಿಬ್ಬರೂ ಕಣ್ಮರೆಯಾಗಿಹೋಗಿದ್ದು ಅವರನ್ನು ದಿಗ್ಭಾಂತರನ್ನಾಗಿಸಿತ್ತು. ಆಕಾಶ ಮತ್ತು ಅಮೆರಿಕಾದಿಂದ ಬಂದಿದ್ದ ರಾಜೀವ ಅವರನ್ನು ಸಂತೈಸುವಲ್ಲಿ ವಿಫಲರಾಗಿದ್ದರು. ಧಾರಿಣಿ, ಪ್ರವಲ್ಲಿಕಾರ ಬಗ್ಗೆ ಅವರಿಗೂ ಸರಿಯಾದ ಮಾಹಿತಿ ತಿಳಿದಿರಲಿಲ್ಲ. ಪ್ರವಲ್ಲಿಕಾಳಿಂದ ’ತಾನು ಕ್ಷೇಮವಾಗಿದ್ದೇನೆ’ ಎಂಬ ಸಂದೇಶ ಬಂದಿದ್ದರೂ ಅವಳು ದುಬೈಗೆ ಹೋಗಿದ್ದೇಕೆ? ಅವಳನ್ನು ಅಲ್ಲಿಗೆ ಕರೆದೊಯ್ದವರಾರು ಎಂಬ ಶಾರದಮ್ಮನ ಪ್ರಶ್ನೆಗೆ ಯಾರೂ ಉತ್ತರಿಸುವಂತಿರಲಿಲ್ಲ. ಯಾವ ಗಳಿಗೆಯಲ್ಲಿ ಯಾರಿಂದಲಾದರೂ, ಏನಾದರೂ ವಿಷಯ ತಿಳಿದೀತೇ ಎಂದು ಎಲ್ಲರೂ ಕಾದು ಕುಳಿತಿದ್ದರು.

ಒಟ್ಟಿನಲ್ಲಿ ಶಾಸ್ತ್ರಿಗಳು ಭವಿಷ್ಯ ನೋಡಿ ಹೇಳಿದ್ದ ಗಂಡಾಂತರ ಕಾಲ ಇದೇ ಇರಬಹುದೆಂಬುದನ್ನು ಮಾತ್ರ ಎಲ್ಲರೂ ನಂಬಿದಂತಿತ್ತು. ’ದೇವರು ದಿಂಡರು ಯಾವುದೂ ಇಲ್ಲ, ಜ್ಯೋತಿಷ್ಯ, ಗ್ರಹಚಾರ ಎಲ್ಲಾ ಶುದ್ಧ ಸುಳ್ಳು, ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ….’ ಎಂದು ಅತಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಆಕಾಶನಿಗೂ ತಮ್ಮೆಲ್ಲರನ್ನೂ ಮೀರಿದ ಶಕ್ತಿಯೊಂದು ಎಲ್ಲೋ ದೂರದಲ್ಲಿದ್ದುಕೊಂಡು ನಮ್ಮನ್ನೆಲ್ಲಾ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿರಬಹುದೇ ಅನಿಸುವ ಮಟ್ಟಿಗೆ, ಇದ್ದಕ್ಕಿದ್ದಂತೆ ಎದುರಾದ ಪರಿಸ್ಥಿತಿ ಎಲ್ಲರನ್ನೂ ಕಂಗಾಲು ಮಾಡಿಹಾಕಿತ್ತು.

ಶಾಸ್ತ್ರಿಗಳು ಮನೆ ಮುಂದಿನ ತೋಟದ ಅಂಗಳದಲ್ಲಿ ಚಿಂತಾಮಗ್ನರಾಗಿ ಕೂತಿದ್ದರು ಎದುರಿಗೆ ಕಾಣಿಸಿಕೊಂಡ ಅವಳನ್ನು ನೋಡಿ ಕಣ್ಣುಜ್ಜಿಕೊಂಡರು ತಿಳಿನೀಲಿ ಜೀನ್ಸ್ ಅದರಮೇಲೆ ದೊಗಳೆ ಶರ್ಟ್ ಧರಿಸಿದ ಹೊಂಗೂದಲಿನ ನೀಲಿಕಂಗಳ ಚೆಲುವೆ ನಸು ನಗುತ್ತಿದ್ದಾಳೆ! ಕನಸೇ ಇದು..?ಅಲ್ಲಾ…ಅವಳ ಜೊತೆ ಇ ದ್ದ ಅರೇಳರ ಪುಟಾಣಿ ಹುಡುಗ ಬಂದು ಶಾಸ್ಸ್ರಿಗಳ ಕೈ ಎಳೆದಾಗ ಅದು ಖಾತ್ರಿ ಯಾಯಿತು ಆದರವಳು ಅಮೆರಿಕನ್ ಆಯಕ್ಸೆಂಟ್ನಲ್ಲಿ ಮಾತಾಡಲಾರಂಭಿಸಿದಾಗ ಮಾತ್ರ ಶಾಸ್ತಿಗಳು ಕಕ್ಕಾಬಿಕ್ಕಿಯಾದರು ಆ ಪುಟಾಣಿಯ ಮೊಗದಲ್ಲಿ ಕಂಡ ಮಿಂಚು ಪರಿಚಿತವೆನಿಸಿತು….ಶಾರದಾ…ಶಾಸ್ರಿಗಳ ಕೂಗಿಗೆ ಹೊರಬಂದ ಶಾರದಮ್ಮನೂ ಕಣ್ಣರಿಳಿಸಿಕೊಂಡು ನಿಂತು ಬಿಟ್ಟಿದ್ದಾರೆ ಆಗವರ ನೆರವಿಗೆ ಬಂದವನು ಸದ್ಯಕ್ಕೆ ಮನೆಯಲ್ಲೇ ಇದ್ದ ಆಕಾಶ. ಅವಳು ಹೇಳಿದ್ದನ್ನು ಆಕಾಶ ಕನ್ನಡಕ್ಕೆ ಮಾಡಿ ಹೇಳಿದಾಗ….`ಇವನು ನಿಮ್ಮ ಮೊಮ್ಮಗ…ಪ್ರತಾಪನ ಮಗ…ಪ್ರತಾಪ ಕಣ್ಮರೆಯಾಗುವಾಗ ನಾನು ನಾಲ್ಕು ತಿಂಗಳ ಬಸುರಿ…ತಂಗಿ ಮದುವೆಗೆಂದು ಇಂಡಿಯಾಗೆ ಹೋದಾಗ ಅಪ್ಪನ ಹತ್ರ ಮಾತಾಡಲು ಸಂಕೋಚವೆನಿಸಿ ಪ್ರತಾಪ್ ವಾಪಸು ಬಂದು ಬಿಟ್ಟಿದ್ದರು ಮದುವೆಗೆ ಮುಂಚೆ ನಾವಿಬ್ಬರೂ ದುಡುಕಿದ್ದು ಸಂಪ್ರದಾಯಸ್ತರಾದ ಅಪ್ಪನ ಬಳಿ ಹೇಳಲು ಅವರು ತುಂಬಾ ಹಿಂಸೆ ಪಟ್ಟು ಕೊಂಡಿದ್ದರು ಅಪ್ಪ ನಮ್ಮನ್ನು ಕ್ಷಮಿಸುತ್ತಾರೆಯೇ..ಅಂತ ತುಂಬಾ ಸಲ ಹೇಳುತ್ತಿದ್ದರು ಹಾಗಾಗಿ ಅವರು ಕಣ್ಮರೆಯಾದ ಮೇಲೆ ನಾನು ನಿಮ್ಮನ್ನು ಸಂಪರ್ಕಿಸುವ ಪ್ರಯತ್ನ ಮಾಡಲಿಲ್ಲ ನಿಶ್ಯಬ್ದವಾಗಿ ನ್ಯೂಯಾರ್ಕ್ ತೊರೆದು ಕ್ಯಾಲಿಫೋರ್ನಿಯಾಗೆ ಹೊರಟು ಹೋದೆ ಇವನು ಹುಟ್ಟಿದ ನಾನು ಕೆಲಸ ಮಾಡುತ್ತಾ ಇವನನ್ನು ಬೆಳೆಸುತ್ತಾ ಪ್ರತಾಪನ ನೆನಪಲ್ಲಿ ಸಮಾಧಾನವಾಗಿಯೇ ಇದ್ದೆ ವಿಧಿ ಸಹಿಸಲಿಲ್ಲ…ನನ್ನ ಮುದ್ದು ಮರಿಗೀಗ ಅಪರೂಪದ ಕಾಯಿಲೆ ಅಮೆರಿಕಾದ ಡಾಕ್ಟರುಗಳೆಲ್ಲಾ ನಮ್ಮ ಕೈಬಿಟ್ಟಾಗಿದೆ…ಪ್ರತಾಪ ಬಹುವಾಗಿ ನಂಬಿದ್ದ ನಿಮ್ಮಊರ ದೇವರು ನನಗೆ ಸಹಾಯ ಮಾಡುವನೆಂದು ನಂಬಿ ಬಂದಿದ್ದೇನೆ …ಆ ದೇವರ ಕೃಪೆ ಈ ಮಗುವಿಗೆ ದಯಮಾಡಿ ದೊರಕಿಸಿ ಕೊಡಿ…’

