ಕರುಣಿಸೋ ರಂಗಾ…ಕರುಣಿಸೋ

ರಚನೆ – ಪುರಂದರದಾಸರು
ಗಾಯಕ – ಭೀಮಸೇನ ಜೋಷಿ

ಹಾಡು ಕೇಳಿ

ಕರುಣಿಸೋ ರಂಗಾ ಕರುಣಿಸೋ
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪಲ್ಲವಿ||

ರುಕುಮಾಂಗದನಂತೆ ವ್ರತವ ನಾನರಿಯೆನೊ
ಶುಕ ಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿ*ಯಂತೆ ಧ್ಯಾನವ ಮಾಡಲರಿಯೆ
ದೇವಕಿಯಂತೆ ಮುದ್ದಿಸಲರಿಯೆನೊ ||೧||

ಗರುಡನಂದದಿ ಪೊತ್ತು ತಿರುಗಲು ಅರಿಯೆ
ಕರೆಯಲು ಅರಿಯೆ ಕರಿರಾಜನಂತೆ
ವರ ಕಪಿಯಂತೆ ದಾಸ್ಯವ ಮಾಡಲರಿಯೆ
ಸಿರಿಯಂತೆ ನೆರೆದು ಮೋಹಿಸಲರಿಯೆನೊ ||೨||

ಬಲಿಯಂತೆ ದಾನವ ಕೊಡಲು ಅರಿಯೆನೊ
ಭಕ್ತಿ ಛಲವನರಿಯೆ ಪ್ರಹ್ಲಾದನಂತೆ
ಒಲಿಸಲು ಅರಿಯೆ ಅರ್ಜುನನಂತೆ ಸಖನಾಗಿ
ಸಲಹೋ ದೇವರ ದೇವ ಪುರಂದರವಿಠಲ ||೩|

___________________________

*ಬಕವೈರಿ ಯಾರು?

7 thoughts on “ಕರುಣಿಸೋ ರಂಗಾ…ಕರುಣಿಸೋ”

  1. ಬಕವೈರಿ ಭೀಮನಲ್ಲವೇ?

    ಆದರೇ ಭೀಮ ಯಾವಾಗ ಧ್ಯಾನ ಮಾಡಿದ್ದು ಅಂತ ನನಗೆ ತಿಳಿದಿಲ್ಲ

  2. sritri says:

    ಹಂಸಾನಂದಿಯವರೆ, ನಿಜ. ಭೀಮನೂ ಕೃಷ್ಣ ಭಕ್ತನಾದ್ದರಿಂದ ಆಗೀಗ ಧ್ಯಾನ ಮಾಡಿರಬಹುದಾದರೂ, ದಾನದಲ್ಲಿ ಬಲಿ, ರುಕ್ಮಾಂಗದ ವ್ರತಕ್ಕೆ, ಭಕ್ತಿಯಲ್ಲಿ ಪ್ರಹ್ಲಾದನಂತೆ , ಭೀಮ ಧ್ಯಾನಕ್ಕೆ ಪ್ರಖ್ಯಾತನಲ್ಲ. ಈ ಗೊಂದಲದಿಂದಾಗಿಯೋ ಏನೋ, ಕೆಲವರು ಹಾಡುವಾಗ- “ಬಕವೈರಿಯಂತೆ ಧ್ಯಾನವ ಮಾಡಲರಿಯೆ” ಸಾಲನ್ನು “ಬಕನಂತೆ ಧ್ಯಾನ ಮಾಡಲರಿಯೆ” ಎಂದು ಹಾಡುವುದನ್ನು ಕೇಳಿದ್ದೇನೆ. “ಬಕಧ್ಯಾನ” ಎಂಬ ನುಡಿಗಟ್ಟು ಇದೆಯಾದರೂ, ಅದು ಹೊಗಳಿಕೆಗಿಂತಲೂ ಲೇವಡಿಯ ಅರ್ಥದಲ್ಲಿ ( ಮೊಸಳೆ ಕಣ್ಣೀರಿನಂತೆ ) ಬಳಕೆಯಾಗುವುದರಿಂದ ಅದೂ ಕೂಡ ಸರಿಯಲ್ಲವೆಂದು ನನಗನಿಸಿದೆ.

  3. sunaath says:

    ನನ್ನ ಅಭಿಪ್ರಾಯವೂ ಸಹ ಹಂಸಾನಂದಿಯವರ ಅಭಿಪ್ರಾಯದಂತೆಯೇ ಇದೆ.
    ಭೀಮಸೇನನು ತನ್ನ ಪೂರ್ವಜನ್ಮಗಳಲ್ಲಿ ಮಾರುತಿ, ಪ್ರಹ್ಲಾದ ಹಾಗೂ ಮಧ್ವಾರ್ಯರಾಗಿರಲಿಲ್ಲವೆ?
    ಹಾಗಿದ್ದರೆ, ಬಕವೈರಿ ಧ್ಯಾನವು ಸರಿಹೊಗುತ್ತದೇ.

