ಚಿತ್ರ : ಪೂಜಾ – (೧೯೯೫)
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಿತ್ರಾ
ಅನುರಾಗ ಚೆಲ್ಲಿದಳು ಹೃದಯಾನ ಗಿಲ್ಲಿದಳು
ಹರೆಯದ ಅರಮನೆ ಬಾಗಿಲ ತೆರೆಸಿದಳು
ಪ್ರೇಮದ ರಾಜ್ಯದ ಓಲಗ ನಡೆಸಿದಳು
ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು
ಹರೆಯದ ಅರಮನೆ ಬಾಗಿಲ ತೆರೆಸಿದನು
ಪ್ರೇಮದ ರಾಜ್ಯದ ಓಲಗ ನಡೆಸಿದನು ||ಪ||
ದೇವಲೋಕದ ಮುಗಿಲಿಂದ
ಕಾಲು ಜಾರಿದಾ ರತಿ ಇವಳು
ನನ್ನವಳು ಕಾರಂಜಿ
ಪ್ರೇಮಲೋಕದ ಬನದಲ್ಲಿ
ಗಿಣಿಯು ಸೋಕದ ಹಣ್ಣಿವಳು
ನನ್ನವಳು ಅಪರಂಜಿ
ಕೋಟಿ ಕಣ್ಣನ್ನು ದಾಟಿ
ನನ್ನ ಕಣ್ಣನ್ನೆ ಮೀಟಿ
ನಿಂತಾ ರಥಾನ ಎಳೆದು
ನನ್ನ ವ್ರತಾನ ಮುರಿದು
ಒಲವಿನ ಹಾಲಲಿ…. ಚೆಲುವಿನ ಜೇನಲಿ…
ಬದುಕಿನ ಬಾಯಿಗೆ ಚುಂಬಿಸುತಾ ||೧||
ಮಾಯ ಮಾಡಿ ಮನದಲ್ಲಿ
ಪ್ರೇಮ ಶಾಸನವ ಕಡೆದವನು
ನನ್ನವನು ಕಲೆಗಾರ
ನಾನು ನೀನು ಒಂದೆಂದು
ಭಾವಲಿಪಿಯಲಿ ಬರೆದವನು
ನನ್ನವನು ಮನಚೋರ
ನಾನು ಹೂ ಬಿಟ್ಟ ಮಳ್ಳಿ
ಇವನಾ ಮೈಯಲ್ಲಿ ಬಳ್ಳಿ
ಸುಗ್ಗಿ ಸುವ್ವಾಲೆಯಂತೆ
ನಾವೂ ಒಂದಾದೆವಿಲ್ಲಿ
ಪದಗಳ ಪೋಣಿಸಿ… ಸ್ವರಗಳ ಸೇರಿಸಿ..
ಪ್ರೇಮದ ರೂಪವ ತೋರಿಸುವಾ||೨||
***
ಅಂಥ ಜನಪ್ರಿಯ ಕಾಣದಿದ್ದರೂ, ಉತ್ತಮ ಗೀತೆಗಳಿದ್ದ ಚಿತ್ರ. “ನಾನು ಹೂ ಬಿಟ್ಟ ಮಳ್ಳಿ, ಇವನಾ ಮೈಯಲ್ಲಿ ಬಳ್ಳಿ” – ಈ ಸಾಲಿನಲ್ಲಿ ಬಳ್ಳಿ ಮತ್ತು ಮಳ್ಳಿ ಅದಲುಬದಲಾಗಿದೆಯೇ ? ಮತ್ತೊಮ್ಮೆ ಕೇಳಬೇಕು ಇದನ್ನ… ಈ ಸಾಲು ಒಂದ್-ಥರಾ ಚೆನ್ನಾಗಿದೆ 🙂
ತಾಣದ GUI ಬದಲಾಯಿಸಿದ್ದೀ.. ಕೊನೆಗೂ Commentಗಳು ಮೇಲಕ್ಕೆ ಬಂದಿವೆ.. ಥ್ಯಾಂಕ್ಸು. ಹಳೆ ಬರಹಗಳ Uನಿಕೋಡೀಕರಣವೇನೋ ಸರಿ, ಸ್ವಲ್ಪ ಹೊಸ ಬರಹಗಳು ಹೆಚ್ಚು ಬರಲಿ.
ಇಲ್ಲ. ಮಳ್ಳಿ ಮತ್ತು ಬಳ್ಳಿ ಸರಿಯಾಗಿಯೇ ಇದೆ. ಅದಲು ಬದಲಾಗಿಲ್ಲ 🙂
ಈ ಹಾಡಿನ ಹಿನ್ನಲೆ ಸಂಗೀತ ಅಂತು ಅದ್ಭುತವಾಗಿದೆ, ಅದಕ್ಕೇ ಈ ಹಾಡು ನಂಗೆ ತುಂಬಾ ಇಷ್ಟ.
ಈ ಹಾಡನ್ನು ನಾನು ಮೊದಲು ಕೇಳಿರಲೇ ಇಲ್ಲ. ಮನುಷ್ಯರಂತೆ ಹಾಡುಗಳನ್ನು ಕೂಡ ದುರದೃಷ್ಟ ಕಾಡತ್ತೆ ಅನ್ನಿಸತ್ತೆ. ಕೆಲವು ಹಾಡುಗಳು ಎಷ್ಟೇ ಚೆನ್ನಾಗಿದ್ದರೂ ಯಾರಿಗೂ ಗೊತ್ತಾಗದೆ ಮೂಲೆಗುಂಪಾಗಿ ಹೋಗುತ್ತವೆ. ಕೆಲವು ಹಾಡುಗಳು ಚೆನ್ನಾಗಿಲ್ಲದಿದ್ದರೂ ಜನರ ಬಾಯಲ್ಲಿ ನಲಿದಾಡುತ್ತವೆ. 🙂
ಅದೇನೋ ನಿಜ ಎಷ್ಟೋ ಸುಂದರ ಹಾಡುಗಳು ಮೂಲೆ ಗುಂಪಾಗುತ್ತವೆ ಕಾರಣವಿಲ್ಲದೆ, ಇದನ್ನ ನಾನು ಸಿನೆಮಾ ಬಿಡುಗಡೆಯಾದಾಗಲೇ ಕೇಳಿದ್ದೆ, ತುಂಬಾ ಇಷ್ಟವಾಗಿತ್ತು.