ಶಾಸ್ರಿ ದಂಪತಿಗಳು ದಿಕ್ಕು ತೋಚದೆ ನಿಂತು ಬಿಟ್ಟಿದ್ದಾರೆ…ಇವಳನ್ನು ನಂಬುವುದು ಹೇಗೆ…? ಮಗುವಿನ ಮುಖದಲ್ಲೇನೋ ಪ್ರತಾಪನ ಹೋಲಿಕೆ ಕಾಣುತ್ತಿದೆ ಎಂದು ಹೇಳೋಣವೆಂದು ಶಾರದಮ್ಮನ ಮನಸ್ಸು… ಆದರೆ ಶಾಸ್ರ್ತಿಗಳು ಏನನ್ನುವರೋ ಎಂಬ ಭಯ.

ಅಷ್ಟರಲ್ಲಿ ತೋಟದಿಂದ ಹುಶ್ಶಪ್ಪಾ ಅಂತ ಮನೆಗೆ ಬಂದ ರಾಜೀವನ್ನು ನೋಡಿ ಅವಳ ಕಣ್ಣುಗಳು ನಿರಾಳತೆಯಿಂದ ಮಿಂಚಿದರೆ ರಾಜೀವ ಅವಳನ್ನು ನೋಡಿ `ಜೆನೀ… ನೀನೂ..ಇಷ್ಟು ವರ್ಷದ ನಂತರ ಇಲ್ಲೀ..ಅಂತ ಆಶ್ಚರ್ಯಚಕಿತನಾಗಿ ಹೇಳಿದ.

***

ಓಸಾಮಾ ಬಿನ್ ಲಾಡೆನ್ನಿನ ಹೆಗಲ ಮೇಲೆ ಮುಖ ಇಟ್ಟುಕೊಂಡು, ಭರತಖಾನ ಗೋಳೊ ಎಂದು ಅಳುತ್ತಿದ್ದ. “ಒಂದು ಲಕಡಿ ನಿಂಗೆ ಸಿಗ್ಲಿಲ್ಲಾ ಅಂತ ಯಾಕ್ಲೇ ಅಳ್ತೀ,ಬರತಾ!” ಅಂತ ಲಾಡೆನ್ ಭರತಖಾನನಿಗೆ ಸಾಂತ್ವನ ಹೇಳಲು ಪ್ರಯತ್ನಿಸುತ್ತಿದ್ದ. “ಹತ್ತು ಲಕಡಿಗೋಳ್ ಜೊತೆ ನಿನ್ನ ನಿಕಾ ಮಾಡ್ತೀನಿ. ನನ್ನೆ ಎಗಲ ಮ್ಯಾಲಿಂದು ನಿನ್ನ ತೆಲಿ ತೆಗಿ.”, ಅಂತ ಧೈರ್ಯ ಹೇಳಿದ.
“ಛೆ! ನಿನಗೆ ಕನ್ನಡ ಕಲಿಸಿದ್ದೆ ತಪ್ಪಾಯ್ತು ನೋಡು. ನನಗೇನೂ ನಿನ್ನ ಲಕಡಿ ಬೇಕಾಗಿಲ್ಲ. ನನ್ನ ಅಳಲೇ ಬೇರೆ. ಒಂದು full bottle ಕುಡಿದು ಸ್ಟ್ರೇಟಾಗಿ ನಿಲ್ಲೊ ನಾನು; ಆ ಹುಡುಗಿ ಒಂದು ಕಪ್ಪು ಹಾಲಿನಲ್ಲಿ ಒಂದು ಚಮಚೆ ವ್ಹಿಸ್ಕಿ ಕೂಡಿಸಿ ಕೊಟ್ರೆ knock out ಆದೆನಲ್ಲಾ!” ಎಂದು ತನ್ನ ಕೊರಗು ತೋಡಿಕೊಂಡ. “ಮೊದಲೆ out ಆದವನಿಗೆ ‘ಹಾಲು ok, ಅಲ್ಕೋಹಾಲು ಯಾಕೆ?’ ಇರಲಿ, ಮುಂಡೆ ಬೆಚ್ಚ ಆಗಬೇಡ. ಮುಲ್ಲನ್ನು ಮುಲ್ಲಿನಿಂದಲೆ ತೆಗೀಬೇಕು ಅಂತ ನೀನೆ ಹೇಲ್ತಾ ಇದ್ದೆಲ್ಲಪ್ಪ, ಈಗ ನಾನು ಹೇಲೋದನ್ನಷ್ಟು ಕೇಲು. ನೀನು ಬಾರತಕ್ಕೆ ಮರಲಿ ಓಗು. ಆ ಲಕಡಿಯನ್ನು ಕಾಫರ ಸೋಗಿನಲ್ಲಿಯೇ ಮೋಸ ಮಾಡು. ಆದರೆ ಒಂದು ಮಾತು ತಲ್ಯಾಗ ಇಟ್ಕೋ. ಆ ಲಕಡಿ ಹಾಲು ಕೊಟ್ಟರೆ ಕುಡಿಯಬೇಡ!”, ಎಂದು ತನ್ನ ಮಾನಸಪುತ್ರನಿಗೆ ಕುಟಿಲೋಪಾಯ ಹೇಳಿಕೊಟ್ಟ ಲಾಡೆನ್.

