ರಚನೆ : ಕಮಲೇಶ ವಿಠಲ (ರಾಜಾ ಎಸ್. ಗುರುರಾಜಾಚಾರ್)
ಗಾಯಕ : ವಿದ್ಯಾಭೂಷಣ
ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರಾರಮ್ಮ||ಪಲ್ಲವಿ||
ಸುಮಾಸ್ತ್ರನಯ್ಯನ ಎದೆಯಲಿ ಸತತವೂ
ಅಭಿಮಾನದಲಿ ಮೆರೆವ ಮಹಾಮಹಿಮಳೇ ||ಅನು||
ಕನಕ ಮುಕುಟ ಮಂಡಿತ ಕುಟಿಲಾಳಕಜಾಲೇ | ಶ್ರೀ ಚಂ
ದನ ಕುಂಕುಮ ಕಸ್ತೂರಿ ತಿಲಕಾಂಕಿತ ಫಾಲೇ|
ಮಣಿಮಯ ಕುಂಡಲ ಶೋಭಿತ ಕರ್ಣಕಪೋಲೇ| ಚಂಪಕ
ನನೆ ನಾಸಾಗ್ರದೊಳೂಗುವ ಮೌಕ್ತಿಕ ಲೋಲೇ
ಮಿನುಗುವ ಮಾಣಿಕದ ಮಣಿಯಧರ ಪುಟದೊ
ಳಿನಿವರ ವಜ್ರದಿ ಕಣಿಗಳ ರಾಜಿ ದ
ಶನಯುತ ಸ್ಮೇರಾನನನ ಶುಭಕಾಂತಿಯಿಂ
ವನಜ ಭವನ ಮನೆಗೆ ಮಂಗಳಗರೆವ ||
ಕೊರಳೊಳು ಪರಿಮಳ ಪರಿಪರಿ ಪುಷ್ಪದ ಮಾಲೇ | ಒಪ್ಪುವ
ಕರಿರಾಜನ ಕರದಿರುವಿಕೆ ಕರಗಳ ಲೀಲೇ||
ಶರಣಗತ ಜನ ಪರಿಪಾಲನರತ ಶೀಲೇ | ಗಂಡನ |
ಪರಿರಂಭಣ ಸಾಮ್ರಾಜ್ಯದ ಸುಖದನುಕೂಲೇ||
ಕರುಣಿಸಮ್ಮ ತವ ಕರುಣ ಕಟಾಕ್ಷದ
ಸಿರಿಯ ಬೆಳಗಿನೊಳ್ ಪರಿಚರಿಸುವ ಸುಜ
ನರ ಚರಣಾಂಬುಜ ಪರಿಮಳದೊಳು ಮನ
ವೆರಗಿಸುವದು ಸೌಂದರ್ಯ ಶಿಖಾಮಣಿ ||
ರಮಣೀಯ ವಿಮಲ ಕಮಲದಳಾಯತನೇತ್ರೆ | ಚಂಪಕ |
ಸುಮದ ಸುವರ್ಣ ಪರಿಮಳದ ಸುಂದರ ಗಾತ್ರೇ
ಕಮಲ ಭವೇಂದ್ರಾದ್ಯಮರ ಮುನಿಗಣ ಸ್ತೋತ್ರೇ | ಶ್ರೀ
ಕಮಲೇಶ ವಿಠಲರಾಯನ ಕರುಣಕೆ ಪಾತ್ರೇ
ಭ್ರಮಿಸುವೆನು ಭವದ ತಿಮಿರದೊಳು ಅಘ
ಮಮ ಮದದಿಂದಲಿ ಸುಮಾರ್ಗವನರಿಯದೆ
ವಿಮಲದೃಷ್ಟಿ ಚಂದ್ರಮನಮೃತ ಕಿರಣ
ನಮಗೆ ಸಲಿಸೆ ಮಾರಮಣೆ ಮಜ್ಜನನಿ ||
ನನ್ನ ಅಮ್ಮನ favorite ಹಾಡು. ಯಾರಾದ್ರೂ ಶಶಿಕಲಾ/ಪುಟ್ಟಿ ಓಂದು ಹಾಡು ಹೇಳ್ರಿ ಅಂದ್ರೆ ರಮಾಸಮುದ್ರನ ಕುಮಾರಿ ಬಂದ್ಲು ಅಂತಾನೇ ಃ) ಹೀಗಾಗಿ ಅಮ್ಮನ ಧಾಟಿನೇ ಛಲೋ. ವಿದ್ಯಾಭೂಷಣರ ರಾಗ just about OK 🙂
ಅದು ಬೇರೆ ಹಾಡು., ಇದಲ್ಲ. ” ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರಾರಮ್ಮ” ಅಂತಾನೆ ಪಲ್ಲವಿ. ಆದರೆ ಅನುಪಲ್ಲವಿ “ಉಮೇಶ ಮೊದಲಾದ …..ಭ್ರಮಿಸಿ ನಿನ್ನ ಪಾದಕಮಲ….”
ಅಂತೇನೋ ಇದೆ.. ”
ಅದು ಶೇಷವಿಠಲರ ಅಂಕಿತ, ಇದು ಕಮಲೇಶ ವಿಠಲರದು. ಆ ಹಾಡೇ ಈ ಹಾಡಿಗೆ ಸ್ಪೂರ್ತಿ ಅಂತ ನನ್ನ ಅನಿಸಿಕೆ.
“ವಾಸವನುತ ಸಿರಿಶೇಷವಿಠಲನೊಳು ವಾಸವ ಮಾಡುವಳೇ
ಘಾಸಿಗೊಳಿಸದಲೆ ಈ ಸಮಯದಲ್ಲಿ… ವಾಸುದೇವಗೆ ಪೇಳಿ ಪೋಷಿಸಬೇಕಮ್ಮಾ”
ರಮಾ, ಸಮುದ್ರನ ಕುಮಾರಿ, ನಿನ್ನ ಸರಿ ಸಮಾನರಾರಮ್ಮ ? 🙂
ಓಹ್ ಓಕೇ
ನಮಸ್ತೆ ತ್ರಿವೇಣಿಯವರಿಗೆ ,
ಪದ್ಯ ಚೆನ್ನಾಗಿತ್ತು.ಆದರೆ ನಾನು ಇದೇ ಮೊದಲು ಕೇಳಿದ್ದು. ‘ಅವಧಿ’ಯಲ್ಲಿ ನಿಮ್ಮ ಮತ್ತು ಮನುಮುರ್ತಿ ,ಜಯಂತ ಕಾಯ್ಕಿಣಿ ಅವರ ಫೋಟೋ ನೋಡಿದೆ.
ಶಶಿಯವರಿಗೆ ಧನ್ಯವಾದಗಳು. 🙂