photo: indhihistory.com

ಚಿತ್ರ :  ಭೂಕೈಲಾಸ (೧೯೫೮)
ಸಾಹಿತ್ಯ : ಕು.ರಾ.ಸೀತಾರಾಮಶಾಸ್ತ್ರಿ
ಸಂಗೀತ : ಆರ್. ಗೋವರ್ಧನ್, ಆರ್.ಸುದರ್ಶನಂ
ಗಾಯಕ : ಶಿರ್ಕಾಳಿ ಗೋವಿಂದರಾಜನ್

ಹಾಡು ಕೇಳಿ

ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ?
ಜಾರತನ ಸದೆಬಡಿವ ಸಂಭ್ರಮದ ನೆಪವೋ?
ರಾಮನ ಅವತಾರ ರಘುಕುಲ ಸೋಮನ ಅವತಾರ!
ನಿರುಪಮ ಸಂಯಮ ಜೀವನ ಸಾರ
ಹರಿವುದು ಭೂಮಿಯ ಭಾರ !

ದಾಶರಥಿಯ ದಿವ್ಯಾತ್ಮವ ತಳೆವ
ಕೌಸಲ್ಯೆಯ ಬಸಿರೆನಿತು ಪುನೀತ !
ಲೇಸಿಗರೈ ಸಹಜಾತರು ಮೂವರು
ಲಕ್ಷ್ಮಣ ಶತೃಘ್ನ ಭರತ

ತ್ರಿಭುವನ ಪಾಲಗೆ ನೆಪ ಮಾತ್ರ
ವರಗುರು ವಿಶ್ವಾಮಿತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಧರಿಸುವ ಹರಿ ಶುಭಗಾತ್ರ

ಧನುವೋ ಜನಕನ ಮಮತೆಯ ಕುಡಿಯೋ
ಸೀತೆಯ ಕನ್ಯಾ ಸಂಖಲೆಯೋ
ಧನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲಾ ನಗರದಲಿ

ಕಪಟ ನಾಟಕನ ಪಟ್ಟಾಭಿಷೇಕ
ಉಪಟಳ ತಾತ್ಕಾಲಿಕ ಶೋಕ
ಭೀಕರ ಕಾನನ ವಾಸದ ಕುಹಕ
ಲೋಕೋದ್ಧಾರದ ಮೊದಲಂಕ !

ಭರತಗೆ ಪಾದುಕೆ ನೀಡುವ ವೇಷ
ಪುರಜನ ಭಕ್ತಿಯ ಆವೇಶ
ನರಲೋಕಕೆ ನವ ಸಿರಿ ಸಂತೋಷ
ಭರವಸೆ ನೀಡುವ ಸಂದೇಶ

ಆಹಾ! ನೋಡದೋ ಹೊನ್ನಿನ ಜಿಂಕೆ
ಹಾಳಾಗುವುದಯ್ಯೋ ಲಂಕೆ
ಹೆಣ್ಣಿದು ಶಿವನುರಿಗಣ್ಣೋ ಮಂಕೇ
ಮಣ್ಣಾಗುವೆ ನೀ ನಿಶ್ಯಂಕೆ !

ಶರಣು ಶರಣು ಹೇ ಭಾಗವತೋತ್ತಮ
ಕನ್ನಡ ಕುಲಪುಂಗವ ಹನುಮ
ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ
ಎಂಬುವ ತತ್ವವ ತಿಳಿಸಮ್ಮಾ

ರಾಮ ರಾಮ ಜಯ ರಾಮ ರಾಮ ಜಯ
ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣ ವಿರಾಮ
ಲಂಕೆಯ ವೈಭವ ನಿರ್ನಾಮ !

ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನೀ ಕಥೆ ಅಮರ
ಮೆರೆಯಲಿ ಈ ಶುಭ ತತ್ವ ವಿಚಾರ
ಪರಸತಿ ಬಯಕೆಯ ಸಂಹಾರ !

