ಮಲ್ಲಿಗೆ – ಜಿ.ಎಸ್.ಶಿವರುದ್ರಪ್ಪ

ಕವನ – ಮಲ್ಲಿಗೆ ಕವಿ – ಜಿ.ಎಸ್.ಶಿವರುದ್ರಪ್ಪ ನೋಡು ಇದೋ ಇಲ್ಲರಳಿ ನಗುತಿದೆ ಏಳು ಸುತ್ತಿನ ಮಲ್ಲಿಗೆ ಇಷ್ಟು ಹಚ್ಚನೆ ಹಸುರ ಗಿಡದಿಂ- ದೆಂತು ಮೂಡಿತೋ ಬೆಳ್ಳಗೆ ! ಮೇಲೆ ನಭದಲಿ ನೂರು ತಾರೆಗ- ಳರಳಿ ಮಿರುಗುವ ಮುನ್ನವೆ ಬೆಳ್ಳಿಯೊಂದೇ ಬೆಳಗುವವಂದದಿ ಗಿಡದೊಳೊಂದೇ ಹೂವಿದೆ ಸತ್ವಶೀಲನ ಧ್ಯಾನ ಮೌನವೆ ಅರಳಿ ಬಂದೊಲು ತೋರಿದೆ ! ಒಲವು Read More

ಕಾಣಿಕೆ – ಬಿಎಂಶ್ರೀ

ಕಾಣಿಕೆ – ಬಿಎಂಶ್ರೀ ಕವಿ – ಬಿ.ಎಂ.ಶ್ರೀಕಂಠಯ್ಯ ಮೊದಲು ತಾಯ ಹಾಲ ಕುಡಿದು, ಲಲ್ಲೆಯಿಂದ ತೊದಲಿ ನುಡಿದು, ಕೆಳೆಯರೊಡನೆ ಬೆಳೆದು ಬಂದ    ಮಾತದಾವುದು– ನಲ್ಲೆಯೊಲವ ತೆರೆದು ತಂದ    ಮಾತದಾವುದು– ಸವಿಯ ಹಾಡ, ಕಥೆಯ ಕಟ್ಟಿ, ಕಿವಿಯಲೆರೆದು, ಕರುಳ ತಟ್ಟಿ ನಮ್ಮ ಜನರು,ನಮ್ಮ ನಾಡು,    ಎನಿಸಿತಾವುದು- ನಮ್ಮ ಕವಿಗಳೆಂಬ ಕೋಡು    ತಲೆಗದಾವುದು– Read More

ಮೋಹನ ಮುರಲಿ – ಗೋಪಾಲಕೃಷ್ಣ ಅಡಿಗ

ಕವಿ – ಗೋಪಾಲಕೃಷ್ಣ ಅಡಿಗ ೧. ರತ್ನಮಾಲಾ ಪ್ರಕಾಶ್ – ಸಂಗೀತ:ಮೈಸೂರು ಅನಂತಸ್ವಾಮಿ ೨. ರಾಜು ಅನಂತಸ್ವಾಮಿ,ಸಂಗೀತಾ ಕಟ್ಟಿ – ಸಂಗೀತ:ಮನೋ ಮೂರ್ತಿ ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು? ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು? ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನ; ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ; Read More

ಸುಲಿದ ಬಾಳೆಯ ಹಣ್ಣಿನಂದದಿ – ಮಹಾಲಿಂಗಕವಿ

ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರುವ ಈ ಲಲಿತವಹ ಕನ್ನಡ ನುಡಿಯಲಿ ತಿಳಿದು ತನ್ನಲಿ ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೆ? ಸಂಸ್ಕೃತದಲಿನ್ನೇನು?   *            *         *

ಕನ್ನಡದ ನೆಲದ – ಸಾಲಿ ರಾಮಚಂದ್ರರಾಯರು

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ! ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ! ಕನ್ನಡದ ನೆಲದ ಕಲ್ಲೆಮಗೆ ಶಾಲಗ್ರಾಮ ಶಿಲೆ! ಕನ್ನಡಂ ದೈವಮೈ! ಕನ್ನಡದ ಶಬ್ದಮೆಮಗೋಂಕಾರಮೀಯೆನ್ನ ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ- ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳಗೆ?              *                  * ಕೃಪೆ: ದಟ್ಸ್ ಕನ್ನಡ