ಹೂವು ಹೊರಳುವುವು ಸೂರ್ಯನ ಕಡೆಗೆ

ಕವಿ : ಚನ್ನವೀರ ಕಣವಿ ಹೂವು ಹೊರಳುವುವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನವರೆಗೆ ಇರುಳಿನ ಒಡಲಿಗೆ ದೂರದ ಕಡಲಿಗೆ ಮುಳುಗಿದಂತೆ ದಿನ ಬೆಳಗಿದಂತೆ ಹೊರ ಬರುವನು ಕೂಸಿನ ಹಾಗೆ ಜಗದ ಮೂಸೆಯಲಿ ಕರಗಿಸಿ ಬಿಡುವನು ಎಲ್ಲ ಬಗೆಯ ಸರಕು ಅದಕೆ ಅದರ ಗುಣ ದೋಷಗಳಂಟಿಸಿ ಬಿಡಿಸಿ ಬಿಟ್ಟ ತೊಡಕು ಗಿಡದಿಂದುರುವ ಎಲೆಗಳಿಗೂ ಮುದ Read More

೪೭ರ ಸ್ವಾತಂತ್ರ್ಯ – ಸಿದ್ಧಲಿಂಗಯ್ಯ

ಕವಿ – ಸಿದ್ಧಲಿಂಗಯ್ಯ  ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಟಾಟಾ ಬಿರ್ಲಾ ಜೋಬಿಗೆ ಬಂತು ಜನಗಳ ತಿನ್ನುವ ಬಾಯಿಗೆ ಬಂತು  ಕೋಟ್ಯಾಧೀಶನ ಕೋಣೆಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಬಡವನ ಮನೆಗೆ ಬರಲಿಲ್ಲ ಬೆಳಕಿನ ಕಿರಣ ತರಲಿಲ್ಲ ಗೋಳಿನ ಕಡಲನು ಬತ್ತಿಸಲಿಲ್ಲ ಸಮತೆಯ ಹೂವನು ಅರಳಿಸಲಿಲ್ಲ ಹಣವಂತರು ಕೈಸನ್ನೆ ಮಾಡಿದರೆ ಕತ್ತಲೆಯಲ್ಲಿ ಬೆತ್ತಲೆಯಾಯಿತು ಯಾರೂ Read More

ಹೇಮಂತ

ಕವಿ – ಎಸ್.ವಿ. ಪರಮೇಶ್ವರ ಭಟ್ಟ ೧ ಹೇಮಂತ ಋತುರಾಜನಿಳೆಗೆ ಬಂದಿಳಿವಂದು ಹೂವಿಲ್ಲ ಹಸಿರಿಲ್ಲ ಚಿಗುರೆಲೆಗಳಿಲ್ಲ. ದುಂಬಿಗಳ ದನಿಯಿಲ್ಲ ಹಕ್ಕಿಗಳ ಹಾಡಿಲ್ಲ ಕುಸುಮಗಂಧ ತರುವ ಮರುತನಿಲ್ಲ. ೨ ಚೆಂಗುಡಿಯ ಸಿಂಗರದ ವರವರೂಥಗಳೆನಿಸಿ ಮೆರೆವ ಮರಗಿಡಬಳ್ಳಿ ಬರಿದೆ ಮೊಗವಿಳುಹಿ ಮೌನದಲಿ ಮನದೆಗೆದು ಮನಮುರಿದು ನಿಂದಿಹವು ಭಾಗ್ಯಹೀನರವೋಲು ದೀನರೆಂದೆನಿಸಿ. ೩ ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿ ಸುಯ್ಯೆಲರ Read More

ತಕ್ಕಡಿಯಿಂದ ತಂಬೂರಿಯ ತನಕ

ಕವಿ : ಜಿ.ಎಸ್.ಶಿವರುದ್ರಪ್ಪ ಸಂಕಲನ : ನೂರು ಕವಿತೆಗಳು ತಕ್ಕಡಿಯಿಂದ ತಂಬೂರಿಯ ತನಕ ಸಹಧರ್ಮಿಣಿಯ ಮೂಗುತಿಯ ಮಿನುಗು, ತಂಬೂರಿಯಿಂದ ತುಂಬುವತನಕ ಹಾಡಿನ ಮೊಳಗು. ತಕ್ಕಡಿಯಲ್ಲಿ ತೂಗಿದನು ಇಹದ ಸರುಕೆಲ್ಲವನು ಈ ವ್ಯಾಪಾರಿ. ಗೊತ್ತಾಗಲಿಲ್ಲ ವೈಕುಂಠಕೆ ದಾರಿ. ‘ದಾರಿ ಯಾವುದಯ್ಯಾ ವೈಕುಂಠಕೆ?’ ಪ್ರಶ್ನೆಗುತ್ತರವಾಗಿ ಮೊಳಗಿತ್ತು ಒಳಗಿಂದಲೇ ಮರುಪ್ರಶ್ನೆ ; ‘ಯಾರು ಹಿತವರು ನಿನಗೆ ಈ ಮೂವರೊಳಗೆ ನಾರಿಯೋ? Read More

ಚಿರಂತನ

ಕವಿ – ಅಂಬಿಕಾತನಯದತ್ತ ಕವನ ಸಂಕಲನ – ಸಖೀಗೀತ ೧ ಆ ಮುಖಾ . . . ಈ ಮುಖಾ ಯಾವ ಗಂಡೊ ಯಾವ ಹೆಣ್ಣೊ ಪ್ರೀತಿಯೆಂಬ ಚುಂಬಕಾ ಕೂಡಿಸಿತ್ತು ಆಡಿಸಿತ್ತು ಕೂಡಲದೊಲು ನೋಟವಾ ಮೂರು ದಿನದ ಆಟವಾ ೨ ಆ ಮುಖಾ – ಈ ಮುಖಾ ಹೆತ್ತುದೊಂದು ಹೊತ್ತುದೊಂದು ಎಂಥ ಹಾಸ್ಯದೀ ಸುಖಾ ಬೆರಕೆಯಿಂದೊ Read More