ಬಂದಿದೆ ದೂರು ಬರಿದೆ ಪಾಂಡವರಿಗೆ- Bandide dooru – Kanakadaasaru

ರಚನೆ : ಕನಕದಾಸರು ಬಂದಿದೆ ದೂರು ಬರಿದೆ ಪಾಂಡವರಿಗೆಕೊಂದವರಿವರು ಕೌರವರನೆಂಬಪಕೀರ್ತಿ ||ಪಲ್ಲವಿ|| ಮುನ್ನಿನ ವೈರದಿ ಕಡುಸ್ನೇಹವ ಮಾಡಿಉನ್ನಂತಲೆತ್ತ ಪಗಡೆಯಾಡಿಸಿತನ್ನ ಕುಹಕದಿಂದ ಕುರುಬಲವನು ಕೊಂದಘನ್ನಘಾತುಕ ಶಕುನಿಯೋ? ಪಾಂಡವರೋ? ||೧|| ಮರಣ ತನ್ನಿಚ್ಚೆಯೊಳುಳ್ಳ ಗಾಂಗೇಯನುಧುರದೊಳು ಷಂಡನ ನೆವದಿಂದಲಿಸರಳ ಮಂಚದ ಮೇಲೆ ಮಲಗಿ ಮೊಮ್ಮಗನಕೊರಳ ಕೊಯ್ದವ ಭೀಷ್ಮನೋ? ಪಾಂಡವರೋ? ||2|| ಮಗನ ನೆವದಿ ಕಾಳಗವ ಬಿಸುಟು ಸುರನಗರಿಗೈದಲು ವೈರಾಗ್ಯದಿಂದಜಗವರಿಯಲು ಕುರುವಂಶಕೆ Read More

ಕೇಶವ ನಾಮ – ಕನಕದಾಸರು

ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।।೧।।ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ ।।೨।।ಶೋಧಿಸೆನ್ನ ಭವದ ಕಲುಷ । ಬೋಧಿಸಯ್ಯ ಜ್ಞಾನವೆನಗೆ । ಬಾಧಿಸುವ ಯಮನ ಬಾಧೆ ಬಿಡಿಸು ಮಾಧವಾ ।।೩।।ಹಿಂದನೇಕ ಯೋನಿಗಳಲಿ । ಬಂದು ಬಂದು Read More

ಕೋತಿ ಬಂದದ ರಾವಣ ನೀ ಕೇಳು- ಕನಕದಾಸರು

ಕೋತಿ ಬಂದದ ರಾವಣ ನೀ ಕೇಳು ಸೀತೆಯ ವನದಲ್ಲಿ || ಪಲ್ಲವಿ|| ಗಿಡದಿಂದ ಗಿಡಕೆ ಹಾರತದ ಕೋತಿ ಬಲು ಗಡಿಬಿಡಿ ಮಾಡತದ ಹಿಡದೇನಂದರೆ ತಡಿ ತಡಿ ಅನುತದ ಬಿಡದೆ ರಾಮರ ಸ್ಮರಣೆ ಮಾಡುತದ ರಾಮನ ದೂತನು ಅನುತಾದ ||೧|| ಮಾತನಾಡುತಾದ ಬಂದಂಥ ಕೋತಿ ಸೀತಾ- ಅಂಥಾದ ಸೇತುವೆಗಟ್ಟಿ ಬರತಾನಂತದ ರಘುಪತಿ ದಶರಥ ಸುತ ಬರತಾನಂತ ವಾಯುಕುಮಾರನು Read More

ಬಂದೇವಯ್ಯಾ ಗೋವಿಂದ ಶೆಟ್ಟಿ!

ರಚನೆ : ಕನಕದಾಸರು ಬಂದೇವಯ್ಯಾ ಗೋವಿಂದ ಶೆಟ್ಟಿ ನಿಮ್ಮ ಹರಿವಾಣ ತೀರ್ಥ ಪ್ರಸಾದ ಉಂಟೆನಲಾಗಿ ||ಪಲ್ಲವಿ|| ಅಪ್ಪವು ಅತಿರಸ ತುಪ್ಪವು ಬಿಸಿ ಹಾಲು ಒಪ್ಪುವ ಸಕ್ಕರೆ ಯಾಲಕ್ಕಿಯು ಅಪರೂಪವಾದ ಕಜ್ಜಾಯಗಳನೆಲ್ಲ ಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ ||೧|| ಒಡೆದ ಮಡಕೆ ತಂದು ಅರೆದು ನಾಮವ ಮಾಡಿ ಕೊಡುವೆ ನೀ ಕಾಸಿಗೆ ಒಂದೊಂದಾಗಿ ಒಡಲು ತುಂಬಿ ಮಿಕ್ಕ Read More

ಆರು ಬಾಳಿದರೇನು? ಆರು ಬದುಕಿದರೇನು?

ರಚನೆ : ಕನಕದಾಸರು ಆರು ಬಾಳಿದರೇನು ಆರು ಬದುಕಿದರೇನು ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ|| ಉಣ್ಣಬರದವರಲ್ಲಿ ಊರೂಟವಾದರೇನು ಹಣ್ಣು ಬಿಡದ ಮರ ಹಾಳಾದರೇನು ಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನು ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು ||೧|| ಅಕ್ಕರಿಲ್ಲದವರಿಗೆ ಮಕ್ಕಳಿದ್ದು ಫಲವೇನು ಹೊಕ್ಕು ನಡೆಯದ ನಂಟತನದೊಳೇನು ರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನು ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು ||೨|| ಅಲ್ಪದೊರೆಗಳ ಜೀತ ಎಷ್ಟು Read More