ಚಿತ್ರ – ಚಿಕ್ಕೆಜಮಾನ್ರು -೧೯೯೨
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕ – ಎಸ್.ಪಿ.ಬಾಲಸುಬ್ರಹ್ಮಣ್ಯಂ

ಹಂಸಲೇಖ
ಚಿತ್ರಕೃಪೆ : ಮೀರಾ ಕೃಷ್ಣ

 ಹಾಡು ಕೇಳಿ –

ಪ್ರೇಮದ ಹೂಗಾರ ಈ ಹಾಡುಗಾರ
ಹೂ ನೀಡುತಾನೆ ಮುಳ್ಳು ಬೇಡುತಾನೆ
ಬೆಲ್ಲದ ಬಣಗಾರ ಈ ಹಾಡುಗಾರ
ಸಿಹಿ ನೀಡುತಾನೆ ಕಹಿ ಕೇಳುತಾನೆ

ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿಹಾರ ಹೊಂದಿರುವ ಈ ಭಾವಜೀವ ||ಪ||

ಗಂಧದ ಕೊರಡಾಗಿ ಸ್ವಂತಕೆ ಬರಡಾಗಿ
ನೋವಿನಲೂ ತೇಯುವುದು ಈ ಒಡಲು
ಗಂಗೆಯು ತಾನಾಗಿ ನೀರಿಗೆ ಎರವಾಗಿ
ಸೇರುತಿದೆ ಕಂಬನಿಯ ಆ ಕಡಲು

ಕರುಣೆಯ ಕುಂಬಾರ ಈ ಹಾಡುಗಾರ
ಮಣ್ಣು ಬೇಡುತಾನೆ ಕೊಡ ನೀಡುತಾನೆ
ಮಮತೆಯ ಕಲೆಗಾರ ಈ ಹಾಡುಗಾರ
ಮನೆ ಮಾಡುತಾನೆ ಹೊರ ಹೋಗುತಾನೆ

ಗೋವಿನ ಹಾಲಂತ ಮನಸಿರುವ
ಕೂಸಿನ ಜೇನಂತ ಮಾತಿರುವ ಈ ಭಾವಜೀವ||೧||

ನಿತ್ಯವೂ ತಾನುರಿದು ಲೋಕಕೆ ದಿನಗರೆದು
ಎಚ್ಚರಿಸೋ ಸೂರ್ಯನಿಗೆ ನಿದ್ದೆಯಿಲ್ಲ
ರಾತ್ರಿಗೆ ತಾನುಳಿದು ತಾಪಕೆ ತಂಪೆರೆದು
ಸಂಚರಿಸೋ ಚಂದ್ರನಿಗೆ ಸ್ವಂತವಿಲ್ಲ

ಊರಿನ ಗೆಣೆಕಾರ ಈ ಹಾಡುಗಾರ
ಕಾಪಾಡುತಾನೆ ಕಡೆಯಾಗುತಾನೆ
ಸತ್ಯದ ಹರಿಕಾರ ಈ ಹಾಡುಗಾರ
ಹೋರಾಡುತಾನೆ ಒಂಟಿಯಾಗುತಾನೆ ||೨||

ಮಣ್ಣಿನ ಮಮಕಾರ ಕಂಪಿರುವ
ಮಾನದ ಮಣಿಹಾರ ಹೊಂದಿರುವ ಈ ಭಾವಜೀವ ||ಪ||

***

2 thoughts on “ಪ್ರೇಮದ ಹೂಗಾರ”

  1. “ನಿತ್ಯವೂ ತಾನುರಿದು ಲೋಕಕೆ ದಿನಗರೆದು
    ಎಚ್ಚರಿಸೋ ಸೂರ್ಯನಿಗೆ ನಿದ್ದೆಯಿಲ್ಲ”

    ಇಂಥ ಅರ್ಥವತ್ತಾದ ಸಾಹಿತ್ಯವನ್ನು ಮುಂಬರುವ ಸಿನಿಮಾಗಳಲ್ಲಿ ಕಾಣೋದು ಅಸಾಧ್ಯವೇ ಸರಿ ಅಂತ ಈಗಿನ ಚಿತ್ರಗೀತೆಗಳನ್ನು ಕೇಳಿದಾಗ ಅನಿಸುತ್ತದೆ.

    ಮತ್ತೆ ನಿಮ್ಮ ತಲೆಹರಟೆ ಚೆನ್ನಾಗಿತ್ತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.