Category: ಭಾವ ಭಾಗೀರಥಿ

ಕಾಡಿದ್ದು, ನೋಡಿದ್ದು

ಡೈರಿ ಹೇಳೆ, ಮುಂದೇನೆ?ಡೈರಿ ಹೇಳೆ, ಮುಂದೇನೆ?

ಅಂಗಡಿಯಿಂದ ಕೊಂಡುತಂದಿದ್ದ ದಿನಸಿಯನ್ನು ಕಾರಿನಿಂದ ಒಳತಂದಿಟ್ಟು, ಕುಡಿಯಲೆಂದು ಲೋಟಕ್ಕೆ ನೀರು ತುಂಬಿಸುತ್ತಿದ್ದಾಗಲೇ ಬಾಗಿಲ ಕರೆಘಂಟೆಯ ಸದ್ದು. ಫೋನ್ ಮಾಡಿ ಮುಂಚಿತವಾಗಿ ತಿಳಿಸದೆ, ನಾವಾಗಿ ಕರೆಯದೆ, ಯಾರ ಮನೆಗೆ ಯಾರೂ ಬಾರದ ಈ ದೇಶದಲ್ಲಿ, ಇದ್ದಕ್ಕಿದ್ದಂತೆ ಬಡಿದುಕೊಳ್ಳುವ ಕರೆಘಂಟೆಯ ಸದ್ದು ನನ್ನನ್ನು ಬೆಚ್ಚಿಸುತ್ತದೆ.

ನೆನಪಿನಲ್ಲೊಂದು ಚಿತ್ರನೆನಪಿನಲ್ಲೊಂದು ಚಿತ್ರ

‘ಪುಟ್ಟಣ್ಣಾ, ಇಲ್ಲೇ ಇರ್ತೀಯಾ? ಅಕ್ಕನ ಜೊತೆ ಹೋಗಿ, ಅಲ್ಲಿ…. ಕಾಣ್ತಾ ಇದೆ ನೋಡು. ಆ ಅಂಗಡಿಗೆ ಹೋಗಿ ಈಗ ಬಂದುಬಿಡ್ತೀವಿ. ಬರ್ತಾ ನಿಂಗೆ ಚಾಕಲೇಟ್ ತರ್ತೀವಿ. ಆಯ್ತಾ?’ ತಾಯಿ ನುಡಿದಾಗ ಗುಂಗುರುಗೂದಲ ಪುಟ್ಟನ ಕಣ್ಣುಗಳಲ್ಲಿ ಚಕ್ಕನೆ ಹರವಿಕೊಂಡ ಆಸೆಯ ಕಾಮನಬಿಲ್ಲು. ತನಗೆ

ಅವಳು ಬಂದಿದ್ದಳು…ಅವಳು ಬಂದಿದ್ದಳು…

ಕೈತೋಟದಲ್ಲಿ ಗಿಡಗಳ ಪಾತಿಯಲ್ಲಿ ಉದುರಿಬಿದ್ದ ಎಲೆಗಳನ್ನು ಹೆಕ್ಕುತ್ತಿದ್ದೆ. ಹಿಂದೇನೋ ಸದ್ದಾದಂತಾಗಿ ತಿರುಗಿದೆ. ಅವಳು ನಿಂತಿದ್ದಳು. ಕಣ್ಣುಗಳಲ್ಲಿ ವರ್ಷಗಳ ನಿದ್ರೆ ಬಾಕಿ ಇದ್ದಷ್ಟು ಆಯಾಸ. ಮುಖಭಾವ ಎಂದಿನಂತಿರಲಿಲ್ಲ. ಯಾವುದೋ ನಾನರಿಯದ ಸಂಕಟ ಅಲ್ಲಿದ್ದಂತಿತ್ತು. ‘ಅಂತೂ ಬಂದೆಯಾ? ಆ ದಿನ ಅದೇನೋ ಅವಸರವಿದ್ದಂತೆ ಇದ್ದಕ್ಕಿದ್ದಂತೆ

ಆದರ್ಶ ದಂಪತಿಆದರ್ಶ ದಂಪತಿ

ಆ ಆಂಟಿ-ಅಂಕಲ್‍ಗೆ ಆದರ್ಶ ದಂಪತಿಗಳು ಅಂತಾನೇ ಅನ್ನೋದು ಎಲ್ಲಾರೂ. ಅಷ್ಟು ಹೊಂದಾಣಿಕೆ ಇಬ್ಬರಲ್ಲಿ. ಅವರ ಮುಖದಲ್ಲಿ ಸದಾ ನಗುವೇ. ಒಬ್ಬರ ಮೇಲೊಬ್ಬರು ಕೋಪಿಸಿಕೊಂಡಿದ್ದಾಗಲೀ, ಒಬ್ಬರನ್ನೊಬ್ಬರು ರೇಗಿಕೊಂಡಿದ್ದನ್ನಾಗಲೀ, ನೀನು-ತಾನು ಎಂದು ಜಗಳಾಡಿದ್ದನ್ನಾಗಲೀ ಕಂಡವರು ಇಲ್ಲವೇ ಇಲ್ಲ. ಆದರೂ ಇವಳಿಗೇಕೋ ಆ ಆದರ್ಶ ದಂಪತಿಗಳ

ಕಾಗೆಯೊಂದು ಹಾರಿಬಂದು….ಕಾಗೆಯೊಂದು ಹಾರಿಬಂದು….

ಹೆಸರೇ ಸುನೇತ್ರ! ಆದರೆ ಅವಳ ಸುಂದರ ಕಣ್ಣುಗಳು ತುಂಬಿಕೊಂಡಿರುತ್ತಿದ್ದುದೇ ಹೆಚ್ಚು. ಈ ಬಾರಿ ಆ ಕಣ್ಣೀರಿಗೆ ಹೆಚ್ಚಿನ ಬೆಲೆಯಿತ್ತು. ಅಲ್ಲಿ, ದೂರದಲ್ಲಿ ಅವಳ ಅಪ್ಪ ತೀರಿಕೊಂಡಿದ್ದರು. ಇಲ್ಲಿ ಅವಳನ್ನು ಶವ ನೋಡಲೂ ಹೋಗದಂತೆ ನಿರ್ಬಂಧದಲ್ಲಿರಿಸಲಾಗಿತ್ತು. ಕೊನೆಗೂ ಕೊಟ್ಟ ಮನೆಯ ಕಟ್ಟುಗಳನ್ನು ಬಿಚ್ಚಿಕೊಂಡು