_    _   _  _  _ _  _  _


ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು!

31 thoughts on “ರಾಮನ ಅವತಾರ ರಘುಕುಲ ಸೋಮನ ಅವತಾರ!”

  1. ನಮಸ್ಕಾರ ತ್ರಿವೇಣಿ,

    ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ಹರಿವ ಲಹರಿ ತುಳಸೀವನಕ್ಕೆ ಕರೆದುಕೊಂಡು ಬಂತು.
    ಪಾನಕ-ಕೋಸಂಬರಿ ಸಮಾರಾಧನೆ ಆಯ್ತಾ ? ನಮ್ಮ ಕಡೆ ಪಾನಕಪೂಜೆ ಅಂತ ಕರೆಯೋದು. ಊರಲ್ಲಿ ದೊಡ್ಡ ರಥೋತ್ಸವ ನಡೆಯುತ್ತೆ, ತುಂಬಾ ಮಿಸ್ ಮಾಡ್ಕೊತಾ ಇದೀನಿ.
    “ಅಭಯ ಅಹಲ್ಯೆಗೆ ನೀಡುವ ಪಾತ್ರ
    ಧರಿಸಿದ ಹರಿ ಶುಭ” ಅಂತ ನೆನಪು.. ಸರಿಯಾಗಿ ಗೊತ್ತಿಲ್ಲ.
    ಇಷ್ಟು ಸಾಕು. ಮೊದಲನೇ ಸಲ ಕೊರೆದ್ರೆ ಚೆನ್ನಾಗಿರಲ್ಲ 🙂

  2. ಪೂರ್ಣಿಮಾ, ರಾಮನವಮಿಯ ಶುಭ ದಿವಸ ತುಳಸಿವನಕ್ಕೆ ಕಾಲಿರಿಸಿರುವ ನಿಮಗೆ ಹಾರ್ದಿಕ ಸ್ವಾಗತ! 🙂

    ಸಾಹಿತ್ಯ ತಿದ್ದಿದ್ದಕ್ಕೆ ಧನ್ಯವಾದಗಳು. ಅಲ್ಲೇನೋ ತಪ್ಪಿದೆ ಎಂದು ತಿಳಿದಿತ್ತು. ಎಷ್ಟು ಸಲ ಕೇಳಿದರೂ ಸರಿಯಾದ ಪದ ಗೊತ್ತಾಗಿರಲಿಲ್ಲ!
    ಪಾನಕ ಪೂಜೆ, ಪಾನಕ – ಪನಿವಾರ ಮರೆತು ಹೋಗುತ್ತಿರುವ ನುಡಿಗಟ್ಟುಗಳು. ಈಗ ” ಪಾನಕ ಪೂಜೆ ಆಯಿತೇ?” ಎಂದರೆ ಅದಕ್ಕೆ ಬೇರೊಂದು ಅರ್ಥ ಬರುತ್ತದೆ. 🙂

  3. “ನನ್ನ ರಾಮ” ಓದಿದೆ, ಚೆನ್ನಾಗಿದೆ. ಆದರೂ, ಕ್ಷಮಿಸಿ; ನನಗೇನೋ ರಾಮ ಸೀತೆಗೆ ಅನ್ಯಾಯ ಮಾಡಿದನೆಂದೇ ಅನಿಸುತ್ತದೆ.ಮಡದಿಯೂ ಒಬ್ಬ ಪ್ರಜೆಯೇ ತಾನೇ! ಸತ್ಯಾಸತ್ಯಗಳನ್ನು ತಿಳಿದೂ, ಮಿಥ್ಯಾಪವಾದಕ್ಕೆ ನಿರಪರಾಧಿ ಮೈಥಿಲಿಯನ್ನು ಬಲಿಕೊಟ್ಟದ್ದು ಯಾವ ನ್ಯಾಯ – ಇದೇ ನನ್ನ ಗೊಂದಲ.

