ಒಲ್ಲನೋ ಹರಿ ಕೊಳ್ಳನೋ

ಒಲ್ಲನೋ ಹರಿ ಕೊಳ್ಳನೋ ||ಪ|| ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ ||ಅನು|| ಸಿಂಧು ಶತಕೋಟಿ ಗಂಗೋದಕವಿದ್ದು | ಗಂಧ ಸುಪರಿಮಳ ವಸ್ತ್ರವಿದ್ದು || ಚಂದುಳ್ಳ ಆಭರಣ ಧೂಪ ದೀಪಗಳಿದ್ದು | ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ||೧|| ದಧಿಕ್ಷೀರ ಮೊದಲಾದ ಅಭಿಷೇಕಗಳಿದ್ದು| ಮಧುಪರ್ಕ ಪಂಚೋಪಚಾರವಿದ್ದು|| ಮುದದಿಂದ ಮುದ್ದು ಶ್ರೀಕೃಷ್ಣನ ಪೂಜೆಗೆ| ಸದಮಲಳಾದ ಶ್ರೀತುಳಸಿ Read More

ಏಕೆನ್ನ ಈ ರಾಜ್ಯಕ್ಕೆಳೆತಂದೆ?

ರಾಗ: ತೋಡಿ ತಾಳ: ದೀಪ್ ಚಂಡಿ ಏಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೇ ಸಾಕಲಾರದೆ ಎನ್ನ ಏಕೆ ಪುಟ್ಟಿಸಿದೆ ಎನ್ನ ಕುಲದವರಿಲ್ಲ ಎನಗೊಬ್ಬ ಹಿತರಿಲ್ಲ ಮನ್ನಿಸುವ ದೊರೆಯಿಲ್ಲ ಮನಕೆ ಹಿತವಿಲ್ಲ ಹೊನ್ನುಚಿನ್ನಗಳಿಲ್ಲ ಒಲಿಸಿಕೊಂಬುವರಿಲ್ಲ ಇನ್ನಿಲ್ಲಿ ತರವಲ್ಲ ಇಂದಿರೇಶನೆ ಬಲ್ಲ ದೇಶ ಪರಿಚಯವಿಲ್ಲ ದೇಹದೊಳು ಬಲವಿಲ್ಲ ವಾಸಿಪಂಥಗಳೆಂಬೊ ಒಲುಮೆ ಎನಗಿಲ್ಲ ಬೇಸರ ಕಳೆವರಿಲ್ಲ ಬೇರೆ ಹಿತಜನರಿಲ್ಲ ವಾಸುದೇವನೆ ಬಲ್ಲ Read More

ಕಟಿಯಲ್ಲಿ ಕರವಿಟ್ಟನೊ ಪಂಢರಿರಾಯ

ರಚನೆ – ಪುರಂದರದಾಸರು ಹಾಡು ಕೇಳಿ – ವಿದ್ಯಾಭೂಷಣ ಹುಸೇನ್ ಸಾಹೇಬ್ ಕಟಿಯಲ್ಲಿ ಕರವಿಟ್ಟನೊ ಪಂಢರಿರಾಯ ಕಟಿಯಲ್ಲಿ ಕರವಿಟ್ಟನೊ ||ಪಲ್ಲವಿ|| ಗೊಲ್ಲ ಬಾಲಕರೊಡಗೂಡಿ ತಾ ಬಂದು ಗೊಲ್ಲತಿಯರ ಮನೆ ಕದ್ದು ಬೆಣ್ಣೆಯ ತಿಂದು ಬಲ್ಲಿದ ತೃಣಾವರ್ತ ಮೊದಲಾದ ಅಸುರರ ಮೆಲ್ಲನೆ ಕೊಂದಾಯಾಸದಿಂದಲೋ ? ಮುದದಿಂದ ವ್ರಜದ ಹದಿನಾರು ಸಾವಿರ ಸುದತಿಯರಾಳಿದ ಮದದಿಂದಲೊ ಮದಗಜಗಮನೆಯರ ಮದದಂತಕ ಕೃಷ್ಣ Read More

ಪುರಂದರದಾಸರು ಕಂಡ ಮುಸ್ಲಿಮರು

ರಚನೆ : ಪುರಂದರ ದಾಸರು ತುರುಕರು ಕರೆದರೆ ಉಣಬಹುದಣ್ಣ | ತುರುಕರು ಕರೆದರೆ ಅತಿ ಪುಣ್ಯವಣ್ಣ || ತುರುಕರಿಂದ ಮುಟ್ಟು ಮಡಿ ಚಟ್ಟು ಹೋಗೋದು | ತುರುಕರಿಂದ ಎಂಜಲು ಹೋಗೋದು || ತುರುಕರ ಕೂದಲು ತುರುಬಿಗೆ ಸುತ್ತಿದರೆ ಎಣಿಕೆಯಿಲ್ಲದ ಮುತ್ತೈದೆಯರಣ್ಣ || ತುರುಕರಿಂದ ಸ್ವರ್ಗ ಸಾಧನವಾಗೋದು | ತುರುಕರಿಂದ ನರಕ ದೂರವಯ್ಯ || ತುರುಕರು ಬಂದರೆ Read More

ಜಂಗಮರು ನಾವು

ರಚನೆ – ಪುರಂದರದಾಸರು ಮಧ್ಯಮಾವತಿ ರಾಗ, ಅಟ್ಟ ತಾಳ ಜಂಗಮರು ನಾವು | ನೀವೇ ಕೇಳಿ ||ಪಲ್ಲವಿ|| ಜಂಗಮರು ನಾವು ಲಿಂಗಾಂಗಿಗಳು ಮಂಗಳವಂತರ | ಭವಿಗಳೆಂಬಿರಿ ಬರಿದೆ ||ಅನು|| ಶಿವಗುರುದೈವ ಕೇಶವ ನಮ್ಮ ಮನೆದೈವ ವರದ ಮೋಹನ ನಮ್ಮ ಗುರುಶಾಂತೇಶ ಶಿವ ಗುರುದ್ರೋಹಮಾಡಿದ ಪರವಾದಿಗೆ ರವರವ ನರಕದೊಳುರುಳುವದೇ ಗತಿ ||೧|| ವಿಭೂತಿ ನಮಗುಂಟು | ವಿಶ್ವೇಶ Read More