ಕವಿ: ಬಿ. ಆರ್. ಲಕ್ಷ್ಮಣರಾವ್
ಕವನ ಸಂಕಲನ : ಸುಬ್ಬಾಭಟ್ಟರ ಮಗಳು

ಪ್ರೇಮಕಥೆಗಳಿಗೆ ಕೊನೆಯುಂಟೆ
ರಾಧಾ ಮಾಧವರಿರೊ ತನಕ?
ಪ್ರೇಮ ಪ್ರವಾಹಕೆ ಯಾವ ತಡೆ
ಜಾತಿ ಅಂತಸ್ತು ಧನ ಕನಕ?

ಪ್ರಕೃತಿಯಂತೆಯೇ ಪ್ರೇಮ ಸಹ
ನಿತ್ಯ ವಿನೂತನ;
ಹೊಸ ಹೊಸ ಬಣ್ಣ, ಹೊಸ ಬಿನ್ನಾಣ
ಅದಮ್ಯ ಚೇತನ.

ಕೆಲವರ ಪ್ರೇಮ ಹುಚ್ಚುಹೊಳೆ,
ಕೆಲವರಿಗೋ ಅದು ಮುಳ್ಳು ಮಳೆ,
ಎಲ್ಲೋ ಕೆಲವರ ಪಾಲಿಗೆ ಪ್ರೇಮ
ಬತ್ತದ ಒಳಸೆಲೆ.

ಪ್ರೇಮಿಗಳಲ್ಲಿ ಹಲವು ಥರ,
ಪ್ರೇಮಕ್ಕುಂಟು ಹಲವು ಥರ,
ದುರಂತವಿರಲಿ, ಸುಖಾಂತವಿರಲಿ,
ಪ್ರೇಮ ನಿರಂತರ.
************

2 thoughts on “ನಿರಂತರ – ಬಿ. ಆರ್. ಲಕ್ಷ್ಮಣರಾವ್”

  1. ತ್ರಿವೇಣಿ ಅಕ್ಕ,
    ಹಾಡು ಚಂದ ಇದೆ.
    ಅಂದ ಹಾಗೆ ‘ ಅಳುವ ಕಡಲೊಳು ತೇಲಿ ಬರುತಲಿದೆ… ‘ ಇದರ ಸಾಹಿತ್ಯ ತುಳಸಿವನದಲ್ಲಿ ಲಭ್ಯವಿದೆಯಾ?

  2. ಸುಂದರ ಕವಿತೆ..
    ಆದರೆ ರ ಸುಬ್ಬಾಭಟ್ಟರ ಮಗಳು, ಹೆಗ್ಗಡೆಯವರ ಮಗಳು ಅಂತೆಲ್ಲಾ ಹೇಳಬೇಡಿ..ನಮ್ಮ ಭಾಗವತರಿಗೆ ಕನವರಿಸಲು ಶುರುಮಾಡ್ತಾರೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.