  4. ‘ಶರಣು ಶರಣು ಹೇ ‘ಭಾಗವತೋತ್ತಮ’

    ಈ ಸಾಲು ತುಂಬ ಖುಶಿಯಾಯ್ತುಃ-)) ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಅಂತಿದ್ದಾಗ, ಇದೇನು ಬರ್ದಿದಾರೆ ಎರಡನೆ ಸಾಲಿನಲ್ಲಿ?
    ಕನ್ನಡ ಕುಲಪುಂಗವ ‘ಹನುಮ’???ಃ-((

    ಏನ್ರಿ? ಸೀತಾರಾಮ ಶಾಸ್ತ್ರಿಗಳು ಈ ಥರ ಎಲ್ಲ public ಆಗಿ ಬರಿಯೋದು ತಪ್ಪಲ್ವಾ? ನೀವಾದ್ರೂ ಸರಿ, ಅವನ್ನೆಲ್ಲ edit ಮಾಡೋದಲ್ವ????

    ನಿಮಗೂ ಅಸತ್ಯಿಗಳಿಗೆ ಆದ ಗತಿಯೇ ಆಗತ್ತೆ (ಅವ್ರು ಭೂಗತರಾಗಿದ್ದು ಗೊತ್ತಲ್ವಾ?)

    1. ಹನುಮಂತ ಕನ್ನಡ ನೆಲ ಕಿಷ್ಕಿಂದೆಯವನು
      ಅದರಲ್ಲೇನು ತಪ್ಪಾಗಿದೆ?
      ರಾಮಾಯಣವನ್ನು ಒಂದು ಹಾಡಿನಲ್ಲಿ ತಿಳಿಸುವ ಪರಿ.

  5. ತುಂಬಾ ಚೆನ್ನಾಗಿದೆ.. ನನಗೂ ಈ ಹಾಡು ಇಷ್ಟ, ರೇಡಿಯೋದಲ್ಲಿ ಈ ಹಾಡು ಬರ್ತಿತ್ತು.

    ಮತ್ತೊಂದು ವಿಷಯ ನೆನಪಾಗ್ತಾ ಇದೆ.. ನನ್ನ ಅಕ್ಕನ ಮಗ ಒಬ್ಬ ಚಿಕ್ಕವನಿದ್ದಾಗ ತುಂಬಾ ತಂಟೆ ಮಾಡ್ತಿದ್ದ. ಅವ್ನು ಆಟ ಆಡಿ, ಬಟ್ಟೆ ಮೈ ಕೈ ಎಲ್ಲ ಕೊಳೆ ಮಾಡ್ಕೊಂಡು ಬರ್ತಿದ್ದಾಗ ಅಕ್ಕ ’ಏನು ಅವತಾರ ಇದು?’ ಅಂತ ಬೈತಿದ್ಲು, ಕೂಡ್ಲೆ ಅವ್ನು ’ರಾಮನ ಅವತಾರ ರಘುಕುಲ ಸೋಮನ ಅವತಾರ’ ಅಂತ ಈ ಹಾಡು ಹೇಳಿ ಅವಳನ್ನು ನಗಿಸುತ್ತಿದ್ದ..

  6. ಅನ್ವೇಶಿಗಳು ಭೂಗತರಾಗಿದ್ದು ಗೊತ್ತಿತ್ತು, ಯಾರ ಕೈವಾಡ ಅಂತ ಇಷ್ಟು ದಿನ ಗೊತ್ತಿರಲಿಲ್ಲ.

