ಸೀತಾ – (1970)
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯಕಿ: ಎಸ್.ಜಾನಕಿ
ಬರೆದೆ ನೀನು ನಿನ್ನ ಹೆಸರ
ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೋ ಏನೋ
ನನ್ನ ಮನದ ಗುಡಿಯಲಿ
ಮಿಡಿದೆ ನೀನು ಪ್ರಣಯ ನಾದ
ಹೃದಯ ವೀಣೆ ಅದರಲಿ
ಬೆರೆತು ಹೋದೆ ಮರೆತು ನಿಂದೆ
ಅದರ ಮಧುರ ಸ್ವರದಲಿ
ಕಂಗಳಲ್ಲೇ ಕವನ ಬರೆದು
ಕಳಿಸಿದೆ ನೀ ಇಲ್ಲಿಗೆ
ಅಂಗಳದೆ ಅರಳಿತಾಗ
ನನ್ನ ಒಲವ ಮಲ್ಲಿಗೆ
ನಿನ್ನ ನಗೆಯ ಬಲೆಯ ಬೀಸಿ
ಹಿಡಿದೆ ನನ್ನ ಜಾಲದೆ
ಬಂಧಿಸಿದೆ ನನ್ನನಿಂದು
ನಿನ್ನ ಪ್ರೇಮಪಾಶದೆ
ಆರ್. ಎನ್. ಜಯಗೋಪಾಲ ಕೆಲವು ಅತ್ಯುತ್ತಮ ಚಿತ್ರಗೀತೆಗಳನ್ನು ನೀಡಿದ್ದಾರೆ. Cinematic compulsionಗಳಿಂದಾಗಿ, ಕೆಲವೆಡೆ ಪರಭಾಷಾ ಗೀತೆಗಳ tune ಅಥವಾ content ಉಪಯೋಗಿಸಿಕೊಂಡಿದ್ದಾರೆ. “ಸೀತಾ” ಚಿತ್ರದ ಈ ಗೀತೆಗೆ ಪ್ರೇರಣೆಯಾದ ಹಿಂದಿ ಚಿತ್ರಗೀತೆ ಈ ರೀತಿಯಾಗಿದೆಃ
” ಕೋರಾ ಕಾಗಜಸಾ ಥಾ ಮನ್ ಮೇರಾ
ಲಿಖಾ ಹೈ ನಾಮ್ ಜಿಸ್ ಪೇ ತೇರಾ”
ಸುನಾಥರೇ, ನಿಜ. ಇದೇ ರೀತಿ ಇನ್ನು ಕೆಲವು ಹಾಡುಗಳಿವೆ.
* ‘ಸಂಗಮ್’ ಚಿತ್ರದಲ್ಲಿ ರಫಿ ಹಾಡಿರುವ “ಯೇ ಮೇರಾ ಪ್ರೇಮಪತ್ರ ಪಡಕರ್ ಕೆ ತುಮ್…” ಹಾಡಿನಿಂದ ಸ್ಪೂರ್ತಿ ಪಡೆದು ಆರ್. ಎನ್. ಜೆ. ರಚಿಸಿರುವ ಗೀತೆ – “ಇದೇನೇ ಪ್ರಥಮ ಪ್ರೇಮಗೀತೆ, ಈ ನನ್ನ ಎದೆಯ ಭಾವಗೀತೆ (ಚಿತ್ರ – ಸಪ್ನ)
* “ಚಿರಂಜೀವಿ” ಚಿತ್ರದ ಪ್ರಸಿದ್ಧ ಗೀತೆ “ನಿನ್ನ ಕಂಗಳ ಜ್ಯೋತಿಯಾಗುವೆ ನಾನು” ಸಾಹಿತ್ಯವೂ ಹಿಂದಿ ಹಾಡಿನ ಪ್ರೇರಣೆ ಪಡೆದಿದೆ. (ತೇರೆ ನೈನೋ ಕೆ ಮೈ ದೀಪ್ ಜಲಾವೂಂಗಾ, ಚಿತ್ರ ; ಅನುರಾಗ್)
* “ಸರಿ ನಾ ಹೋಗಿ ಬರುವೆ…” ಹಾಡಿನ ಮೂಲ – ‘ಆನ್ ಮಿಲೋ ಸಜನಾ’ ಚಿತ್ರದ ಅಚ್ಚಾ ತೋ ಹಮ್ ಚಲ್ತೆ ಹೈ.
ಆರ್.ಎನ್.ಜೆ. ಅವರ ಗೀತೆಗಳು ನಮ್ಮ ಕಿವಿ, ಮನಸ್ಸಿಗೆ ಮುದ ನೀಡಿವೆ. ನೀಡುತ್ತಾಯಿವೆ.