ರಾಗ – ನಾಟ, ತಾಳ – ಜಂಪೆ
ರಚನೆ – ಪುರಂದರದಾಸರು
ಹಾಡು ಕೇಳಿ
ಜಯ ಜಾನಕೀಕಾಂತ ಜಯ ಸಾಧು ಜನ ವಿನುತ
ಜಯತು ಮಹಿಮಾನಂತ ಜಯ ಭಾಗ್ಯವಂತ ||ಪಲ್ಲವಿ||
ದಶರಥಾತ್ಮಜ ವೀರ ದಶಕಂಠ ಸಂಹಾರ
ಪಶುಪತೀಶ್ವರ ಮಿತ್ರ ಪಾವನ ಚರಿತ್ರ
ಕುಸುಮಬಾಣ ಸ್ವರೂಪ ಕುಶಲ ಕೀರ್ತಿ ಕಲಾಪ
ಅಸಮ ಸಾಹಸ ಶಿಕ್ಷ ಅಂಬುಜದಳಾಕ್ಷ ||೧||
ಸಾಮಗಾನ ವಿಲೋಲ ಸಾಧುಜನ ಪರಿಪಾಲ
ಕಾಮಿತಾರ್ಥ ಪ್ರದಾತ ಕೀರ್ತಿ ಸಂಜಾತ
ಸೋಮ ಸೂರ್ಯ ಪ್ರಕಾಶ ಸಕಲ ಲೋಕಾಧೀಶ
ಶ್ರೀ ಮಹಾ ರಘುವೀರ ಸಿಂಧು ಗಂಭೀರ ||೨||
ಸಕಲ ಶಾಸ್ತ್ರ ವಿಚಾರ ಶರಣಜನ ಮಂದಾರ
ವಿಕಸಿತಾಂಬುಜ ವದನ ವಿಶ್ವಮಯ ಸದನ
ಸುಕೃತ ಮೋಕ್ಷಾಧೀಶ ಸಾಕೇತ ಪುರವಾಸ
ಭಕ್ತ ವತ್ಸಲ ರಾಮ ಪುರಂದರವಿಠಲ ||೩||