  7. ರಾಮನವಮಿಯ ಶುಭಾಶಯಗಳು !
    ಹೌದು..ಒಂದು ಹಾಡಿನಲ್ಲಿ ಈಡೀ ರಾಮಾಯಣ ವರ್ಣಿಸಿರುವ ರೀತಿ ಅದ್ಭುತ

    ಪಾನಕ-ಕೋಸಂಬರಿ ..ಆಹಾ
    ಟಿವಿ ರಾಮಾಯಣ ಕ್ರೇಜ್ ಇದ್ದ ಕಾಲದಲ್ಲಿ ನಮ್ಮ ಊರಲ್ಲಿ ರಾಮನವಮಿ ದಿವಸ ರಾಮಾಯಣದ ಕ್ಯಾಸೆಟ್ ಹಾಕಿ ಸಾರ್ವಜನಿಕ ಪ್ರದರ್ಶನ ನಡಿತಿತ್ತು.

  8. ಹೌದಲ್ರೀ! ಹಾಡು ಕೇಳುವಾಗ ಅಷ್ಟೊಂದು ‘ಎಫೆಕ್ಟ್’ ಆಗಿರ್ಲಿಲ್ಲ. ಇಲ್ಲಿ ಸಾಹಿತ್ಯ ಓದಿದ್ಮೇಲೆ ಗ್ರೇಟ್ ಅನ್ನುಸ್ತು. ಆದ್ರೂ ಭಾಗವತ್ರಿಗೆ ಹಿಂಗೆ ಅವಮಾನ ಮಾಡಬಾರದಿತ್ತು ಅವ್ರು… ಇರ್ಲಿ… 🙂

  9. ಭಾಗವತೋತ್ತಮರೆ,

    ನೀವು ಎರಡನೇ ಸಾಲನ್ನು ನಿಮ್ಮ ಬಗ್ಗೆ ಬರೆದದ್ದು ಅಂತ ನಿಮಗೆ ನೀವೇ ಸಮಾಧಾನಿಸಿಕೊಂಡರಾಯಿತು…

    ಅದು ಬಿಟ್ಟು, ನಮಗೆ ಎಲ್ಲೋ “ಪೂಜೆ”ಯಾಗಿದ್ದನ್ನು ಮತ್ತು “ಭೂಗತದೊರೆ”ಯಂತಾಗಿರುವುದನ್ನು ತುಳಸಿವನದಲ್ಲಿ ಈ ರೀತಿ ಪಾನಕದ ಜತೆ ಸುರಿಯುವುದು ಸರಿಯಲ್ಲ.

    ಶ್ರೀತ್ರೀ ಅವರೆ,
    ಪಾನಕಪೂಜೆ ಎಂದರೆ ಯಾರಿಗೆ ಸಲ್ಲುವಂಥದ್ದು ಅಂತ ನೀವೇ ವಿವರಿಸಿ ಹೇಳಿ. 🙂

  10. ಪೂರ್ಣಿಮಾ ಅವರೇ, ನಿಮ್ಮ ಗೊಂದಲ ಅರ್ಥವಾಯಿತು. ಈಗಾಗಲೇ ಆ ಬಗ್ಗೆ ಬಹಳಷ್ಟು ವಾದ-ವಿವಾದಗಳು ನಡೆದಿವೆ. ಆ ಬಗ್ಗೆ ಮತ್ತಷ್ಟು ಮಾತು ಬೆಳೆಸುವ ಇಚ್ಚೆಯಿಲ್ಲ. ಇದೇ ವಿಷಯವಾಗಿ “ಸೀತಾಯಣ” ಎಂಬ ಪುಸ್ತಕ ಕೂಡ ಹೊರಬಂದಿತ್ತು.

