ಏನ ಬೇಡಲಿ ನಿನ್ನ ಬಳಿಗೆ ಬಂದು – ಗೋಪಾಲದಾಸರು

ರಚನೆ: ಗೋಪಾಲದಾಸರು ಏನು ಬೇಡಲಿ ನಿನ್ನ ಬಳಿಗೆ ಬಂದು ನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ ||ಪ|| ಜನನಿಯನು ಕೊಡು ಎಂದು ಜಯವಂತ ಬೇಡುವೆನೆ ಜನನಿ ಏನಿತ್ತಳಾ ಧ್ರುವರಾಯಗೆ ಜನಕನ ಕೊಡು ಎಂದು ಜಗದೀಶ ಬೇಡುವೆನೆ ಜನಕನೇನಿತ್ತನಾ ಪ್ರಹ್ಲಾದಗೆ ||೧|| ಅನುಜನ ಕೊಡು ಎಂದು ಅತಿಶಯದಿ ಬೇಡುವೆನೆ ಅನುಜನೇನಿತ್ತನೈ ಆ ವಾಲಿಗೆ ಧನವನ್ನೆ ಕೊಡು ಎಂದು ದೈನ್ಯದಲಿ Read More

ಆರು ಬದುಕಿದರೇನು ಆರು ಬಾಳಿದರೇನು – ಪುರಂದರ ದಾಸರು

ರಚನೆ : ಪುರಂದರದಾಸರು ಆರು ಬದುಕಿದರೇನು ಆರು ಬಾಳಿದರೇನು ಪೂರ್ವ ಜನ್ಮದ ಕರ್ಮ ವಿಧಿ ತೀರದನಕ ||ಪ|| ಪತಿ ಭಕುತಿಯಿಲ್ಲದಿಹ ಸತಿಯಿದ್ದು ಫಲವೇನು ಮತಿಯಿಲ್ಲದವಗೆ ಬೋಧಿಸಿದರೇನು ಪತಿಯಿಲ್ಲದವಳಿಗೆ ಬಹು ಭೋಗವಿದ್ದರೇನು ಮತಿ ಹೀನನಾದಂಥ ಮಗನ ಗೊಡವೇನು ಜ್ಞಾನವಿಲ್ಲದವ ನಿತ್ಯ ಸ್ನಾನ ಮಾಡಿ ಫಲವೇನು ದಾನ ಧರ್ಮವಿಲ್ಲದವನ ದಯವಾದರೇನು ಮಾನಾಭಿಮಾನಗಳ ಮರೆದವನ ಸಂಗವೇನು ದೀನನಾದವನಿಗೆ ದೈರ್ಯವಿದ್ದರೇನು ಕಣ್ಣಿಲ್ಲದಗೆ Read More

ಧವಳಗಂಗೆಯ ಗಂಗಾಧರ ಮಹಾಲಿಂಗ

ರಚನೆ : ವಾದಿರಾಜರು ಧವಳಗಂಗೆಯ ಗಂಗಾಧರ ಮಹಾಲಿಂಗ ಮಾಧವನ ತೋರಿಸಯ್ಯ ಗುರುಕುಲೋತ್ತುಂಗ || ಪ || ಅರ್ಚಿಸಿದವರಿಗಭೀಷ್ಟವ ಕೊಡುವ ಹೆಚ್ಚಿದ ಅಘಗಳ ತರಿದು ಬಿಸುಟುವ ದುಶ್ಚರಿತಗಳೆಲ್ಲ ದೂರದಲ್ಲಿಡುವ ನಮ್ಮಚ್ಯುತಗಲ್ಲದ ಅಸುರರ ಬಡಿವ || ೧ || ಮಾರನ ಗೆದ್ದ ಮನೋಹರ ಮೂರ್ತಿ ಸಾರ ಸಜ್ಜನರಿಗೆ ಸುರಚಕ್ರವರ್ತಿ ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿ ಮುರಾರಿಯ ತೋರಿಸಯ್ಯ ನಿನಗೆ Read More

ಅಂತರಂಗದ ಕದವು ತೆರೆಯಿತಿಂದು

ರಚನೆ : ವಿಜಯದಾಸರು ಗಾಯಕ : ಪುತ್ತೂರು ನರಸಿಂಹ ನಾಯಕ್ ಹಾಡು ಕೇಳಿ ಅಂತರಂಗದ ಕದವು ತೆರೆಯಿತಿಂದು ||ಪ|| ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತು ಎನಗೆ ||ಅ|| ಏಸುದಿನವಾಯಿತೊ ಬೀಗಮುದ್ರೆಯ ಮಾಡಿ ವಾಸವಾಗಿದ್ದರೋ ದುರುಳರಿಲ್ಲಿ ಮೋಸವಾಯಿತು ಇಂದಿನ ತನಕ ತಮಸಿನ ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||೧|| ಹರಿಕರುಣವೆಂಬಂಥ ಕೀಲಿಕೈ ದೊರಕಿತು ಗುರುಕರುಣವೆಂಬಂಥ ಶಕ್ತಿಯಿಂದ ಪರಮಭಾಗವತರ Read More

ನಾನೇಕೆ ಬಡವನು? ನಾನೇಕೆ ಪರದೇಶಿ?

ರಚನೆ – ಪುರಂದರದಾಸರು ವಿದ್ಯಾಭೂಷಣರ ದನಿಯಲ್ಲಿ ನಾನೇಕೆ ಬಡವನೊ ನಾನೇಕೆ ಪರದೇಶಿ ಶ್ರೀನಿಧೇ ಹರಿ ಎನಗೆ ನೀನಿರುವ ತನಕ||ಪ|| ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೆ ಅಷ್ಟ ಬಂಧು ಬಳಗ ಸರ್ವ ನೀನೆ ಪೆಟ್ಟಿಗೆಯ ಒಳಗಿನ ಅಷ್ಟಾಭರಣ ನೀನೆ ಶ್ರೇಷ್ಠ ಮೂರುತಿ ಕೃಷ್ಣ ನೀನಿರುವತನಕ||೧|| ಒಡಹುಟ್ಟಿದವ ನೀನೆ ಒಡಲಿಗ್ಹಾಕುವ ನೀನೇ ಉಡಲು ಹೊದೆಯಲು ವಸ್ತ್ರ ಕೊಡುವವ ನೀನೆ Read More