ರಾಮಲಿಂಗ ಎನ್ನಂತರಂಗ

ರಚನೆ – ವಿಜಯದಾಸರು

ವಿದ್ಯಾಭೂಷಣ

ಲಿಂಗ ರಾಮಲಿಂಗ ಎನ್ನಂತರಂಗ
ಮಂಗಳಾಂಗನೆ ಸರ್ವೋತ್ತುಂಗನೇ ||ಪಲ್ಲವಿ||

ಮಂದಾಕಿನಿಧರಗೆ ಗಂಗಾಂಬು ಮಜ್ಜನವೇ
ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೇ

ಇಂದು ರವಿ ನೇತ್ರನಿಗೆ ಕರ್ಪೂರದಾರತಿಯೇ
ಕಂದರ್ಪ ಜಿತಗೆ ಮಿಗಿಲಾಪೇಕ್ಷೆಯೇ ||೧||

ಘನ ವಿದ್ಯಾತುರಗೆ ಮಂತ್ರ ಕಲಾಪವೇ
ಧನಪತಿಯ ಸಖಗೆ ಕೈಕಾಣಿಕೆಯೇ ?

ಮನೆ ರಜತ ಪರ್ವತಗೆ ಫಣಿಯ ಆಭರಣವೇ
ಮನೋ ನಿಯಾಮಕಗೆ ಎನ್ನ ಬಿನ್ನಹವೇ ? ||೨||

ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೇ
ಗೌರಿಯ ರಮಣಗೆ ಈ ಸ್ತ್ರೋತ್ರವೇ

ವೀರ ರಾಘವ ವಿಜಯ ವಿಠಲನ ನಿಜ ಹಸ್ತ
ವಾರಿಜ ದಳದಿಂದ ಉದ್ಭವಿಸಿದ ||೩||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾ

ರಚನೆ : ಶೇಷ ವಿಠಲ ಬಾರೋ ಗುರು ರಾಘವೇ೦ದ್ರ ಬಾರಯ್ಯ ಬಾ ಬಾ ಬಾರೋ ಗುರು ರಾಘವೇಂದ್ರ ||ಪ|| ಹಿಂದುಮು೦ದಿಲ್ಲೆನಗೆ ನೀ ಗತಿ ಎ೦ದು ನ೦ಬಿದೆ ನಿನ್ನ ಪಾದವ ಬ೦ಧನವ ಬಿಡಿಸೆನ್ನ ಕರಪಿಡಿ ನ೦ದಕ೦ದ ಮುಕು೦ದ ಬ೦ಧೊ |ಅ.ಪ| ಸೇವಕನೆಲೊ ನಾನು

ಆರು ಬದುಕಿದರೇನು ಆರು ಬಾಳಿದರೇನು – ಪುರಂದರ ದಾಸರುಆರು ಬದುಕಿದರೇನು ಆರು ಬಾಳಿದರೇನು – ಪುರಂದರ ದಾಸರು

ರಚನೆ : ಪುರಂದರದಾಸರು ಆರು ಬದುಕಿದರೇನು ಆರು ಬಾಳಿದರೇನು ಪೂರ್ವ ಜನ್ಮದ ಕರ್ಮ ವಿಧಿ ತೀರದನಕ ||ಪ|| ಪತಿ ಭಕುತಿಯಿಲ್ಲದಿಹ ಸತಿಯಿದ್ದು ಫಲವೇನು ಮತಿಯಿಲ್ಲದವಗೆ ಬೋಧಿಸಿದರೇನು ಪತಿಯಿಲ್ಲದವಳಿಗೆ ಬಹು ಭೋಗವಿದ್ದರೇನು ಮತಿ ಹೀನನಾದಂಥ ಮಗನ ಗೊಡವೇನು ಜ್ಞಾನವಿಲ್ಲದವ ನಿತ್ಯ ಸ್ನಾನ ಮಾಡಿ

ದಾಸೋಹಂ ತವ ದಾಸೋಹಂದಾಸೋಹಂ ತವ ದಾಸೋಹಂ

ದಾಸೋಹಂ ತವ ದಾಸೋಹಂ ತವ ದಾಸೋಹಂ ತವ ದಾಸೋಹಂ ||ಪಲ್ಲವಿ|| ವಾಸುದೇವ ವಿಗತಾಘಸಂಘ ತವ ||ಅನು ಪಲ್ಲವಿ|| ಜೀವಾಂತರ್ಗತ ಜೀವ ನಿಯಾಮಕ ಜೀವ ವಿಲಕ್ಷಣ ಜೀವನದ ಜೀವಾಧಾರಕ ಜೀವರೂಪಿ ರಾ- ಜೀವ ಭವಜನಕ ಜೀವೇಶ್ವರ ತವ ||೧|| ಕಾಲಾಂತರ್ಗತ ಕಾಲನಿಯಮಕ ಕಾಲಾತೀತ