ಚಿತ್ರ : ಇಂತಿ ನಿನ್ನ ಪ್ರೀತಿಯ (2008)
ಸಾಹಿತ್ಯ : ಜಯಂತ ಕಾಯ್ಕಿಣಿ
ಸಂಗೀತ : ಸಾಧು ಕೋಕಿಲ
ಗಾಯಕಿ : ವಾಣಿ
ಮಧುವನ ಕರೆದರೆ
ತನುಮನ ಸೆಳೆದರೆ
ಶರಣಾಗು ನೀನು…. ಆದರೆ
ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ್ಯ ಮುರಿದು ಬಾ ಬಳಿಗೆ ಎಂದಿದೆ
ಶರಣಾಗು …. ಆದರೆ
ಸೆರೆಯಾಗು …. ಆದರೆ
ಕಂಗಳಲಿ ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು…. ಆದರೆ
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೋ ಹೋಗಿದೆ ಮರೆತು
ನಾನ್ಯಾರು ಹೇಳು …. ಆದರೆ
ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವ ರೇಖೆಗಳಲ್ಲಿ
ನಾ ಮೂಡಬೇಕು…. ಆದರೆ
ಎದುರಿದ್ದೂ ಕರೆಯುವೆ ಏಕೆ?
ಜೊತೆಯಿದ್ದೂ ಮರೆಯುವೆ ಏಕೆ?
ನಿನ್ನೊಲವು ನಿಜವೇ …. ಆದರೆ
ಮಧುವನ ಕರೆದರೆ
ತನುಮನ ಸೆಳೆದರೆ
ಶರಣಾಗು ನೀನು…. ಆದರೆ
ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ್ಯ ಮುರಿದು ಬಾ ಬಳಿಗೆ ಎಂದಿದೆ
ಶರಣಾಗು ಆದರೆ…. ಸೆರೆಯಾಗು ಆದರೆ ….
_________________________________
ಬೇಜಾರಿನ ಸಂಗತಿಯೆಂದರೆ ಹಾಡಿನ ಸಂಗೀತ ನಮಸ್ತೇ ಲಂಡನ್ನಿನ ‘ಮೆ ಜಹಾ ರಹೂ’ ನಿಂದ ಅನುಕರಿಸಿದ್ದು.
ಹಾಡು ಬಹಳ ಚಂದ ಉಂಟು. ಸುಮಾರು ಸಲ ಕೇಳಿದ್ದೇನೆ. ಗಾಯಕಿ ವಾಣಿ ತುಂಬಾ ಚೆನ್ನಾಗಿ ಹಾಡಿದ್ದಾರೆ . ನನ್ನ ತಂಗಿ ದಿನಕ್ಕೆ ಸುಮಾರು ಸಲ ಇದೇ ಹಾಡು ಕೇಳಿಸಿ ಕೇಳಿಸಿ , ‘ಎಷ್ಟು ಚೆನ್ನಾಗಿದೆ ಅಲ್ವಾ’ ಅಂತ ಹೇಳಿ ಹೇಳಿ ತಲೆ ತಿಂತಾಳೆ.
ವಾಣಿಯವರ ಮಧುರ ಧ್ವನಿಯಲ್ಲಿ ಈ ಸುಂದರ ಗೀತೆಯನ್ನು ಕೇಳಿ ಸಂತೋಷವಾಯಿತು. ಧನ್ಯವಾದಗಳು, ತ್ರಿವೇಣಿ.
-ಕಾಕಾ
ಇವತ್ತು ಶುಭದಿನ ನಿಮ್ಮ ತಾಣಕ್ಕೆ ಭೇಟಿ. ತುಂಬ ಇಷ್ಟ ಆಯಿತು ತುಳಸೀವನ…
ಶುಭದಾ
ವಾಣಿಯವರ ಮಧುರವಾಣಿಯನ್ನು ಕೇಳಲು ಅವಕಾಶ ಮಾಡಿಕೊಟ್ಟಿರಿ. ಧನ್ಯವಾದಗಳು, ತ್ರಿವೇಣಿ.
ಮನಸ್ವಿನಿ, ಒಳ್ಳೆಯ ಹಾಡು ಕೇಳಿಸಿದ ತಂಗಿಗೆ thank ಹೇಳುವ ಬದಲು ತಲೆ ತಿಂತಾಳೆ ಅನ್ನೋದು ನ್ಯಾಯವೇ? 🙂
ಶುಭದಾ, ಸುಮಾಲಿನಿ, ತುಳಸಿವನದ ಹೊಸ ಅತಿಥಿಗಳು ನೀವು. ಸುಸ್ವಾಗತ. 🙂
ಸುನಾಥ ಕಾಕಾ, ಹಾಡು ಇಷ್ಟವಾಯಿತೇ? ಹೊಸ ಕಾಲದ ಹಾಡುಗಳು ನಿಮಗೆ ಹೇಗನ್ನಿಸುತ್ತವೆ?
“ಬೇಜಾರಿನ ಸಂಗತಿಯೆಂದರೆ ಹಾಡಿನ ಸಂಗೀತ ನಮಸ್ತೇ ಲಂಡನ್ನಿನ ‘ಮೆ ಜಹಾ ರಹೂ’ ನಿಂದ ಅನುಕರಿಸಿದ್ದು.”
