ರಚನೆ : ನಾಗಲಿಂಗಸ್ವಾಮಿ
ಆಲ್ಬಂ : ಘಮ ಘಮ
ಕುರುಬರೊ ನಾವು ಕುರುಬರೊ
ಏನು ಬಲ್ಲೆ ಬರೀ ಒಳಕಾರುಬಾರು
ನೂರಾರು ಸೊಕ್ಕಿದ ಕುರಿ ಮೇಯ್ಸಿಕೊಂಡು
ಸೆಳೆದಂತೆ ಬಂದೇವು ನಮ್ಮ ಕುರಿಹಿಂಡು
ಏಳು ಸುತ್ತಿನ ಬೇಲಿ ಗುಟ್ಟಾಗಿ ಹಚ್ಚಿ
ಇಟ್ಟೇವಿ ಕುರಿಗಳ ಚೆನ್ನಾಗಿ ಬಚ್ಚಿ
ಹೊಟ್ಯೆಂಬ ಬಾಗಿಲ ಬಲವಾಗಿ ಮುಚ್ಚಿ
ಸಿಟ್ಟೆಂಬ ನಾಯಿಯ ಬಿಟ್ಟೇವಿ ಬಿಚ್ಚಿ
ತನುವೆಂಬ ದಡ್ಡಿಯ ಹಸನಾಗಿ ಉಡುಗಿ
ತುಂಬಿ ಚೆಲ್ಲೀವಿ ಹಿಕ್ಕಿಯ ಹೆಡಗಿ
ದೂರು ಹೇಳಿದ ಬಾಳು ಹಾಲಿನ ಗಡಗಿ
ನಮ್ಮಟ್ಟಿಲೇನಿದ್ಯೊ ಅರಗಿನ ಬಡಗಿ
ಮೇವು ಹುಲುಸಾದಂತ ಮಸಣದು ಖರೆಯೆ
ಕುರಿ ಇಲ್ಲಿ ಮೇಸಾಕ ಬಂದದ್ದು ಸರಿಯೆ
ತೋಳ ಹಾರಿ ಕುರಿಗಳ ಗೋಣು ಮುರಿಯೆ
ನಾಗಲಿಂಗ ಅಜ್ಜ ಹೇಳಿದ ಪರಿಯೆ
ತ್ರಿವೇಣಿ,
ನಾಗಲಿಂಗಜ್ಜನ ಸುಂದರವಾದ ಪದವನ್ನು ಹೆಕ್ಕಿ ತೆಗೆದು, ನಮಗೆ ನೀಡಿ, ಮನಸ್ಸನ್ನು ಮುದಗೊಳಿಸಿದ್ದೀರಿ. ತುಂಬಾ ಥ್ಯಾಂಕ್ಸ.
ಕಾಕಾ, ನಾಗಲಿಂಗಸ್ವಾಮಿಗಳು ಶಿಶುನಾಳ ಶರೀಫರ ಸಮಕಾಲೀನರಾಗಿದ್ದರೆಂದು ಓದಿದ್ದೆ. ಅಷ್ಟಲ್ಲದೆ ಮತ್ತೇನೂ ತಿಳಿದಿಲ್ಲ. ನಾಗಲಿಂಗಜ್ಜನ ಬದುಕು, ಕೃತಿಗಳ ಬಗ್ಗೆ `ಸಲ್ಲಾಪ’ದಲ್ಲಿ ಎಂದಾದರೂ ಬರೆಯುತ್ತೀರೆಂಬ ನಿರೀಕ್ಷೆಯಲ್ಲಿದ್ದೇನೆ.
ಮನ ತಟ್ಟುವಂತಿದೆ ಮೇಡಂ! ಸತ್ಕಾರ್ಯಕ್ಕೆ ವಂದನೆಗಳು
ಹಾಯ್ ತ್ರಿವೇಣಿ , ಹೇಗಿದ್ದೀರಿ ?
ನಿಮ್ಮ ತುಳಸೀವನ ವನ್ನು ತೋರಿಸಿಕೊಟ್ಟದ್ದಕ್ಕೆ ನಾನು ನಿಮಗೆ ಥ್ಯಾಂಕ್ಸ್ ಹೇಳಬೇಕು .ಪ್ರಾಸಬದ್ದ ವಾದ ಪದ್ಯ ಚೆನ್ನಾಗಿತ್ತು .
ಶಶಿ ಮತ್ತು ತವಿಶ್ರೀಯವರೇ, ಧನ್ಯವಾದಗಳು.