ಆನಂದ ಆನಂದ ಮತ್ತೆ ಪರಮಾನಂದ

ಆನಂದ ಆನಂದ ಮತ್ತೆ ಪರಮಾನಂದ ಆನಂದ ಕಂದನೊಲಿಯೆ ಏನಂದಿದ್ದೇ ವೇದ ವೃಂದ ||ಪ|| ಅ ಮೊದಲು ಶಕಾರಂತ ಆ ಮಹಾ ವರ್ಣಗಳೆಲ್ಲಾ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧|| ಜಲ ಕಾಷ್ಟ ಶೈಲ ಗಗನ ನೆಲ ಪಾವಕ ತರು ಫಲ ಪುಷ್ಪಗಳಲ್ಲಿ ಹರಿ ವ್ಯಾಪ್ತನೆಂದರಿತವರಿಗೆ ||೨|| ಪೋಪುದು, ಬರುತಿಪ್ಪುದು, ಕೋಪ ಶಾಂತಿ ಮಾಡುವುದು ರೂಪ ಲಾವಣ್ಯವು Read More

ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರ

ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರ ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿಹಿತದಲಿ ಮನೋರಥವ ಕೊಡುವೆನೆಂದು ||ಪಲ್ಲವಿ|| ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿ ಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿ ನುತಿಸುತ ಪರಿಪರಿ ನತರಾಗಿಹರಿಗೆ ಗತಿ ಪೇಳದೆ ಸರ್ವಥಾ ನಾ ಬಿಡೆನೆಂದು ||೧|| ಅತುಳ ಮಹಿಮನ ದಿನದಲ್ಲಿ, ದಿತಿಜ ವಂಶದಲಿ ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮ ರೀತಿಯಲ್ಲಿ ಅತಿಶಯವಿರುತಿರೆ ಪಿತನ Read More

ಬಂದದ್ದೆಲ್ಲಾ ಬರಲಿ

ರಚನೆ – ಪುರಂದರದಾಸರು ಗಾಯಕಿಯರು – Bombay sisters ಹಾಡು ಕೇಳಿ ಬಂದದ್ದೆಲ್ಲಾ ಬರಲಿ ಗೋವಿಂದನ ದಯ ನಮಗಿರಲಿ ||ಪ|| ಮಂದರಧರ ಗೋವಿಂದ ಮುಕುಂದನ ಸಂದರುಶನ ಒಂದಿದ್ದರೆ ಸಾಲದೇ ||ಅನು|| ಆರು ಅರಿಯದಿರಲೆನ್ನ – ಮುರಾರಿಯು ವರದ ಪ್ರಸನ್ನ ತೋರುವ ದುರಿತದ ಬೆನ್ನ – ಭವಹಾರಿ ಕೃಪಾಂಬುಧಿ ಚೆನ್ನ || ಶ್ರೀರಮಣನ ಶ್ರೀ ಚರಣ ಸೇವಕರಿಗೆ Read More

ತಾವೇನು ಬಲ್ಲಿರಯ್ಯಾ?

ರಾಮ ಎನ್ನುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲಿರಯ್ಯಾ || ರಾಯೆಂದ ಮಾತ್ರದೊಳು ರಕ್ತ ಮಾಂಸದೊಳಿದ್ದ ಆಯಸ್ಥಿಗತವಾದ ಅತಿಪಾಪವನ್ನು ಮಾಯವನು ಮಾಡಿ ಮಹರಾಯ ಮುಕ್ತಿಯಕೊಡುವ ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||೧|| ಮತ್ತೆ ಮ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳಪೋಗದಂತೆ ಕವಾಟವಾಗಿ ಚಿತ್ತ ಕಾಯಗಳ ಪವಿತ್ರ ಮಾಡುವ ಪರಿಯ ಭಕ್ತವರ ಹನುಮಂತ ತಾನೊಬ್ಬ Read More

ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ

ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ ||ಪಲ್ಲವಿ|| ನಾದಮೂರ್ತಿ ನಿನ್ನ ಪಾದ ಮೋದದಿಂದ ಭಜಿಸುವೆನು ||ಅನು|| ಜ್ಞಾನವೆಂಬ ನವರತ್ನದ ಮಂಟಪದ ಮಧ್ಯದಲಿ ವೇಣುಲೋಲನ ಕುಳ್ಳಿರಿಸಿ ಮೋದದಿಂದ ಭಜಿಸುವೆನು ||೧|| ಭಕ್ತಿ ರಸವೆಂಬ ಮುದ್ದು ಮಾಣಿಕ್ಯದ ಹರಿವಾಣದಿ ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೆನು ||೨|| ನಿನ್ನ ನಾನು ಬಿಡುವನಲ್ಲ ಎನ್ನ ನೀನು ಬಿಡಲು ಸಲ್ಲ ಘನ್ನ ಮೂರುತಿ Read More