ಪ್ರೀತ್ಸೋದ್ ತಪ್ಪಾ – (೧೯೯೮)         

ಸಾಹಿತ್ಯ :   ಹಂಸಲೇಖ
ಸಂಗೀತ :   ಹಂಸಲೇಖ
ಗಾಯಕರು : ಕೆ. ಜೆ. ಯೇಸುದಾಸ್, ಅನುರಾಧಾ ಶ್ರೀರಾಂ

ಹಾಡು ಕೇಳಿ

ಏನಿದು ಮಾಯೆ.. ಏನಿದು ಮಾಯೆ
ಮನಸಿನ ಮುಗಿಲಲಿ
ಮಾತಿನ ಮಳೆಯು ತುಂಬಿದೆ
ಹೊರಗೆ ಬಾರದೆ ನಿಂತಿದೆ
ಮಿಂಚಿದೆ ಗುಡುಗಿದೆ
ಸೋನೆ ಮಳೆಯಾಗಿ ಆದರೂ
ಮೆಲ್ಲ ಮೆಲ್ಲ ಬರಬಾರದೇ?
ಓ ….. ಸೋನೆ ….

ಸೋನೆ ಸೋನೆ ಪ್ರೀತಿಯ ಸೋನೆ
ಈ ಮಳೆ ಹೂಮಳೆ
ಪ್ರೀತಿಯ ವರಗಳೆ
ಅಂದದ …. ಧರಣಿಯ
ತನುವಿನ ಪಥದಲಿ
ಪ್ರೀತಿಯ ಅಕ್ಷರ ಇಂದು ವೃಂದ ತಾವಾಗಿದೆ
ನಳಿನ ನರ್ತನ ಮಾಡಿದೆ||

ಈ ಬ್ರಹ್ಮಾಂಡವೇ ನಾನು
ನನಗೆ ಸಂಗಾತಿ ನೀನು
ನಿನ್ನ ಪ್ರೀತಿ ತೋಳಲ್ಲಿ ನಾನು
ಕುಂತರೂ ನಿಂತರೂ
ನಿನ್ನದೇ ತುಂತುರು
ನೆನೆದಿದೆ ನನ್ನೆದೆ ||

ಸೋನೆ ಸೋನೆ ಪ್ರೀತಿಯ ಸೋನೆ
ಸೋನೆ ಸೋನೆ ಪ್ರೀತಿಯ ಸೋನೆ
ನಿರ್ಮಲ ಕೋಮಲ ಶೀತಲ ಶಾಂತಲ
ಕಾವ್ಯದಾ …….
ಕಾವ್ಯದ ಕುಸುರಿಯೇ
ಕವನದ ಲಹರಿಯೇ
ಅಂದದ ಪ್ರತಿಮೆಯೇ
ನಿನ್ನ ಅಂದ ಛಂದೋಮಯ
ನಿನ್ನ ಭಾವ ವ್ಯಾಕರಣಮಯ ||

ಸೋನೆ ಸೋನೆ ಸೋನೆ ಸೋನೆ

ಏನಿದು ಮಾಯೆ
ಏನಿದು ಮಾಯೆ
ಮನಸಿನ ಭೂಮಿಲಿ
ಋತುವು ಬದಲಾದ ಹಾಗಿದೆ
ಆಸೆ ಮಲೆನಾಡು ಚಿಗುರಿದೆ

ಓ …. ಕನಸೇ
ಓ …. ನನಸೇ

* * *

7 thoughts on “ಪ್ರೀತ್ಸೋದ್ ತಪ್ಪಾ? – ಸೋನೆ ಸೋನೆ”

  1. ಇದು originally ‘robert miles’ ನ ಹಾಡು.
    ಪ್ರೀತ್ಸೋದ್ ತಪ್ಪ ಚಿತ್ರಕ್ಕೆ ಹಂಸ್ ಇದನ್ನು ಕನ್ನಡೀಕರಿಸಿದ್ದರು. ‘ನುವ್ವು … ನಚ್ಚಾವ್’ ಅನ್ನೋ ತೆಲುಗು ಚಿತ್ರಕ್ಕೆ ಕೋಟಿ ತೆಲುಗೀಕರಿಸದರು. ಮತ್ತೆ ಈ ತೆಲುಗು ಚಿತ್ರ ಕನ್ನಡದಲ್ಲಿ ‘ಗೌರಮ್ಮ’ ಆಗಿ ಬಂತು. ಜೊತೆಗೆ ಈ tune ಕೂಡ ಮತ್ತೊಮ್ಮೆ ಕನ್ನಡೀಕರಣಗೊಂಡಿತ್ತು!

  2. ಹೌದು, ಗುರು ಅವರೇ. ಈ ಸಂಗೀತ robert miles ನದು ಎಂದು ಗೊತ್ತಿತ್ತು. 🙂 ಆದರೆ ಗೌರಮ್ಮದಲ್ಲಿ ಈ tune ಮರು ಬಳಕೆಯಾಗಿರುವುದು ಗೊತ್ತಿರಲಿಲ್ಲ. ಮಾಹಿತಿಗೆ ಧನ್ಯವಾದಗಳು.

  3. BTW, ತ್ರಿವೇಣಿಯವರೆ, ನನ್ನ ಬಳಿ ಹಲವಾರು ಕನ್ನಡ ಚಿತ್ರ ಗೀತೆಗಳ ಸಾಹಿತ್ಯ ಇದೆ. ನಿಮ್ಮ ಅನುಮತಿಯೊಂದಿಗೆ ನಾನು ಅವುಗಳನ್ನು ಇಲ್ಲಿ ಅಂಟಿಸಬಹುದೇ?

    ಉದಾ.:
    ಮುತ್ತಿನ ಹಾರದ ‘ದೇವರು ಹೊಸೆದ’, ಓ ಮಲ್ಲಿಗೆಯ ‘ಮುದ್ದಾದ ಬಲೆ ಹೆಣೆದ’, ಅಮೃತ ವರ್ಷಿಣಿಯ ‘ಈ ಸುಂದರ’

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.