ಕವನ – ರಥಯಾತ್ರೆ
ಕವಿ – ಜಿ.ಎಸ್.ಶಿವರುದ್ರಪ್ಪ

ವಿಶಾಲ ಪಥದಲಿ ಜೀವನ ರಥದಲಿ
ನಿನ್ನಯ ಕರುಣೆಯ ಸಾರಥ್ಯದಲಿ
ನೀಲ ವಿತಾನದ ಹಂದರದಡಿಯಲಿ
ಮರ್ತ್ಯದ ಮಣ್ಣಿನ ಧೂಳಿನಲಿ
ಹಗಲು ಇರುಳುಗಳ ಬೆಳಕಿನಲಿ
ನಡೆಯುತ್ತಿದೆ ಈ ಜೀವರಥ
ವಿಶಾಲವಾಗಿದೆ ನನ್ನ ಪಥ|

ನೋವು ನಲಿವುಗಳ ಸವಿದು ನೋಡಿದೆ
ಬಾಳಿನ ಸುಮಧುರ ಒಲವನು ಹೀರಿದೆ
ಸೃಷ್ಟಿಯ ಚೆಲುವಿಗೆ ಎದೆಯನು ನೀಡಿದೆ
ಹಕ್ಕಿಯ ತೆರದಲಿ ಹಾರುತ ಹಾಡಿದೆ
ಮುಂದೆ ಕಾಣ್ ಅದೋ ಬೆಳಕು ಮೂಡಿದೆ
ನಡೆಯುತ್ತಿದೆ ಈ ಜೀವರಥ
ವಿಶಾಲವಾಗಿದೆ ನನ್ನ ಪಥ |

ಗರ್ಗರನಾದದ ಗಾಲಿಯ ವೇಗ
ಅನಂತಯಾತ್ರೆಗೆ ಬಂಧುರ ರಾಗ
ಸಾಕ್ಷಿಯಾಗುತಿದೆ ಗಗನಾ ಭೋಗ
ಅನಂತಶಕ್ತಿಯೇ ನಡೆಸಿರುವಾಗ
ಬಿಡು ನಮಗೇತಕೆ ವ್ಯರ್ಥಾವೇಗ
ನಡೆಯುತ್ತಿದೆ ಈ ಜೀವರಥ
ವಿಶಾಲವಾಗಿದೆ ನನ್ನ ಪಥ |

(ಸಾಹಿತ್ಯದಲ್ಲಿ ತಪ್ಪಿದ್ದರೆ ದಯವಿಟ್ಟು ತಿಳಿಸಿ)

2 thoughts on “ರಥಯಾತ್ರೆ”

  1. ನಾನು ನವೋದಯ ಕ್ಯಾಸೆಟ್ ನಲ್ಲಿ ಕೇಳಿದ೦ತೆ-

    ೧. ಹಕ್ಕಿಯ ತೆರದಲಿ ಹಾರುತ ಹಾಡಿದೆ
    ೨. ಸಾಕ್ಷಿಯಾಗುತಿದೆ ಗಗನಾ ಭೋಗ
    ಎ೦ದಾಗಬೇಕು.

    If find anything wrong in my comment please let me know. You can email me at gpshashanka@yahoo.com

  2. ಶಶಾಂಕ್,

    ನೀವು ಸೂಚಿಸಿದ ತಿದ್ದುಪಡಿ ಸರಿಯಾಗಿಯೇ ಇ಼ದೆ. ಧನ್ಯವಾದಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.