ಚೇತನ್ , ಇದು ‘ಮೆ ಜಹಾ ರಹೂ’ ಹಾಡಿನ ನಕಲು ಅಂತ ಮೊದಲಬಾರಿ ಕೇಳಿದಾಗಲೇ ಗೊತ್ತಾಯಿತು. ಅನುಕರಿಸಿದ್ದಕ್ಕೆ ಬೇಜಾರಿಲ್ಲ. ಆದರೆ ಯಾರದೋ ಟ್ಯೂನ್ ತಮ್ಮದು ಎಂದು ರಾಜಾರೋಷವಾಗಿ ಹೆಸರು ಹಾಕಿಕೊಳ್ಳುವ ಪ್ರವೃತ್ತಿ ಮಾತ್ರ ಬೇಸರ ಉಂಟುಮಾಡಿತು. ಈ ಪಟ್ಟಿಯಲ್ಲಿ ಸಾಧು ಮೊದಲಿಗರಲ್ಲ, ಕೊನೆಯವರಾಗಿರಲೂ ಸಾಧ್ಯವಿಲ್ಲ!
ಹಾಡುಗಳ ಟ್ಯೂನ್ ನಕಲು ಮಾಡುವದು ಹೊಸದೇನಲ್ಲ. ಆದರೆ ಅದನ್ನೂ ಜಾಣತನದಿಂದ ಮಾಡಿದರೆ, ಕೇಳುಗರು ಮೆಚ್ಚಿಯಾರು. ೪೦ ವರ್ಷಗಳ ಹಿಂದೆ, ಆರ್. ಎನ್. ಜಯಗೋಪಾಲರು ಬರೆದ ಒಂದು ಸುಂದರ ಚಿತ್ರಗೀತೆ, ಇಂಗ್ಲಿಶ್ tune ಒಂದರ ನಕಲಾಗಿತ್ತು. ಇತ್ತೀಚೆಗೆ ಬಿ. ಆರ್. ಲಕ್ಷ್ಮಣರಾವ ಬರೆದ “ಬಾ ಮಳೆಯೆ ಬಾ……” ಈ ಗೀತೆಯ ಮೊದಲೆರಡು ಸಾಲುಗಳು ಒಂದು ಕಾಲದ ಹಿಂದೀ ಗೀತೆಯೊಂದರ ನಕಲೇ ಆಗಿವೆ(“ಬರಖಾ ರಾಣಿ ಜರಾ ದಮ್ಸೆ ಬರಖೋ, ಮೇರಾ ದಿಲವರ ಜಾ ನ ಪಾಯೇ, ಜೋರ ಸೇ ಬರಖೋ”). ಆದರೆ ಮುಂದಿನ ಸಾಲುಗಳು ಹಾಗು ಕೊನೆಯ ನುಡಿ ಮಾತ್ರ ಅದ್ಭುತವಾಗಿವೆ.
ಈಗಿನ ಚಿತ್ರಗೀತೆಗಳಲ್ಲಿ ಮಾಧುರ್ಯವಿಲ್ಲ. ಅಲ್ಲದೇ knowledgibilityಯೂ ಇಲ್ಲ. ಒಂದು ಹಳೇ ಕನ್ನಡ ಚಿತ್ರದಲ್ಲಿ ಈ ತರಹದ ಸಾಲುಗಳಿವೆಃ
“ಗಂಡೇ gongಉ
ಹೆಣ್ಣೇ songಉ
denಏ cabaret!”
ಈ ಸಾಲುಗಳಲ್ಲಿ appropriate ಹೋಲಿಕೆಯಲ್ಲದೇ, ಗಮನಿಸಬೇಕಾದ ಅಂಶವೆಂದರೆ, cabaret ಈ ಪದದ ಅರ್ಥ ಕವಿಗೆ ಗೊತ್ತಿರುವದುಃ Cabaret is a place where cabaret dance is played.
ಕಾಕಾ, ಬಿ. ಆರ್. ಲಕ್ಷ್ಮಣರಾವ್ ಕವಿತೆ ಉರ್ದು ಗಜಲಿನ ಭಾವಾನುವಾದವೇ. ನೀವು ಬರೆದಿರುವ ಹಿಂದಿಯ ‘ಬರಖಾ ರಾಣಿ ಜರಾ ದಮ್ಸೆ ಬರಖೋ’ ಕೂಡ ಅದರಿಂದಲೇ ಪ್ರೇರಣೆ ಪಡೆದಿರಬಹುದು. ಮುಖೇಶ್ ಹಾಡಿರುವ ಆ ಹಾಡನ್ನೂ ಕೇಳಿದೆ. ಚೆನ್ನಾಗಿದೆ.
ತ್ರಿವೇಣಿಯವರೆ,
ನನಗೆ ಪ್ರಿಯವಾದ ಹಾಡು. 🙂
ಇದರ ಪ್ರೇರಣೆಯಿಂದ ನಾನೂ ಕೂಡ ಒಂದು ಲೇಖನ ಬರೆದಿದ್ದೇನೆ.
ನಿಮ್ಮ ಬ್ಲಾಗ್ ಲಿಂಕ್ ಸಿಕ್ಕಿತು. ಈ ಹಾಡಿನ ಪ್ರೇರಣೇಯಿಂದ ನೀವು ಬರೆದಿರುವ ಲೇಖನ ಓದಿ, ತಿಳಿಸುತ್ತೇನೆ.