    ಸೀತಾ,ರಾಮರ ವಿಷಯದ ಬಗ್ಗೆ ಅಲ್ಲ. ಸುಮ್ಮನೆ ಮಾತಿಗೆ ಹೇಳುವುದಾದರೆ, ಸಾವಿರಾರು ವರ್ಷಗಳ (ಇನ್ನೂ ಹೆಚ್ಚು) ಹಿಂದೆ ನಡೆದ ಪೌರಾಣಿಕ ಘಟನೆಗಳನ್ನು ಇವತ್ತಿನ ಮಾನದಂಡಗಳಲ್ಲಿ ಅಳೆದು ನೋಡುವುದು ಎಷ್ಟರ ಮಟ್ಟಿಗೆ ಸಮಂಜಸವಾದೀತು ಎನ್ನುವುದು ನನ್ನ ಪಾಲಿನ ಗೊಂದಲ. ಹಾಗೆ ನೋಡಿದಾಗ – ರಾವಣ ಸಂಹಾರ ಅಮಾನವೀಯವಾಗಿ ಕಾಣುತ್ತದೆ, ಪೂತನಿ ವಧೆ ಸ್ತ್ರೀ ಶೋಷಣೆಯಾಗುತ್ತದೆ, ಕಾಳಿಂಗ ಮರ್ಧನ ಪ್ರಾಣಿ ಹಿಂಸೆಯಾಗುತ್ತದೆ, ಖಾಂಡವ ದಹನ ಪರಿಸರ ನಾಶವಾಗುತ್ತದೆ – ಅಲ್ಲವೇ?

    ಬೇರೇನೂ ಬೇಡ, ನಮ್ಮ ಕಣ್ಣೆದುರೇ ನಡೆದ ಸದ್ದಾಮನ ಹತ್ಯೆಯನ್ನು ನಾವೆಲ್ಲ ಒಪ್ಪಿ ಸುಮ್ಮನಾಗಿದ್ದೇವೆ ಅಲ್ಲವೇ? (ಇದು ಇವತ್ತಿನ ಸತ್ಯ) ಈ ಘಟನೆಯನ್ನು ಇತಿಹಾಸವಾಗಿ ಓದುವ ನಮ್ಮ ಭವಿಷ್ಯದ ತಲೆಮಾರಿನವರಿಗೆ, ಇದೊಂದು ಅತ್ಯಂತ ಅನಾಗರೀಕ ಕೃತ್ಯವಾಗಿ ಕಂಡರೆ ಅದಕ್ಕೆ “ಕಾಲವನ್ನಲ್ಲದೆ” ಬೇರೆ ಯಾರನ್ನು ಹೊಣೆಯಾಗಿಸಲಾಗೀತು?!

  11. ಭಾಗವತರೇ,ನಿಮ್ಮನ್ನು ಯಾರಾದರೂ “ಕನ್ನಡ ಕುಲ ಪುಂಗವ” “ಹನುಮ” – ಎಂದರೆ ಹೆಮ್ಮೆ ಪಡಿ. ನಾಚಿಕೆ ಏಕೆ? ಹನುಮಂತ ನಮ್ಮವನು. ಕನ್ನಡದ ಮನೆ ಮಗನು. ಚೇಷ್ಟೆ ಸ್ವಲ್ಪ ಹೆಚ್ಚು ಅಷ್ಟೇ- ನಿಮ್ಮಂತೆ 🙂

    1. ಮೂಲ ತೆಲುಗು
      ಕನ್ನಡಕ್ಕೆ ಅನುವಾದ
      అదిగో చూడుము బంగరు జింక
      మన్నై చనునయ్యో లంక
      హరనయనాగ్ని పరాంగనవంక
      అడిగిన మరణమె నీ జింక

      రమ్ము రమ్ము హే భాగవతోత్తమ
      వానర కుల పుంగవ హనుమాన్…
      రమ్ము రమ్ము హే భాగవతోత్తమ
      వానర కుల పుంగవ హనుమాన్
      ముద్రిక కాదిది భువన నిదానం
      ముద్రిక కాదిది భువన నిదానం
      జీవన్ముక్తికి సోపానం…

