ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ ।
ಯಾಕೆ ಮೂಕನಾದೆ ಲೋಕಪಾಲಕ ಎನ್ನ ।
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥ ಪಲ್ಲವಿ ||

ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ ।
ಮಂದಿಯೊಳಗೆ ಎನ್ನ ಮಂದನ್ನ ॥ ೧ ॥

ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ ।
ಕಾಕುಜನರೊಳೆನ್ನ ನೂಕಿಬಿಟ್ಟು ನೀನು ॥ ೨ ॥

ಈಗ ಪಾಲಿಸದಿರೆ ಯೋಗಿಕುಲವರ್ಯ ।
ರಾಘವೇಂದ್ರನೆ ಭವ ಸಾಗುವದ್ಹ್ಯಾಂಗಯ್ಯ ॥ ೩ ॥

ನಿನ್ನಂಥ ಕರುಣಿಯಿಲ್ಲ ಎನ್ನಂಥ ಕೃಪಣಿಯಿಲ್ಲ ।
ಘನ್ನಮಹಿಮನು ನೀ ಎನ್ನನು ಬಿಟ್ಟೀಗ ॥ ೪ ॥

ಜನನಿಯು ನೀ ಎನಗೆ ಏನ್ನ ಜನಕನಯ್ಯ ।
ಮನ್ನಿಸೊ ನೀ ನಿತ್ಯ ಅನನ್ಯ ಶರಣನೆಯ್ಯ ॥ ೫ ॥

ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೋ ।
ಇಂದು ನೀ ಕೈಬಿಟ್ಟರೆನ್ನ ಮುಂದೆ ಕಾಯುವರ್ಯಾರೋ ॥ ೬ ॥

ನಾಥನು ನೀ ಅನಾಥನು ನಾನಯ್ಯ ।
ಪಾತಕರರಿ ಜಗನ್ನಾಥವಿಠ್ಠಲದಾಸ ॥ ೭

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.