ಈ ಕಾರಣದಿಂದ, ಭರತಖಾನ ಭರತದಾಸನಾಗಿ ಕೈಯಲ್ಲಿ ತಂಬೂರಿ ಹಿಡಿದುಕೊಂಡು ಒಂದು ಮುಂಜಾವಿನಲ್ಲಿ ಶಾಸ್ತ್ರಿಗಳ ಎದುರಿಗೆ ಪ್ರತ್ಯಕ್ಷನಾದ.
“ನಿನ್ನಂಥ ವೈದ್ಯರಿಲ್ಲೋ ಹರಿಯೇ!” ಎಂದು ಹಾಡುತ್ತ ಎದುರಿಗೆ ಬಂದ ಹರಿದಾಸರನ್ನು ಕಂಡ ಶಾಸ್ತ್ರಿಗಳಿಗೆ “ಹರಿಯೆ ತನ್ನ ಮೊರೆಯ ಕೇಳಿ ಬಂದನೇನೋ” ಎಂದೆನಿಸಿತು.
***

ಆತುರಗಾರನ ಬುದ್ದಿ ಮಟ್ಟ ಎಂಬ ಗಾದೆ ಭರತ ಖಾನನನ್ನೇ ನೋಡಿ ಮಾಡಿರಬೇಕು!ಪ್ರವಲ್ಲಿಕಾಳನ್ನು ತನ್ನದಾಗಿಸಿಕೊಳ್ಳಲು ದಾಸ ಯ್ಯನ ವೇಷ ತೊಟ್ಟು ಅವನು ಶಾಸ್ತ್ರಿಗಳ ಹಳ್ಳಿಗೆ ಬರುವ ಅವನ ಯೋಜನೆಯನ್ನು ಒಂದೆರಡು ದಿನಗಳು ಮುಂದೂಡಿದ್ದಿದ್ದರೆ ಚೆನ್ನಾಗಿರುತ್ತಿತ್ತು!ಒಟ್ಟಿನಲ್ಲಿ ಖಾನನ ಟೈಮ್ ಚೆನ್ನಾಗಿಲ್ಲ ಅಷ್ಟೇ…ಹೋಗಲಿ ಪ್ರವಲ್ಲಿಕಾದಾದರೂ ಚೆನ್ನಾಗಿದೆಯೇ…?ಉಹುಂ…

ಭಾರತೀಯದೂತಾವಾಸದ ಸೋಫಾಮೇಲೆ ಕೂತು ವಿಶ್ರಮಿಸಿ ಕೊಳ್ಳುತ್ತಾ ಏನೋ ಸಾಧಿಸಿದ ತೃಪ್ತಿಯಿಂದ ಬೀಗುತ್ತಿರುವ ಪ್ರವಲ್ಲಿಕಾಗೆ ಇನ್ನೆರಡು ಗಂಟೆಗಳಲ್ಲಿ ತನ್ನ ಜೀವನಕ್ಕೆ ಊಹಿಸದ ತಿರುವು ಸಿಗಲಿದೆ ಎಂಬ ಸಣ್ಣ ಸುಳಿವೂ ಇಲ್ಲ ಪಾಪ…ಬಿಳಿಯ ಪಾರಿವಾಳದಂತೆ ನಾಜೂಕಾಗಿರುವ ಹೆದರು ಪುಕ್ಕಿ ಪ್ರವಲ್ಲಿಕಾ ಮುಂದೆ ತುಳಿಯಲಿರುವ ಹಾದಿ ತುಂಬಾ ಕಷ್ಟದ್ದು…ಅನೂಹ್ಯವಾದುದ್ದು…ಮತ್ತು ಅದು ಅವಳ ವ್ಯಕ್ತಿತ್ವವನ್ನೇ ಬದಲಾಯಿಸುವಂಥದ್ದು…

ಭಾರತೀಯ ದೂತಾವಾಸದ ಆ ಅಧಿಕಾರಿ ಭರತ ಖಾನನನ್ನು ಸಂಪರ್ಕಿಸಲು ಸತತವಾಗಿ ಪ್ರಯತ್ನಿಸುತ್ತಿದ್ದಾನೆ.ಭಾರತದ ಮಣ್ಣಲ್ಲಿ ಹುಟ್ಟಿ ಇಂಡಿಯಾ ಗೌರ್ನಮೆಂಟಿನಿಂದ ದೊಡ್ಡ ಮೊತ್ತದ ಸಂಬಳ ಏಣಿಸಿಕೊಂಡೂ ಹುಟ್ಟಿದ ನೆಲಕ್ಕೇ ದ್ರೋಹ ಬಗೆಯುವ ನೀಚರ ಗುಂಪಿಗೆ ಸೇರಿದವನು ಆತ ಒಸಾಮ ಕೊಡುವ ಕಾಸಿಗಾಗಿ ಅವನ ಏಜಂಟನಾಗಿ ಕೆಲಸ ಮಾಡುತ್ತಿರುವವನು.ಪ್ರವಲ್ಲಿಕಾ ಖಾನನಬಗ್ಗೆ ಮುಂಬೈ ಗೆ ಕಳಿಸಿದ ವಿವರಗಳ ವಾಸನೆ ಹಿಡಿದು ಇವಳನ್ನು ಖಾನನಿಗೆ ಒಪ್ಪಿಸಬೇಕೆಂದು ಸಂಚು ಮಾಡುತ್ತಿದ್ದಾನೆ
ಅಂತೂ ಖಾನ ಸಿಗದಿದ್ದರೂ ಅವನ ಬಂಟನಿಗಾದರೂ ಸುದ್ದಿ ಮುಟ್ಟಿಸಿದೆನೆಂದು ಅವನು ತೃಪ್ತಿಯಿಂದ ಮೀಸೆ ಸವರಿಕೊಂಡ
**********************

ಮುಂದಿನರ್ಧ ಗಂಟೆಯಲ್ಲಿ ಪ್ರವಲ್ಲಿಕಾ ಜೀಪೊಂದರಲ್ಲಿ ಕುಳಿತು ದುಬೈನ ಹೊರವಲಯದ ರಸ್ತೆಯಲ್ಲಿ ಸಾಗುತ್ತಿದ್ದಳು ಅವಳನ್ನು ಬೀಳ್ಕೊಟ್ಟ
ಭಾರತೀಯದೂತಾವಾಸದ ಅಧಿಕಾರಿ `ನೀವೇನೂ ಯೋಚಿಸಬೇಡಿ ಮೇಡಂ… ನೀವು ದೇಶಕ್ಕೆ ಮಾಡಿರುವ ಉಪಕಾರ ಅಮೂಲ್ಯವಾದುದು ಇವರು ನಿಮ್ಮನ್ನು ಸುರಕ್ಷಿತವಾಗಿ ಇಂಡಿಯಾ ತಲುಪಿಸುತ್ತಾರೆ’ ಎಂದು ಹೇಳಿ ಕೈ ಕುಲುಕಿದ್ದ. ಅಪ್ಪ ಅಮ್ಮಅಕ್ಕನನ್ನು ಕಾಣುವ ತವಕದಲ್ಲಿರುವ ಪ್ರವಲ್ಲಿಕಾಗೆ ಕಣ್ತುಂಬಾ ಕನಸುಗಳು…!

