ಬಾಳಗೀತ – ವಿನಾಯಕ

ಕವನ – ಬಾಳಗೀತ ಕವಿ – ವಿ.ಕೃ.ಗೋಕಾಕ (ವಿನಾಯಕ)   ಡಾ. ರಾಜ್‍ಕುಮಾರ್ ದನಿಯಲ್ಲಿ ಹಾಡು ಕೇಳಿ ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು : ನೇಹಕೆಂದು ನಲುಮೆಗೊಂದು ಗುರುತನಿರಿಸಿ ಬರುವೆನು. ಹೋದಮೇಲೆ ಸುತ್ತಬೇಕು ಏಳು ಕೋಟೆ ದ್ವಾರವು ! ಹಾದಿಯಲ್ಲಿ ತೀರದಂಥ ದುಃಖವಿಹುದಪಾರವು ! ಸಾಧಿಸುತ್ತ ಜಯಿಸುವುದೇ ಬಾಳುವುದರ ಸಾರವು ! ಇಲ್ಲಿ Read More

ಅವತರಿಸು ಬಾ

ಕವಿ : ಅಂಬಿಕಾತನಯದತ್ತ ಕವನ ಸಂಕಲನ : ಹೃದಯ ಸಮುದ್ರ ೧ ಅವತರಿಸು ಬಾ ನಾರಾಯಣಾ ಎತ್ತೆನ್ನ ಮೇಲಕೆ ಚಿದ್ಘನಾ ಈ ಜೀವವಾಗಲಿ ಪಾವನಾ ೨ ಈ ಪ್ರಾಣ ತನು ಮನ ದೇವನಾ ಹಗಲಿರುಳು ಮಾಡಲಿ ಸೇವನಾ ಅಗಹುದು ಭಗವಜ್ಜೀವನಾ ೩. ಅತ್ಯಂತ ನಿರ್ಮಲ ಪ್ರೇಮವು ಅದು ಸಹಜ ಜೀವನ ಧಾಮವು ಅಲ್ಲಿರುವ ಅನ್ನವೆ ಸೋಮವು

ಹೇ ಆತ್ಮ ತಮೋಹಾರಿ !

ಕವಿ – ಕುವೆಂಪು ಗಾಯಕಿ – ರತ್ನಮಾಲಾ ಪ್ರಕಾಶ್ ಹಾಡು ಕೇಳಿ:- ಅಂತರತಮ ನೀ ಗುರು ಹೇ ಆತ್ಮ ತಮೋಹಾರಿ ಜಟಿಲ ಕುಟಿಲ ತಮ ಅಂತರಂಗ ಬಹು ಭಾವ ವಿಪಿನ ಸಂಚಾರಿ ಜನುಮ ಜನುಮ ಶತ ಕೋಟಿ ಸಂಸ್ಕಾರ ಪರಮ ಚರಮ ಸಂಸ್ಕಾರಿ ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ ರೂಪ ಅರೂಪ ವಿಹಾರಿ

ಕೃಷ್ಣನ ಕಂಡಿರಾ? – ಬನ್ನಂಜೆ ಗೋವಿಂದಾಚಾರ್ಯ

ರಚನೆ : ಬನ್ನಂಜೆ ಗೋವಿಂದಾಚಾರ್ಯ ಗಾಯನ : ವಿದ್ಯಾಭೂಷಣ ಹಾಡು ಕೇಳಿ ಉಡುಪಿಯ ಕಂಡೀರಾ? ಉಡುಪಿಯ ಕೃಷ್ಣನ ಕಂಡೀರಾ? ಕೃಷ್ಣನ ಕಂಡೀರಾ? ಕೃಷ್ಣನ ಉಡುಪಿಯ ಕಂಡೀರಾ? ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ದಾರಿಯಿಂದ ಮಿಗಿಲುಂಟೇ ಚಂದ ಕಣ್ಗಳಾನಂದ ಆನಂದಕಂದನಿಂದ ದ್ವಾರಕೆಯ ವಾಸ ಓ ಹೃಷಿಕೇಶ ಸಾಕೆನಿಸಿತೇನೋ ಈಶ? ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ Read More

ಒಂದು ಮುಂಜಾವು – ಚೆನ್ನವೀರ ಕಣವಿ

ಸಾಹಿತ್ಯ: ಚೆನ್ನವೀರ ಕಣವಿ ಸಂಗೀತ: ಸಿ. ಅಶ್ವಥ್ ಗಾಯಕಿ: ಬಿ.ಆರ್.ಛಾಯ ಆಲ್ಬಮ್ : ಭಾವಬಿಂದು ಹಾಡು ಕೇಳಿ ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ‘ಸೋ ‘ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು ; ಅದಕೆ ಹಿಮ್ಮೇಳವೆನೆ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತ್ತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿಣದಿ ಹೂ ಮುಡಿದು ಮದುಮಗಳ ಹೋಲುತಿತ್ತು Read More