ಆಹಾ! ಈ ಬೇಸಿಗೆ! ಇನ್ನೆಷ್ಟು ದಿನ?

ಅಂದೇ ಹೊಲದಿಂದ ಬಿಡಿಸಿತಂದ ಮುಸುಕಿನ ಜೋಳದ ತೆನೆಗಳು ಗ್ರಿಲ್ಲಿನಲ್ಲಿ ಸಿಜ಼ಿಗುಡುತ್ತಿರುವುದನ್ನು ನೋಡುತ್ತಾ ಕುಳಿತಿದ್ದೆವು. ಗೆಳತಿಯೊಬ್ಬಳು “ಅಯ್ಯೋ.. ಆಗಸ್ಟ್ ಕೂಡ ಮುಗಿಯುತ್ತಾ ಬಂತಲ್ಲಾ….” ಎಂದಳು ಆರ್ತ ದನಿಯಲ್ಲಿ. ‘ಅದಕ್ಕೇನೀಗ?’ ಎನ್ನುವಂತೆ ಅವಳತ್ತ ಎಲ್ಲರ ನೋಟ ಹರಿಯಿತು. ಅವಳು ಹೇಳದೆಯೇ ಆ ಕಣ್ಣುಗಳ ಭಾವ ನಮ್ಮೆಲ್ಲರನ್ನೂ ತಲುಪಿತು. ಆಗಸ್ಟ್ ಮುಗಿದರೆ…. ಸೆಪ್ಟೆಂಬರ್ ಕೂಡ ಪರವಾಗಿಲ್ಲ. ನಂತರ ಬರುವ ಚಳಿದಿನಗಳನ್ನು ನೆನೆದು ಈ ಆತ್ಮ ಮರುಕವೆಂದು ಎಲ್ಲರಿಗೂ ಅರ್ಥವಾಗಿತ್ತು. ‘ಯಾಕಳ್ತೀಯೋ ಬ್ರಾಹ್ಮಣ? ಅಂದರೆ, ಮುಂದೆ ಬರುವ ಏಕಾದಶಿಗೆ ಅಂದನಂತೆ’ ಎನ್ನುವ ಅಮ್ಮನ ಗಾದೆ ನೆನಪಾಗಿ, ನನಗರಿವಿಲ್ಲದೇ ನಗು ಬಂದಿತು. ಈಗ ಏಕಾದಶಿಯಾಗಲೀ, ನಿರಾಹಾರವಾಗಲೀ ಕಡ್ದಾಯವಲ್ಲದ ಕಾರಣ ಆ ಗಾದೆಯೂ ಅರ್ಥ ಕಳಕೊಂಡಿದೆ, ಇರಲಿ.

ವರ್ಷದ ಅರ್ಧಕ್ಕಿಂತ ಹೆಚ್ಚು ದಿನಗಳನ್ನು ತಿಂದುಹಾಕುವ ನಮ್ಮೂರಿನ ಚಳಿಗಾಲ ಅಂದರೆ ಸುಮ್ಮನೆ ಅಲ್ಲ. ಇಲ್ಲಿಗೆ ಬಂದ ಹೊಸದರಲ್ಲಿ ಮಂಜು ಸುರಿದಾಗೆಲ್ಲಾ ‘ಓಹೋ ಹಿಮಾಲಯ! ಓಹೋ ಹಿಮಾಲಯ!’ ಎಂದು ಹಾಡಿ ನಲಿಯುತ್ತಿದ್ದ ಮನಸ್ಸು ಇದೀಗ ತಹಬಂದಿಗೆ ಬಂದಿದೆ. ಈಗಲೂ ಮೊದಲ ಹಿಮ ಸುರಿವ ದಿನದ ಖುಷಿಗೆ ಕುಂದಿಲ್ಲವಾದರೂ, ಹೂವಿನಂತಹ ಹಿಮ ಗಟ್ಟಿಯಾಗಿ, ಗುಡ್ಡೆಹಾಕಿದೆಡೆಯೇ ಕಪ್ಪಾಗಿ, ತಿಂಗಳುಗಟ್ಟಲೆ ಕರಗದೇ ಉಳಿದಾಗ, ಆ ಮಂಜು ನಮ್ಮೆದೆಯ ಮೇಲೆಯೇ ದುಗುಡದ ಬೆಟ್ಟವಾಗಿ ಬೆಳೆಯುತ್ತಿದೆಯೇನೋ ಎಂಬ ಹತಾಶೆ ಆವರಿಸುವುದೂ ಇದೆ.