***

ಪ್ರವಲ್ಲಿಕಾಳನ್ನು ಒಫ್ಫಿಸಿದ್ದಕ್ಕೆ ದೊಡ್ಡಮೊತ್ತದ ಬಹುಮಾನವೇ ನನಗೆ ಕಾದಿದೆ ಎಂದು ಜೊಲ್ಲು ಸುರಿಸಿಕೊಂಡ ಆ ಅಧಿಕಾರಿಗಾಗಲೀ ಪ್ರವಲ್ಲಿಕಾಗಾಗಲೀ ತಿಳಿಯದ ವಿಶಯವೆಂದರೆ ಪ್ರವಲ್ಲಿಕಾಳನ್ನು ಕರೆದೊಯ್ದಿದ್ದು ಮೊಸಾದ್(MOSSAD) ಎಂದು! ಮೊಸಾದ್ ತನ್ನ ಚಾಣಾಕ್ಷತನಕ್ಕಾಗಿ ಜಗತ್ತಿನಾದ್ಯಂತ ಹೆಸರಾಗಿರುವ ಇಸ್ರೇಲಿ ಬೇಹುಗಾರಿಕಾ ಸಂಸ್ಥೆ ಖಾನನ ಪೋನನ್ನು ಟ್ಯಾಪ್ ಮಾಡಿ ಪ್ರವಲ್ಲಿಕ ಎಂಬ ಈ ವ್ಯಕ್ತಿ ಯಾವುದೋ ವ್ಯವಹಾರದ ಪ್ರಮುಖ ಕೊಂಡಿ ಇರಬಹುದೆಂದು ಶಂಕಿಸಿ ಅವಳನ್ನು ಖಾನನ ಬಂಟರು ಬರುವ ಮೊದಲೇ ಕರೆದೊಯ್ದು ಬಿಟ್ಟಿದ್ದರು.

***

7 thoughts on “ಭಾಗ – 14”

 1. ಶಾಸ್ತ್ರಿಗಳು ಮನೆ ಮುಂದಿನ ತೋಟದ ಅಂಗಳದಲ್ಲಿ ಚಿಂತಾಮಗ್ನರಾಗಿ ಕೂತಿದ್ದರು ಎದುರಿಗೆ ಕಾಣಿಸಿಕೊಂಡ ಅವಳನ್ನು ನೋಡಿ ಕಣ್ಣುಜ್ಜಿಕೊಂಡರು ತಿಳಿನೀಲಿ ಜೀನ್ಸ್ ಅದರಮೇಲೆ ದೊಗಳೆ ಶರ್ಟ್ ಧರಿಸಿದ ಹೊಂಗೂದಲಿನ ನೀಲಿಕಂಗಳ ಚೆಲುವೆ ನಸು ನಗುತ್ತಿದ್ದಾಳೆ! ಕನಸೇ ಇದು..?ಅಲ್ಲಾ…ಅವಳ ಜೊತೆ ಇ ದ್ದ ಅರೇಳರ ಪುಟಾಣಿ ಹುಡುಗ ಬಂದು ಶಾಸ್ಸ್ರಿಗಳ ಕೈ ಎಳೆದಾಗ ಅದು ಖಾತ್ರಿ ಯಾಯಿತು ಆದರವಳು ಅಮೆರಿಕನ್ ಆಯಕ್ಸೆಂಟ್ನಲ್ಲಿ ಮಾತಾಡಲಾರಂಭಿಸಿದಾಗ ಮಾತ್ರ ಶಾಸ್ತಿಗಳು

  ಕಕ್ಕಾಬಿಕ್ಕಿಯಾದರು ಆ ಪುಟಾಣಿಯ ಮೊಗದಲ್ಲಿ ಕಂಡ ಮಿಂಚು ಪರಿಚಿತವೆನಿಸಿತು….ಶಾರದಾ…ಶಾಸ್ರಿಗಳ ಕೂಗಿಗೆ ಹೊರಬಂದ ಶಾರದಮ್ಮನೂ ಕಣ್ಣರಿಳಿಸಿಕೊಂಡು ನಿಂತು ಬಿಟ್ಟಿದ್ದಾರೆ ಆಗವರ ನೆರವಿಗೆ ಬಂದವನು ಸದ್ಯಕ್ಕೆ ಮನೆಯಲ್ಲೇ ಇದ್ದ ಆಕಾಶ…
  ಅವಳು ಹೇಳಿದ್ದನ್ನು ಆಕಾಶ ಕನ್ನಡಕ್ಕೆ ಮಾಡಿ ಹೇಳಿದಾಗ….`ಇವನು ನಿಮ್ಮ ಮೊಮ್ಮಗ…ಪ್ರತಾಪನ ಮಗ…ಪ್ರತಾಪ ಕಣ್ಮರೆಯಾಗುವಾಗ ನಾನು ನಾಲ್ಕು ತಿಂಗಳ ಬಸುರಿ…ತಂಗಿ ಮದುವೆಗೆಂದು ಇಂಡಿಯಾಗೆ ಹೋದಾಗ ಅಪ್ಪನ ಹತ್ರ ಮಾತಾಡಲು ಸಂಕೋಚವೆನಿಸಿ ಪ್ರತಾಪ್ ವಾಪಸು ಬಂದು ಬಿಟ್ಟಿದ್ದರು ಮದುವೆಗೆ ಮುಂಚೆ ನಾವಿಬ್ಬರೂ ದುಡುಕಿದ್ದು ಸಂಪ್ರದಾಯಸ್ತರಾದ ಅಪ್ಪನ ಬಳಿ ಹೇಳಲು ಅವರು ತುಂಬಾ ಹಿಂಸೆ ಪಟ್ಟು ಕೊಂಡಿದ್ದರು ಅಪ್ಪ ನಮ್ಮನ್ನು ಕ್ಷಮಿಸುತ್ತಾರೆಯೇ..ಅಂತ ತುಂಬಾ ಸಲ ಹೇಳುತ್ತಿದ್ದರು ಹಾಗಾಗಿ ಅವರು ಕಣ್ಮರೆಯಾದ ಮೇಲೆ ನಾನು ನಿಮ್ಮನ್ನು ಸಂಪರ್ಕಿಸುವ ಪ್ರಯತ್ನ ಮಾಡಲಿಲ್ಲ ನಿಶ್ಯಬ್ದವಾಗಿ ನ್ಯೂಯಾರ್ಕ್ ತೊರೆದು ಕ್ಯಾಲಿಫೋರ್ನಿಯಾಗೆ ಹೊರಟು ಹೋದೆ ಇವನು ಹುಟ್ಟಿದ ನಾನು ಕೆಲಸ ಮಾಡುತ್ತಾ ಇವನನ್ನು ಬೆಳೆಸುತ್ತಾ ಪ್ರತಾಪನ ನೆನಪಲ್ಲಿ ಸಮಾಧಾನವಾಗಿಯೇ ಇದ್ದೆ ವಿಧಿ ಸಹಿಸಲಿಲ್ಲ…ನನ್ನ ಮುದ್ದು ಮರಿಗೀಗ ಅಪರೂಪದ ಕಾಯಿಲೆ ಅಮೆರಿಕಾದ ಡಾಕ್ಟರುಗಳೆಲ್ಲಾ ನಮ್ಮ ಕೈಬಿಟ್ಟಾಗಿದೆ…ಪ್ರತಾಪ ಬಹುವಾಗಿ ನಂಬಿದ್ದ ನಿಮ್ಮಊರ ದೇವರು ನನಗೆ ಸಹಾಯ ಮಾಡುವನೆಂದು ನಂಬಿ ಬಂದಿದ್ದೇನೆ …ಆ ದೇವರ ಕೃಪೆ ಈ ಮಗುವಿಗೆ ದಯಮಾಡಿ ದೊರಕಿಸಿ ಕೊಡಿ…’

