ನೀಲಿ ಕೇರಿಯ ನೀಲಿ ಕಂಗಳ ನೀರೆ – 1

 ಕತೆಗಾರರು:- sritri, ಶ್ರೀನಿಧಿ.ಡಿ.ಎಸ್ , ಸುನಾಥ, ಮನಸ್ವಿನಿ,  ಜಗಲಿ ಭಾಗವತ, ಸುಶ್ರುತ ದೊಡ್ಡೇರಿ, shiv, ಜ್ಯೋತಿ, ——————————————————————————————————————————————————————-      ’ಈ ಬೆಂಗಳೂರಿನ ಹೊಗೆ, ಧೂಳು ಕುಡಿದು ಸಾಕಾಗಿದೆ ಕಣ್ರೊ. ಒಂದು ಹದಿನೈದು ದಿನಗಳಾದರೂ ಊರಿನಲ್ಲಿ ನೆಮ್ಮದಿಯಾಗಿದ್ದು ಬರುತ್ತೀನಿ’- ಎಂದು ಗೆಳೆಯರಿಗೆಲ್ಲಾ ಹೇಳಿ ಬಂದಿದ್ದ ಸುದೀಪನಿಗೆ ಎರಡನೆಯ ದಿನಕ್ಕೇ ಬೆಂಗಳೂರು ನೆನಪಾಗತೊಡಗಿತ್ತು.  ’ಈ ಬೆಂಗಳೂರಿನ ಗುಣವೇ ಹಾಗೆ. Read More

ಕತೆ ಕಟ್ಟೋಣ ಬನ್ನಿ..

ಕನ್ನಡ ಆಡಿಯೋ ಸಮುದಾಯದಲ್ಲಿ ಹೀಗೊಂದು ಆಟವಿದೆ. ಅದು ಕತೆ ಬರೆಯುವ ಆಟ. ಕತೆಯನ್ನು ಸಾಲಿನಿಂದ ಸಾಲಿಗೆ ಮುಂದುವರೆಸುವ ಆಟ. ಒಂದೇ ಕತೆಯನ್ನು ಹೆಣೆಯುವ ಹಲವಾರು ಕತೆಗಾರರು.  ನನಗೆ ತುಂಬಾ ಇಷ್ಟದ ಆಟವಿದು.  ಅದೇ ರೀತಿ ನಾವೂ ಇಲ್ಲೊಂದು ಕತೆ ಬರೆಯೋಣವೇ? ನೀವು ಕಾಮೆಂಟುಗಳ ರೂಪದಲ್ಲಿ ಮುಂದುವರೆಸುವ ಭಾಗವನ್ನು ನಾನು ಕತೆಗೆ ಜೋಡಿಸುತ್ತಾ ಹೋಗುತ್ತೇನೆ. ಕತೆ ಸುಗಮವಾಗಿ ಸಾಗಲು Read More

ತೂಗು ಮಂಚ – ಎಚ್.ಎಸ್.ವೆಂಕಟೇಶ್ ಮೂರ್ತಿ

ಕವಿ – ಎಚ್.ಎಸ್.ವೆಂಕಟೇಶ್ ಮೂರ್ತಿ ಸಂಗೀತ – ಸಿ. ಅಶ್ವಥ್ ಗಾಯಕಿ – ರತ್ನಮಾಲಾ ಪ್ರಕಾಶ್ ಆಲ್ಬಂ – “ತೂಗು ಮಂಚ”  ಹಾಡು ಕೇಳಿ  ತೂಗು ಮಂಚದಲ್ಲಿ ಕೂತು ಮೇಘಶಾಮ ರಾಧೆಗಾತು ಆಡುತಿಹನು ಏನೋ ಮಾತು ರಾಧೆ ನಾಚುತಿದ್ದಳು ಸೆರಗ ಬೆರಳಿನಲ್ಲಿ ಸುತ್ತಿ ಜಡೆಯ ತುದಿಯ ಕೆನ್ನೆಗೊತ್ತಿ ಜುಮ್ಮುಗುಡುವ ಮುಖವನೆತ್ತಿ ಕಣ್ಣ ಮುಚ್ಚುತ್ತಿದ್ದಳು ಮುಖವ ಎದೆಯ Read More

ಜ್ವರ..ಒಂಥರ ಜ್ವರ..

ಜ್ವರ, ನೆಗಡಿಯ ಕೆಟ್ಟ ಪರಿಣಾಮಗಳು ಎಲ್ಲರಿಗೂ ತಿಳಿದೇ ಇರುತ್ತವೆ. ಆದರೆ ನೀವು ಕೆಟ್ಟದರಲ್ಲಿಯೂ ಒಳ್ಳೆಯದನ್ನೇ ಹುಡುಕುವ ಆಶಾವಾದಿಯಾಗಿದ್ದರೆ, ಜ್ವರದಲ್ಲೂ ಕೆಲವು ಪ್ರಯೋಜನಗಳನ್ನು ಕಾಣಬಹುದು. ಕಳೆದೆರಡು-ಮೂರು ದಿನಗಳು ಜ್ವರದ ಕುಲುಮೆಯಲ್ಲಿ ಬೇಯುತ್ತಿದ್ದಾಗ, ಮನಸ್ಸಿನಲ್ಲಿಯೇ ನಾನು ಜ್ವರದ ಪಾಸಿಟಿವ್ ಅಂಶಗಳನ್ನು ಪಟ್ಟಿ ಮಾಡುತ್ತಿದ್ದೆ. ಮರೆಯುವ ಮುನ್ನ, ನೆನಪಿರುವುದನ್ನು ಬರಹಕ್ಕಿಳಿಸಿ ಬಿಡುತ್ತೇನೆ. ನಿಮ್ಮ ಅನುಭವಕ್ಕೆ ಬಂದಿರುವ ಸಂಗತಿಗಳೇನಾದರೂ ಇದ್ದರೆ ಈಗಲೇ Read More

ಬಾ ಮಲ್ಲಿಗೆ – ಚೆನ್ನವೀರ ಕಣವಿ

ಸಾಹಿತ್ಯ – ಚೆನ್ನವೀರ ಕಣವಿ ಸಂಗೀತ – ಸಿ.ಅಶ್ವಥ್ ಗಾಯಕರು – ಶ್ರೀನಿವಾಸ ಉಡುಪ, ಇಂದು ವಿಶ್ವನಾಥ್ ಹಾಡು ಕೇಳಿ ಬಾ ಮಲ್ಲಿಗೆ ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ ಇಳಿಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವು ಉಸಿರುಸಿರಿಗೂ ತಂಪೆರಚಿದೆ ನಿನ್ನೆದೆ ಪರಿಮಳವು ತಿಂಗಳ ತನಿವೆಳಕಲಿ ಮೈದೊಳೆದಿಹ ಮನದನ್ನೆ ಮಂಗಳವೀ ಮನೆಯಂಗಳ ಚೆಂಗಲವೆಯ Read More