ತಂಬುಳಿಗೊಪ್ಪುವ ದೊಡ್ಡಪತ್ರೆ

ಆಹಾ! ಈ ಬೇಸಿಗೆ! ಇನ್ನೆಷ್ಟು ದಿನ? ಸೂರ್ಯಕಿರಣಕ್ಕೆ ಮೈಯೊಡ್ಡಿ, ಮುಗುಳ್ನಗುತ್ತಿರುವಂತೆ ತೋರುತ್ತಿರುವ ನನ್ನ ಕೈತೋಟದ ಗಿಡಗಳಿಗೆ ಇನ್ನೆಷ್ಟು ದಿನದ ಆಯಸ್ಸು ಬಾಕಿ ಉಳಿದಿದೆ? ತಮ್ಮಷ್ಟಕ್ಕೆ ಆರೋಗ್ಯದಿಂದ ನಳನಳಿಸುವ ಈ ಗಿಡಗಳು ಯಾವುದೋ ಹೇಳಹೆಸರಿಲ್ಲದ ಕಾಯಿಲೆ ಬಂದವರಂತೆ ನಿಸ್ತೇಜವಾಗುತ್ತಾ ಹೋಗಿ, ಕೊನೆಗೊಮ್ಮೆ ಸೂರ್ಯನಿಲ್ಲದೆ ನಾವೂ ಬದುಕಲಾರೆವು ಎನ್ನುತ್ತಾ ಸರಣಿ ಆತ್ಮಹತ್ಯೆ ಮಾಡಿಕೊಳ್ಳಲು ಇನ್ನೆಷ್ಟು ವಾರಗಳು ಉಳಿದಿವೆ? ಚಳಿ ಬರುವ ಮೊದಲು ಹುಲುಸಾಗಿ ಬೆಳೆದಿರುವ ದಂಟಿನ ಸೊಪ್ಪು ಬಿಡಿಸಿಕೊಂಡುಬಿಡಬೇಕು. ರಾಗಿ ಮುದ್ದೆ, ಸೊಪ್ಪಿನ ಹುಳಿಗೆ ಸಾಕು. ಹೀಗಂದುಕೊಂಡರೆ, ‘ಉರಿವ ಮನೆಯಲ್ಲಿ ಗಳು ಹಿರಿವ ಸಮಯಸಾಧಕತನ’ವೆನಿಸುತ್ತಿಲ್ಲ ತಾನೇ?

3 thoughts on “ಆಹಾ! ಈ ಬೇಸಿಗೆ! ಇನ್ನೆಷ್ಟು ದಿನ?”

 1. ಆಹಾ ಕನಕಾಂಬರ! ಅಂಬರಕ್ಕೆ ಮುಖಮಾಡಿದ ಕಂಚಿನ ಬಣ್ಣದ ಸುಕೋಮಲೆ. ರಾಗಿ ಮುದ್ದೆ, ಸೊಪ್ಪಿನ ಹುಳಿಗೆ ಜೊತೆಯಾಗಿ ಟೊಮೆಟೋ ತಗೊಂಡು ಬರೋಣಾಂತಿದ್ದೆ. ವಿಮಾನದಲ್ಲಿ ನನ್ನ ಬಜೆಟ್ಟಿಗೆ ಟಿಕೆಟ್ ಸಿಗ್ತಿಲ್ಲ.