  ಶಾಸ್ರಿ ದಂಪತಿಗಳು ದಿಕ್ಕು ತೋಚದೆ ನಿಂತು ಬಿಟ್ಟಿದ್ದಾರೆ…ಇವಳನ್ನು ನಂಬುವುದು ಹೇಗೆ…? ಮಗುವಿನ ಮುಖದಲ್ಲೇನೋ ಪ್ರತಾಪನ ಹೋಲಿಕೆ ಕಾಣುತ್ತಿದೆ ಎಂದು ಹೇಳೋಣವೆಂದು ಶಾರದಮ್ಮನ ಮನಸ್ಸು… ಆದರೆ ಶಾಸ್ರ್ತಿಗಳು

  ಏನನ್ನುವರೋ ಎಂಬ ಭಯ…

  ಅಷ್ಟರಲ್ಲಿ ತೋಟದಿಂದ ಹುಶ್ಶಪ್ಪಾ ಅಂತ ಮನೆಗೆ ಬಂದ ರಾಜೀವನ್ನು ನೋಡಿ ಅವಳ ಕಣ್ಣುಗಳು ನಿರಾಳತೆಯಿಂದ ಮಿಂಚಿದರೆ ರಾಜೀವ ಅವಳನ್ನು ನೋಡಿ `ಜೆನೀ… ನೀನೂ..ಇಷ್ಟು ವರ್ಷದ ನಂತರ ಇಲ್ಲೀ..ಅಂತ ಆಶ್ಚರ್ಯಚಕಿತನಾಗಿ

  ಹೇಳಿದ…

 2. ತೇಜಸ್ಸು ಉಕ್ಕುವ ಮುಖ, ಹಣೆಯಲ್ಲಿ ನಾಮ, ತಲೆಗೆ ಪಾವುಡ. ಕೈಯಲ್ಲಿ ತಾಳ ಹಾಗು ತಂಬೂರಿ ಹಿಡಿದುಕೊಂಡು, “ಹರಿಯ ನೆನೆಯಲೆ ಮನವೆ. . . ” ಎಂದು ಹಾಡುತ್ತ, ತಮ್ಮ ಮನೆಯಂಗಳದಲ್ಲಿ ಸೂರ್ಯೋದಯಕ್ಕೆ ಸರಿಯಾಗಿ ಪ್ರತ್ಯಕ್ಷರಾದ ಹರಿದಾಸರನ್ನು ಕಂಡ ಶಾಸ್ತ್ರಿಗಳಿಗೆ ಸಾಕ್ಷಾತ್ ಶ್ರೀಹರಿಯನ್ನೇ ಕಂಡಷ್ಟು ಸಂತೋಷವಾಯಿತು.

  “ಬನ್ನಿ, ಬನ್ನಿ, ಒಳಗೆ ದಯಮಾಡಿಸಿ”, ಎಂದು ಆದರದಿಂದ ಕರೆದು, ಕೈಕಾಲಿಗೆ ನೀರು ತರಲು, ಹೆಂಡತಿಗೆ ಕೂಗಿ ಹೇಳಿದರು. ಶಾರದಮ್ಮನವರೂ ಸಹ ಸಂಭ್ರಮದಿಂದ ನೀರು ತಂದು ಕೊಟ್ಟು ನಡುಮನೆಯಲ್ಲಿ ಮಣೆ ಹಾಕಿದರು. ಬಾಯಾರಿಸಿಕೊಳ್ಳಲಿ ಬ್ರಾಹ್ಮಣ ಎಂದು ಒಂದು ಲೋಟ ಬಿಸಿ ಬಿಸಿ ಬಾದಾಮಿ ಹಾಲನ್ನು ಮುಂದಿಟ್ಟರು. ಹಾಲನ್ನು ಕಂಡು ಬೆಚ್ಚಿಬಿದ್ದ ಹರಿದಾಸರು ಬಾಳೆಹಣ್ಣಷ್ಟೆ ತಮಗೆ ಸಾಕು ಎಂದು ಹೇಳಿದರು.
  “ಯಾವ ಊರಾಯಿತು, ಸ್ವಾಮಿ ತಮ್ಮದು?”, ಶಾಸ್ತ್ರಿಗಳು ಗೌರವದಿಂದ ಕೇಳಿದರು.
  “ಅಲ್ಲಿರುವದುssss ನಮ್ಮ ಮನೇssss
  ಇಲ್ಲಿರುವದೂssss ಸುಮ್ಮನೇssssss”
  ಎಂದು ಉಸರಿದ ದಾಸರು,
  “ಹರಿ ನಾರಾಯಣ, ಹರಿನಾರಾಯಣ, ಹರಿ ನಾರಾಯಣ, ಎನು ಮನವೆ”, ಎಂದು ತಾಳ ಕುಟ್ಟುತ್ತ ಹಾಡಲಾರಂಭಿಸಿದರು.
  ಇದೆಲ್ಲ ಸಂಭ್ರಮ, ಸಂತೋಷವನ್ನು ಕೇಳಿಸಿಕೊಂಡ ಜೇನಿ ಹಾಗು ಹ್ಯಾರಿ ಅಟ್ಟದಿಂದ ಕೆಳಗಿಳಿದು ಬಂದರು.
  ‘ಹರಿ, ಹರಿ’ ಎಂದು ಹಾಡುತ್ತಿದ್ದದ್ದನ್ನು ಕೇಳಿದ ಹ್ಯಾರಿ,
  “Mummy why is he calling my name?”, ಎಂದು ಕೇಳಿದ.(ಹ್ಯಾರಿಯನ್ನು ಅವನ ಅಪ್ಪ ಪ್ರತಾಪ ‘ಹರಿ’ ಎಂದೇ ಕರೆಯುತ್ತಿದ್ದ.)
  ತಕ್ಷಣವೇ ಹರಿದಾಸರು,
  “ಹರಿ ಓಮ್ ಹರಿ,
  ಹರಿ ಓಮ್ ಹರಿ,
  Bury your worry,
  Come here, ಮರಿ”
  ಎಂದು ರಾಗವಾಗಿ ಹೇಳಿದರು.

