ಆಸರೆ

5 thoughts on “ಆಸರೆ”

 1. sunaath says:

  “ಪರಕೀಯ ಬದುಕಿನ……..ಅಸಹಾಯಕತೆಯಿಂದ ಬಿಕ್ಕಬೇಕಾಗಿದೆ”.
  Beautiful!

 2. sritri says:

  ಸುನಾಥರೇ, ಧನ್ಯವಾದಗಳು. ನಾನು ಹಾಕಿರುವ ಇಮೇಜ್ ಕಾಣುತ್ತಿದೆಯೋ ಇಲ್ಲವೋ ಎಂದು ಅನುಮಾನವಾಗಿತ್ತು. ಇದೇ ಕವನ ನಾನು ಈಗ ಬರೆದಿದ್ದರೆ ಇನ್ನಷ್ಟು ಸರಳವಾಗಿ ಬರೆದಿರುತ್ತಿದ್ದೆ ಅನಿಸಿತು 🙂

 3. “ಪರಕೀಯ ಬದುಕಿನ…. ….ಜೋತು ಬೀಳಬೇಕಾಗಿದೆ”: ಈ ಸಾಲುಗಳನ್ನು ನಾನು ಒಪ್ಪಲಾರೆ. ಕವಿತೆ-
  -ಹೇಡಿಗಳ ಆಸರೆಯೆ?
  -ಕೈಲಾಗದವರ ಮೈಪರಚುವಿಕೆಯೆ?
  -ಸೋಮಾರಿಯ ಸಮಯಸಾಧಕತೆಯೆ?
  -ಹುಂಬರ ಹಲ್ಕಿರಿತವೆ?
  ಅಲ್ಲವೆಂದು ನೀವೆಲ್ಲರೂ ಒಪ್ಪುವುದಾಗಿಯೂ ಗೊತ್ತು.
  ಹಾಗಾದರೆ, ಆ ಸಾಲುಗಳನ್ನು ಹೇಗೆ ಒಪ್ಪಬಹುದು?

 4. sritri says:

  ಜ್ಯೋತಿ, “ಪರಕೀಯ ಬದುಕಿನ…. ….ಜೋತು ಬೀಳಬೇಕಾಗಿದೆ” – ಈ ಸಾಲು ಬಹಳ ಸರಳವಾಗಿದೆ. ಕೆಲವೊಮ್ಮೆ ನಿಷ್ಟುರ ಬದುಕಿನ ಕಟುವಾಸ್ತವವನ್ನು ಅರಗಿಸಿಕೊಳ್ಳಲಾರದೆ, ಇದ್ದುದ್ದನ್ನು ಇದ್ದ ಹಾಗೆ ಹೇಳುವ ಸ್ವಾತಂತ್ರ್ಯವೂ ಇರದಾಗ ಅಸಹಾಯಕತೆಯಿಂದ ನಾನು ಕವಿತೆಯ ಮೊರೆ ಹೋಗುತ್ತೇನೆ ಎಂದಷ್ಟೇ ನನ್ನ ಅರ್ಥ.

 5. sunaath says:

  “ಪರಕೀಯ ಬದುಕಿನ….”

  ಜ್ಯೋತಿಯವರೆ,
  ನಿಮ್ಮ ಟೀಕೆ ತುಂಬಾ ರಸವತ್ತಾಗಿದೆ. ಆದರೆ ಮನುಷ್ಯನಿಗೆ ಎಲ್ಲವೂ ಸಾಧ್ಯವಲ್ಲ; ಅನೇಕ ಸಲ ಆತ ಅಸಹಾಯನಾಗುತ್ತಾನೆ; ಆ ಸಂದರ್ಭದಲ್ಲಿ ಆತನಿಗೆ ಸಮಾಧಾನ ನೀಡಲು ಬೇಕಾಗುವ recourseಗಳಲ್ಲಿ ಸಾಹಿತ್ಯವೂ ಒಂದಲ್ಲವೇ?
  ಕವಿತೆ ಅಸಹಾಯಕರಿಗೆ ಆಸರೆ, ಬಲಶಾಲಿಗಳ ಶಂಖಧ್ವನಿ, ಚೈತನ್ಯಶೀಲರ express ರೈಲು, ಜಾಣರ ಮಂದಹಾಸ ಸಹ ಆಗಬಹುದಲ್ಲವೆ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಹಸುರಲ್ಲಿ ಹೋಲಿಹಸುರಲ್ಲಿ ಹೋಲಿ