  12. ಧನ್ಯವಾದಗಳು ತ್ರಿವೇಣಿ, ನಿಮ್ಮ ನಿರ್ಧಾರಕ್ಕೆ ನನ್ನ ಸಹಮತ.
    ನಾನು ಹೊಸದರಲ್ಲಿ ಕೆಲವರನ್ನು “ಪಾನಕಪೂಜೆಗೆ”  ಬರಹೇಳಿದಾಗ, ಎಲ್ಲರೂ ನಕ್ಕಿದ್ದು ನೆನಪಾಗುತ್ತಿದೆ. ಸಿಡಿ ರಾಮನಾಮದೊಂದಿಗೆ ನೆನ್ನೆ ಪಾನಕ, ಕೋಸಂಬರಿ, ಹುಳಿಯವಲಕ್ಕಿ, ಸಜ್ಜಿಗೆ, ರಸಾಯನ, ನೀರು ಮಜ್ಜಿಗೆಗಳಿಂದ ಪೇಟ ಪೂಜೆ ಆಯಿತು. 🙂

  13. ಅಯ್ಯೋ ರಾಮ!!!
    ನಮ್ಮ ಭಾಗವತರು ಕನ್ಯಾಮಣಿಗಳನ್ನ ಹುಡ್ಕೊಂಡು ಹೋಗ್ತಾ ಇದ್ರೆ ನೀವು “ಶರಣು ಶರಣು ಹೇ ಭಾಗವತೋತ್ತಮ
    ಕನ್ನಡ ಕುಲಪುಂಗವ ಹನುಮ” ಅನ್ನೋದೆ!! ಎಚ್ಚರ…ಭಾಗವತರು ಕುಪಿತರಾಗಿದ್ದಾರೆ

  14. ನಮ್ಮ ಕ್ರಿಕೇಟ್ ತಂಡಕ್ಕೆ ಚಿಪ್ಪು ಸಿಕ್ಕಿದ್ದೇ ಸರಿ ಅಂತ ನನ್ನ ಭಾವನೆ.

  15. ಮನಸ್ವಿನಿ, ಭಾಗವತರು ತಾವಾಗೇ ಹೇಳುವವರೆಗೂ ಅದು ಯಾರ ಗಮನಕ್ಕೂ ಬಂದಿರಲೇ ಇಲ್ಲ. ಭಾಗವತರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರೆ ನಾವೇನು ಮಾಡೋಣ? 🙂

    ಅಶ್ವಿನಿ, ತುಳಸಿವನಕ್ಕೆ ಸ್ವಾಗತ.  🙂

  16. ಹನುಮಂತ – ರಾಮನ ನಡುವೆ ಸಂಭಾಷಣೆ ಇರುವ ಒಂದು ಹಾಡಿದೆ. ಯಾರಿಗಾದರೂ ಗೊತ್ತಿದ್ದರೇ ತಿಳಿಸಿ.

  17. ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿದೆ.

    ಶರಣು ಶರಣು ಹೇ ಭಾಗವತೋತ್ತಮ
    ಕನ್ನಡ ಕುಲಪುಂಗವ ‘ಮಹಿಮ’ – ಆಗ್ಬೇಕು ಃ-)

  18. “ಹನುಮಂತ – ರಾಮನ ನಡುವೆ ಸಂಭಾಷಣೆ ಇರುವ ಒಂದು ಹಾಡಿದೆ. ”

    – ಗೀತ್,

    ಹನುಮಂತ – ರಾವಣ – “ಏಳೇಳು ಶರಧಿಯು ಏಕವಾಗಿದೆ ಕಂಡ್ಯ ಹೇಗೆ ಬಂದೆಯೋ ಹೇಳೋ ಕೋತಿ”

    ಹನುಮಂತ – ರಾಮ – “ಏನೆಂದಳಯ್ಯಾ ಸೀತೆ, ಹನುಮ, ಏನು ಪೇಳಿದಳಯ್ಯಾ ಪ್ರೀತೆ? ”
    ————————————————

    “ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿದೆ.”