  4. sunaath says:

    ಮತ್ತಿಷ್ಟು ಮಾಹಿತಿ.
    ಅರ್ಜುನನು ಕೃಷ್ಣನ ಪ್ರಕಟ ಭಕ್ತನಾಗಿದ್ದ. ಆದರೆ, ಭೀಮಸೇನನು ಗುಪ್ತಭಕ್ತ. ಭೀಮಸೇನನಿಗೆ ಪರಮಜ್ಞಾನಿಯೆಂದು ಕರೆದಿದ್ದಾರೆ. ಧರ್ಮರಾಜನು ಮೈಮರೆತಾಗ, ಭೀಮನು ಅವನಿಗೆ ಎಚ್ಚರಿಸಿದ್ದುಂಟು.
    ಆದುದರಿಂದ ಬಕವೈರಿ ಧ್ಯಾನವೆಂದರೆ, ಭೀಮನ ಗುಪ್ತಧ್ಯಾನ ಎಂದೇ ಅರ್ಥವಾಗುವದಲ್ಲವೆ?

  5. sritri says:

    ಸುನಾಥ ಕಾಕಾ, ಬಕಾಸುರನನ್ನು ಕೊಂದ ಭೀಮ, ಈ ಹಾಡಿನಲ್ಲಿ ಬರುವ ಬಕವೈರಿ ಹೌದೇ? ಅಲ್ಲವೇ? ಎಂಬ ನನ್ನ ಅನುಮಾನ ಪರಿಹರಿಸಿದ್ದಕ್ಕೆ ಧನ್ಯವಾದಗಳು.

    ಆದರೆ ಭೀಮ, ಪ್ರಹ್ಲಾದನ ಅವತಾರವಲ್ಲ ಅಲ್ಲವೇ? ಪ್ರಹ್ಲಾದನ ಅವತಾರವೆಂಬ ಪ್ರತೀತಿ ಇರುವುದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳಿಗೆ.

  6. Shreeni says:

    ಹೌದು. ಶಂಕು ಕರ್ಣನೆಂಬ ಗಂಧರ್ವ, ಕೃತಯುಗದಲ್ಲಿ ಪ್ರಹ್ಲಾದನಾಗಿ, ನಂತರ ದ್ವಾಪರದಲ್ಲಿ ಬಾಹ್ಲೀಕನಾಗಿ, ಕಲಿಯುಗದಲ್ಲಿ ಎರಡು ಬಾರಿ (ವ್ಯಾಸರಾಜರಾಗಿ ಮತ್ತು ರಾಘವೇಂದ್ರರಾಗಿ) ನಮ್ಮನ್ನು ಅನುಗ್ರಹಿಸಿದ್ದಾರೆ.

    ಶ್ರೀನಿ

  7. M G Harish says:

    ವಾವ್.. ಎಷ್ಟೊಂದು ವಿಷಯ ತಿಳೀತು ಕಮೆಂಟ್ಗಳಲ್ಲಿ!! ಎಲ್ಲರಿಗೂ ಧನ್ಯವಾದಗಳು 🙂

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಅಂತರಂಗದ ಕದವು ತೆರೆಯಿತಿಂದುಅಂತರಂಗದ ಕದವು ತೆರೆಯಿತಿಂದು

ರಚನೆ : ವಿಜಯದಾಸರು ಗಾಯಕ : ಪುತ್ತೂರು ನರಸಿಂಹ ನಾಯಕ್ ಹಾಡು ಕೇಳಿ ಅಂತರಂಗದ ಕದವು ತೆರೆಯಿತಿಂದು ||ಪ|| ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತು ಎನಗೆ ||ಅ|| ಏಸುದಿನವಾಯಿತೊ ಬೀಗಮುದ್ರೆಯ ಮಾಡಿ ವಾಸವಾಗಿದ್ದರೋ ದುರುಳರಿಲ್ಲಿ ಮೋಸವಾಯಿತು ಇಂದಿನ ತನಕ ತಮಸಿನ

ಒಲ್ಲನೋ ಹರಿ ಕೊಳ್ಳನೋಒಲ್ಲನೋ ಹರಿ ಕೊಳ್ಳನೋ

ಒಲ್ಲನೋ ಹರಿ ಕೊಳ್ಳನೋ ||ಪ|| ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ ||ಅನು|| ಸಿಂಧು ಶತಕೋಟಿ ಗಂಗೋದಕವಿದ್ದು | ಗಂಧ ಸುಪರಿಮಳ ವಸ್ತ್ರವಿದ್ದು || ಚಂದುಳ್ಳ ಆಭರಣ ಧೂಪ ದೀಪಗಳಿದ್ದು | ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ||೧|| ದಧಿಕ್ಷೀರ

ವಿಜಯ ಕವಚವಿಜಯ ಕವಚ

ರಚನೆ : ವ್ಯಾಸ ವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ) ಪುತ್ತೂರು ನರಸಿಂಹ ನಾಯಕ್ ದನಿಯಲ್ಲಿ – ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ ದಾಸರಾಯನ ದಯವ ಸೂಸಿ ಪಡೆದನಾ ದೋಷರಹಿತನಾ ಸಂತೋಷಭರಿತನಾ ||೧|| ಜ್ಞಾನವಂತನ ಬಲು ನಿಧಾನಿ