  ಈ ಹದಗೆಂಪು ಹೂಗಳು ನಮ್ಮೂರಿಗೆ ವಲಸೆ ಬಂದವುಗಳು ಅವನ್ನು ತಿಳಿದವರು ಕನಕಾಂಬರವೆಂದೂ ಉಳಿದವರು “ಕೆಂಪು ಅಬ್ಬಲ್ಲಿಗೆ” ಎಂದೂ ಕರೆಯುತ್ತಾರೆ. ಊರಲ್ಲಿ ಹೆಚ್ಚಾಗಿ ಬೆಳೆಯುವ “ಅಬ್ಬಲ್ಲಿಗೆ” ಹಳದಿ ಮಿಶ್ರಿತ ಕೇಸರಿ ಬಣ್ಣದ ತುಸು ಅಗಲವಾದ ಹೂ. ಗಿಡವೂ ಸಾಕಷ್ಟು ದೊಡ್ಡದಾಗಿ, ಬೇಲಿ ಬದಿಗೆ ಬೆಳೆಸುವಷ್ಟು ದೊರಗು ಎಲೆ ಹೊಂದಿ ಒಂಥರಾ ಒರಟಾಗಿರುತ್ತದೆ. ಈ ಕನಕಾಂಬರ ಗಿಡದ ನಯ-ನಾಜೂಕು ಅದಕ್ಕಿಲ್ಲ.

 2. Sahana says:

  hello triveni
  i abbali gida nimma garden da ? tumba chennagi hoo bittide .nodi khushi aythu .hinde namma maneyallu gidagalidavvu India dalli . parvagilla americadalli eshtu chennagi belesideera

 3. sritri says:

  ಜ್ಯೋತಿ, ಸಹನಾ, ನಾನು ನಿನ್ನೆಯಿಂದ `ಕನಕಾಂಬರ’ದ ಇನ್ನೊಂದು ಹೆಸರನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ನೀವಿಬ್ಬರೂ ಅದರ ಬಗ್ಗೆಯೇ ಬರೆದಿದ್ದೀರಿ. ಈ ಹೂವು ನಮಗೆಲ್ಲಾ ಕನಕಾಂಬರವೆಂದೇ ಪರಿಚಿತ.

  ಜ್ಯೋತಿ, ನೀನು ಟೊಮ್ಯಾಟೊ ತರುವುದೂ ಬೇಡ, ಸಿಕ್ಕುಬಿದ್ದು ಫಜೀತಿಗೊಳಗಾಗುವುದೂ ಬೇಡ, ನೀನು ಬಂದರೆ ಅಷ್ಟೇ ಸಾಕು. 🙂

  ಸಹನಾ, ಹೌದು, ಇದು ನಮ್ಮ ಮನೆಯಲ್ಲಿಯೇ ಬೆಳೆದಿದ್ದು. ಇನ್ನೂ ಬಹಳಷ್ಟು ಗಿಡಗಳಿವೆ. ನಿಮಗೆ ಆ ಚಿತ್ರಗಳನ್ನು ಇಮೈಲ್ ಮಾಡುತ್ತೇನೆ, ನೋಡಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಎಲ್ಲರಿಗೂ ದಸರ ಹಬ್ಬದ ಶುಭಾಶಯಗಳು!ಎಲ್ಲರಿಗೂ ದಸರ ಹಬ್ಬದ ಶುಭಾಶಯಗಳು!