  ಶಾಸ್ತ್ರಿಗಳಿಗೆ ಹಾಗು ಶಾರದಮ್ಮನವರಿಗೆ ಪರಮಾಶ್ಚರ್ಯ. ಜೇನಿಗೆ ಸಂತೋಷಾಘಾತ. ‘ಇಂಡಿಯಾದಲ್ಲಿ spiritual power ಇದೆ.’ ಎಂದು ಪ್ರತಾಪ ಹೇಳುತ್ತಿದ್ದದ್ದು ನಿಜವೆನಿಸಿತು ಜೇನಿಗೆ. ತಕ್ಷಣವೇ ತಾನೂ ಸಹ ಇಂಡಿಯನ್ನರಂತೆ ಹರಿದಾಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿ, “ಸ್ವಾಮಿಜಿ, ಹ್ಯಾರಿಗೆ ಯಾವ ರೋಗವಾಗಿದೆಯೊ, ಯಾವ ಡಾಕ್ಟರಿಗೂ ಗೊತ್ತಾಗುತ್ತಿಲ್ಲ. ದಯವಿಟ್ಟು ನಿಮ್ಮ spritual power ಉಪಯೋಗಿಸಿ ಅವನನ್ನು ಗುಣಪಡಿಸಿ”, ಎಂದು ಕೋರಿದಳು.

  “ರೋಗಹರನೆ ಕೃಪಾಸಾಗರ ಶ್ರೀಗುರು
  ರಾಘವೇಂದ್ರ ಪರಿಪಾಲಿಸೊ!
  ಘನ್ನಮಹಿಮ ಜಗನ್ನಾಥವಿಠಲಪ್ರಿಯ
  ನಿನ್ನಾರಾಧನೆ ಮಾಡಿಸೊ!”
  ಎಂದು ಹರಿದಾಸರು ರಾಘವೇಂದ್ರಸ್ವಾಮಿಗಳ ಮೇಲೆ ಆ ಹೊಣೆ ಹೊರಿಸಿದರು.
  . . . . . . . . . . . . . . . . . . . . . . . . .
  ಒಂದೇ ಗಂಟೆಯಲ್ಲಿ ಆ ಕುಟುಂಬದವರೆಲ್ಲರ ವಿಶ್ವಾಸ ಗಳಿಸಿಕೊಂಡ ಭರತಖಾನನಿಗೆ ಪ್ರವಲ್ಲಿಕಾ ಹಾಗು ಧಾರಿಣಿ ಇವರೀರ್ವರೂ ಇಲ್ಲಿಯವರೆಗೂ ನಾಪತ್ತೆಯಾಗಿಯೇ ಇರುವದು ಗೊತ್ತಾಯಿತು.
  ಜೇನಿ ಇವಳು WTO ಸ್ಫೋಟದಲ್ಲಿ ಮೃತನಾದ ಪ್ರತಾಪನ ಅಮೇರಿಕನ್ ಹೆಂಡತಿ ಎಂದೂ ಗೊತ್ತಾಯಿತು. ತಿಳಿಯದ ರೋಗದಿಂದ ಬಳಲುತ್ತಿರುವ ತನ್ನ ಮಗ ಹ್ಯಾರಿಯನ್ನು ಇಂಡಿಯಾಕ್ಕೆ ಕರೆದುಕೊಂಡ ಬಂದ ಜೇನಿಯ ಉದ್ದೇಶವೂ ಗೊತ್ತಾಯಿತು.

  ಆ ರಾತ್ರಿ ತಮ್ಮ ಕೊನೆಯ ಕೀರ್ತನೆಯನ್ನು ಹಾಡುವ ಮುನ್ನ ಹರಿದಾಸರು, ತಂಬೂರಿಯ ಮೇಲಿನ ಬಿರಡೆಯನ್ನು ಸರಿಗೊಳಿಸುವಂತೆ ನಟಿಸುತ್ತ, ಅದರಲ್ಲಿ ಅಡಗಿಸಿದ್ದ ಶಕ್ತಿಶಾಲಿ ಟ್ರಾನ್ಸಮಿಟರದ ಬಟನ್ ಒತ್ತಿದರು. ಆಮೇಲೆ
  ಕೊನೆಯ ಕೀರ್ತನೆಯನ್ನು ಹಾಡಿದರುಃ
  “ಗಿಳಿಯು ಪಂಜರದೊಳಿಲ್ಲಾ, ಓ ಸಾಮಾ, ಓಸಾಮಾ!
  ಬರಿದೇ ಪಂಜರವಾಯಿತಲ್ಲಾ!”
  ,,,,,,,,,,,,,,,,,,,,,,,,,,,,,,,,,,,
  ಇತ್ತ ಟ್ರಾನ್ಸಮಿಟರ್ ರಿಸೀವರನಲ್ಲಿ ಓಸಾಮಾ ಭರತಖಾನನ ಈ ಒರಲನ್ನು ಕೇಳಿದ. ತನ್ನ ಮಾನಸಪುತ್ರನಿಗೆ ಒದಗಿದ ಈ ದುರ್ಗತಿಯಿಂದ ಅವನಿಗೆ ಖೇದವಾಯಿತು. ಭರತಖಾನನ ಗಿಳಿಯನ್ನು ಭಾರತೀಯ ದೂತಾವಾಸದಿಂದ ಅಪಹರಿಸಿದ ಸುದ್ದಿಯೂ ಅವನಿಗೆ ಇಷ್ಟರಲ್ಲೆ ತಿಳಿದಿತ್ತು.
  ಇಂತಹ ಧೈರ್ಯ, ಚಾಕಚಕ್ಯತೆ ಹಾಗು ಸಂಘಟನಾ ಶಕ್ತಿ ಇರುವ ಸಂಸ್ಥೆಗಳು ಎರಡೇ ಎರಡಿವೆ. ಒಂದು ಅಮೆರಿಕದ CIA, ಎರಡನೆಯದು ಇಸ್ರೇಲಿನ MOSSAD. ಇರಾಕ ರಣಭೂಮಿಯಲ್ಲಿ ಸಿಲುಕಿದ CIA ಈ ಚಿಲ್ಲರೆ ಕೆಲಸಕ್ಕೆ ಕೈಹಾಕುವದಿಲ್ಲ. ಹಾಗಾದರೆ ಇದು MOSSADದ ಕೆಲಸ! (ಏತಕ್ಕಾಗಿ ಈ ಸಾಹಸ ಮಾಡಿದರೊ?)
  ಅರಬರ ಆಜನ್ಮ ವೈರಿಗಳಾದ ಇಸ್ರೇಲಿಗಳ ಈ ವ್ಯೂಹದಿಂದ ಭರತಖಾನನ ಪ್ಯಾರಿ ಲಕಡಿಯನ್ನು ಹೊರತರುವದು ಅಸಾಧ್ಯ. ಆದರೆ ಅಸಾಧ್ಯವೆನ್ನುವದು ಲಾಡೆನ್ನನ ಶಬ್ದಕೋಶದಲ್ಲಿಲ್ಲ!

