ಹರಿ ನಿನ್ನೊಲುಮೆಯು ಆಗುವ ತನಕ

ರಚನೆ – ಪುರಂದರದಾಸರು
ಗಾಯಕ – ಶಶಿಧರ್ ಕೋಟೆ

ಹಾಡು ಕೇಳಿ

ಹರಿ ನಿನ್ನೊಲುಮೆಯು ಆಗುವ ತನಕ ಅರಿತು ಸುಮ್ಮನಿರುವುದೇ ಲೇಸು
ಮರಳಿ ಮರಳಿ ತಾ ಪಡೆಯದ ಭಾಗ್ಯ ಮರುಗಿದರೆ ತನಗಾದೀತೆ ||ಪ||

ದೂರು ಬರುವ ನಂಬಿಕೆಯನು ಕೊಟ್ಟರೆ ದುರ್ಜನ ಬರುವುದು ತಪ್ಪೀತೆ
ದೂರ ನಿಂತು ಮೊರೆ ಇಟ್ಟು ಕೂಗಿದರೆ ಚೋರರಿಗೆ ದಯ ಪುಟ್ಟೀತೆ
ಜಾರ ನಾರಿ ತಾ ಪತಿವ್ರತೆ ಎನ್ನಲು ಜಾಣರಿಗೆ ನಿಜ ತೋರೀತೆ
ಊರ ಬಿಟ್ಟು ಬೇರೂರಿಗೆ ಪೋದರೆ ಪ್ರಾರಬ್ಧವು ಬೇರಾದೀತೆ ||೧||

ಪಾಟ ಪಡುವುದು ಹಣೆಯಲ್ಲಿರಲು ಪಟ್ಟಮಂಚ ತನಗಾದೀತೆ
ಹೊಟ್ಟೆಯಲಿ ಸುತರಿಲ್ಲೆಂದು ಹೊರಳಲು ಹುಟ್ಟು ಬಂಜೆಗೆ ಮಕ್ಕಳಾದೀತೆ
ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ ಬೇಟೆಗಾರಗೆ ದಯ ಬಂದೀತೆ
ಕೆಟ್ಟ ಹಾವು ತಾ ಕಚ್ಚಿದ ವಿಷವದು ಬಟ್ಟೆಯಲೊರೆಸಲು ಹೋದೀತೆ ||೨||

ಧನಿಕನ ಕಂಡು ಪಾಡಿ ಪೊಗಳಿದರೆ ದಾರಿದ್ಯವು ತಾ ಹಿಂಗೀತೆ
ದಿನದಿನ ನೊಸಲೊಳು ನಾಮವ ಇಟ್ಟರೆ ದೇವಗೆ ತೃಪ್ತಿಯು ಆದೀತೆ
ಎಣಿಸಿಕೊಂಡು ಏಳ್ ಹಂಜಿಯ ನೂತರೆ ಅಣೆಯದ ಸಾಲವು ತೀರೀತೆ
ಅನುದಿನದಲಿ ಶ್ರೀ ಪುರಂದರ ವಿಠಲನ ನೆನೆಯದಿದ್ದರೆ ಭವ ಹಿಂಗೀತೆ ||೩||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ

ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ ||ಪಲ್ಲವಿ|| ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆನು ||ಅನು|| ಜ್ಞಾನವೆಂಬ ನವರತ್ನದ ಮಂಟಪದ ಮಧ್ಯದಲಿ ವೇಣುಲೋಲನ ಕುಳ್ಳಿರಿಸಿ ಮೋದದಿಂದ ಭಜಿಸುವೆನು ||೧|| ಭಕ್ತಿ ರಸವೆಂಬ ಮುದ್ದು ಮಾಣಿಕ್ಯದ ಹರಿವಾಣದಿ ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೆನು

ವಿಜಯ ಕವಚವಿಜಯ ಕವಚ

ರಚನೆ : ವ್ಯಾಸ ವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ) ಪುತ್ತೂರು ನರಸಿಂಹ ನಾಯಕ್ ದನಿಯಲ್ಲಿ – ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ ದಾಸರಾಯನ ದಯವ ಸೂಸಿ ಪಡೆದನಾ ದೋಷರಹಿತನಾ ಸಂತೋಷಭರಿತನಾ ||೧|| ಜ್ಞಾನವಂತನ ಬಲು ನಿಧಾನಿ

ಹರಿಕಥಾಮೃತಸಾರ – 02 – ಕರುಣಾ ಸಂಧಿಹರಿಕಥಾಮೃತಸಾರ – 02 – ಕರುಣಾ ಸಂಧಿ

ಹರಿಕಥಾಮೃತಸಾರ – ಕರುಣಾ ಸಂಧಿ ರಚನೆ : ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರ ಗುರುಗಳ| ಕರುಣದಿಂದಾಪನಿತು ಪೇಳುವೆ| ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ|| ಶ್ರವಣ ಮನಕಾನಂದವೀವುದು | ಭವಜನಿತ ದುಃಖಗಳ ಕಳೆವುದು | ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು || ಭುವನ ಪಾವನನೆನಿಪ ಲಕ್ಷ್ಮೀ | ಧವನ