ನಿಮಗೆಲ್ಲರಿಗೂ ದಸರ ಹಬ್ಬದ ಹಾರ್ದಿಕ ಶುಭಾಶಯಗಳು! ಈ ಬ್ಲಾಗಿನಲ್ಲಿ ವಿಜಯದಶಮಿ ಹಬ್ಬದ ಬಗೆಗೆ ಮಾತಾಡಿಕೊಂಡಿದ್ದಾರೆ. ನನಗೂ ಅಷ್ಟೇ.  ವಿಜಯದಶಮಿಯನ್ನೂ ಸೇರಿಸಿಕೊಂಡ ದಸರಾ ಹಬ್ಬವೇ ತುಂಬಾ ಇಷ್ಟ. ಇದು ಎಲ್ಲಾ ಹಬ್ಬಗಳಂತಲ್ಲದೆ ನಮ್ಮ ಭಾವನೆಗಳೊಡನೆ ಬೆಸೆದುಕೊಂಡಿರುವ ಹಬ್ಬ. ನಮ್ಮ ನಾಡು-ನುಡಿಗಳೊಂದಿಗೆ  ಗುರುತಿಸಿಕೊಂಡಿರುವ ಹಬ್ಬ.  ಕುಲದೇವರಾದ ತಿರುಪತಿ ತಿಮ್ಮಪ್ಪನ ಮದುವೆ ನಡೆದಿದ್ದು ಈಗಲೇ ಎಂಬುದು ನಮ್ಮ ಮನೆಯಲ್ಲಿ

ದಿಗ್ವಿಜಯ ಸಾಧಿಸಿದ ನಮ್ಮ ‘ಕಂಪತಿಗಳು’ದಿಗ್ವಿಜಯ ಸಾಧಿಸಿದ ನಮ್ಮ ‘ಕಂಪತಿಗಳು’

ಬರಹಗಾರ ಮಿತ್ರ ಶ್ರೀನಾಥ್ ಭಲ್ಲೆಯವರು, ಕೆಲವು ತಿಂಗಳ ಹಿಂದೆ ಸಂಪದದಲ್ಲಿ ತಮ್ಮ ‘ಕಂಪತಿಗಳು’ ನಾಟಕವನ್ನು ಪ್ರಕಟಿಸಿದ್ದರು. ಬಹಳ ದಿನಗಳಿಂದ, ಚಿಕ್ಕ-ಚೊಕ್ಕದಾಗಿದ್ದು ಸುಲಭವಾಗಿ ಆಡಬಹುದಾದಂತಹ, (ನಿರ್ದೇಶಕರಿಗೆ ಹೆಚ್ಚು ಕಷ್ಟಕೊಡದ) ನಕ್ಕುನಗಿಸುವ ಹಾಸ್ಯ ನಾಟಕಕ್ಕಾಗಿ ಹುಡುಕುತ್ತಿದ್ದ ನನಗೆ, ಅರಸುತ್ತಿದ್ದ ಬಳ್ಳಿ ಕಾಲಿಗೆ ಎಡರಿದಂತಾಯಿತು. ಅದನ್ನು

ರಾಗದಲ್ಲಿ ಕನ್ನಡಕ್ಕೂ ಜಾಗರಾಗದಲ್ಲಿ ಕನ್ನಡಕ್ಕೂ ಜಾಗ

ಇಷ್ಟು ವರ್ಷ ಕನ್ನಡ ಬಿಟ್ಟು ಹಿಂದಿಯ ಜೊತೆಗೆ ದಕ್ಷಿಣದ ಉಳಿದೆಲ್ಲಾ ಭಾಷೆಗಳ ಹಾಡುಗಳಿಗೂ ಆತಿಥ್ಯ ನೀಡುತ್ತಿದ್ದ ರಾಗ ಸಂಗೀತ ತಾಣದಲ್ಲಿ ಕೊನೆಗೂ ಕನ್ನಡಕ್ಕೆ ಜಾಗ ಸಿಕ್ಕಿದೆ. ಇದು ಯಾವಾಗಿನಿಂದ ಇದೆಯೋ ಗೊತ್ತಿಲ್ಲ. ನಾನು ನೋಡಿದ್ದು ಇಂದೇ. ತುಂಬಾ ಸಂತೋಷವಾಗುತ್ತಿದೆ. ಕನ್ನಡ ಹಾಡುಗಳಿಗೆ