 3. ಓಸಾಮಾ ಬಿನ್ ಲಾಡೆನ್ನಿನ ಹೆಗಲ ಮೇಲೆ ಮುಖ ಇಟ್ಟುಕೊಂಡು, ಭರತಖಾನ ಗೋಳೊ ಎಂದು ಅಳುತ್ತಿದ್ದ.
  “ಒಂದು ಲಕಡಿ ನಿಂಗೆ ಸಿಗ್ಲಿಲ್ಲಾ ಅಂತ ಯಾಕ್ಲೇ ಅಳ್ತೀ,ಬರತಾ!” ಅಂತ ಲಾಡೆನ್ ಭರತಖಾನನಿಗೆ ಸಾಂತ್ವನ ಹೇಳಲು ಪ್ರಯತ್ನಿಸುತ್ತಿದ್ದ. “ಹತ್ತು ಲಕಡಿಗೋಳ್ ಜೊತೆ ನಿನ್ನ ನಿಕಾ ಮಾಡ್ತೀನಿ. ನನ್ನೆ ಎಗಲ ಮ್ಯಾಲಿಂದು ನಿನ್ನ ತೆಲಿ ತೆಗಿ.”, ಅಂತ ಧೈರ್ಯ ಹೇಳಿದ.
  “ಛೆ! ನಿನಗೆ ಕನ್ನಡ ಕಲಿಸಿದ್ದೆ ತಪ್ಪಾಯ್ತು ನೋಡು. ನನಗೇನೂ ನಿನ್ನ ಲಕಡಿ ಬೇಕಾಗಿಲ್ಲ. ನನ್ನ ಅಳಲೇ ಬೇರೆ. ಒಂದು full bottle ಕುಡಿದು ಸ್ಟ್ರೇಟಾಗಿ ನಿಲ್ಲೊ ನಾನು; ಆ ಹುಡುಗಿ ಒಂದು ಕಪ್ಪು ಹಾಲಿನಲ್ಲಿ ಒಂದು ಚಮಚೆ ವ್ಹಿಸ್ಕಿ ಕೂಡಿಸಿ ಕೊಟ್ರೆ knock out ಆದೆನಲ್ಲಾ!” ಎಂದು ತನ್ನ ಕೊರಗು ತೋಡಿಕೊಂಡ.
  “ಮೊದಲೆ out ಆದವನಿಗೆ ‘ಹಾಲು ok, ಅಲ್ಕೋಹಾಲು ಯಾಕೆ?’ ಇರಲಿ, ಮುಂಡೆ ಬೆಚ್ಚ ಆಗಬೇಡ. ಮುಲ್ಲನ್ನು ಮುಲ್ಲಿನಿಂದಲೆ ತೆಗೀಬೇಕು ಅಂತ ನೀನೆ ಹೇಲ್ತಾ ಇದ್ದೆಲ್ಲಪ್ಪ, ಈಗ ನಾನು ಹೇಲೋದನ್ನಷ್ಟು ಕೇಲು. ನೀನು ಬಾರತಕ್ಕೆ ಮರಲಿ ಓಗು. ಆ ಲಕಡಿಯನ್ನು ಕಾಫರ ಸೋಗಿನಲ್ಲಿಯೇ ಮೋಸ ಮಾಡು. ಆದರೆ ಒಂದು ಮಾತು ತಲ್ಯಾಗ ಇಟ್ಕೋ. ಆ ಲಕಡಿ ಹಾಲು ಕೊಟ್ಟರೆ ಕುಡಿಯಬೇಡ!”, ಎಂದು ತನ್ನ ಮಾನಸಪುತ್ರನಿಗೆ ಕುಟಿಲೋಪಾಯ ಹೇಳಿಕೊಟ್ಟ ಲಾಡೆನ್.

  ಈ ಕಾರಣದಿಂದ, ಭರತಖಾನ ಭರತದಾಸನಾಗಿ ಕೈಯಲ್ಲಿ ತಂಬೂರಿ ಹಿಡಿದುಕೊಂಡು ಒಂದು ಮುಂಜಾವಿನಲ್ಲಿ ಶಾಸ್ತ್ರಿಗಳ ಎದುರಿಗೆ ಪ್ರತ್ಯಕ್ಷನಾದ.
  “ನಿನ್ನಂಥ ವೈದ್ಯರಿಲ್ಲೋ ಹರಿಯೇ!” ಎಂದು ಹಾಡುತ್ತ ಎದುರಿಗೆ ಬಂದ ಹರಿದಾಸರನ್ನು ಕಂಡ ಶಾಸ್ತ್ರಿಗಳಿಗೆ “ಹರಿಯೆ ತನ್ನ ಮೊರೆಯ ಕೇಳಿ ಬಂದನೇನೋ” ಎಂದೆನಿಸಿತು.

 4. ಆತುರಗಾರನ ಬುದ್ದಿ ಮಟ್ಟ ಎಂಬ ಗಾದೆ ಭರತ ಖಾನನನ್ನೇ ನೋಡಿ ಮಾಡಿರಬೇಕು!ಪ್ರವಲ್ಲಿಕಾಳನ್ನು ತನ್ನದಾಗಿಸಿಕೊಳ್ಳಲು ದಾಸ ಯ್ಯನ ವೇಷ ತೊಟ್ಟು ಅವನು ಶಾಸ್ತ್ರಿಗಳ ಹಳ್ಳಿಗೆ ಬರುವ ಅವನ ಯೋಜನೆಯನ್ನು ಒಂದೆರಡು ದಿನಗಳು ಮುಂದೂಡಿದ್ದಿದ್ದರೆ ಚೆನ್ನಾಗಿರುತ್ತಿತ್ತು!ಒಟ್ಟಿನಲ್ಲಿ ಖಾನನ ಟೈಮ್ ಚೆನ್ನಾಗಿಲ್ಲ ಅಷ್ಟೇ…ಹೋಗಲಿ ಪ್ರವಲ್ಲಿಕಾದಾದರೂ ಚೆನ್ನಾಗಿದೆಯೇ…?ಉಹುಂ…