    – ಹಾಗಂದುಕೊಂಡ್ರೆ ಭಾಗವತರ ಮನಸ್ಸಿಗೆ ಸ್ವಲ್ಪ ಸಮಾಧಾನ ಆಗೋದಾದರೆ ಆಗಲಿ . 🙂

  19. ‘ಇಷ್ಟು ದಿನ ಎಲ್ಲಿ ಕಾಣೆಯಾಗಿದ್ರಿ ಭಾಗವತರೆ?’ ಅಂತ ಕೇಳಿದ್ದಕ್ಕೆ “ಎಲ್ಲಿಗೋ ಹಾರಿ ಹೋಗಿದ್ದೆ” ಅಂದ್ರಪ್ಪ!:)! ಈಗ ಇಲ್ಲಿಗೆ ಬಂದ್ರಾ, ಭಾಗವತರೆ? ನೀವು ಹೋಗಿದ್ದಲ್ಲಿ ನಿಮಗಿದನ್ನು (ಇಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿದ್ದನ್ನು) ಯಾರಾದ್ರೂ (ಸೀತಮ್ಮ!?) ಹೇಳಿಕೊಟ್ರಾ? ಇರಲಿ, ನಿಮ್ಮ ಸಮಾಧಾನ ಮುಖ್ಯ. ನೆಮ್ಮದಿಯಾಯ್ತೇ?

  20. ಗೋ=ಆಕಳು, ಪುಂ+ಗೋ=ಪುಂಗವ=ಗಂಡು ಆಕಳು=ಹೋರಿ.
    ಭಾಗವತರು ಕನ್ನಡ ನಾಡಿನಲ್ಲಿ ಗಂಡು ಆಕಳಿನಂತೆ ಯಾನೆ ಹೋರಿಯಂತೆ, ಮುಸುಗುಟ್ಟತ್ತಾ ಓಡುತ್ತಿರುತ್ತಾರೆ. ಎಲ್ಲರೂ ಸ್ವಲ್ಪ ಎಚ್ಚರಿಕೆಯಿಂದ ಇರಿ.

  21. ಕಾಕಾ, ನೀವೂ ಹೀಗಂದ್ರೆ ಹೇಗೆ?
    ಇರಲಿ; ನನ್ನ ಧನ್ಯವಾದಗಳು.

    ಭಾಗವತಾ, ಕಾಕಾ ಕೂಡಾ ನಿನ್ನ ಪಕ್ಕ ಬಿಟ್ಟು ನಮ್ಮ ಕಡೆ ಪಕ್ಷಾಂತರ ಮಾಡಿದಾರೆ. ಈಗೇನ್ ಮಾಡ್ತಿ? ಒಂಟಿ ಆಗೋದ್ಯಲ್ಲೋ, ಮಾಣಿ!! ಲಾ…ಲ…. ಲಾ…ಲ… ಲಾ…ಲಾ…..

  22. ಸುನಾಥರೇ,
    ನೀವೂ ಸೀನಿಯರ್ ಸಿಟಿಜನ್ ಗುಂಪು ಸೇರಿದರೇ? ನಿಮ್ಮಿಂದ ನಾನಿದನ್ನು ನಿರೀಕ್ಷಿಸಿರಲಿಲ್ಲ. ಛೇ, ಛೇ, ಛೇ……ಸಜ್ಜನರೂ ಈ ರೀತಿಯಾಗಿ ಮಾಡುವುದು ತರವೇ? ನ್ಯಾಯವೇ? ಉಚಿತವೇ? ಸಮ್ಮತವೇ?…ಎಂಥ ಕಾಲವು ಪ್ರಾಪ್ತವಾಯಿತು….ಹರಹರ…ಶಿವಶಿವ…ಅಕಟಕಟಕಟಕಟ….
    (ಭ್ರಮನಿರಸನಗೊಂಡ ನಾಯಕನು ಮಮ್ಮಲ ಮರುಗುವನು…ಹಿನ್ನೆಲೆಯಲ್ಲಿ ಸಮೂಹ ಸಂಗೀತವು ಕೇಳಿಬರುವುದು –
    ಎಂಥ ಕಲಿಗಾಲವು…ಇದು ಎಂಥ ಕಲಿಗಾಲವು….).

