ಸ್ವಾಮೀ… ಎಂದೆ,
ಒಲಿಯಲಿಲ್ಲ.
ಪ್ರಭುವೇ… ಎಂದೆ,
ಗತ್ತಿಳಿಯಲಿಲ್ಲ.
ಒಡೆಯಾ… ಎಂದೆ,
ಆಳಾದೆನಾ?
ಗೆಳೆಯಾ… ಎಂದೆ,
ಕರಗಿದ.
ಇನಿಯಾ… ಎಂದೆ,
ಕಡಲಾದ.
ನದಿಯಾದೆ.
ಕನ್ನಡಮ್ಮನ ದೇವಾಲಯ
ಸ್ವಾಮೀ… ಎಂದೆ,
ಒಲಿಯಲಿಲ್ಲ.
ಪ್ರಭುವೇ… ಎಂದೆ,
ಗತ್ತಿಳಿಯಲಿಲ್ಲ.
ಒಡೆಯಾ… ಎಂದೆ,
ಆಳಾದೆನಾ?
ಗೆಳೆಯಾ… ಎಂದೆ,
ಕರಗಿದ.
ಇನಿಯಾ… ಎಂದೆ,
ಕಡಲಾದ.
ನದಿಯಾದೆ.
ತುಂಬಾ ಸರಳ ಸುಂದರ. ಕವನ ಬರಿ ಅಂದ್ರೆ ಕಥೆ ಅಂತಿದ್ಯಲ್ಲ. ಇಂಥ ಸುಂದರ ಕವನ ಕೆಲವೇ ಪದಗಳಲ್ಲಿ ಒಂದು ರಮ್ಯ ಕಥಾನಕವನ್ನೇ ಹೇಳಿಬಿಡ್ತಲ್ಲ. ಹಂಚಿಕೊಂಡದ್ದಕ್ಕೆ ಥ್ಯಾಂಕ್ಸ್ ಕಣೇ.
ಜ್ಯೋತಿ, ನನ್ನ ರಕ್ತದಲ್ಲಿರುವ (ಆತ್ಮವಿಶ್ವಾಸದ) ಕೊರತೆಯನ್ನು ನೀ ಕೊಡುತ್ತಿರುವ ವಿಟಮಿನ್ (ಪ್ರೋತ್ಸಾಹದ ನುಡಿ)ಗಳಿಂದ ತುಂಬಿಕೊಳ್ಳಲು ಪ್ರಯತ್ನಿಸುವೆ. 🙂
short n sweet ! Nice lines.
ಅದ್ಭುತ!!!!!