  ಭಾರತೀಯದೂತಾವಾಸದ ಸೋಫಾಮೇಲೆ ಕೂತು ವಿಶ್ರಮಿಸಿ ಕೊಳ್ಳುತ್ತಾ ಏನೋ ಸಾಧಿಸಿದ ತೃಪ್ತಿಯಿಂದ ಬೀಗುತ್ತಿರುವ ಪ್ರವಲ್ಲಿಕಾಗೆ ಇನ್ನೆರಡು ಗಂಟೆಗಳಲ್ಲಿ ತನ್ನ ಜೀವನಕ್ಕೆ ಊಹಿಸದ ತಿರುವು ಸಿಗಲಿದೆ ಎಂಬ ಸಣ್ಣ ಸುಳಿವೂ ಇಲ್ಲ ಪಾಪ…
  ಬಿಳಿಯ ಪಾರಿವಾಳದಂತೆ ನಾಜೂಕಾಗಿರುವ ಹೆದರು ಪುಕ್ಕಿ ಪ್ರವಲ್ಲಿಕಾ ಮುಂದೆ ತುಳಿಯಲಿರುವ ಹಾದಿ ತುಂಬಾ ಕಷ್ಟದ್ದು…ಅನೂಹ್ಯವಾದುದ್ದು…ಮತ್ತು ಅದು ಅವಳ ವ್ಯಕ್ತಿತ್ವವನ್ನೇ ಬದಲಾಯಿಸುವಂಥದ್ದು…

 5. ಭಾರತೀಯ ದೂತಾವಾಸದ ಆ ಅಧಿಕಾರಿ ಭರತ ಖಾನನನ್ನು ಸಂಪರ್ಕಿಸಲು ಸತತವಾಗಿ ಪ್ರಯತ್ನಿಸುತ್ತಿದ್ದಾನೆ.ಭಾರತದ ಮಣ್ಣಲ್ಲಿ ಹುಟ್ಟಿ ಇಂಡಿಯಾ ಗೌರ್ನಮೆಂಟಿನಿಂದ ದೊಡ್ಡ ಮೊತ್ತದ ಸಂಬಳ ಏಣಿಸಿಕೊಂಡೂ ಹುಟ್ಟಿದ ನೆಲಕ್ಕೇ ದ್ರೋಹ ಬಗೆಯುವ ನೀಚರ ಗುಂಪಿಗೆ ಸೇರಿದವನು ಆತ ಒಸಾಮ ಕೊಡುವ ಕಾಸಿಗಾಗಿ ಅವನ ಏಜಂಟನಾಗಿ ಕೆಲಸ ಮಾಡುತ್ತಿರುವವನು.ಪ್ರವಲ್ಲಿಕಾ ಖಾನನಬಗ್ಗೆ ಮುಂಬೈ ಗೆ ಕಳಿಸಿದ ವಿವರಗಳ ವಾಸನೆ ಹಿಡಿದು ಇವಳನ್ನು ಖಾನನಿಗೆ ಒಪ್ಪಿಸಬೇಕೆಂದು ಸಂಚು ಮಾಡುತ್ತಿದ್ದಾನೆ
  ಅಂತೂ ಖಾನ ಸಿಗದಿದ್ದರೂ ಅವನ ಬಂಟನಿಗಾದರೂ ಸುದ್ದಿ ಮುಟ್ಟಿಸಿದೆನೆಂದು ಅವನು ತೃಪ್ತಿಯಿಂದ ಮೀಸೆ ಸವರಿಕೊಂಡ
  **********************

 6. ಮುಂದಿನರ್ಧ ಗಂಟೆಯಲ್ಲಿ ಪ್ರವಲ್ಲಿಕಾ ಜೀಪೊಂದರಲ್ಲಿ ಕುಳಿತು ದುಬೈನ ಹೊರವಲಯದ ರಸ್ತೆಯಲ್ಲಿ ಸಾಗುತ್ತಿದ್ದಳು ಅವಳನ್ನು ಬೀಳ್ಕೊಟ್ಟ
  ಭಾರತೀಯದೂತಾವಾಸದ ಅಧಿಕಾರಿ `ನೀವೇನೂ ಯೋಚಿಸಬೇಡಿ ಮೇಡಂ… ನೀವು ದೇಶಕ್ಕೆ ಮಾಡಿರುವ ಉಪಕಾರ ಅಮೂಲ್ಯವಾದುದು ಇವರು ನಿಮ್ಮನ್ನು ಸುರಕ್ಷಿತವಾಗಿ ಇಂಡಿಯಾ ತಲುಪಿಸುತ್ತಾರೆ’ ಎಂದು ಹೇಳಿ ಕೈ ಕುಲುಕಿದ್ದ
  ಅಪ್ಪ ಅಮ್ಮಅಕ್ಕನನ್ನು ಕಾಣುವ ತವಕದಲ್ಲಿರುವ ಪ್ರವಲ್ಲಿಕಾಗೆ ಕಣ್ತುಂಬಾ ಕನಸುಗಳು…!

 7. ಪ್ರವಲ್ಲಿಕಾಳನ್ನು ಒಫ್ಫಿಸಿದ್ದಕ್ಕೆ ದೊಡ್ಡಮೊತ್ತದ ಬಹುಮಾನವೇ ನನಗೆ ಕಾದಿದೆ ಎಂದು ಜೊಲ್ಲು ಸುರಿಸಿಕೊಂಡ ಆ ಅಧಿಕಾರಿಗಾಗಲೀ ಪ್ರವಲ್ಲಿಕಾಗಾಗಲೀ ತಿಳಿಯದ ವಿಶಯವೆಂದರೆ ಪ್ರವಲ್ಲಿಕಾಳನ್ನು ಕರೆದೊಯ್ದಿದ್ದು ಮೊಸಾದ್(MOSSAD) ಎಂದು!
  ಮೊಸಾದ್ ತನ್ನ ಚಾಣಾಕ್ಷತನಕ್ಕಾಗಿ ಜಗತ್ತಿನಾದ್ಯಂತ ಹೆಸರಾಗಿರುವ ಇಸ್ರೇಲಿ ಬೇಹುಗಾರಿಕಾ ಸಂಸ್ಥೆ ಖಾನನ ಪೋನನ್ನು ಟ್ಯಾಪ್ ಮಾಡಿ ಪ್ರವಲ್ಲಿಕ ಎಂಬ ಈ ವ್ಯಕ್ತಿ ಯಾವುದೋ ವ್ಯವಹಾರದ ಪ್ರಮುಖ ಕೊಂಡಿ ಇರಬಹುದೆಂದು ಶಂಕಿಸಿ
  ಅವಳನ್ನು ಖಾನನ ಬಂಟರು ಬರುವ ಮೊದಲೇ ಕರೆದೊಯ್ಯುದು ಬಿಟ್ಟಿದ್ದರು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.