ಚಿತ್ರಕವನದಿಂದ ಮಕಮಲ್ಲು ಹಾಸಿನ ಮೇಲೆ ಹೂವ ರಂಗೋಲಿ ಮಾಲಿನ್ಯಕೆಡೆಯಿಲ್ಲ; ಹಸಿರ ದರಬಾರು! ಹಾದಿಹೋಕರಿಗೆಲ್ಲಾ ಪರಿಮಳದ ಹೋಲಿ ನಿಸರ್ಗವೇ ವಹಿಸಿಹುದು ಜಗದ ಕಾರುಬಾರು ದೇವನಡಿಗೂ ಅಲ್ಲ; ಹೆಣ್ಣ ಮುಡಿಗೂ ಇಲ್ಲ ಹೀಗೇಕೆ ಬಿದ್ದಿವೆ ಇಲ್ಲಿ, ಅಯ್ಯೋ ಪಾಪ! ದೇವಲೋಕದಿಂದ ಜಾರಿ ಬಿದ್ದಿಹುದಲ್ಲ ಯಾರು

ಸೋನು, ಫೋನು ಮತ್ತು ನಾನುಸೋನು, ಫೋನು ಮತ್ತು ನಾನು

‘ನಾ ನಿನ್ನ ಕನಸಿಗೆ ಚಂದಾದಾರನು ಚಂದಾ ಬಾಕಿ ನೀಡಲು ಬಂದೇ ಬರುವೆನು!’ ರಾಗದಲ್ಲಿ ಜೀವತುಂಬಿ ಹಾಡುತ್ತಿದ್ದ ಸೋನು ಎಂಥ ಸಾಲು, ಎಷ್ಟು ಚಂದ! ತಲೆದೂಗಿದೆ ನಾನು ಮತ್ತೆ ಮತ್ತೆ ಹಿಂದೆ ಹೋಗಿ ಹಾಡ ಹಿಡಿದು ಸವಿದೆನು ಕರೆಯಿತು ಮರುಕ್ಷಣವೇ ಫೋನು ಹಾಡನಲ್ಲೇ

ಮರೆತೇನೆಂದರ ಮರೆಯಲಿ ಹ್ಯಾಂಗ?ಮರೆತೇನೆಂದರ ಮರೆಯಲಿ ಹ್ಯಾಂಗ?

೯/೧೧ – ದುರಂತಕ್ಕೆ ಇಂದಿಗೆ ಐದು ವರ್ಷವಾದರೂ, ಅಂದಿನ ಆಘಾತ ಮಾತ್ರ ಈಗಲೂ ನಿನ್ನೆ ನಡೆದ ಘಟನೆಯಂತೆಯೇ ನೆನಪಿದೆ.  ಆಗ ನಾವಿದ್ದಿದ್ದು ನ್ಯೂಜೆರ್ಸಿಯಲ್ಲಿ. ಶ್ರೀನಿಯ ಕೆಲಸವಿದ್ದಿದ್ದು ನ್ಯೂಯಾರ್ಕಿನಲ್ಲಿ. ವಿಶ್ವವಾಣಿಜ್ಯಕೇಂದ್ರದ ಸಮೀಪದ ಕಟ್ಟಡವೊಂದರಲ್ಲಿ.  ಆದಿನ ಎಂದಿನಂತೆ ಕೆಲಸಕ್ಕೆ ಹೊರಟು ನಿಂತಿದ್ದಾಗಲೇ ಟೀವಿಯಲ್ಲಿ ಈ