  23. ಮಾಣಿ,
    ನಾನು ನಿನ್ನ ಪರವಾಗಿ ಸಮಸ್ತ ಕನ್ನಡಿಗರಿಗೂ ಎಚ್ಚರಿಕೆ ನೀಡುತ್ತಿದ್ದೇನೆ, ಅಷ್ಟೆ.
    ಈ ಮುಸುಗುಟ್ಟುತ್ತಿರುವ ಹೋರಿಗೆ ಮೂಗುದಾಣ ಹಾಕುವ ಧೈರ್ಯವುಳ್ಳ ಕನ್ಯಾಮಣಿಯು ಮುಂದೆ ಬರಲಿ ಎಂದು ಚಾಲೇಂಜ ಬಿಸಾಕುತ್ತಿದ್ದೇನೆ, ಮಾಣಿ.
    ಅಂಥ ಕನ್ಯಾಮಣಿಯು ಸಿಕ್ಕರೆ, ನಿನ್ನ ಕಲ್ಯಾಣ ಕಟ್ಟುವ ಆಸೆ ಕಣೋ, ನನ್ನದು.

  24. ಮುಸುಗುಟ್ಟುವ “ಪುಂಗವ”ನಿಗೆ ಮೂಗುದಾರ ಹಾಕಲು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಅಥವಾ ಅಂಥ ಧೀರೆಯರು ಯಾರಾದ್ರೂ ಬರಬೇಕಾದೀತು. ಸಾಮಾನ್ಯರಿಗೆ ಸಾಧ್ಯವಿಲ್ಲಪ್ಪ!! ಈಗಿನ ಕಾಲದ ನಾಜೂಕು ನಾರೀಮಣಿಯರಿಗೆ ಇಂಥ ಶೌರ್ಯಗಾರಿಕೆ ಎಲ್ಲಿದೆ?
    ಗುಡ್-ಲಕ್ ಕಣೋ… ಪುಂಗವ!

  25. ನನ್ನ ಪ್ರಶ್ನೆಗೆ ಉತ್ತರಿಸಿದ್ದಕ್ಕೆ ಧನ್ಯವಾದಗಳು.

  26. ಮೂಲ ತೆಲುಗು
    ಕನ್ನಡಕ್ಕೆ ಅನುವಾದ
    అదిగో చూడుము బంగరు జింక
    మన్నై చనునయ్యో లంక
    హరనయనాగ్ని పరాంగనవంక
    అడిగిన మరణమె నీ జింక

    రమ్ము రమ్ము హే భాగవతోత్తమ
    వానర కుల పుంగవ హనుమాన్…
    రమ్ము రమ్ము హే భాగవతోత్తమ
    వానర కుల పుంగవ హనుమాన్
    ముద్రిక కాదిది భువన నిదానం
    ముద్రిక కాదిది భువన నిదానం
    జీవన్ముక్తికి సోపానం…

  27. ಮೂಲ ತೆಲುಗು
    ಕನ್ನಡಕ್ಕೆ ಅನುವಾದ
    అదిగో చూడుము బంగరు జింక
    మన్నై చనునయ్యో లంక
    హరనయనాగ్ని పరాంగనవంక
    అడిగిన మరణమె నీ జింక

    రమ్ము రమ్ము హే భాగవతోత్తమ
    వానర కుల పుంగవ హనుమాన్…
    రమ్ము రమ్ము హే భాగవతోత్తమ
    వానర కుల పుంగవ హనుమాన్
    ముద్రిక కాదిది భువన నిదానం
    ముద్రిక కాదిది భువన నిదానం
    జీవన్ముక్తికి సోపానం…

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.